• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಐದಾರು ಗಂಟೆ ಹಿಂಸಿಸಿ ಅತ್ಯಾಚಾರ ಮಾಡಿ ಕೊಲ್ಲುವವರಿಗೆ ಶಿಕ್ಷೆ ಸಿಗಲು ಏಳು ವರ್ಷವೇ!!

Hanumantha Kamath Posted On December 4, 2019
0


0
Shares
  • Share On Facebook
  • Tweet It

ಪ್ರತಿಯೊಂದು ಅತ್ಯಾಚಾರವೂ ಘೋರ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಆದರೆ ಕೆಲವು ಅತ್ಯಾಚಾರ ಪ್ರಕರಣಗಳು ಮಾತ್ರ ಹೆಚ್ಚು ಚರ್ಚೆಗೆ ಒಳಗಾಗುತ್ತವೆ. ಕೆಲವು ಅತ್ಯಾಚಾರಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತವೆ. ಪ್ರತಿಭಟನೆಗಳಾಗುತ್ತವೆ. ಸಂಸತ್ತಿನಿಂದ ಹಿಡಿದು ಯಾವುದೋ ಹಳ್ಳಿಯ ಬೀದಿಯಲ್ಲಿಯೂ ಜನ ಮಾತನಾಡುತ್ತಾರೆ. ಆದರೆ ಲೆಕ್ಕವಿಲ್ಲದಷ್ಟು ಅತ್ಯಾಚಾರಗಳು ಸುದ್ದಿಯೇ ಆಗುವುದಿಲ್ಲ. ಎಷ್ಟೋ ಅತ್ಯಾಚಾರಗಳಲ್ಲಿ ಪ್ರಕರಣವೇ ದಾಖಲಾಗುವುದಿಲ್ಲ. ಪ್ರತಿಯೊಂದು ಅತ್ಯಾಚಾರದ ಆರೋಪಿಗೂ ಆರೋಪ ಸಾಬೀತಾದ ತಕ್ಷಣ ಕಠಿಣ ಶಿಕ್ಷೆಯಾಗಲೇಬೇಕು. ಆದರೆ ಎಷ್ಟು ಅತ್ಯಾಚಾರ ಅಪರಾಧಿಗಳಿಗೆ ಶಿಕ್ಷೆ ಆಗಿದೆ. ಬೇರೆ ಯಾಕೆ, ನಿರ್ಭಯಾ ಅತ್ಯಾಚಾರದ ಆರೋಪಿಗಳ ಅಪರಾಧ ಸಾಬೀತಾಗಿ ಭರ್ತಿ ಏಳು ವರ್ಷಗಳಾಗುತ್ತಾ ಬಂತು. ನಾಡಿದ್ದು ಡಿಸೆಂಬರ್ 16 ಕ್ಕೆ ಏಳು ವರ್ಷ ಮುಗಿಯುತ್ತೆ. ಆದರೆ ಇಲ್ಲಿಯವರೆಗೂ ಪಾಪಿಗಳಿಗೆ ಕೊಟ್ಟಿರುವ ಗಲ್ಲು ಶಿಕ್ಷೆ ಜಾರಿಗೆ ಬರಲೇ ಇಲ್ಲ. ಆರು ಜನರಲ್ಲಿ ಒಬ್ಬ ಜೈಲಿನೊಳಗೆ ಆತ್ಮಹತ್ಯೆ ಮಾಡಿಕೊಂಡು ತನಗೆ ತಾನೇ ಶಿಕ್ಷೆ ಕೊಡಿಸಿಕೊಂಡ. ಇನ್ನೊಬ್ಬ ಅತ್ಯಾಚಾರ ಮಾಡುವಾಗ ಅಪ್ರಾಪ್ತ ಎನ್ನುವ ಕಾರಣಕ್ಕೆ ಮೂರು ವರ್ಷ ಬಾಲಾಪರಾಧ ಗೃಹದಲ್ಲಿ ಇದ್ದು ಬಿಡುಗಡೆಯಾದ. ಉಳಿದ ನಾಲ್ಕು ಜನ ಇನ್ನು ಜೈಲಿನಲ್ಲಿದ್ದಾರೆ. ಅದರಲ್ಲಿ ಒಬ್ಬ ವಿನಯ ಶರ್ಮಾ ಎಂಬಾತ ತನ್ನ ಗಲ್ಲು ಶಿಕ್ಷೆಯನ್ನು ರದ್ದುಪಡಿಸಲು ಕೋರಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದ್ದ. ಯಾವುದೇ ಕ್ಷಮಾದಾನ ಅರ್ಜಿಯ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ರಾಷ್ಟ್ರಪತಿಗಳು ಅದನ್ನು ಸಂಬಂಧಪಟ್ಟ ರಾಜ್ಯಕ್ಕೆ ಕಳುಹಿಸಿ ಅವರ ಅಭಿಪ್ರಾಯ ಕೇಳುತ್ತಾರೆ. ಹಾಗೆ ರಾಷ್ಟ್ರಪರಿ ರಾಮನಾಥ ಕೋವಿಂದ್ ಅವರು ದೆಹಲಿ ಸರಕಾರಕ್ಕೆ ಈ ಬಗ್ಗೆ ವಿವರಣೆ ಕೊಡಲು ಆದೇಶಿಸಿದ್ದರು. ಈ ಪ್ರಕರಣದಲ್ಲಿ ಕ್ಷಮಾದಾನಅರ್ಜಿಯನ್ನು ಪುರಸ್ಕರಿಸಬಾರದು. ಗಲ್ಲು ಶಿಕ್ಷೆ ನೀಡಬಹುದು ಎಂದು ದೆಹಲಿ ಸರಕಾರದ ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರಕಾರದ ಪರವಾಗಿ ತಮ್ಮ ವರದಿಯನ್ನು ನೀಡಿದ್ದಾರೆ. ಆದರೆ ಒಂದು ಘೋರ ಪ್ರಕರಣದ ಆರೋಪಿಗಳಿಗೆ (ಪ್ರತಿ ಅತ್ಯಾಚಾರವೂ ಘೋರವೇ, ಆದರೆ ನಿರ್ಭಯಾ ಪ್ರಕರಣದಲ್ಲಿ ಆರೋಪಿಗಳ ಕೃತ್ಯ ರಾಕ್ಷಸರನ್ನೇ ನಾಚಿಸುವಂತಿತ್ತು) ಏಳು ವರ್ಷವಾದರೂ ಶಿಕ್ಷೆ ಜಾರಿಗೆ ಬರಲ್ಲ ಎಂದಾದರೆ ಅದನ್ನು ನಾವು ಇನ್ನು ಏನು ಹೇಳಲು ಸಾಧ್ಯವಿದೆ. ಇಲ್ಲಿ ಆಗಿರುವ ಲೋಪದೋಷಗಳೇನು? ಪ್ರಕರಣ ತ್ವರಿತ ನ್ಯಾಯಾಲಯದಲ್ಲಿ ಆಗಿದ್ದರೂ ಅದನ್ನು ಅನುಷ್ಟಾನ ತರಲು ಇಷ್ಟು ತಡವಾಗುವುದಾದರೆ ಅದು ಸಹಜವಾಗಿ ಅತ್ಯಾಚಾರ ಮಾಡಲು ಹೊರಡುವವರಿಗೆ ಧೈರ್ಯ ಬರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇಲ್ಲಿ ಕ್ಷಮಾದಾನ ಅರ್ಜಿಯನ್ನೇ ವಿಲೇವಾರಿ ಮಾಡಲು ಅಥವಾ ದೆಹಲಿ ಸರಕಾರ ತನ್ನ ವರದಿ ನೀಡಲು ತಡ ಮಾಡಿದೆ ಎಂದಾದರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆಯೊಂದಿಗೆ ಶಿಕ್ಷೆ ತಡವಾಗಲು ಕಾರಣೀಕೃತರಾಗಿರುವವರಿಗೂ ಬಿಸಿ ಮುಟ್ಟಿಸುವ ಕೆಲಸ ಆಗಬೇಕು. ಇನ್ನು ದೆಹಲಿಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಳ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಹೋರಾಟ “ಅತ್ಯಾಚಾರಿಗಳಿಗೆ ಆರು ತಿಂಗಳ ಒಳಗೆ ಗಲ್ಲು ಶಿಕ್ಷೆ ನೀಡುವ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತರಬೇಕು”
ಎಲ್ಲವೂ ಸರಿ. ಆದರೆ ಎಷ್ಟು ದಿನ ಈ ಪ್ರತಿಭಟನೆಗಳು, ಹೋರಾಟಗಳು. ಅತ್ಯಾಚಾರಗಳನ್ನು ಗಣನೀಯ ಪ್ರಮಾಣದಲ್ಲಿ ಇಳಿಸಲು ಏನು ಮಾಡಬೇಕು ಎನ್ನುವುದರ ಬಗ್ಗೆ ಯಾಕೆ ಯಾರು ಚಿಂತಿಸಲ್ಲ. ನಿರ್ಭಯಾ ಫಂಡ್ ಸಾವಿರಾರು ಕೋಟಿ ರೂಪಾಯಿ ಯಾಕೆ ಬಳಕೆಯಾಗದೇ ಇರುತ್ತದೆ. ಕೊನೆಯದಾಗಿ ಒಂದು ಮರಣದಂಡನೆ ಜಾರಿಯಾಗಲು ಇನ್ನೆಷ್ಟು ವರ್ಷ ಹಿಡಿಯುತ್ತೆ.!
0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Hanumantha Kamath July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Hanumantha Kamath July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search