ಪಾಲಿಕೆಗೆ ಹಣ ವಸೂಲಿ ಮಾಡುವ ಧೈರ್ಯ ಇರುವುದು ಗೂಡಂಗಡಿಯವರದ್ದು ಮಾತ್ರ!!
Posted On November 4, 2019
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿಕಾರವನ್ನು ಮುಗಿಸಿ ಇಳಿದು ಹೋಗುವಾಗ ಗುತ್ತಿಗೆದಾರರಿಗೆ ಕೊಡಬೇಕಾಗಿದ್ದ ಸುಮಾರು 70 ಕೋಟಿ ರೂಪಾಯಿಗಳಷ್ಟು ಹಣವನ್ನು ಕೊಡದೇ ಹಾಗೆ ಬಾಕಿ ಇರಿಸಿ ಹೋಗಿದೆ. ಇನ್ನು ಕಟ್ಟಡ ತೆರಿಗೆ ಸುಮಾರು 29 ಕೋಟಿಯಷ್ಟು ವಸೂಲಾಗಬೇಕಿದೆ. ಅದನ್ನು ಪಾಲಿಕೆ ವಸೂಲಿ ಮಾಡಿಲ್ಲ. ಹಾಗೆ ಬಿಟ್ಟಿದೆ. ಇನ್ನು ಹೋರ್ಡಿಂಗ್ ನವರಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಬರಬೇಕಿದೆ. ಅದು ಕೂಡ ಹಾಗೆ ಇದೆ. ಪಾರ್ಕಿಂಗ್ ಜಾಗವನ್ನು ಗುತ್ತಿಗೆ ತೆಗೆದುಕೊಂಡವರು ಕೂಡ ಬಾಕಿ ಇರಿಸಿದ್ದಾರೆ. ರಸ್ತೆಯ ಕೆಳಗೆ ಟೆಲಿಕಾಂ ಕಂಪೆನಿಗಳ ಕೇಬಲ್ ಗೆ ನೆಲದ ಬಾಡಿಗೆ ವಸೂಲಿ ಮಾಡುವ ಕ್ರಮವೇ ಇಲ್ಲ. ಈ ಎಲ್ಲಾ ಬಾಕಿ ಇರಿಸಿಕೊಂಡ ಮಂಗಳೂರು ಮಹಾನಗರ ಪಾಲಿಕೆ ಯಾರಿಂದ ಒಂದು ಚೂರು ಬಿಡದೆ ವಸೂಲಿ ಮಾಡುವುದು ಗೊತ್ತಾ. ಅದೇ ರಸ್ತೆ ಬದಿ ಚಿಕ್ಕ ಗೂಡಂಗಡಿ ಇಟ್ಟುಕೊಂಡು ಹೊಟ್ಟೆಪಾಡಿಗೆ ವ್ಯಾಪಾರ ಮಾಡುತ್ತಾರಲ್ಲ, ವಿಕಲಚೇತನರು. ಅವರಿಂದ ತಪ್ಪದೆ ಬಾಡಿಗೆ ವಸೂಲಿಯಾಗುತ್ತದೆ.
ಅಷ್ಟಕ್ಕೂ ಹೋರ್ಡಿಂಗ್ ನವರು ಸಮಾಜಸೇವೆಗಾಗಿ ಹೋರ್ಡಿಂಗ್ ನಿಲ್ಲಿಸಿರುವುದಿಲ್ಲ. ಅವರು ಅದರಿಂದ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಾರೆ. ಆದರೆ ಅವರು ಹಣ ಬಾಕಿ ಇಟ್ಟರೆ ಪಾಲಿಕೆ ಆಡಳಿತ ಕೇಳುವುದಿಲ್ಲ. ಅಷ್ಟಕ್ಕೂ ಹೋರ್ಡಿಂಗ್ ನವರು ಸರಕಾರಿ ಜಾಗವನ್ನು ಬಳಸಿ ಹೋರ್ಡಿಂಗ್ ನಿಲ್ಲಿಸಿರುತ್ತಾರೆ. ಆದರೆ ಅವರು ಹಣ ಬಾಕಿ ಇಟ್ಟರೆ ಅದೊಂದು ವಿಷಯವೇ ಅಲ್ಲದಂತೆ ಪಾಲಿಕೆ ಆಡಳಿತ ವರ್ತಿಸುತ್ತದೆ. ಅವರಿಗೆ ಶುಲ್ಕ ಹೆಚ್ಚಿಸುವುದೂ ಇಲ್ಲ. ಆದರೆ ನಮ್ಮದೇ ಜಾಗದಲ್ಲಿ ನಾವು ಮನೆ ಕಟ್ಟಿದರೆ ಪಾಲಿಕೆಯವರು ಮನೆ ತೆರಿಗೆ ಕಟ್ಟುವುದು ತಡ ಮಾಡಿದರೆ ದಂಡ ವಸೂಲಿ ಮಾಡುತ್ತಾರೆ. ಅದೇ ಹೋರ್ಡಿಂಗ್ ನವರು ಎಷ್ಟೇ ತಡ ಮಾಡಿದರೂ ದಂಡ ಬಿಡಿ ಅವರ ವಿರುದ್ಧ ಒಂದು ಸಣ್ಣ ಕೆಮ್ಮು ಕೂಡ ತೆಗೆಯುವುದಿಲ್ಲ. ಅದೇ ಮನೆ ತೆರಿಗೆ ಕಟ್ಟುವುದು ತಡವಾದರೆ ಪಾಲಿಕೆ ಏನು ಮಾಡುತ್ತದೆ, ಗೊತ್ತಾ?
ಮನೆ ತೆರಿಗೆ ಕಟ್ಟದವರ ಒಂದು ಲಿಸ್ಟ್ ಮಾಡಿ ಪ್ರತಿ ಜೂನ್ ನಲ್ಲಿ ಒಂದು ರಿಕ್ಷಾದಲ್ಲಿ ಸ್ಪೀಕರ್ ಕಟ್ಟಿ ಅನೌನ್ಸ್ ಮಾಡುತ್ತಾ ಹೋಗುವ ವ್ಯವಸ್ಥೆ ಮಾಡುತ್ತಾರೆ. ಆದಷ್ಟು ಬೇಗ ಮನೆ ತೆರಿಗೆ ಕಟ್ಟದಿದ್ದರೆ ಅದು ಮಾಡುತ್ತೇವೆ, ಇದು ಮಾಡುತ್ತೇವೆ ಎಂದು ಪರೋಕ್ಷ ಬೆದರಿಕೆ ಹಾಕುತ್ತಾರೆ. ಹೋರ್ಡಿಂಗ್ ನವರು ಹಣ ಕಟ್ಟದಿದ್ದರೆ ನೋಟಿಸು ಕೂಡ ಪಾಲಿಕೆ ಅದೇ ಮನೆ ತೆರಿಗೆ ಕಟ್ಟದಿದ್ದರೆ ಹೆದರಿಸುವ ರೀತಿಯಲ್ಲಿಯೇ ಗೊತ್ತಾಗುತ್ತದೆ. ಪಾಲಿಕೆ ಕಳೆದ ಅವಧಿಯಲ್ಲಿ ಯಾರ ಪರವಾಗಿ ಇತ್ತು ಅಂತ!

- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply