• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಅಟಲ್ ಜಿ ಮಂಗಳೂರಿಗೆ ಕೊಟ್ಟ ಗಿಫ್ಟ್  ತೆಗೆದುಕೊಂಡು ಬರುವ ಜವಾಬ್ದಾರಿ ಇದೆ!!

Hanumantha Kamath Posted On June 5, 2019
0


0
Shares
  • Share On Facebook
  • Tweet It

ನಿನ್ನೆ ಬರೆದದ್ದನ್ನು ಇವತ್ತು ಮುಂದುವರೆಸುತ್ತಿದ್ದೇನೆ. ಸದಾನಂದ ಗೌಡರ ಬಗ್ಗೆ ಇವತ್ತು ಬರೆಯಲ್ಲ. ಅವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾಗಿ, ಪುತ್ತೂರಿನ ಶಾಸಕರಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಬೆಂಗಳೂರು ಉತ್ತರದಿಂದ ಎರಡನೇ ಬಾರಿ ಸಂಸದರಾಗಿ ಮಾಡಿದ್ದು ಸಾಧನೆ ನೇತ್ರಾವತಿಯನ್ನು ತಿರುಗಿಸಲು ತಮ್ಮ ತಲೆ ಉಪಯೋಗಿಸಿದ್ದು ಮಾತ್ರವೇ ವಿನ: ಬೇರೆ ಏನೂ ಇಲ್ಲ.
ಆದರೆ ಅದೃಷ್ಟ ಚೆನ್ನಾಗಿದೆ. ಎರಡನೇ ಬಾರಿ ಕೇಂದ್ರದಲ್ಲಿ ಸಚಿವರಾಗಿ ರಸಗೊಬ್ಬರ ತಿನ್ನುವ ಅವಕಾಶ ಸಿಕ್ಕಿದೆ. ಆದರೆ ರೈಲ್ವೆ ಖಾತೆಯಂತಹ ಮಹತ್ವದ ಖಾತೆ ಸಿಕ್ಕಿದರೂ ತಮ್ಮ ಜಿಲ್ಲೆಗೆ ಏನೂ ಮಾಡಲಾಗದ ಸದಾನಂದ ಗೌಡರು ಒಂದು ಸಹಿ ಹಾಕಿದರೆ ನಮ್ಮ ಮಂಗಳೂರು ನೈರುತ್ಯ ರೈಲ್ವೆ ವಿಭಾಗಕ್ಕೆ ಸೇರುತ್ತಿತ್ತು. ಅದರಿಂದ ಮಂಗಳೂರಿನಿಂದ ಬೆಂಗಳೂರು ನಡುವೆ ಸಂಚರಿಸುವ ರೈಲುಗಳನ್ನು ನಮ್ಮ ಜಿಲ್ಲೆಯ ನಾಗರಿಕರ ಅನುಕೂಲತೆಯ ಸಮಯಕ್ಕೆ ತಕ್ಕಂತೆ ಹೊಂದಿಸಬಹುದಾಗಿತ್ತು. ಅದರಿಂದ ಕಡಿಮೆ ದರದಲ್ಲಿ ಜನಸಾಮಾನ್ಯರು ಬೆಂಗಳೂರಿಗೆ ಹೋಗುವ ಅವಕಾಶ ಸಿಗುತ್ತಿತ್ತು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಮಗೆ ಬೇಕಾದ ಹಾಗೆ ನಮ್ಮವರ ಅವಶ್ಯಕತೆಗೆ ತಕ್ಕಂತೆ ಸಮಯ ಹೊಂದಿಸಬಹುದಿತ್ತು. ಅದೇ ರೀತಿಯ ವ್ಯವಸ್ಥೆಯನ್ನು ಮಂಗಳೂರಿನಿಂದ ಮುಂಬೈ ನಡುವೆ ಚಲಿಸುವ ರೈಲ್ವೆ  ಯಾತ್ರಿಕರಿಗೂ ಮಾಡಬಹುದಿತ್ತು. ಅಷ್ಟೇ ಅಲ್ಲ, ಗೋವಾ ಟು ಮಂಗಳೂರು ನಡುವೆ ಇರುವ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟು  ಕೂಡ ಸಮಯವನ್ನು ಹೊಂದಿಸಬಹುದಿತ್ತು. ಆದರೆ ಇದ್ಯಾವುದೂ ಮಾಡಲು ನಮಗೆ ಅವಕಾಶ ಕೊಡದ ಮಹಾನುಭವ ಡಿವಿಯವರ ಬಗ್ಗೆ ಇವತ್ತು ಬರೆಯುವುದಿಲ್ಲ.
ನಾನು ಹೇಳುವುದು ಡಿವಿ ನಮ್ಮ ಜಿಲ್ಲೆಗೆ ಪ್ರಯೋಜನಕ್ಕಿಲ್ಲದ ಉಪ್ಪಿನಕಾಯಿ ಎಂದೇ ಇಟ್ಟುಕೊಳ್ಳೋಣ. ಹಾಗಂತ ಅಟಲ್ ಜಿ ನಮ್ಮ ಜಿಲ್ಲೆಗೆ ಕೊಟ್ಟ ಗಿಫ್ಟ್  ದೆಹಲಿಯಿಂದ ಮಂಗಳೂರಿಗೆ ತರಲೇಬೇಕಾಗಿದೆ. ತರುವುದು ಯಾರು, ಇನ್ಯಾರು, ದಕ್ಷಿಣ ಕನ್ನಡ ಮತ್ತು ಉಡುಪಿ ಸಂಸದರು. ನಳಿನ್ ಹಾಗೂ ಶೋಭಾ ಮೇಲೆ ಈಗ ಅಟಲ್ ಕೊಟ್ಟ ವರ ಒಂದು ರೀತಿಯಲ್ಲಿ ಭಗಿರಥ ಪ್ರಯತ್ನ ಆದರೂ ಚಿಂತೆ ಇಲ್ಲ. ತಂದೆ ತರುತ್ತೇವೆ ಎಂದು ಇವರಿಬ್ಬರೂ ಪ್ರತಿಜ್ಞೆ ಮಾಡಲಿ. ಬೇಕಾದರೆ ವಿವಿಧ ರೈಲ್ವೆ ಹೋರಾಟಗಾರರನ್ನು ಸೇರಿಸಿ ಅಭಿಪ್ರಾಯ ಪಡೆಯಲಿ. ಒಬ್ಬಿಬ್ಬರನ್ನು ಕರೆದು ನಂತರ ಅದರ ಕ್ರೆಡಿಟ್ ಅವರಿಗೆ ಹೋಯಿತು ಎಂದು ಉಳಿದವರು ಟೆನ್ಷನ್ ಮಾಡಿಕೊಳ್ಳುವುದು ಬೇಡಾ. ಅದಕ್ಕೆ ನಳಿನ್ ಎಲ್ಲಾ ರೈಲ್ವೆ ಹೋರಾಟಗಾರರನ್ನು ಕರೆಯಲಿ. ಸರ್ಕೂಟ್ ಹೌಸ್ ನಲ್ಲಿ ಕುಳಿತು ಮಾತನಾಡೋಣ. ನಂತರ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗುವ ಕೆಲಸವಾಗಲಿ. ಅದಕ್ಕೆ ಈ ಭಾಗದ ಹನ್ನೆರಡು ಬಿಜೆಪಿ ಶಾಸಕರಲ್ಲಿ ಒಬ್ಬೊಬ್ಬರು ಒಂದೊಂದು ಹೋರಾಟಗಾರರ ಖರ್ಚು ಬರಿಸಲಿ. ಯಾಕೆಂದರೆ ನಾಳೆ ಮಂಗಳೂರು ನೈರುತ್ಯ ವಿಭಾಗಕ್ಕೆ ಸೇರಿ ಅದರಿಂದ ಮಂಗಳೂರು, ಉಡುಪಿಯವರಿಗೆ  ಅನುಕೂಲವಾದರೆ ಫ್ಲೆಕ್ಸ್, ಪತ್ರಿಕಾ ಜಾಹೀರಾತು ನೀಡಿ ಪ್ರಚಾರ ಸಿಗುವುದು ಶಾಸಕರಿಗೆ, ಸಂಸದರಿಗೆ.  ಬೇಕಾದರೆ ಇಲ್ಲಿಂದ ಹೋಗುವ ನಿಯೋಗವನ್ನು ರೈಲ್ವೆ ಸಚಿವರೊಂದಿಗೆ ಮಾತನಾಡಿಸುವ ಕೆಲಸವನ್ನು ಡಿ ವಿ ಸದಾನಂದ ಗೌಡರೇ ವಹಿಸಲಿ. ” ಗೋಯಲ್ ಜಿ, ಯೇ ಕಾಮ್ ಮುಝೇ ಕರ್ನಾತಾ. ಮೇ ಸೋಗಯಾ ಥಾ. ಇಸಿಲಿಯೇ ಆಪ್ ಕೆ ಪಾಸ್ ಆಯಾ ಹೂಂ” ಎಂದು ಹೇಳಿ ಕೆಲಸ ಮಾಡಿಸಿಕೊಡಲಿ. ಈ. ಮೂಲಕ ಇಷ್ಟು ವರ್ಷ ಮಾಡಿದ ಅನ್ಯಾಯವನ್ನು ಪರಿಹರಿಸಲಿ. ನಾವು ಕರಾವಳಿಯವರು ಒಳ್ಳೆಯವರು. ಮಾತು ತಪ್ಪಿದ ಮೊಯಿಲಿಗೆ ಮಾಡಿದ ಹಾಗೆ ಮಾಡಲ್ಲ. ಉಳಿದ್ದದ್ದು ನಿಮಗೂ, ನಳಿನ್ ಅವರಿಗೂ, ಶೋಭಾ ಅವರಿಗೂ ಬಿಟ್ಟಿದ್ದು!!!
0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Hanumantha Kamath June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Hanumantha Kamath June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search