ಕೊಂಕಣಿ ಭವನಕ್ಕೆ 5 ಕೋಟಿ ಮಂಜೂರು
ಹಲವಾರು ವರ್ಷಗಳಿಂದ ಕೊಂಕಣಿ ಭವನ ನಿರ್ಮಾಣವಾಗಬೇಕೆಂದು ಹಿಂದಿನ ಅವಧಿಗಳ ಅಧ್ಯಕ್ಷರು ಸೇರಿದಂತೆ ಅನೇಕರು ಪ್ರಯತ್ನಿಸಿದ್ದಾರೆ.ನಾನು ಅಧ್ಯಕ್ಷನಾದ ಕೂಡಲೇ ಈ ಬಗ್ಗೆ ನನ್ನ ಗಮನಕ್ಕೂ ತರಲಾಗಿತ್ತು.ಮೊದಲ ಆದ್ಯತೆ ಎಂಬಂತೆ ಈ ನಿಟ್ಟಿನಲ್ಲಿ ಕಾರ್ಯಪೃವತ್ತನಾಗಿ ನಾನು ಕನ್ನಡ ಸಂಸ್ಕೃತಿ ಇಲಾಖೆ ಮಂತ್ರಿಗಳಾದ ಶ್ರೀ ಸಿ.ಟಿ ರವಿಯವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಕೊಂಕಣಿ ಭವನದ ಬಗ್ಗೆ ಒತ್ತಾಯಿಸಿದ್ದೆ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರನ್ನೂ ಭೇಟಿಯಾಗಿ ಕೆಲವು ದಾಖಲೆಗಳನ್ನು ಡಿ ಸಿ ಯವರ ಬಳಿ ತೋರಿಸಿ ಸಹಕಾರ ನೀಡಬೇಕೆಂದು ವಿನಂತಿಸಿದ್ದೆ.ಸನ್ಮಾನ್ಯ ಸಿ ಟಿ ರವಿಯವರಿಗೆ ಆಗಾಗ ಕರೆ ಮಾಡಿ ಈ ಬಗ್ಗೆ ಫೊಲೊ ಅಪ್ ಮಾಡಲಾಗಿತ್ತು.ನಿನ್ನೆ ಅಂದರೆ ಡಿಸೆಂಬರ್ 10 ರಂದು ನಮ್ಮ ಕೊಂಕಣಿ ಭವನಕ್ಕೆ 5 ಕೋಟಿ ಮಂಜೂರಾಗಿದ್ದು ತಕ್ಷಣಕ್ಕೆ 3 ಕೋಟಿ ಈಗಾಗಲೇ ಬಿಡುಗಡೆಯಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ.
ಕೊಂಕಣಿ ಭವನದ ಕನಸು ಕಂಡಿದ್ದ ಹಲವರ ಕನಸು ಈಗ ನನಸಾಗುತ್ತಿದೆ.ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರೂಪಾ, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಮಂಗಳೂರು ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ಸೂಕ್ತ ನಿವೇಶನ ಹುಡುಕುವಲ್ಲಿ ಶ್ರಮ ವಹಿಸುತ್ತಿದ್ದಾರೆ.ಇವರಿಗೂ ನಾನು ಆಭಾರಿಯಾಗಿದ್ದೇನೆ.ಇದು ನಮ್ಮ ರಾಜ್ಯ ಸರಕಾರ ಕೊಂಕಣಿ ಭಾಷಿಗರಿಗೆ ಕೊಟ್ಟ ದೊಡ್ಡ ಉಡುಗೊರೆ ಎಂದು ನಾನು ಭಾವಿಸುತ್ತೇನೆ. ಈ ಒಂದು ಹೋರಾಟದಲ್ಲಿ ಹಿಂದೆ ಶ್ರಮಿಸಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ.ಆದಷ್ಟು ಬೇಗ ಮಂಗಳೂರಿನಲ್ಲಿಯೇ ಭವ್ಯ ಕೊಂಕಣಿ ಭವನ ನಿರ್ಮಾಣವಾಗಲಿದೆ ಎಂದು ಡಾ ಜಗದೀಶ ಪೈ, ರಾಜ್ಯ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು ತಿಳಿಸಿದ್ದಾರೆ.
Leave A Reply