• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ಸ್, ಬಟ್ಟಿಂಗ್ಸ್ ಹಾಕುವವರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಿ ತೋರಿಸಲಿ!

Hanumantha Kamath Posted On August 9, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್ ಅವರು ಹೊಸ ಸೂಚನೆಯೊಂದನ್ನು ಹೊರಡಿಸಿದ್ದಾರೆ. ಈ ಬಾರಿಯ ಜಾತ್ರೆ, ಉತ್ಸವದ ಸಂದರ್ಭದಲ್ಲಿ ಯಾವುದೇ ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ಸ್, ಬಂಟಿಂಗ್ಸ್ ಅನ್ನು ಮಂಗಳೂರಿನಲ್ಲಿ ಅಳವಡಿಸುವುದನ್ನು ನಿಷೇಧಿಸಿ ಅವರು ಆದೇಶ ಹೊರಡಿಸಿದ್ದಾರೆ. ಅದನ್ನು ಮೀರಿಯೂ ಯಾರಾದರೂ ಮಂಗಳೂರಿನಲ್ಲಿ ಅಲ್ಲಲ್ಲಿ ಅಳವಡಿಸಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವುದಾಗಿ ಹೇಳಿದ್ದಾರೆ. ಬಹಳ ಉತ್ತಮ ನಿರ್ಧಾರ. ಆದರೆ ಇದು ಅನುಷ್ಟಾನಕ್ಕೆ ಬರುತ್ತದೆಯಾ ಎನ್ನುವುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಹೀಗೆ ಹೇಳಿಕೆಯನ್ನು ನೀಡಿ ಮಂಗಳೂರಿನ ಸೌಂದರ್ಯವನ್ನು ಉಳಿಸುವಲ್ಲಿ ಪಾಲಿಕೆ ಕಡೆಯಿಂದ ಪ್ರಯತ್ನ ಆಗುತ್ತಿದೆ ಎಂದು ತೋರಿಸುವ ಉದ್ದೇಶ ಕಮೀಷನರ್ ಅವರಿಗೆ ಇರಬಹುದು. ಆದರೆ ಇವರು ನಿಜಕ್ಕೂ ಫ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್ಸ್, ಬಟ್ಟಿಂಗ್, ಕಟೌಟ್ ಹಾಕುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಾರಾ ಎನ್ನುವ ಪ್ರಶ್ನೆ ನನ್ನಲ್ಲಿ ಉದ್ಭವಿಸುತ್ತದೆ. ಇದು ಕೇವಲ ಪೇಪರ್ ಹೇಳಿಕೆ ಆಗಿ ಉಳಿಯಬಾರದು ಎಂದಾದರೆ ನಿಜಕ್ಕೂ ಪಾಲಿಕೆ ಕಮೀಷನರ್ ಧೈರ್ಯ ತೋರಿಸಬೇಕು. ನನಗೆ ಗೊತ್ತಿರುವ ಪ್ರಕಾರ ಹಿಂದೊಮ್ಮೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ನಾಯಕರೊಬ್ಬರು ಮಂಗಳೂರಿಗೆ ಬರುವ ದಿನ ಇಡೀ ಮಂಗಳೂರು ನಗರವನ್ನು ಕೇಸರಿ ಬಟ್ಟಿಂಗ್ಸ್ ಗಳಿಂದ ತುಂಬಿಸಲಾಗಿತ್ತು. ಆವತ್ತು ಪಾಲಿಕೆ ಕಮೀಷನರ್ ಅದನ್ನು ತೆಗೆಸಲು ಸೂಚನೆ ನೀಡಿದ್ದರು. ಆ ದಿನ ಬಿಜೆಪಿ ಕಾರ್ಯಕರ್ತರ ಮತ್ತು ಆಡಳಿತದ ನಡುವೆ ಬಿಸಿಬಿಸಿ ಮಾತುಕತೆ ಆಗಿತ್ತು. ಆಗ ಕಾಂಗ್ರೆಸ್ ಸರಕಾರ ಇತ್ತು. ನಾನು ಹೇಳುವುದು ಯಾವುದೇ ಸರಕಾರ ಇರಲಿ, ಯಾವ ಪಕ್ಷದವರು ಕೂಡ ತಮ್ಮ ನಾಯಕರ ಆಗಮನ ಎದ್ದು ಕಾಣಿಸಲು ಫ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್ ಹಾಕುವುದು ಅಕ್ಷರಶ: ತಪ್ಪು. ಅದಲ್ಲದೆ ಯಾವುದೇ ಧರ್ಮದವರ ಹಬ್ಬ, ಉತ್ಸವ, ಜಾತ್ರೆ ಇರಲಿ ಶುಭ ಕೋರುವ ನೆಪದಲ್ಲಿ ಪ್ರಚಾರಕ್ಕೆ ಇಳಿಯುವ ಪ್ರಚಾರ ಪ್ರಿಯರು ತಮ್ಮ ಹೆಸರು ಮೇಲೆ ಹೋಗುವ ಖುಷಿಯಲ್ಲಿ ಮಂಗಳೂರಿನ ಸೌಂದರ್ಯವನ್ನು ಕಡೆಗಣಿಸುತ್ತಾರೆ. ಅಷ್ಟೇ ಅಲ್ಲ, ಕೆಲವು ಸಿನೆಮಾದವರು ಮಂಗಳೂರಿನಲ್ಲಿ ಎಷ್ಟು ಫ್ಲೆಕ್ಸ್ ಹಾಕಿಸುತ್ತಾರೆ ಎಂದರೆ ಅಷ್ಟು ದಿನ ಅವರ ಸಿನೆಮಾ ಥಿಯೇಟರಿನಲ್ಲಿ ಓಡುವುದಿಲ್ಲ. ಅವರಿಗೂ ಬಿಸಿ ಮುಟ್ಟಿಸುವ ಕೆಲಸ ನಡೆಯಬೇಕಿದೆ.

ಇದು ಕೇವಲ ಫ್ಲೆಕ್ಸ್, ಬಟ್ಟಿಂಗ್ಸ್, ಪ್ಲಾಸ್ಟಿಕ್ ಬ್ಯಾನರ್ಸ್ ವಿಷಯಕ್ಕೆ ಮಾತ್ರ ಅನ್ವಯ ಮಾಡಬಾರದು. ಹೋರ್ಡಿಂಗ್ ವಿಷಯದಲ್ಲಿಯೂ ಪಾಲಿಕೆ ಇಷ್ಟೇ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಅದಕ್ಕಾಗಿ ತುಂಬಾ ದಿನ ಕಾಯಬೇಕಾಗಿಲ್ಲ. ಪಾಲಿಕೆ ಕಟ್ಟಡದ ಹೊರಗೆನೆ ಸುಮಾರು 25 ಹೋರ್ಡಿಂಗ್ಸ್ ಇವೆ. ಅದಕ್ಕೆ ನಿಷೇಧಿತ ಪ್ಲಾಸ್ಟಿಕ್ ಗಳನ್ನು ಬಳಸಲಾಗಿದೆ. ಅವರಿಗೂ ಪಾಲಿಕೆ ಕಮೀಷನರ್ ಅವರು ನೋಟಿಸ್ ನೀಡಬೇಕು. ಒಂದು ತಿಂಗಳೊಳಗೆ ತೆಗೆಸುವ ಸೂಚನೆ ನೀಡಬೇಕು. ತೆಗೆಸದಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಆದರೆ ಪಾಲಿಕೆಯವರು ಹಾಗೆ ಮಾಡುವುದಿಲ್ಲ. ಯಾಕೆಂದರೆ ಜಾಹೀರಾತು ಏಜೆನ್ಸಿಗಳೆಲ್ಲವೂ ದೊಡ್ಡ ದೊಡ್ಡ ಕುಳಗಳ ಕೈಯಲ್ಲಿವೆ. ಕೆಲವರಿಗೆ ಮಾಜಿ ಶಾಸಕರ ಆಶ್ರಯವೂ ಇದೆ. ಆದ್ದರಿಂದ ಅವುಗಳಿಗೆ ಏನೂ ಆಗುವುದಿಲ್ಲ. ಇವರದ್ದೇನಿದ್ದರೂ ತಮಗೆ ಮನಸ್ಸು ಬಂದಾಗ ಒಂದು ಲಾರಿ, ನಾಲ್ಕು ಜನ ಕೂಲಿಯವರನ್ನು ಕರೆದುಕೊಂಡು ಹೋಗಿ ಮಂಗಳೂರಿನ ಆಯಕಟ್ಟಿನ ಜಾಗಗಳಲ್ಲಿ ಹಾಕಿರುವ ಫ್ಲೆಕ್ಸ್ ಗಳನ್ನು ತೆಗೆಸುವುದು ಮತ್ತು ಅದಕ್ಕೆ ಲಕ್ಷಗಟ್ಟಲೆ ಬಿಲ್ ಮಾಡಿಸುವುದು ಮತ್ತು ಅದರಲ್ಲಿ ತಮ್ಮ ಪಾಲನ್ನು ಜೇಬಿಗೆ ಇಳಿಸುವುದು. ಅದರ ಬದಲಿಗೆ ಯಾರು ನಿಷೇಧಿತ ಪ್ಲಾಸ್ಟಿಕ್ ಬಳಸಿ ಏನು ಫ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್, ಬಟ್ಟಿಂಗ್ಸ್ ಮಾಡುತ್ತಾರೋ ಅವರಿಂದಲೇ ಅದನ್ನು ತೆಗೆದು ಅಥವಾ ತೆಗೆಸಿದ ಖರ್ಚಿನ ಬಿಲ್ ಅವರಿಗೆ ಕಳುಹಿಸಿ ಮಂಗಳೂರು ಸ್ವಚ್ಚ ಮಾಡಿಸಲಿ!

  • Share On Facebook
  • Tweet It


- Advertisement -


Trending Now
ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
Hanumantha Kamath March 29, 2023
ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
Hanumantha Kamath March 27, 2023
Leave A Reply

  • Recent Posts

    • ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!
    • ಉಚಿತ ಖಚಿತ ಎನ್ನುವುದು ಯಾವಾಗಲೂ ಡೌಟ್ ಆಯಿತಾ?
    • ಕಸ ಸಂಗ್ರಹಣೆಯ ಹಿಂದೆ ಕಾಂಗ್ರೆಸ್ ರಾಜಕೀಯ ವಾಸನೆ!!
    • ಯಾರು ಯಾವ ಕ್ಷೇತ್ರದಲ್ಲಿ ಎಂದು ಯಾರಿಗೂ ಗೊತ್ತಿಲ್ಲ!!
    • ಗುಳಿಗನಿಗೆ ತಮಾಷೆ ಮಾಡಿ ಬದುಕುವುದುಂಟೆ!!
    • ನಾವು ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡಿದ್ದೇವು ಎಂದು ಒಪ್ಪಿದ ಎಸ್ ಡಿಪಿಐ!!
  • Popular Posts

    • 1
      ಶಾಸಕರು ಮುಂದಿನ ಅವಧಿಗೆ ಮಾಡಲೇಬೇಕಾದ ಕಾರ್ಯಗಳು ಇವು!!
    • 2
      ಲಿಂಕ್ ಮಾಡಿ ಎಂದರೆ ಕುಂಬಳಕಾಯಿ ಕಳ್ಳರಂತೆ ವರ್ತಿಸುವುದು ಯಾಕೆ?
    • 3
      ಪೌರ ಕಾರ್ಮಿಕರು ಕೆಲಸಕ್ಕೆ ಮರಳಿದ್ದು ಹೇಗೆ?
    • 4
      ರಾಹುಲ್ ಮುತ್ತಜ್ಜ ಮಾಡಿದ್ದ ಕಾನೂನು ಇವರಿಗೆ ಮುಳುವಾಯಿತು!
    • 5
      ಎಲ್ಲಾ ಗಾಂಧಿಗಳು ಮಹಾತ್ಮ ಗಾಂಧಿಯಂತಲ್ಲ ಎಂದು ರಾಹುಲ್ ಗೊತ್ತಿರಬೇಕಿತ್ತು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search