• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಪದವರ ನೀರಿನ ಬಿಲ್ ಜಾಸ್ತಿ ಮಾಡ್ತಿರಿ, ಶ್ರೀಮಂತರ ಹೋರ್ಡಿಂಗ್ ಕಾಣಿಸಲ್ವ!!

Hanumantha Kamath Posted On October 26, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರ ಮೇಲೆ ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಪಾಲಿಕೆಗೆ ಆದಾಯ ಹೆಚ್ಚಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿರಬಹುದು. ಆದರೆ ನೆನಪಿಡಿ. ನೀರಿನ ಬಿಲ್ ವಿಷಯದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ಅತೀ ದೊಡ್ಡ ಮೈನಸ್ ಆಗಲಿದೆ. ಈ ವಾಕ್ಯವನ್ನು ಓದುತ್ತಿದ್ದ ಹಾಗೆ ಕಾಂಗ್ರೆಸ್ಸಿಗರು ನನ್ನ ಮೇಲೆ ಕೋಪಗೊಳ್ಳಬಹುದು. ಹೆಚ್ಚಿಸಿದ್ದು ನಾವು ಅಧಿಕಾರದಲ್ಲಿ ಇದ್ದಾಗ ಅಲ್ಲ ಎಂದು ಹೇಳಬಹುದು. ಪಾಲಿಕೆಯಲ್ಲಿ ನಮ್ಮ ಆಡಳಿತ ಮುಗಿದ ಮೇಲೆ ಹೆಚ್ಚಳ ಆಗಿದ್ದು ಎನ್ನಬಹುದು. ಆದರೆ ಕಾಂಗ್ರೆಸ್ಸಿಗರೇ, ಪಾಲಿಕೆಯಲ್ಲಿ ಆಗ ಆಡಳಿತಾಧಿಕಾರಿ ದರ ಹೆಚ್ಚಳ ಮಾಡಿರಬಹುದು. ಆದರೆ ರಾಜ್ಯದಲ್ಲಿ ಇದ್ದ ಸರಕಾರ ಯಾರದ್ದು ನಿಮ್ಮದು ತಾನೆ. ನಗರಾಭಿವೃದ್ಧಿ ಸಚಿವರು ಕಾಂಗ್ರೆಸ್ಸಿನವರು ಇದ್ರು ತಾನೆ. ಯುಟಿ ಖಾದರ್ ನಿಮ್ಮವರೇ ತಾನೆ. ಈಗ ಹೇಳಿ, ನೀರಿನ ದರ ಹೆಚ್ಚಳ ಮಾಡಿದ್ದು ಯಾರು?
ಅಷ್ಟಕ್ಕೂ ನೀರಿನ ದರ ಹೆಚ್ಚಳ ಮಾಡುವ ಬದಲು ನಿತ್ಯ ಪೋಲಾಗುತ್ತಿರುವ ಮೂರು ಎಂಜಿಡಿಯಷ್ಟು ನೀರನ್ನು ಉಳಿಸುವುದು ಹೇಗೆ ಎಂದು ಯೋಚಿಸಿದ್ದೀರಾ? ಇಲ್ಲ. ನಿತ್ಯ ತುಂಬೆಯಲ್ಲಿ 21 ಎಂಜಿಡಿ ನೀರು ಪಂಪ್ ಆಗುತ್ತದೆ. ಅದರಲ್ಲಿ ಇಡೀ ಮಂಗಳೂರಿಗೆ ಹೆಚ್ಚೆಂದರೆ 18 ಎಂಜಿಡಿ ಸಾಕು. ಇವರು ಕಳುಹಿಸುವ ನೀರು ನಮ್ಮ ಮನೆಗಳಿಗೆ ಮಾತ್ರವಲ್ಲ, ವ್ಯವಹಾರಿಕ ಕಟ್ಟಡಗಳಿಗೆ, ವ್ಯಾಪಾರಿ ಉದ್ದೇಶಕ್ಕೆ, ಕೈಗಾರಿಕಾ ಪ್ರದೇಶಕ್ಕೆ, ಎಂಸಿಎಫ್, ಎಂಆರ್ ಪಿಎಲ್, ಎನ್ ಎಂಪಿಟಿ ಗೂ ಹೋಗುತ್ತದೆ.
ಈಗ ಎಪ್ರಿಲ್ ನಿಂದ ನೀವು ಹೆಚ್ಚು ಮಾಡಿರುವ ನೀರಿನ ದರ ಹೇಗೆ ಜನಸಾಮಾನ್ಯರ ಕುತ್ತಿಗೆಗೆ ಬಂದಿದೆ ಎಂದು ವಿವರಿಸುತ್ತೇನೆ, ಕೇಳಿ. ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 120 ಲೀಟರ್ ನೀರು ಅವಶ್ಯಕತೆ ಇರುತ್ತದೆ. ಒಂದು ಮನೆಯಲ್ಲಿ 5-6 ಜನ ಇದ್ದರೆ ದಿನಕ್ಕೆ 500 ಲೀಟರ್ ನಂತೆ ತಿಂಗಳಿಗೆ 15000 ಲೀಟರ್ ನೀರು ಬೇಕಾಗುತ್ತದೆ. ಒಂದು ತಿಂಗಳಿಗೆ 24000 ತನಕ ನೀರು ಖರ್ಚು ಮಾಡಿದರೆ ನಮಗೆ ಬರುತ್ತಿದ್ದದ್ದು 65 ರೂಪಾಯಿ. ಈಗ ಇವರು ಬೇರೆ ಲೆಕ್ಕಾಚಾರ ಹಾಕಿ 8000 ಲೀಟರ್ ತನಕ 56 ರೂಪಾಯಿ ನಿಗದಿಗೊಳಿಸಿದ್ದಾರೆ. ಅದರ ನಂತರ 8000 ದಿಂದ 17000 ತನಕ ಸಾವಿರ ಲೀಟರ್ ಗೆ 9 ರೂಪಾಯಿಯಂತೆ,  17000 ರಿಂದ 25000 ತನಕ ಸಾವಿರ ಲೀಟರ್ ಗೆ 11 ರೂಪಾಯಿ, 25000 ಲೀಟರ್ ಮೇಲೆ 13 ರೂಪಾಯಿ ದರ ನಿಗದಿಗೊಳಿಸಿದ್ದಾರೆ.
ಈಗ ವಿಷಯ ಎಂದರೆ ಎಪ್ರಿಲ್ ನಲ್ಲಿ ನೀರಿನ ರೇಟ್ ಹೆಚ್ಚಳ ಮಾಡಿದ್ದರೂ ಮೂರು ತಿಂಗಳ ತನಕ ಪಾಲಿಕೆ ಕಡೆಯಿಂದ ಬಿಲ್ ಕೊಡಲಿಕ್ಕೆ ಯಾರು ಬರಲೇ ಇಲ್ಲ. ಈಗ ಸಡನ್ನಾಗಿ ಬಂದಿದ್ದಾರೆ. ಇದರಿಂದ ಇಲ್ಲಿಯ ತನಕ 300 ರೂಪಾಯಿ ಬರುತ್ತಿದ್ದ ಕಡೆ 3000 ರೂಪಾಯಿ ಬಂದಿದೆ. ಈಗ ಒಮ್ಮೆಲ್ಲೆ ಹೀಗಾದರೆ ಜನಸಾಮಾನ್ಯರು ಎಲ್ಲಿಗೆ ಹೋಗುವುದು. ನಿಮಗೆ ಜನಸಾಮಾನ್ಯರ ಮೇಲೆ ಅಷ್ಟು ಕನಿಕರ ಇದ್ದಲ್ಲಿ ನೀವು ನೀರಿನ ದರ ಹೆಚ್ಚಿಸುವ ಬದಲು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಷ್ಟೂ ಹೋರ್ಡಿಂಗ್ ಗಳ ಮೇಲಿನ ಶುಲ್ಕವನ್ನು ಹೆಚ್ಚಿಸುತ್ತಿದ್ದಿರಿ. ಆದರೆ ನೀವು ಹೆಚ್ಚಿಸಿಲ್ಲ. ಹೋರ್ಡಿಂಗ್ ನವರು ವರ್ಷಕ್ಕೆ ಪಾಲಿಕೆಗೆ 20 ಸಾವಿರ ಕೊಡುವವರು ಅದೇ ವರ್ಷಕ್ಕೆ 2 ಲಕ್ಷ ನಿವ್ವಳ ದುಡಿಯುತ್ತಾರೆ. ನೀವು ಅಂತವರ ಮೇಲೆ ಶುಲ್ಕ ಹೆಚ್ಚಿಸಿಲ್ಲ. ಅದೇ ಜನರು ತಮ್ಮ ಮನೆಗೆ ಬಳಸುವ ನೀರು ನಿಮ್ಮ ಕಣ್ಣಿಗೆ ಬಿತ್ತಲ್ಲ ಕಾಂಗ್ರೆಸ್ಸಿಗರೇ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search