ಭರತ್ ಶೆಟ್ಟಿಯವರನ್ನು ಕೆಣಕಲು ಷಡ್ಯಂತ್ರ ಹೂಡಿರುವ ಕಾಣದ ‘ಕೈ’ ಯಾವುದು?
ಮಂಗಳೂರಿನಲ್ಲಿ ನೀರಿನ ಕೊರತೆ ಇದೆ ಎನ್ನುವುದನ್ನು ನಾನು ಇವತ್ತು ಹೊಸದಾಗಿ ಹೇಳಬೇಕಾಗಿಲ್ಲ. ಆದರೆ ದೇವರ ದಯೆಯಿಂದ ಇಬ್ಬರು ಉತ್ಸಾಹಿ ಯುವ ಶಾಸಕರು ಮಂಗಳೂರು ನಗರ ಉತ್ತರ ಮತ್ತು ದಕ್ಷಿಣಕ್ಕೆ ಸಿಕ್ಕಿರುವುದರಿಂದ ಅವರಿಬ್ಬರು ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿಗಳಿಗೆ ಅದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅಂತವರು ಕೈಯಲ್ಲಿ ಲಿಂಬೆಹಣ್ಣು ಹಿಡಿದು ಹಾಲಿಗೆ ಹಿಂಡುವ ಪ್ರಯತ್ನ ಮಾಡುತ್ತಿದ್ದಾರೆ. ಶುಕ್ರವಾರ ಅಂತಹ ಘಟನೆ ಮಂಗಳೂರು ಉತ್ತರದ ಚೊಕ್ಕಬೆಟ್ಟು ಎಂಬಲ್ಲಿ ನಡೆದಿದೆ. ಬಿಜೆಪಿ ಕಾರ್ಯಕರ್ತ ಭರತ್ ರಾಜ್ ಕೃಷ್ಣಾಪುರ ಎನ್ನುವವರು ಬೋರ್ ನಿಂದ ಶಾಸಕ ಡಾ.ಭರತ್ ಶೆಟ್ಟಿಯವರ ಸ್ವಂತ ಖರ್ಚಿನಲ್ಲಿ ಜನರಿಗೆ ನೀರು ಪೂರೈಸುವ ಟ್ಯಾಂಕರ್ ನಲ್ಲಿ ನೀರು ತುಂಬಿಸುತ್ತಿದ್ದರು. ಅಷ್ಟರಲ್ಲಿ ಇಬ್ಬರು ಗಾಂಜಾ ಗಿರಾಕಿಗಳಾಗಿರುವ ಅರ್ಧ ಬುದ್ಧಿ ತುಂಡಾಗಿರುವವರು ಬಂದು ಭರತ್ ರಾಜ್ ಅವರನ್ನು ಅವ್ಯಾಚ ಶಬ್ದಗಳಿಂದ ನಿಂದಿಸಿದ್ದಾರೆ. ಶಾಸಕರು ನೀರು ಕೊಡುವ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಟ್ಯಾಂಕರಿಗೆ ಹಾನಿ ಮಾಡಿ ಅದಕ್ಕೆ ಕಟ್ಟಿದ ಬ್ಯಾನರ್ ಹರಿದು ಹಾಕಿದ್ದಾರೆ. ಇಷ್ಟೆಲ್ಲಾ ಆದರೂ ಭರತ್ ರಾಜ್ ಕೃಷ್ಣಾಪುರ ಮತ್ತು ಸಂಗಡಿಗರು ಗಲಾಟೆ ಆಗುವುದು ಬೇಡಾ ಎಂದು ಸುಮ್ಮನಿದ್ದಾರೆ. ಇದನ್ನೇ ಅವರ ಬಲಹೀನತೆ ಎಂದುಕೊಂಡ ‘ಅಲ್ಪ’ಬುದ್ಧಿಯವರು ಬಿಜೆಪಿಯವರ ಮೇಲೆ ಹಲ್ಲೆ ಮಾಡಿದ್ದಾರೆ. ಭರತ್ ರಾಜ್ ಮತ್ತು ಹಲ್ಲೆಗೊಳಗಾದವರು ಪದ್ಮಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈಗ ಇಲ್ಲಿ ಇರುವ ಪ್ರಶ್ನೆ ಏನೆಂದರೆ ನೀರಿಗೆ ಜಾತಿ, ಮತ, ಧರ್ಮವಿಲ್ಲ. ಕೇಸರಿ, ಹಸಿರು ಬಣ್ಣವೂ ಇಲ್ಲ. ಶಾಸಕ ಭರತ್ ಅವರು ನೀರಿಲ್ಲ ಎಂದು ಫೋನ್ ಮಾಡಿದವರಿಗೆ ಜಾತಿ, ಧರ್ಮ ನೋಡದೆ ನೀರು ಕೊಟ್ಟಿದ್ದಾರೆ. ಎಷ್ಟೋ ಮುಸ್ಲಿಂ ಮನೆಗಳಿಗೆ ಸ್ವತ: ನೀರು ಪೂರೈಸಿದ್ದಾರೆ. ಅದು ಕೂಡ ತಮ್ಮ ಸ್ವಂತ ಖರ್ಚಿನಲ್ಲಿ. ಸರಿಯಾಗಿ ನೋಡಿದರೆ ನೀರಿನ ಸಮಸ್ಯೆ ಉಂಟಾಗಲು ಪಾಲಿಕೆಯಲ್ಲಿ ಇತ್ತೀಚಿನ ತನಕ ಕಾಂಗ್ರೆಸ್ ಸರಕಾರವೇ ಕಾರಣ. ಅದು ಹೇಗೆ ಎನ್ನುವುದನ್ನು ಈಗ ಮತ್ತೆ ವಿವರವಾಗಿ ಬರೆಯಲು ಹೋಗುವುದಿಲ್ಲ. ಆದರೆ ಉದ್ಭವಿಸಿರುವ ಸಮಸ್ಯೆಯನ್ನು ಯಾರಾದರೂ ಪುಣ್ಯಾತ್ಮರು ತಮ್ಮ ಕೈಲಾದಷ್ಟು ಬಗೆಹರಿಸಲು ಹೋದರೆ ಅದನ್ನು ಕೂಡ ವಕ್ರದೃಷ್ಟಿಯಿಂದ ನೋಡುತ್ತಾರಲ್ಲ. ಅಂತವರಿಗೆ ಏನು ಹೇಳುವುದು.
ಕೆಲವರಿಗೆ ಒಂದು ವಿಷಯ ಗ್ಯಾರಂಟಿಯಾಗುತ್ತಿದೆ. ಅದೇನೆಂದರೆ ಅಲ್ಲಿ ಮುಂದಿನ ಸಲವೂ ಕಾಂಗ್ರೆಸ್ ಅಭ್ಯರ್ಥಿ ವಿಧಾನಸಭೆಗೆ ಗೆಲ್ಲುವ ಯಾವುದೇ ಸಾಧ್ಯತೆ ಇಲ್ಲ. ಅದರಿಂದ ತಮ್ಮ ಅವಕಾಶದ ಬಾಗಿಲು ಮುಚ್ಚಿ ಹೋಗಿದೆ ಎಂದು ಆತಂಕಗೊಂಡಿರುವ ಕೆಲವರು ಈ ರೀತಿಯಲ್ಲಿ ಕುತಂತ್ರ ಮಾಡುತ್ತಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಹಲ್ಲೆ ಮಾಡಿದ ದುರುಳರಿಗೆ ತಕ್ಕಶಾಸ್ತ್ರಿ ಆಗಬಹುದು. ಆದರೆ ಇದನ್ನು ಇಲ್ಲಿಗೆ ನಿಲ್ಲಿಸದಿದ್ದರೆ ಮಂಗಳೂರು ನಗರ ಉತ್ತರ ಮತ್ತೊಮ್ಮೆ ರಣಭೂಮಿ ಆಗಬಹುದು. ಅದನ್ನು ತಪ್ಪಿಸುವ ಜಬಾಬ್ದಾರಿ ಗಲಾಟೆ ಮಾಡಿಸಲು ಸಂಚು ಹೂಡುವವರ ‘ಕೈ’ಯಲ್ಲಿದೆ.
ಹನುಮಂತ ಕಾಮತ್, ಅಧ್ಯಕ್ಷರು, ನಾಗರಿಕ ಹಿತರಕ್ಷಣಾ ಸಮಿತ
Leave A Reply