ಅವರಿಗಿಂತ ನೀವು ಆಗಬಹುದು ಅಂತ ಮಂಗಳೂರಿಗರು ನಿಮ್ಮನ್ನು ಗೆಲ್ಲಿಸಿದ್ದಾರೆ ಬಿಟ್ಟರೆ, ನೀವು ಪ್ರಾಮಾಣಿಕರು ಅಂತ ಅಲ್ಲ!

ಮಂಗಳೂರಿಗರು ಶಾಂತಿ ಪ್ರಿಯರು ನಿಜ, ಆದರೆ ಶಾಂತವಾಗಿಯೇ ಒಳಗೆ ಆಕ್ರೋಶಭರಿತರಾಗಿ ಮತ ಚಲಾಯಿಸಿದ್ದಾರೆ ಎಂದು ಗೆದ್ದ ಪಾಲಿಕೆ ಸದಸ್ಯರು ಮರೆಯಬಾರದು. ಪಾಲಿಕೆಯಲ್ಲಿ ಬಿಜೆಪಿ ಕಾಂಗ್ರೆಸ್ ಈ ಎರಡೂ ಪ್ರಮುಖ ಪಕ್ಷಗಳು ಆಢಳಿತ ನಡೆಸಿವೆ.ಇಬ್ಬರ ಅಧಿಕಾರಾವಧಿಯಲ್ಲೂ ಭ್ರಷ್ಟಾಚಾರ ನಡೆದಿತ್ತು ಎಂಬುವುದು ಪ್ರತಿಯೊಬ್ಬರಿಗೂ ತಿಳಿದ ವಿಚಾರ.ಕಳೆದ ಚುನಾವಣೆಯಲ್ಲಿ ಮತದಾರರಲ್ಲಿ ಎರಡೇ ಆಯ್ಕೆ ಇತ್ತು, ಒಂದನೆಯದ್ದು ಮತ ಹಾಕದೇ ಸುಮ್ಮನೇ ಕುಳಿತು ಕೊಳ್ಳುವುದು, ಎರಡನೆಯದ್ದು ಇದ್ದವರಲ್ಲಿ ಸ್ವಲ್ಪ ಉತ್ತಮರನ್ನು ಆಯ್ಕೆ ಮಾಡುವುದು.ಇದ್ದವರಲ್ಲಿ ಉತ್ತಮರ ಆಯ್ಕೆ ನಡೆದಿದೆ ಇದರರ್ಥ ಅವರು ಪ್ರಾಮಾಣಿಕರು, ನಿಯತ್ತು ಇರುವವರು, ಭ್ರಷ್ಟಾಚಾರ ಮಾಡದವರು ಅಂತ ಖಂಡಿತವಾಗಿಯೂ ಅಲ್ಲ ಎಂಬುವುದನ್ನು ಗೆದ್ದ ಪಾಲಿಕೆ ಸದಸ್ಯರು ಮನದಟ್ಟು ಮಾಡಬೇಕು.
ವಾರ್ಡ್ ಸಮಿತಿ ಭ್ರಷ್ಟಾಚಾರ ತಡೆಗಟ್ಟಲು ಸಹಕಾರಿ
ಭ್ರಷ್ಟಾಚಾರ ಆರೋಪಗಳು ಪಾಲಿಕೆಯಲ್ಲಿ ತಾಂಡವ ಆಡುತ್ತಿವೆ.ಕೆಲ ಭ್ರಷ್ಟ ಅಧಿಕಾರಿಗಳು, ಇಂಜಿನಿಯರ್ ಗಳು, ಕಾಂಟ್ರೆಕ್ಟರ್ ಗಳು,ಕೆಲ ಕಾರ್ಪೋರೇಟರ್ ಗಳಿಂದ ಎಲ್ಲರೂ ತಲೆ ತಗ್ಗಿಸಬೇಕಾದ ಪರಿಸ್ಥಿತಿ ನಿರ್ಮಾವಾಗಿದೆ.ಯೋಜನೆಗಳಿಗೆ ಹಣ ಬಿಡುಗಡೆಯಾದಾಗ ಇದರ ಸಂಪೂರ್ಣ ಆಗು ಹೋಗು, ಖರ್ಚು ವೆಚ್ಚ ಪಾರದರ್ಶಕವಾಗಿರದೇ ಕಾಂಟ್ರೆಕ್ಟರ್, ಕಾರ್ಪೋರೇಟರ್ ಮತ್ತು ಕೆಲವರ ನಡುವೆಯೇ ಸೀಕ್ರೆಟ್ ಆಗಿ ಇರುತ್ತದೆ.ಇದರಿಂದ ಇವರು ಮ್ಯೂಚುವಲ್ ಅಂಡರ್ಸ್ಟೇಂಡಿಂಗ್ ಮಾಡಿ ಜನರ ತೆರಿಗೆ ಹಣ ಗುಳುಂ ಮಾಡುತ್ತಿದ್ದಾರೆ ಎಂಬ ಮಾತು ಪದೇ ಪದೇ ಕೇಳಿ ಬರುತ್ತದೆ.ಇದಕ್ಕೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಗಬೇಕಾದರೆ ವಾರ್ಡ್ ಸಮಿತಿ ಮಾಡಿ ಪ್ರತಿಯೊಂದು ವಾರ್ಡ್ ನಲ್ಲಿ ಕನಿಷ್ಠ 10 ಜನ ಯಾವುದೇ ರಾಜಕೀಯ ಪಕ್ಷದಲ್ಲಿ ಗುರುತಿಸಿ ಇರದ ಪ್ರಾಮಾಣಿಕರನ್ನು ಸೇರಿಸಬೇಕು.ತನ್ನ ಪರಿಸರದಲ್ಲಿ ಆಗುವ ಪ್ರತಿಯೊಂದು ಕಾಮಗಾರಿಯ ಖರ್ಚು ವೆಚ್ಚ ಸಹಿತ ಪ್ರತಿಯೊಂದು ಮಾಹಿತಿ ಸದಸ್ಯರಿಗೆ ತಿಳಿದಿರಬೇಕು ಮತ್ತು ಅನಗತ್ಯ ಕಾಮಗಾರಿಯನ್ನು ತಡೆಹಿಡಿಯುವ ಅಧಿಕಾರವೂ ಸದಸ್ಯರಿಗೆ ನೀಡಬೇಕು.ಇದರಿಂದ ಭ್ರಷ್ಟಾಚಾರವನ್ನೂ ಸ್ವಲ್ಪ ಮಟ್ಟಿಗೆ ತಡೆಹಿಡಿಯಬಹುದು ಮತ್ತು ಕಾರ್ಪೋರೇಟರ್ ಗಳು ತಮ್ಮನ್ನು ತಾವು ಪ್ರಾಮಾಣಿಕರು ಎಂಬುವುದನ್ನು ಕೂಡ ಸಾಬೀತು ಪಡಿಸಬಹುದು.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ವಾರ್ಡ್ ಸಮಿತಿ ಮಾಡುತ್ತೇವೆ ಎಂದು ಹೇಳಿಯಾಗಿದೆ.ಇದನ್ನು ನಂಬಿ ಜನತೆ ಮತ ಚಲಾಯಿಸಿದ್ದಾರೆ.ಜನತೆಗೆ ವಿಶ್ವಾಸ ದ್ರೋಹ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಇಲ್ಲವಾದರೆ ರಾಜ್ಯದಲ್ಲಿ ಕುಮಾರಸ್ವಾಮಿಗೆ ಇರುವ ವಚನ ಭ್ರಷ್ಟ ಪಟ್ಟ ಮಂಗಳೂರಿನ ಬಿಜೆಪಿ ಪಾಲಿಕೆ ಸದಸ್ಯರಿಗೂ ಸಿಗಲಿದೆ.
Leave A Reply