• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಿಸಿಟಿವಿ ಹಾಕಿಸಿ ಗೋಕಳ್ಳರನ್ನು ಹಿಡಿಯಿರಿ- ಪೊಲೀಸರ ಸಲಹೆ!!

Hanumantha Kamath Posted On June 20, 2019
0


0
Shares
  • Share On Facebook
  • Tweet It

ಕೃಷ್ಣಾಪುರದಲ್ಲಿ ಕಳೆದ ಕೆಲವು ಸಮಯದಿಂದ ಹತ್ತಕ್ಕೂ ಹೆಚ್ಚು ಗೋವುಗಳನ್ನು ಕಳೆದುಕೊಂಡಿರುವ ಮನೆಗೆ ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅವರು ಬಂದು ಮನೆಯ ಗೇಟಿಗೆ ಬೀಗ ಹಾಕಿಸಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಎಂದು ಸಲಹೆ ನೀಡಿ ಹೋಗಿದ್ದಾರೆ. ನನ್ನ ಪ್ರಕಾರ ಇದು ಅನ್ ಪ್ರಾಕ್ಟಿಕಲ್ ಸಂಗತಿ. ಸಿಸಿಟಿವಿ ಹಾಕಿಸುವಷ್ಟು ಶ್ರೀಮಂತರು ಈಗ ದನಗಳನ್ನು ಸಾಕುತ್ತಿಲ್ಲ. ಇನ್ನು ಪಾಪದವರು ಸಿಸಿಟಿವಿ ಹಾಕಿಸಿ ದನಗಳನ್ನು ಸಾಕುವಷ್ಟು ಆರ್ಥಿಕ ಲಾಭವನ್ನು ಹೈನುಗಾರಿಕೆಯಿಂದ ಮಾಡುತ್ತಿಲ್ಲ. ಇನ್ನು ಸಿಸಿಟಿವಿ ಹಾಕಿದರೆ ಅದನ್ನೇ ಒಡೆದು ದನವನ್ನು ಕೊಂಡೊಯ್ಯುವಂತಹ ಸಮಾಜಘಾತುಕರು ನಮ್ಮ ಮಧ್ಯೆ ಇರುವಾಗ ಅವರು ಸಿಸಿಟಿವಿ ಕ್ಯಾಮೆರಾಗಳಿಗೆ ಬಗ್ಗುತ್ತಾರೆ ಎಂದು ನಾನು ಅಂದುಕೊಂಡಿಲ್ಲ. ಮೂಡಬಿದ್ರೆಯ ಬಸದಿಯಲ್ಲಿ ಸಿಸಿಟಿವಿ ಇದೆ ಎಂದು ಗೊತ್ತಿದ್ದ ಬಳಿಕವೂ ಅಲ್ಲಿ ದೇವರ ವಿಗ್ರಹಗಳನ್ನು ಕದ್ದೊಯ್ದಿರುವಾಗ ಸಿಸಿಟಿವಿ ಕ್ಯಾಮೆರಾಗಳು ನಮ್ಮ ಮೂಕದನಗಳನ್ನು ರಕ್ಷಿಸುತ್ತವೆ ಎನ್ನುವುದು ಶುದ್ಧ ಭ್ರಮೆ. ಅದಕ್ಕಿಂತ ಹೆಚ್ಚಾಗಿ ಪೊಲೀಸರಿಗೆ ತಮ್ಮ ಏರಿಯಾದಲ್ಲಿ ದನಕಳ್ಳರು ಯಾರು? ಎಲ್ಲಿಂದ ಕದಿಯುತ್ತಾರೆ, ಯಾವಾಗ ಕದಿಯುತ್ತಾರೆ? ಯಾವ ವಾಹನದಲ್ಲಿ ಬಂದು ಕದಿಯುತ್ತಾರೆ? ಕದ್ದು ಯಾವ ದಾರಿಯಲ್ಲಿ ಹೋಗುತ್ತಾರೆ? ಆ ಕದ್ದ ಗೋವುಗಳು ಎಲ್ಲಿ ಅಕ್ರಮ ಕಸಾಯಿ ಖಾನೆಗಳಲ್ಲಿ ಮಾಂಸವಾಗುತ್ತವೆ ಎನ್ನುವ ಪಿನ್ ಟು ಪಿನ್ ಮಾಹಿತಿ ಇರುತ್ತದೆ. ಅಷ್ಟಿದ್ದ ಬಳಿಕವೂ ಗೋಕಳ್ಳರು ಸಿಗುವುದಿಲ್ಲ ಎಂದಾದರೆ ಸಿಸಿಟಿವಿ ಕ್ಯಾಮೆರಾಗಳು ತಾನೇ ಏನು ಮಾಡಿಯಾವು?
ಒಂದು ವೇಳೆ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿ, ಅದರ ನಂತರವೂ ಕಳವು ಆದರೆ ಆಗ ಆ ಫೂಟೇಜ್ ಗಳನ್ನು ನೋಡಿಯಾದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ ಎನ್ನುವ ಗ್ಯಾರಂಟಿ ಪೊಲೀಸ್ ಕಮೀಷನರ್ ಅವರು ಆ ಮನೆಯವರಿಗೆ ನೀಡುತ್ತಾರಾ? ಬಹುಶ: ಸಂದೀಪ್ ಪಾಟೀಲ್ ಅವರಿಗೆ ಸುರತ್ಕಲ್ ಪರಿಸರದ ಗೋಕಳ್ಳರ ಸಾಮರ್ತ್ಯ ಗೊತ್ತಿಲ್ಲ ಎಂದು ಕಾಣಿಸುತ್ತದೆ. ಅದಕ್ಕೆ ಅವರು ಸಿಸಿಟಿವಿ ಐಡಿಯಾ ಕೊಟ್ಟಿರಬೇಕು. ಇಲ್ಲಿಯ ಗೋಕಳ್ಳರು ತಲವಾರು ತೋರಿಸಿಯೇ ದನಗಳನ್ನು ಕದ್ದುಕೊಂಡು ಹೋಗುತ್ತಾರೆ, ಹಾಗಿರುವಾಗ ಜುಜುಬಿ ಸಿಸಿಟಿವಿ ಅವರ ಏನು ತಾನೆ ಕಿತ್ತುಕೊಳ್ಳಲು ಸಾಧ್ಯ? ಇನ್ನು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದರೆ ಆಯಿತು, ಹುಡುಕುತ್ತೇವೆ, ಸಿಕ್ಕಿದರೆ ಫೋನ್ ಮಾಡುತ್ತೇವೆ ಎಂದು ಪೊಲೀಸರು ಹೇಳುತ್ತಾರೆ. ಇವರು ಹುಡುಕಲು ಹೋಗುವಾಗಲೇ ಆ ಅಮಾಯಕ ದನ ಯಾರದ್ದೋ ಹೊಟ್ಟೆಯಲ್ಲಿ ಕರಗಿ ವಿಷವಾಗಿರುತ್ತದೆ. ಆದ್ದರಿಂದ ಹಟ್ಟಿಯಲ್ಲಿ ಕಟ್ಟಿದ ದನ ಕಾಣೆಯಾದರೆ ಅದು ಮತ್ತೆ ಬರುತ್ತದೆ ಎನ್ನುವ ಭ್ರಮೆ ಯಾರಿಗೂ ಇರುವುದು ಬೇಡಾ. ಹಾಗಾದರೆ ಸಿಸಿಟಿವಿ ಐಡಿಯಾ ಫುಲ್ ವೇಸ್ಟ್ ಎಂದು ನಾನು ಹೇಳುವುದಿಲ್ಲ. ಬೇಕಾದರೆ ಪಾಲಿಕೆ ಕಡೆಯಿಂದ ಆಯಕಟ್ಟಿನ ಜಾಗದಲ್ಲಿ ಅಳವಡಿಸಲಿ. ಆ ಮೂಲಕ ದನ ಕದ್ದು ಹೋಗುವ ವಾಹನಗಳ ಗುರುತು ಪತ್ತೆ ಹಚ್ಚಲು ಅದು ಸುಲಭವಾಗುತ್ತದೆ.
ಇನ್ನು ಈ ವಿಷಯದಲ್ಲಿ ಕಾನೂನುಗಳು ಗಟ್ಟಿಯಾಗಬೇಕು. ಗಂಧದ ಕಳ್ಳಸಾಗಾಣಿಕೆಯ ಸಂದರ್ಭದಲ್ಲಿ ಪೊಲೀಸರು ಹಿಡಿದರೆ ಯಾವ ರೀತಿಯಲ್ಲಿ ವಾಹನಗಳು ಸಿಝ್ ಆಗಿ ಗೆದ್ದಲು ಹಿಡಿಯುವ ತನಕ ಪೊಲೀಸ್ ಠಾಣೆಯ ಆವರಣದಲ್ಲಿ ಕೊಳೆಯುತ್ತವೆಯೋ ಹಾಗೇ ದನಕಳ್ಳತನದ ಪ್ರಕರಣಗಳಲ್ಲಿ ವಾಹನಗಳು ಸೀಝ್ ಆದರೆ ಅವು ಸುಲಭವಾಗಿ ರಸ್ತೆಗೆ ಇಳಿಯುವಂತೆ ಆಗಬಾರದು. ಅದು ಆದರೆ ಆಗ ಒಂದಷ್ಟರ ಮಟ್ಟಿಗೆ ಹೆದರಿಕೆ ಗೋಕಳ್ಳರಿಗೆ ಉಂಟಾಗುತ್ತದೆ.
ಇನ್ನು ಇತ್ತೀಚೆಗೆ ಒಂದು ಒಳ್ಳೆಯ ಬೆಳವಣಿಗೆ ನಡೆದಿದೆ. ಕೆಲವು ಮುಸ್ಲಿಂ ಯುವಕರು ಸೇರಿ ಸಂಘಟನೆಯ ಮೂಲಕ ಅಕ್ರಮ ದನಸಾಗಾಟ, ಗೋಕಳ್ಳತನದ ವಿರುದ್ಧ ತಾವು ಕೂಡ ಪೊಲೀಸ್ ಇಲಾಖೆಗೆ, ಹಿಂದೂ ಸಂಘಟನೆಯೊಂದಿಗೆ ಕೈಜೋಡಿಸುವುದಾಗಿ ಹೇಳಿದ್ದಾರೆ. ಒಳ್ಳೆಯ ಬೆಳವಣಿಗೆ. ಇನ್ನು 1964 ರ ಗೋಹತ್ಯಾ ನಿಷೇಧ ಕಾನೂನು ನಿಜಕ್ಕೂ ಕಠಿಣವಾಗಬೇಕು. ಅದಕ್ಕೆ ಹಿಂದೂತ್ವದ ಆಧಾರದ ಮೇಲೆ ಗೆದ್ದಿರುವ ಕರಾವಳಿಯ ಹದಿನೈದು ಶಾಸಕರು ಒಟ್ಟಾಗಬೇಕು. ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಬೇಕು. ಒಂದಿಷ್ಟು ದಿನ ಇರದಿದ್ದ ಈ ಗೋಕಳ್ಳತನ ಈಗ ಮತ್ತೆ ಶುರುವಾಗಿದೆ. ಕಳ್ಳರು ಬಾಲ ಬಿಚ್ಚಿದ್ದಾರೆ. ಅಪರೂಪಕ್ಕೆ ನಾಲ್ಕು ಜನರನ್ನು ಬಂಧಿಸಿರುವ ಫೋಟೋ ಮಾಧ್ಯಮಗಳಲ್ಲಿ ಬರುತ್ತದೆ. ಮತ್ತೆ ಯಥಾಪ್ರಕಾರ ಅವರು ರಿಲೀಸ್ ಆಗುತ್ತಾರೆ. ಅವರೇ ಕಳ್ಳತನಕ್ಕೆ ಇಳಿಯುತ್ತಾರೆ. ಇತ್ತ ಪೊಲೀಸರು ಸಿಸಿಟಿವಿ ಹಾಕಿಸಿ ಎನ್ನುತ್ತಾರೆ. ಎಲ್ಲಿಯ ತನಕ ಪಿಕ್ ಪಾಕೆಟ್ ಕಳ್ಳನಿಗೆ ಇರುವ ಶಿಕ್ಷೆ ಗೋಕಳ್ಳರಿಗೆ ಸಾಕಾಗುವುದಿಲ್ಲ ಎಂದು ಸರಕಾರಕ್ಕೆ ಅರ್ಥವಾಗುವುದಿಲ್ಲವೋ ಅಲ್ಲಿಯವರೆಗೆ ಇದು ನಡೆಯುತ್ತಲೇ ಇರುತ್ತದೆ!!
0
Shares
  • Share On Facebook
  • Tweet It




Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Hanumantha Kamath September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Hanumantha Kamath September 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search