ಕಟೀಲನ್ನು ಪೀಟಿಲಿಗೆ ಹೊಲಿಸಿದ ಇಬ್ರಾಹಿಂಗೆ ತುಳುನಾಡಿನವರು ಬುದ್ಧಿ ಕಲಿಸಬೇಕು!!
ಮಾಜಿ ಮಂತ್ರಿ, ಕಾಂಗ್ರೆಸ್ಸಿಗ, ಸಿದ್ಧರಾಮಯ್ಯ ಆಪ್ತ ಇಬ್ರಾಹಿಂ ಅವರು ಮಂಗಳೂರಿಗೆ ಬಂದು ಚುನಾವಣಾ ಪ್ರಚಾರ ಮಾಡಿ ಹೋಗಿದ್ದಾರೆ. ಇಬ್ರಾಹಿಂ ಹಿಂದೂ ಧರ್ಮದ ಬಗ್ಗೆ ಒಂದಿಷ್ಟು ಓದಿ ಅದನ್ನು ಬಹಳ ರಸವತ್ತಾಗಿ ಹೇಳುವ ಮೂಲಕ ತಾವು ಹಿಂದೂ ಧರ್ಮದ ಎಲ್ಲಾ ಸಾರವನ್ನು ತಿಳಿದವರಂತೆ ಮಾತನಾಡುತ್ತಾರೆ. ಭಾಷಣದಲ್ಲಿ ರೈಮಿಂಗ್ ವರ್ಡ್ ಗಳನ್ನು ಸೇರಿಸಿ ಮಾತನಾಡುವುದರಿಂದ ಒಂದಿಷ್ಟು ಚಪ್ಪಾಳೆ, ಸಿಳ್ಳೆಗಳು ಸಿಗುತ್ತವೆ. ಅದು ಇಬ್ರಾಹಿಂ ಅವರಿಗೆ ಹುಮ್ಮಸ್ಸು ತರುತ್ತವೆ. ಅವರು ಇನ್ನೊಂದಿಷ್ಟು ರೈಮಿಂಗ್ ಶಬ್ದಗಳನ್ನು ಸೇರಿಸಿ ಮಾತನಾಡುತ್ತಾರೆ. ಬೆಂಗಳೂರಿನಿಂದ ಹೊರಡುವಾಗಲೇ ಯಾವ ರೀತಿಯ ವಿಷಯಗಳನ್ನು ಎತ್ತಬೇಕು ಎನ್ನುವುದಕ್ಕಿಂತ ಯಾವ ರೀತಿಯಲ್ಲಿ ಮಾತನಾಡಿದರೆ ಚಪ್ಪಾಳೆ, ಸಿಳ್ಳೆ ಸಿಗಬಹುದು ಎಂದು ಯೋಚಿಸಿಯೇ ಇಬ್ರಾಹಿಂ ಹೊರಡುತ್ತಾರೆ. ಅವರ ಮಾತುಗಳು ಖುಷಿಗೊಳಿಸುತ್ತವೆ ಮತ್ತು ರಿಲಾಕ್ಸ್ ಮಾಡಿಸುತ್ತವೆ ಬಿಟ್ಟರೆ ಅದರಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ಪಾಯಿಂಟ್ ಗಳು ಇರುವುದಿಲ್ಲ.
ಕಟೀಲು ಕೇವಲ ಒಂದು ಜಾಗದ ಹೆಸರಲ್ಲ…
ನಿನ್ನೆ ಕೂಡ ಇಬ್ರಾಹಿಂ ಹಾಗೆ ಮಾತನಾಡಿದ್ದಾರೆ. ಮುಸ್ಲಿಮ್ ಮತಗಳನ್ನು ಸೆಳೆಯುವುದಕ್ಕಾಗಿ ಅವರನ್ನು ಕರೆಸಲಾಗಿತ್ತು. ಕಟೀಲ್ ನನ್ನು ಪೀಟಿಲು ಬಾರಿಸಲು ಮನೆಗೆ ಕಳುಹಿಸಿಕೊಡಿ ಎಂದು ಹೀಯಾಳಿಸಿದ್ದಾರೆ. ಪೇಪರಲ್ಲಿ ಹೆಡ್ಡಿಂಗ್ ಹೇಗೆ ಬರಬೇಕು ಎಂದು ಯೋಚಿಸಿಯೇ ಇಬ್ರಾಹಿಂ ಮಾತನಾಡುತ್ತಾರೆ. ಬಹುಶ: ನಳಿನ್ ಹೆಸರನ್ನು ಹೇಗೆ ಹಾಸ್ಯಕ್ಕೆ ಬಳಸಬಹುದು ಎಂದು ಇಬ್ರಾಹಿಂ ಎಷ್ಟು ಗಂಟೆ ಯೋಚಿಸಿರಬಹುದೋ ಅವರಿಗೆ ಗೊತ್ತು, ಕೊನೆಗೆ ಅವರಿಗೆ ಕಟೀಲಿಗೆ ಪಿಟೀಲು ರೈಮಿಂಗ್ ಶಬ್ದ ಎಂದು ಹೊಳೆದಿದೆ. ತುಳುನಾಡಿನವರು ಇದನ್ನು ಸಾರಾಸಗಟಾಗಿ ಖಂಡಿಸಬೇಕು ಎನ್ನುವುದು ನನ್ನ ಅಭಿಪ್ರಾಯ. ಕಟೀಲಿಗೆ ನಮ್ಮ ತುಳುನಾಡಿನಲ್ಲಿ ಮಹತ್ವದ ಜಾಗವಿದೆ. ಅಲ್ಲಿ ತಾಯಿ ದುರ್ಗಾಪರಮೇಶ್ವರಿ ನೆಲೆಸಿದ್ದಾಳೆ. ನಳಿನ್ ಅಲ್ಲಿನ ಭಕ್ತರೂ ಮಾತ್ರವಲ್ಲ. ಮಂಗಳೂರಿನಲ್ಲಿದ್ದಾಗ ನಿತ್ಯವೂ ಪ್ರಾತ:ಕಾಲ ಅಲ್ಲಿ ಹೋಗಿಯೇ ಅವರು ಉಳಿದ ಕೆಲಸ ಕಾರ್ಯಗಳನ್ನು ಮಾಡುವುದು. ಕಟೀಲು ದುರ್ಗಾಪರಮೇಶ್ವರಿ ದೇವಿಯ ಫೋಟೋಗೆ ಹಿಂದೆ ಯಾರೋಬ್ಬರು ಅವಮಾನ ಮಾಡಿದಾಗ ಜನ ಒಗಟ್ಟಾಗಿ ಖಂಡಿಸಿದ್ದರು. ಪ್ರತಿಭಟನೆಗಳು ನಡೆದಿದ್ದವು. ಆದರೆ ಎಷ್ಟು ಕಾಂಗ್ರೆಸ್ಸಿಗರು ಅದನ್ನು ವಿರೋಧಿಸಿದ್ದರು ಎನ್ನುವುದನ್ನು ನಿಮಗೆ ಹೇಳಬೇಕಾಗಿಲ್ಲ. ಹಾಗೇ ಇರುವಾಗ ಇಬ್ರಾಹಿಂ ಮತ್ತೆ ಒಣಗಿದ ಗಾಯದ ಮೇಲೆ ಮೆಣಸು ಎರಚಿದ್ದಾರೆ. ಕಟೀಲನ್ನು ಪಿಟೀಲು ಎಂದಿದ್ದಾರೆ. ನಾನಂತೂ ಇದನ್ನು ವಿರೋಧಿಸುತ್ತೇನೆ. ಖಾದರ್ ಮತ್ತು ಬೆಂಬಲಿಗರಿಗೆ ಖುಷಿ ಆಗಿರಬಹುದು.
ಟಿಪ್ಪು ವಿಷಯ ಇಬ್ರಾಹಿಂಗೆ ಬೇಡವಿತ್ತು…
ಇಬ್ರಾಹಿಂ ಕೇವಲ ಕಟೀಲನ್ನು ಮಾತ್ರ ಅವಮಾನಿಸಿದ್ದಲ್ಲ. ಮಂತ್ರಾಲಯ, ಶೃಂಗೇರಿ ಹೀಗೆ ದೊಡ್ಡ ದೊಡ್ಡ ಹಿಂದೂ ದೇವಸ್ಥಾನಗಳ ಹೆಸರನ್ನು ತೆಗೆದಿದ್ದಾರೆ. ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಅವರ ವೃಂದಾವನಕ್ಕೆ ಜಾಗ ಕೊಟ್ಟಿರುವುದೇ ನವಾಬರು ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ಇನ್ನು ಶೃಂಗೇರಿ ದೇವಸ್ಥಾನಕ್ಕೆ ರಕ್ಷಣೆ ಕೊಟ್ಟಿರುವುದೇ ಟಿಪ್ಪು ಸುಲ್ತಾನ್ ಎನ್ನುವುದನ್ನು ಇಬ್ರಾಹಿಂ ಒತ್ತಿ ಒತ್ತಿ ಹೇಳಿದ್ದಾರೆ. ಮಂತ್ರಾಲಯಕ್ಕೆ ನವಾಬರು ಕೊಟ್ಟ ಜಾಗ ಮತ್ತು ಶೃಂಗೇರಿಗೆ ಟಿಪ್ಪು ಸಂಬಂಧದ ಬಗ್ಗೆ ನಾನು ವಿವಾದ ಕೆದಕಲು ಹೋಗುವುದಿಲ್ಲ. ಯಾಕೆಂದರೆ ಮಂತ್ರಾಲಯಕ್ಕೆ ಜಾಗ ನವಾಬರು ಕೊಡಲು ಯಾವುದೋ ಹಿಂದೂ ರಾಜನಿಂದ ಅತಿಕ್ರಮಿಸಿಕೊಂಡ ಜಾಗವನ್ನೇ ನವಾಬರು ಮಂತ್ರಾಲಯ ಮಠಕ್ಕೆ ಕೊಟ್ಟಿರಬಹುದು. ನವಾಬರು ಮೂಲತ: ಇಲ್ಲಿನವರಲ್ಲ. ಅವರು ನಮ್ಮ ದೇಶಕ್ಕೆ ದಂಡೆತ್ತಿ ಬಂದು ಇಲ್ಲಿನ ಚಿಕ್ಕಪುಟ್ಟ ರಾಜರನ್ನು ಮೋಸದಿಂದ ಸೋಲಿಸಿ ಅವರ ಭೂಮಿಯನ್ನು ವಶಕ್ಕೆ ಪಡೆದು ಬೀಗಿದವರು. ಅಂತವರೇ ಒಂದಿಷ್ಟು ಜಾಗವನ್ನು ಮತ್ತೆ ಹಿಂದೂ ದೇವಾಲಯಗಳಿಗೆ ಕೊಟ್ಟರೆ ಅದರಲ್ಲಿ ವಿಶೇಷ ಇಲ್ಲ. ಇನ್ನು ಶೃಂಗೇರಿಗೆ ರಕ್ಷಣೆ, ಕೊಲ್ಲೂರಿಗೆ ಬಂದದ್ದು ಎಲ್ಲವೂ ಟಿಪ್ಪುವಿನ ಸೋಲಿನ ದಿನಗಳಲ್ಲಿ ಆತನ ಮಂತ್ರಿಮಾಗಧರು ಸಲಹೆ ಕೊಟ್ಟಿದ್ದಕ್ಕೆ ಟಿಪ್ಪು ಹಾಗೆ ಮಾಡಿದ್ದು ಬಿಟ್ಟರೆ ಬೇರೆ ಏನೂ ಇಲ್ಲ. ತನ್ನ ಮಂತಾಧತೆಯ ದಿನಗಳಲ್ಲಿ ಟಿಪ್ಪು ಅಕ್ಷರಶ: ಹಿಂದೂ ಹೆಣ್ಣುಮಕ್ಕಳನ್ನು ಕಾಡಿದ್ದಾನೆ. ಯುವಕರನ್ನು ಮತಾಂತರಕ್ಕೆ ಒತ್ತಾಯಿಸಿ ಹಿಂಸಿಸಿದ್ದಾನೆ. ಕ್ರೈಸ್ತರ ನರಮೇಧ ಮಾಡಿದ್ದಕ್ಕೆ ಸಾಕ್ಷಿಗಳಿವೆ. ಕೊಡಗಿನಲ್ಲಿ ಸಾವಿರಾರು ಕೊಡವರ ಹೆಣಗಳ ಮೇಲೆ ನಿಂತು ಗೆಲುವಿನ ಕೇಕೆ ಹಾಕಿದ್ದಾನೆ. ಮಧೂರು ದೇವಸ್ಥಾನ ಲೂಟಿ ಮಾಡಿದ್ದಕ್ಕೆ ಸಾಕ್ಷಿಗಳಿವೆ. ಆತ ಹಿಂದೂ ದೇವರ ಒಡವೆ, ಆಭರಣಗಳನ್ನು ದೋಚುತ್ತಿದ್ದ ಎನ್ನುವ ಕಾರಣದಿಂದ ಹಿಂದೂಗಳು ಭಯಬೀತರಾಗಿದ್ದರು ಎನ್ನುವ ಕಥೆಗಳಿವೆ. ಇಷ್ಟೆಲ್ಲ ಇದ್ದು ಉಳ್ಳಾಲದಲ್ಲಿ ಮುಸ್ಲಿಮರ ಮತಗಳು ಎಸ್ ಡಿಪಿಐಗೆ ಹೋಗದ ರೀತಿಯಲ್ಲಿ ಇಬ್ರಾಹಿಂ ಕೊನೆಯ ವಿಫಲ ಪ್ರಯತ್ನ ಮಾಡಿದ್ದಾರೆ.
Leave A Reply