• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವೋಟ್ ಹಾಕಲು ಆಲಸ್ಯ ಪಟ್ಟವರಿಗೆ ಮುಂದಿದೆ ಗ್ರಹಚಾರ!!

Hanumantha Kamath Posted On November 13, 2019
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಗೆ ಮತದಾನ ಮುಗಿದು ಎಷ್ಟು ಎಷ್ಟು ಶೇಕಡಾ ಮತದಾನ ಆಗಿದೆ ಎನ್ನುವುದು ನಿಮಗೆ ಗೊತ್ತಿದೆ. 60% ಕೂಡ ದಾಟಿಲ್ಲ ಎನ್ನುವುದು ನಿಜಕ್ಕೂ ಬೇಸರದ ಸಂಗತಿ. 59.63% ಶೇಕಡಾ ಮಾತ್ರ ಮತದಾನ ಆಗಿದೆ ಎಂದು ಕೇಳುವಾಗ ನಿಜಕ್ಕೂ ಸೋಜಿಗವಾಗುತ್ತದೆ. ಹಾಗಾದರೆ ನಮ್ಮ ನಗರದ ಮತದಾರ ಯಾಕೆ ಮತಗಟ್ಟೆಯ ತನಕ ಬರಲಿಲ್ಲ ಎನ್ನುವುದು ಯೋಚಿಸಬೇಕಾದ ಸಂಗತಿ. ಇಲ್ಲಿ ಮೇಲ್ನೋಟಕ್ಕೆ ಮಂಗಳೂರು ನಗರದಲ್ಲಿ ವಾಸಿಸುವವರಲ್ಲಿ ಹಲವರು ಉದ್ಯೋಗಕ್ಕಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆಸಿದ್ದಾರೆ, ಆದ ಕಾರಣ ಮತದಾನಕ್ಕೆ ಬರಲಿಲ್ಲ ಎನ್ನುವ ಮಾತಿದೆ. ಅದನ್ನು ಒಂದಿಷ್ಟು ಒಕೆ ಎನ್ನಬಹುದಾದರೂ ಒಂದು ನಗರದ 40% ದಷ್ಟು ಜನ ಊರು ಬಿಟ್ಟು ಬೇರೆಡೆ ಹೋಗಿರುವ ಸಾಧ್ಯತೆ ಇಲ್ಲವಲ್ಲ. ಹಾಗಾದರೆ ನಗರದಲ್ಲಿ ಇರುವವರಿಗೆ ಈ ವೋಟ್ ಹಾಕುವುದು ಅಗತ್ಯವಿಲ್ಲ ಎಂದೆನಿಸಿತಾ? ಅಷ್ಟಕ್ಕೂ ಇದು ನಮ್ಮ ನಿಮ್ಮ ನಡುವಿನ ಚುನಾವಣೆ. ಲೋಕಸಭೆಯಾದರೆ ದೇಶ ಯಾವ ರೀತಿಯ ಪಾಲಿಸಿಗಳನ್ನು ಅನುಸರಿಸಬೇಕು ಎಂದು ಚಿಂತಿಸುವ ಚುನಾವಣೆ. ವಿಧಾನಸಭೆ ಚುನಾವಣೆಯಾದರೆ ರಾಜ್ಯದ ಶಾಸನಗಳು ಹೇಗೆ ರೂಪಿತವಾಗಬೇಕು ಎಂದು ಯೋಚಿಸುವ ಚುನಾವಣೆ. ಆದರೆ ಪಾಲಿಕೆ ಹಾಗಲ್ಲ.
ನೀರು, ಆರೋಗ್ಯ, ಸ್ವಚ್ಚತೆ, ರಸ್ತೆ, ಬೀದಿದೀಪ ವಿಷಯಗಳೇ ಮುಖ್ಯ. ನಾವು ನಿತ್ಯ ಅನುಭವಿಸುವ ವಿಷಯಗಳೇ ಈ ಚುನಾವಣೆಯೇ ಮುಖ್ಯಾಂಶಗಳು. ಇಲ್ಲಿ ಇಂಡೋ- ಚೀನಾ ಗಡಿಯ ವಿಷಯ ಬರಲ್ಲಾ, ಗಂಗಾ ನದಿಯ ಶುದ್ಧತೆಯ ವಿಷಯ ಬರಲ್ಲ. ಲಕ್ನೋ-ಮುಂಬೈ ಹೈವೆ ವಿಷಯ ಬರಲ್ಲ. ಪಂಜಾಬ್ ನಲ್ಲಿ ನಿರ್ಮಾಣವಾದ ಸುಸಜ್ಜಿತ ಆಸ್ಪತ್ರೆಯ ವಿಷಯ ಬರಲ್ಲ. ಇಲ್ಲಿ ಏನಿದ್ದರೂ ಪಕ್ಕದ ಮನೆಯವರು ಬಿಡುವ ತ್ಯಾಜ್ಯದ ನೀರು ನಿಮ್ಮ ವಠಾರದ ಒಳಗೆ ಬರದಂತೆ ನೀವು ಏನು ಮಾಡಬೇಕು, ಕುಡಿಯುವ ನೀರು ಶುದ್ಧವಾಗಿ ಇಡೀ ದಿನ ಬರುತ್ತಾ ಎಂದು ಕೇಳಬೇಕು. ವಾರ್ಡಿನ ರಸ್ತೆ ಕಾಂಕ್ರೀಟಿಕರಣ ಆಗಿದೆಯಾ, ತ್ಯಾಜ್ಯ ಸಂಗ್ರಹದವರು ಚರಂಡಿ ಕ್ಲೀನ್ ಮಾಡಿದ್ದಾರಾ, ಇದೇ ವಿಷಯ ಬರುತ್ತದೆ. ಅದು ನಿಮಗೆ ಮುಖ್ಯವಲ್ಲವೇ.
ಪ್ರಜಾಪ್ರಭುತ್ವದಲ್ಲಿ ಒಂದು ಮಾತಿದೆ. ರಾಜಕೀಯ ಹಾಳಾಗಿರುವುದು ಒಳ್ಳೆಯವರ ಮೌನದಿಂದ. ನೀವು ವೋಟ್ ಮಾಡದೇ ಇದ್ದ ಕಾರಣ ಕೆಟ್ಟ ಕಾರ್ಪೋರೇಟರ್ ಗೆದ್ದರೆ ಮುಂದಿನ ದಿನ ಏನಾದರೂ ಸಮಸ್ಯೆಯಾಗಿ ನೀವು ಅವರ ಬಳಿ ಹೋದಾಗ ಅವರು ಕೆಲಸ ಮಾಡದೇ ಇದ್ದರೆ ಆಗ ತೊಂದರೆಯಾಗುವುದು ಯಾರಿಗೆ? ಅದರ ಬದಲು ಹೆಚ್ಚಿನ ಸಂಖ್ಯೆಯಲ್ಲಿ ನಾವೆಲ್ಲ ಒಳ್ಳೆಯ ವ್ಯಕ್ತಿಯನ್ನು ಗೆಲ್ಲಿಸಿದ್ದಿದ್ದರೆ ನಮ್ಮ ವಾರ್ಡಿಗೆ ಒಳ್ಳೆಯದಿತ್ತು ಅಲ್ಲವೇ ಎಂದು ಅನಿಸಬಹುದಲ್ಲ.
ಎಲ್ಲಾ ಖಾಸಗಿ, ಸರಕಾರಿ ಸಂಸ್ಥೆಗಳಿಗೆ ವೇತನ ಸಹಿತ ರಜೆ ನೀಡಲಾಗಿದೆ. ಎಲ್ಲಾ ವಾರ್ಡುಗಳಲ್ಲಿ ಮತಗಟ್ಟೆಗಳು ನಡೆದುಹೋಗುವಷ್ಟು ಹತ್ತಿರದಲ್ಲಿದ್ದವು. ಆದರೂ ಬುದ್ಧಿವಂತ ಜನ ಎಂದು ಕರೆಸಿಕೊಳ್ಳುವ ನಮ್ಮ ಮಂಗಳೂರಿನವರು ಮತದಾನಕ್ಕೆ ಬರಲೇ ಇಲ್ಲ ಎಂದರೆ ಇದರ ಅರ್ಥ ನಾವು ಮೌನವಾಗಿ ಎಲ್ಲವನ್ನು ಸಹಿಸಲಿದ್ದೇವೆ!
Attachments area
0
Shares
  • Share On Facebook
  • Tweet It




Trending Now
ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
Hanumantha Kamath July 3, 2025
ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
Hanumantha Kamath July 3, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!
    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
  • Popular Posts

    • 1
      ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • 2
      ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • 3
      ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • 4
      ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
    • 5
      ಪ್ರತಿ ತಿಂಗಳು ಪತ್ನಿಗೆ 4 ಲಕ್ಷ ಕೊಡಿ - ಕ್ರಿಕೆಟರ್ ಶಮಿಗೆ ಹೈಕೋರ್ಟ್ ಆದೇಶ!

  • Privacy Policy
  • Contact
© Tulunadu Infomedia.

Press enter/return to begin your search