ವಿಶ್ವನಾಥ್ ಸಜ್ಜನ್ನರ್ ಅಂದ್ರೆ ಸುಮ್ನೆ ಅಲ್ಲ ಎಂದು ಇವತ್ತು ಸತ್ತವರಿಗೆ ಗೊತ್ತಿರಲಿಲ್ಲ!!
ಪ್ರಿಯಾಂಕ ರೆಡ್ಡಿಯ ಆರೋಪಿಗಳನ್ನು ಶುಕ್ರವಾರ ಬೆಳಿಗ್ಗೆಯ ಜಾವ ಪೊಲೀಸ್ ಬಸ್ಸಿನಲ್ಲಿ ತಾವು ಸಂತ್ರಸ್ತೆಯನ್ನು ಸುಟ್ಟು ಹಾಕಿದ ಸ್ಥಳಕ್ಕೆ ಸ್ಥಳ ಮಹಜರು ಪ್ರಕ್ರಿಯೆಗಾಗಿ ಕರೆದುಕೊಂಡು ಹೋಗಲಾಗುತ್ತಿತ್ತು. ಹಿಂದೆ ಪೊಲೀಸ್ ಅಧಿಕಾರಿಗಳು ಪೊಲೀಸ್ ವ್ಯಾನಿನಲ್ಲಿ ಇದ್ದರು. ಅಲ್ಲಿ ಸಮಯದ ಅವಕಾಶ ಸಿಕ್ಕಿದ ತಕ್ಷಣ ಆರೋಪಿಗಳಲ್ಲಿ ಒಬ್ಬ ಮೊಹಮದ್ ಪಾಷ ಪೊಲೀಸ್ ಸಿಬ್ಬಂದಿಯೊಬ್ಬರ ಗನ್ ಕಿತ್ತುಕೊಳ್ಳಲು ಯತ್ನಿಸಿದ್ದಾನೆ. ಉಳಿದವರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದರು. ಆರೋಪಿಗಳಲ್ಲಿ ಇನ್ನೊಬ್ಬ ಪೊಲೀಸರ ಶಸ್ತ್ರಾಸ್ತ ಕಿತ್ತು ಪೊಲೀಸರ ಮೇಲೆ ಫೈರಿಂಗ್ ಮಾಡಲು ಶುರು ಮಾಡುವಾಗ ಆತ್ಮರಕ್ಷಣೆಗಾಗಿ ಆಗ ಅನಿವಾರ್ಯವಾಗಿ ಎನ್ ಕೌಂಟರ್ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಅರವಿಂದ ಕೇಜ್ರಿವಾಲ್. ಪಾಪ, ಅವರು ತಮ್ಮದೇ ರಾಜ್ಯದಲ್ಲಿ ಆಗುವ ಅತ್ಯಾಚಾರಗಳನ್ನು ನಿಲ್ಲಿಸಲು ಆಗದೇ ಒದ್ದಾಡುತ್ತಿದ್ದಾರೆ. ನಿರ್ಭಯಾ ಅತ್ಯಾಚಾರಿಗಳಿಗೆ ಕ್ಷಮಾದಾನ ಕೊಡುವ ಬಗ್ಗೆ ವರದಿ ಕೇಳಿದ್ದ ರಾಷ್ಟ್ರಪತಿಗಳಿಗೆ ಇವರು ಯಾವಾಗ ವರದಿ ಕೊಟ್ಟರು ಎಂದು ಎಲ್ಲರಿಗೂ ಗೊತ್ತು. ಇಲ್ಲದಿದ್ದರೆ ಯಾವಾಗಲೋ ನಿರ್ಭಯಾ ಅತ್ಯಾಚಾರಿಗಳು ನರಕದಲ್ಲಿ ಸೆಟಲ್ ಆಗುತ್ತಿದ್ದರೆಂದು ಕೂಡ ಜನರಿಗೆ ಗೊತ್ತು. ಆದ್ದರಿಂದ ಕೇಜ್ರಿವಾಲ್ ಬಗ್ಗೆ ಬರೆಯೋದು ವೇಸ್ಟ್. ಇನ್ನು ಚಿದಂಬರಂ ಮತ್ತು ಕಾರ್ತಿ ಚಿದಂಬರಂ ಅವರು ನೈತಿಕತೆ ಇಟ್ಟುಕೊಂಡು ಎನ್ ಕೌಂಟರ್ ವಿರೋಧಿಸುತ್ತಿದ್ದಾರೆ ಎಂದು ಯಾರಿಗಾದರೂ ಅನಿಸುತ್ತದೆಯಾ? ಚಿದಂಬರಂ ಸಂಸತ್ತಿನ ಒಳಗೆ ಕಾಲಿಡುವ ಯೋಗ್ಯತೆ ಕಳೆದುಕೊಂಡಿದ್ದಾರೆ. ಆದರೂ ಹೋಗಿ ಕೇಂದ್ರದ ವಿರುದ್ಧ ಮಾತನಾಡಿ ಬರುತ್ತಾರೆ. ಇನ್ನು ಲೋಕಸಭೆಯಲ್ಲಿ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಔಧರಿಗೆ ಕೇವಲ ಕೇಂದ್ರದ ವಿರುದ್ಧ ಮಾತನಾಡಲು ಮಾತ್ರ ಅವಕಾಶ ಇದೆ ವಿನ: ಸತ್ಯದ ಪರ ಅಲ್ಲ. ರಾಹುಲ್ ಗಾಂಧಿಗಿಂತ ಚೆನ್ನಾಗಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಅವರಿಗೆ ಪ್ರತಿಪಕ್ಷ ಮುಖಂಡನ ಸ್ಥಾನ ಸಿಕ್ಕಿದೆ. ಇನ್ನು ಮೇನಕಾ ಗಾಂಧಿ ಕೂಡ ಎನ್ ಕೌಂಟರ್ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಮೇನಕಾ ಗಾಂಧಿಯ ಒಳಗಿರುವ ಹೆಣ್ಣುಮನಸ್ಸು ಸತ್ತು ಹೋಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಅವರಲ್ಲಿ ಹೆಣ್ಣುಜೀವಗಳ ಬಗ್ಗೆ ನಿಜವಾದ ಕಳಕಳಿ ಇದ್ದರೆ ಮೊದಲಿಗೆ ಅವರೇ ನಿಂತು ಪೊಲೀಸರಿಗೆ ಶಹಭಾಷ್ ಎನ್ನುತ್ತಿದ್ದರು. ಆದರೆ ಅತ್ತ ಮಗನಿಗೂ ಸರಿಯಾದ ರಾಜಕೀಯ ನೆಲೆ ಕೊಡಿಸಲಾಗದೇ, ತಾವು ಕೂಡ ಆರಕ್ಕೇರದೇ ಇರುವಾಗ ಮೇನಕಾ ಗಾಂಧಿಗೆ ರಾಕ್ಷಸರ ಬಗ್ಗೆ ಅನುಕಂಪ ಬರುವುದು ಸಹಜ.
ಇನ್ನು ಪೊಲೀಸರ ಕ್ರಮದ ಬಗ್ಗೆ ಹೈದ್ರಾಬಾದಿನ ಹೆಣ್ಣುಮಗಳು ವಿಶ್ವವಿಖ್ಯಾತ ಕ್ರೀಡಾ ತಾರೆ ಸೈನಾ ನೆಹ್ವಾಲ್ ಹೊಗಳಿದ್ದಾರೆ. ಕಾಂಗ್ರೆಸ್ಸಿನ ಸಂಜಯ್ ನಿರುಪಮ್ ಕೂಡ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.
2008 ರಲ್ಲಿ ಆಂಧ್ರಪ್ರದೇಶದ ವಾರಂಗಲ್ ನಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯಾಗಿದ್ದ ವಿಶ್ವನಾಥ್ ಸಜ್ಜನ್ನರ್ ಅಲ್ಲಿ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿನಿಯರ ಮೇಲೆ ಎಸಿಡ್ ದಾಳಿಗಳಾದಾಗ ಆರೋಪಿಗಳಿಗೆ ಸರಿಯಾದ ಬುದ್ಧಿ ಕಲಿಸಿದ್ದರು. ಅವರ ಕೈಗೆ ಪ್ರಿಯಾಂಕ ರೆಡ್ಡಿ ಅತ್ಯಾಚಾರಿ ಮತ್ತು ಹಂತಕರು ಸಿಕ್ಕಿಬಿದ್ದಿದ್ದಾರೆ. ಸುಮ್ಮನೆ ಬಿಡೋಕೆ ಆಗುತ್ತಾ!
Leave A Reply