• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಬಸ್ಸಿಗೆ ಕಲ್ಲು ಹೊಡೆದರೆ ದನಗಳು ಉಳಿಯುತ್ತವೆಯಾ?

Hanumantha Kamath Posted On June 25, 2019
0


0
Shares
  • Share On Facebook
  • Tweet It

ಇವತ್ತು ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆ ಬಸ್ಸುಗಳಿಗೆ ಕಲ್ಲು ತೂರಾಟ ನಡೆಸಲಾಗಿದೆ. ಇದಕ್ಕೆ ಮುಖ್ಯ ಕಾರಣ ಗಲಾಟೆ ಮಾಡುವ ಉದ್ದೇಶ ವಿನ: ಬೇರೆ ಏನೂ ಇಲ್ಲ. ಜಿಲ್ಲೆಯ ಬಸ್ಸುಗಳು ರಸ್ತೆಗೆ ಇಳಿಯುವುದು ನಿಂತುಬಿಟ್ಟರೆ ಜನಜೀವನ ಅಸ್ತವ್ಯಸ್ತ ಆಗುತ್ತದೆ. ಅದರಿಂದ ಜನಸಾಮಾನ್ಯರು ಸಂಕಟ ಅನುಭವಿಸುತ್ತಾರೆ. ವಿಘ್ನ ಸಂತೋಷಿಗಳಿಗೆ ಸಂತೋಷವಾಗುತ್ತದೆ. ಹಾಗಾದರೆ ಗಲಾಟೆಗೆ ಏನು ಕಾರಣ? ಸಂಶಯವೇ ಇಲ್ಲ, ಗೋಸಾಗಾಟ.

ನಾವು ಯಾವುದೇ ಕಾರಣಕ್ಕೂ ಅಕ್ರಮ ದನ ಸಾಗಾಟ ಆಗಲು ಬಿಡುವುದಿಲ್ಲ, ಅಕ್ರಮ ಕಸಾಯಿಖಾನೆಗಳನ್ನು ಬಿಡುವುದಿಲ್ಲ ಎಂದು ಯಾವ ದಿನ ಪೊಲೀಸ್ ಇಲಾಖೆಗೆ ಪೊಲೀಸ್ ಇಲಾಖೆಯೇ ಧೃಡ ನಿರ್ಧಾರ ಮಾಡುತ್ತದೆಯೋ ಆವತ್ತು ಗೋಕಳ್ಳತನ ತನ್ನಿಂದ ತಾನೇ ಇಳಿದು ಹೋಗಿ ಕ್ರಮೇಣ ನಿಂತು ಹೋಗಲಿದೆ. ಅದರೊಂದಿಗೆ ನಾವು ದನಗಳನ್ನು ಯಾವುದೇ ಕಾರಣಕ್ಕೂ ಮಾರುವುದಿಲ್ಲ ಎಂದು ಗೋವನ್ನು ಸಾಕುವವರು ನಿಶ್ಚಯಿಸಿದ ದಿನ ಸಕ್ರಮ ಸಾಗಾಟವೂ ನಿಂತು ಹೋಗಲಿದೆ. ಕದ್ದ ದನಗಳನ್ನು ನಾವು ತಿನ್ನುವುದಿಲ್ಲ ಎಂದು ಮುಸ್ಲಿಮರೂ, ಗೋಮಾಂಸ ತಿನ್ನುವುದು ಮಹಾಪಾಪ ಎಂದು ಯಾವಾಗ ಜಾತ್ಯಾತೀತ ಹಿಂದುಗಳು ಅಂದುಕೊಳ್ಳುತ್ತಾರೋ ಆವತ್ತು ಗೋಗಲಾಟೆ ಅಂತ್ಯಕಾಣಲಿದೆ. ಆದರೆ ಇಷ್ಟೆಲ್ಲಾ ಸಾಧ್ಯವಾಗಬೇಕಾದರೆ ಏನಾದರೂ ಪವಾಡ ನಡೆಯಬೇಕಾಗಿದೆ. ತುಂಬಾ ದೊಡ್ಡ ಸಾಧನೆ ಏನಲ್ಲಾ? ಎಲ್ಲರೂ ಗಟ್ಟಿ ಮನಸ್ಸು ಮಾಡಬೇಕು.

ಮುಕ್ತ ಮನಸ್ಸು ಬೇಕು…

ಮೊದಲಿಗೆ ಸ್ಥಳೀಯ ಪೊಲೀಸ್ ಠಾಣೆಗಳ ಅಧೀಕ್ಷಕರರು, ನಂತರ ರಾಜಕಾರಣಿಗಳು, ಜನಪ್ರತಿನಿಧಿಗಳು, ಸಂಘಟನೆಗಳ ಮುಖಂಡರು, ಧರ್ಮಗುರುಗಳು, ಭೋದಕರು ಹೀಗೆ ಒಂದು ಕೋಣೆಯಲ್ಲಿ ಕುಳಿತು ಅಖಂಡ ಸಭೆ ನಡೆಸಿ ಹೊರಗೆ ಬಂದು ತಮ್ಮ ನಿರ್ಧಾರ ಪ್ರಕಟಿಸಬೇಕು. ಅದು ಆಗದೇ ಇದ್ದ ಕಾರಣದಿಂದ ಮೊನ್ನೆ ಜೋಕಟ್ಟೆಯಲ್ಲಿ ನಡೆದ ಘಟನೆ ನಿತ್ಯ ಮುಂದುವರೆಯುತ್ತಿದೆ. ಜೋಕಟ್ಟೆಯಲ್ಲಿ ಅಕ್ರಮ ಕಸಾಯಿ ಖಾನೆ ಇಲ್ಲ ಎಂದರೆ ಕುರುಡ ಕೂಡ ನಂಬಲಿಕ್ಕಿಲ್ಲ, ಹಾಗಿರುವಾಗ ಅಲ್ಲಿಂದ ಇತ್ತೀಚೆಗೆ ಪಣಂಬೂರು ಪೊಲೀಸರು 23 ದನಗಳನ್ನು ವಶಪಡಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ದನಗಳು ಫಜೀರು ಗೋವನಿತಾಶ್ರಮದಲ್ಲಿ ಬದುಕಿದ್ದವು. ಆದರೆ ನ್ಯಾಯಾಲಯದಲ್ಲಿ ದಾವೆ ಮಂಡಿಸಿದ ಕೆಲವರು ನಾವು ಸಾಕುವ ದೃಷ್ಟಿಯಿಂದ ಗೋವುಗಳನ್ನು ಇಟ್ಟಿದ್ದೇವು. ಅದನ್ನು ಪೊಲೀಸರು ವಶಪಡಿಸಿಕೊಂಡು ಹೋಗಿರುವುದು ಸರಿಯಲ್ಲ ಎಂದು ವಾದಿಸಿದ್ದರು. ಕೊನೆಗೆ ನ್ಯಾಯಾಲಯ ದನಗಳನ್ನು ಮತ್ತೆ ಜೋಕಟ್ಟೆಯವರ ವಶಕ್ಕೆ ಒಪ್ಪಿಸಿತು. ಅದನ್ನು ಟೆಂಪೂದಲ್ಲಿ ತೆಗೆದುಕೊಂಡು ಹೋದವರು ಅಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ತಾವು ಹೇಗೆ ನ್ಯಾಯಾಲಯದ ದಾರಿ ತಪ್ಪಿಸಿ ದನಗಳನ್ನು ಮತ್ತೆ ತೆಗೆದುಬಂದೆವು ನೋಡಿ ಎಂದು ಹೆಮ್ಮೆಯ ಫೋಸ್ ಕೊಟ್ಟಿದ್ದಾರೆ. ಪಟಾಕಿ ಹೊಡೆದ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ. ಅದು ಟಿವಿ, ವೆಬ್ ಸೈಟಿಗಳಲ್ಲಿ ಬಂದಿದೆ. ಹೀಗೆ ಪಟಾಕಿ ಸಿಡಿಸಿದ್ದೇ ಒಂದು ವಿವಾದವಾಗಿದೆ. ದನವನ್ನು ಕೇವಲ ತಿನ್ನುವ ಆಹಾರ ಎಂದುಕೊಂಡವರು ಮಾತ್ರ ಹೀಗೆ ಯುದ್ಧ ಗೆದ್ದ ಉನ್ಮಾದದಲ್ಲಿ ಇರುತ್ತಾರೆ ವಿನ: ಗೋವು ನಮಗೆ ತಾಯಿ ಸಮಾನ ಎಂದುಕೊಂಡವರು ಇದರಿಂದ ಗ್ಯಾರಂಟಿಯಾಗಿ ಬೇಸರದಲ್ಲಿ ಇರುತ್ತಾರೆ.

ಚೆಕ್ ಪೋಸ್ಟ್ ಸ್ಟ್ರಾಂಗ ಇರಲಿ…

ಗೋವನ್ನು ಒಂದು ಪ್ರಾಣಿ, ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳು ಭೋಗದ ವಸ್ತುಗಳು ಎಂದು ಅಂದುಕೊಳ್ಳುವವರಿಗೆ ಅದರ ಮಹತ್ವ ಗೊತ್ತಿಲ್ಲದೇ ಇರಬಹುದು. ಅದರೆ ದನದ ಮಹತ್ವ, ಗೋವಿನ ಪ್ರಾಮುಖ್ಯತೆ ಕೇವಲ ಹಾಲು ನೀಡುತ್ತದೆ ಎನ್ನುವ ಕಾರಣಕ್ಕಾಗಿ ಮಾತ್ರವಲ್ಲ, ಗೋವು ಕೃಷಿ ಬದುಕಿಗೂ ಅತ್ಯಗತ್ಯ ಎನ್ನುವುದು ಹಲವರು ಅರ್ಥ ಮಾಡಿಕೊಂಡಿಲ್ಲ. ಹಾಗಾದರೆ ನಮ್ಮ ಗೋವನ್ನು ನಾವು ಉಳಿಸಲು ನಾವು ಏನು ಮಾಡಬೇಕು ಎಂದರೆ ಅಲ್ಲಲ್ಲಿ ಪೊಲೀಸ್ ಇಲಾಖೆಯವರು ಚೆಕ್ ಪೋಸ್ಟ್ ಹಾಕಬೇಕು. ಎಲ್ಲೆಲ್ಲಿ ಚೆಕ್ ಪೋಸ್ಟ್ ಹಾಕಲಾಗಿದೆಯೋ ಅಲ್ಲಲ್ಲಿ ರಾತ್ರಿ ಪೊಲೀಸಿನವರು ಬರುವ ವಾಹನಗಳ ತಪಾಸಣೆ ನಡೆಸಬೇಕು. ಒಂದು ವೇಳೆ ಒಂದು ಚೆಕ್ ಪೋಸ್ಟಿನ ಪೊಲೀಸ್ ಸಿಬ್ಬಂದಿ ಅಕ್ರಮ ಗೋಸಾಗಾಟದ ಟೆಂಪೊವನ್ನು ಬಿಟ್ಟರು ಎಂದೇ ಇಟ್ಟುಕೊಳ್ಳೋಣ, ಅದು ಮುಂದಿನ ಚೆಕ್ ಪೋಸ್ಟಿನಲ್ಲಿ ಹಿಡಿಯಲ್ಪಟ್ಟರೆ ಆಗ ಹಿಂದೆ ಬಿಟ್ಟ ಪೊಲೀಸ್ ಸಿಬ್ಬಂದಿಗಳನ್ನು ಕರೆದು ಪೊಲೀಸ್ ಕಮೀಷನರ್ ಲೆಫ್ಟ್, ರೈಟ್ ಮಾಡಿದರೆ ಮುಗಿಯಿತು. ಯಾವ ಸ್ಟೇಶನ್ನಿವರು ದನ ಸಾಗಾಟದವರೊಂದಿಗೆ ಶಾಮೀಲಾಗಿದ್ದಾರೆ ಎನ್ನುವುದು ಗೊತ್ತಾಗಿಬಿಡುತ್ತದೆ. ಅಷ್ಟಕ್ಕೂ ಪೊಲೀಸಿನವರು ಕೂಡ ಮನುಷ್ಯರು. ಅವರಿಗೂ ಮಾನವೀಯತೆ ಇದೆ. ಆದರೆ ಅನೇಕ ಬಾರಿ ಜಾತ್ಯಾತೀತ ರಾಜಕಾರಣಿಗಳು ಫೋನ್ ಮಾಡಿ ಒತ್ತಡ ಹಾಕಿದರೆ ಯಾರು ತಾನೇ ಏನು ಮಾಡಿಯಾರು? ಅಲ್ಲವಾ

0
Shares
  • Share On Facebook
  • Tweet It




Trending Now
ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
Hanumantha Kamath July 3, 2025
ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
Hanumantha Kamath July 3, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
  • Popular Posts

    • 1
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 2
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • 3
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 4
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 5
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!

  • Privacy Policy
  • Contact
© Tulunadu Infomedia.

Press enter/return to begin your search