ಜಿ.ಎಸ್.ಬಿ ದಾಂಡಿಯಾ 2019
ಪ್ರಪ್ರಥಮ ಬಾರಿಗೆ ಈ ವರ್ಷ ಯೂಥ್ ಆಫ್ ಜಿ.ಎಸ್.ಬಿ ವತಿಯಿಂದ ಸಮಾಜ ಬಾಂಧವರಿಗಾಗಿ ದಾಂಡಿಯಾ ನೃತ್ಯ ಆಯೋಜಿಸಲಾಗಿದೆ.ನವರಾತ್ರಿ ಉತ್ಸವದ ಮದ್ಯದಲ್ಲಿ ಅಂದರೆ ಅಕ್ಟೋಬರ್ 5 ನೇ ತಾರೀಕು ಸಂಜೆ 5 ಘಂಟೆಯಿಂದ ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವವ ಟಿ.ವಿ ರಮಣ ಪೈ ಸಭಾಂಗಣದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಳ್ಳಲಿದ್ದು ನೃತ್ಯ,ಖಾದ್ಯ, ಆಕರ್ಷಕ ಬಹುಮಾನ ಸೇರಿದಂತೆ ಅನೇಕ ಮನೋರಂಜನಾ ಚಟುವಟಿಕೆಗಳು ನಡೆಯಲಿವೆ.15 ವರ್ಷದ ಕೆಳಗಿನ ಮಕ್ಕಳಿಗೆ 150 ರೂ, ಮೇಲ್ಪಟ್ಟವರಿಗೆ 250 ರೂ ಪ್ರವೇಶ ಶುಲ್ಕ ನಿಗದಿ ಪಡಿಸಲಾಗಿದೆ.
ಸ್ಪರ್ಧಾಳುಗಳಿಗೆ ಉತ್ತಮ ನೃತ್ಯಗಾರ, ಉತ್ತುಮ ಉಡುಗೆ ತೊಟ್ಟ ಜೋಡಿ, ಉತ್ತಮ ನೃತ್ಯ ಜೋಡಿ, ಉತ್ತಮ ಉಡುಗೆ ತೊಟ್ಟ ವ್ಯಕ್ತಿ, ಹೀಗೆ ಅನೇಕ ಬಹುಮಾನ ನೀಡಲಾಗುವುದು.
ಪ್ರವೇಶ ಪತ್ರ ಪಡೆದವರು ಬಗೆ ಬಗೆಯ ಖಾದ್ಯ, ವೈವಿದ್ಯಮಯ ಮನೊರಂಜನೆ ಇತ್ಯಾದಿ ಅನೇಕ ಸೌಲಭ್ಯ ಪಡೆಯಬಹುದು.ಪಾಸ್ ನಗರದ ವಿವೇಕ್ ಟ್ರೇಡರ್ಸ್, ಮಣ್ಣಗುಡ್ಡೆ ಮಹಾಮಾಯಾ ಟ್ರೇಡರ್ಸ್, ಕೊಟ್ಟಾರ ಚೌಕಿ ಆಕೃತಿ ಡಿಜಿಟಲ್ಸ್ ಹಾಗೂ ಬಜೈ ಹಕುನಾ ಮಟಾಟಾ ದಲ್ಲಿ ಪಡೆಯಬಹುದು.ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ವಿನೂತನ ಕಾರ್ಯಕ್ರಮ ನಡೆಯುತ್ತಿದ್ದು ಇದರ ಸಂಪೂರ್ಣ ಲಾಭ ಪಡೆಯಬೇಕೆಂದು ಆಯೋಜಕರು ಕೇಳಿಕೊಂಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ 6364045777 ಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
Leave A Reply