• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಿಜೆಪಿ ಸರಕಾರ ಬಂದಾಯ್ತು, ಇನ್ನು ಟಿಪ್ಪು ಜಯಂತಿ ಇಲ್ಲ!!

Hanumantha Kamath Posted On July 30, 2019
0


0
Shares
  • Share On Facebook
  • Tweet It

ಕೊನೆಗೂ ಯಡಿಯೂರಪ್ಪ ಸರಕಾರ ತಮ್ಮ ಪಕ್ಷದ ಸಿದ್ಧಾಂತದಂತೆ ನಡೆದುಕೊಳ್ಳುತ್ತಿದೆ. ಅಧಿಕಾರಕ್ಕೆ ಬಂದ ವಾರದೊಳಗೆ ಬಿಎಸ್ ವೈ ಟಿಪ್ಪು ಜಯಂತಿಯನ್ನು ಸರಕಾರದ ವತಿಯಿಂದ ಆಯೋಜಿಸುವುದನ್ನು ರದ್ದುಪಡಿಸಿದ್ದಾರೆ. ಇದು ಏನೇ ಆಗಲಿ, ರಾಜ್ಯದ ಭಾಜಪ ಸರಕಾರದ ನಿಜವಾದ ಉತ್ತಮ ನಡೆ. ಏಕೆಂದರೆ ವಿರೋಧ ಪಕ್ಷದಲ್ಲಿದ್ದಾಗ ಅವರು ಇದೇ ವಿಷಯ ಇಟ್ಟುಕೊಂಡು ಹೋರಾಟ ನಡೆಸಿದ್ದರು. ಈಗ ತಾವು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಅಲ್ಲಿಗೆ ಬಹುಸಂಖ್ಯಾತರಿಗೆ ಸಮಾಧಾನವಾಗಬಹುದು. ಕಾಂಗ್ರೆಸ್ ಸರಕಾರ ಇದ್ದಾಗ ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರ ಮತಬ್ಯಾಂಕ್ ಏಕಾಏಕಿ ತಮ್ಮ ಪಕ್ಷದ ಕಡೆ ಸೆಳೆಯಲು ಮಾಡಿದ ಕರ್ಮ ಅವರಿಗೆ ಫಲವನ್ನಂತೂ ತಂದಿರಲಿಲ್ಲ. ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿಯಿಂದ 120 ಸೀಟುಗಳಿಂದ 77ಕ್ಕೆ ಬಂದು ತಲುಪಿತ್ತು. ಅದರ ನಂತರ ಕುಮಾರಸ್ವಾಮಿಯವರಿಗೆ ಆ ಕಡೆ ಆಚರಿಸುವುದಕ್ಕೆ ಸಂಪೂರ್ಣ ಮನಸ್ಸು ಇಲ್ಲದೆ, ಇತ್ತ ಕೈಬಿಡುವ ಸ್ವಾತಂತ್ರ್ಯವೂ ಇಲ್ಲದೆ ಒಂದು ವರ್ಷ ನಡೆದುಕೊಂಡು ಹೋಗಿತ್ತು. ಏಕೆಂದರೆ ಟಿಪ್ಪು ಜಯಂತಿಯಿಂದ ಜೆಡಿಎಸ್ ಗೆ ಮತ ಹಾಕುತ್ತಿದ್ದ ಮುಸಲ್ಮಾನರೂ ಕೂಡ ಕಾಂಗ್ರೆಸ್ಸಿಗೆ ಜೈ ಎಂದಿದ್ದರು. ಈ ಮೂಲಕ ಜೆಡಿಎಸ್ ಕೂಡ ನಷ್ಟ ಅನುಭವಿಸಿತ್ತು. ಆದರೆ ನಂತರ ದಾರಿ ಇರಲಿಲ್ಲ. ಟಿಪ್ಪು ಜಯಂತಿ ಕಾಟಾಚಾರಕ್ಕೆ ನಡೆದುಹೋಗುತ್ತಿತ್ತು. ಅದಕ್ಕೆ ಜಿಲ್ಲೆಗೆ ಸರಕಾರದ ವತಿಯಿಂದ ಬರುತ್ತಿದ್ದ ಐವತ್ತು ಸಾವಿರ, ತಾಲೂಕಿಗೆ ಇಪ್ಪತ್ತೈದು ಸಾವಿರ ಅಪ್ಪಟ ವೇಸ್ಟ್ ಆಗುತ್ತಿತ್ತೇ ವಿನ: ವೇದಿಕೆ ಮೇಲಿದ್ದ ನಾಲ್ಕು ಜನರಿಗೂ ಟಿಪ್ಪು ಬಗ್ಗೆ ಗೌರವ ಎದ್ದು ಕಾಣುತ್ತಿರಲಿಲ್ಲ ಸಭಾಂಗಣದ ಹೊರಗೆ ಕೇಸರಿ ಪಡೆಗಳ ಪ್ರತಿಭಟನೆ ಯಥಾಪ್ರಕಾರ ನಡೆಯುತ್ತಿತ್ತು. ಪೊಲೀಸರು ತಮ್ಮ ವಾಹನಕ್ಕೆ ಕಮಲದ ಯುವಕರನ್ನು ಎತ್ತಿ ಹಾಕುವ ವಿಡಿಯೋ, ಫೋಟೋ ಮೀಡಿಯಾದವರಿಗೆ ಸಿಗುತ್ತಿತ್ತು. ಯಾರ್ಯಾರೋ ಧರ್ಮಕ್ಕೆ ಹೀರೋಗಳಾಗುತ್ತಿದ್ದರು. ಅದರ ನಡುವೆ ಬಡಪಾಯಿ ಕುಟ್ಟಪ್ಪನಂತವರು ಜೀವ ಕಳೆದುಕೊಳ್ಳುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾರ್ಯಾರನ್ನೋ ಹೊಡೆಯಲು ಹೋಗಿ ಇನ್ಯಾರೋ ಜೀವ ಬಿಟ್ಟಿದ್ದರು. ಹಲವರಿಗೆ ಗಾಯಗಳಾಗಿದ್ದವು. ಎರಡೂ ಧರ್ಮದವರ ಮೇಲೆ ದಾಳಿಗಳಾಗುತ್ತಿದ್ದವು. ಪೊಲೀಸರು ಹೆಚ್ಚಿನ ಜಾಗರೂಕತೆಯಲ್ಲಿ ಪಹರೆ ಇಡಬೇಕಾಗಿತ್ತು. ಇನ್ನು ಅದೆಲ್ಲ ನಡೆಯಲಿಕ್ಕಿಲ್ಲ.
ಅಷ್ಟಕ್ಕೂ ಒಂದು ವೇಳೆ ಯಾರಿಗಾದರೂ ಟಿಪ್ಪು ಜಯಂತಿಯನ್ನು ಆಚರಿಸಬೇಕು ಎಂದಾದರೆ ವೈಯಕ್ತಿಕವಾಗಿ ತಮ್ಮ ಖರ್ಚಿನಲ್ಲಿ ಆಚರಿಸಬಹುದು. ಯಾವುದಾದರೂ ಸಭಾಂಗಣದಲ್ಲಿ, ಮೈದಾನದಲ್ಲಿ ತಮ್ಮದೇ ಖರ್ಚಿನಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅನುಮತಿ ಪಡೆದು ಆಚರಿಸಲು ಯಾವುದೂ ಅಡ್ಡಿ ಇಲ್ಲ. ಈ ದೇಶದಲ್ಲಿ ಎಲ್ಲಾ ಧರ್ಮಿಯರು ತಮಗೆ ಬೇಕಾದ ಆಚರಣೆಗಳನ್ನು ಕಾನೂನು ಮಿತಿಯೊಳಗೆ ಆಚರಿಸುವುದಕ್ಕೆ ಈ ದೇಶ ವಿರೋಧ ಮಾಡುವುದಿಲ್ಲ. ಆದರೆ ಒಬ್ಬ ರಾಜನ ಜನ್ಮದಿನವನ್ನು ಆಚರಿಸಲು ಸರಕಾರದ ಹಣವನ್ನು ಬಳಸುವ ಮೊದಲು ಆ ತೀರ್ಮಾನ ಮಾಡುವ ಮುಖ್ಯಮಂತ್ರಿಯವರು ಆ ರಾಜನ ಪೂರ್ವಾಪರಗಳ ಬಗ್ಗೆ ಗೊಂದಲ ಇದ್ದಲ್ಲಿ ಯಾವುದೇ ಹೆಜ್ಜೆ ಇಡಬಾರದು. ಆದರೆ ಸಿದ್ಧರಾಮಯ್ಯನವರು ಅದನ್ನು ಯೋಚಿಸಿರಲೇ ಇಲ್ಲ. ತಮ್ಮದು ಜಾತ್ಯಾತೀತ ಸಿದ್ಧಾಂತ ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಜೆಡಿಎಸ್ ಅನ್ನು ಮಕಾಡೆ ಮಲಗಿಸಲು ಟಿಪ್ಪು ಜಯಂತಿ ಸರಕಾರದ ಹಣದಲ್ಲಿ ಆಚರಿಸುವ ತೀರ್ಮಾನ ಮಾಡಿದರು. ದೇವೆಗೌಡರಿಗೆ ತಮ್ಮ ಮಾಜಿ ಶಿಷ್ಯನ ಜಾಡು ಅರ್ಥವಾಯಿತಾದರೂ ಬೆಂಬಲಿಸದೇ ವಿಧಿ ಇರಲಿಲ್ಲ. ಆದ್ದರಿಂದ ಟಿಪ್ಪು ಜಯಂತಿ ವಿದ್ಯುಕ್ತವಾಗಿ ಸಿದ್ಧರಾಮಯ್ಯನವರ
ಆಡಳಿತಾವಧಿಯಲ್ಲಿ ಪ್ರಾರಂಭವಾಗಿತ್ತು. ಅದರಿಂದ ಹೆಚ್ಚು ನೋವನ್ನು ಅನುಭವಿಸಿದವರು ಕೊಡಗರು. ಕೊಡಗಿನ ಶಾಸಕ ಬೋಪಯ್ಯನವರು ಈ ಕುರಿತು ಯಡಿಯೂರಪ್ಪನವರು ಯಾವಾಗ ಮುಖ್ಯಮಂತ್ರಿಯಾಗುತ್ತಾರೋ ಆಗ ಟಿಪ್ಪು ಜಯಂತಿ ನಿಲ್ಲಲಿದೆ ಎಂದು ಜನರಿಗೆ ಭರವಸೆ ಕೊಟ್ಟಿದ್ದರು. ಹಾಗೆ ಮುಖ್ಯಮಂತ್ರಿಯಾಗಿ ಬಿಎಸ್ ವೈ ಅಧಿಕಾರಕ್ಕೆ ಏರುತ್ತಿದ್ದಂತೆ ಇದನ್ನು ಸಿಎಂ ಗಮನಕ್ಕೆ ತಂದ ಬೋಪಯ್ಯನವರು ಟಿಪ್ಪು ಜಯಂತಿಗೆ ಫುಲ್ ಸ್ಟಾಪ್ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿಗೆ ಒಂದು ಹಂತಕ್ಕೆ ಕೇಸರಿ ಪಾಳಯದಲ್ಲಿ ಸಂಭ್ರಮದ ವಾತಾವರಣ ಇದೆ. ಈ ಕುರಿತು ಬರುವ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರು ಬಿಜೆಪಿ ಮುಖಂಡರ ಮೇಲೆ ಆರೋಪ ಪ್ರತ್ಯಾರೋಪ ಮಾಡಬಹುದು. ಆದರೆ ಒಂದಂತೂ ನಿಜ, ಇಸ್ಲಾಂ ಧರ್ಮದಲ್ಲಿ ಜಯಂತಿಗಳು ಆಚರಿಸುವ ಸಂಪ್ರದಾಯವೇ ಇಲ್ಲ. ಅಂತಹ ಇಸ್ಲಾಂ ಧರ್ಮದವರಿಗೆ ಜಯಂತಿಗಳನ್ನು ಆಚರಿಸುವ ತಪ್ಪು ಹೆಜ್ಜೆ ಹೇಳಿಕೊಟ್ಟಿದ್ದು ನಮ್ಮ ಸಿದ್ಧರಾಮಯ್ಯನವರು. ಛೇ, ಒಂದು ವೋಟಿಗಾಗಿ ನಮ್ಮ ರಾಜಕಾರಣಿಗಳು ಒಂದು ಧರ್ಮದ ತಿರುಳನ್ನೇ ಬದಲಾಯಿಸುತ್ತಾರಲ್ಲ!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search