F…K ಹಿಂದೂತ್ವ ಎಂದು ಬರೆದವರಿಗೆ ಯಾರದ್ದೋ ಮನೆಯಲ್ಲಿ ತಿಂದ ಬಿರಿಯಾನಿ ಇನ್ನೂ ಜೀರ್ಣ ಆಗಿಲ್ಲ!!
ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಒಂದೇ ದೋಣಿಯಲ್ಲಿ ಕುಳಿತು ದಡ ಸೇರುವ ಕನಸು ಕಾಣುತ್ತಿವೆ. ಅವರಿಗೆ ಇರುವ ಏಕೈಕ ಧೈರ್ಯ ಎಂದರೆ ಜನರಿಗೆ ಇತಿಹಾಸ ನೆನಪಿರುವುದಿಲ್ಲ ಎನ್ನುವುದು ಮಾತ್ರ. ಸದ್ಯ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಹುಲ್ ಮತ್ತು ಅವರ ಪಟಾಲಾಂ ಸಂಸತ್ತಿನ ಹೊರಗೆ ಹೋರಾಡುತ್ತಿದ್ದರೆ 2004 ರಲ್ಲಿ ಇವರೇ ಪ್ರಧಾನ ಮಂತ್ರಿ ಮಾಡಿದ್ದ ಮನಮೋಹನ್ ಸಿಂಗ್ ತುಂಬಿದ ಸಂಸತ್ತಿನಲ್ಲಿ ನಿಂತು ಇಂತಹ ಒಂದು ಕಾಯ್ದೆ ಭಾರತಕ್ಕೆ ಬೇಕು ಎಂದು ತಮ್ಮ ವಾದ ಮಂಡಿಸುತ್ತಿದ್ದರು. ಎದುರಿಗೆ ಅಡ್ವಾಣಿ ಇದ್ದರು, ಮೋದಿ ಆಗ ಇನ್ನು ಸಂಸತ್ ಪ್ರವೇಶಿಸಿರಲಿಲ್ಲ. ಇದೇ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗುವ ಮೊದಲು ಸಂಸದರಾಗಿದ್ದಾಗ ಇಂತಹ ಒಂದು ಕಾಯ್ದೆ ತರಲು ಧೈರ್ಯ ಇಲ್ಲದ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದು ತಮ್ಮ ರಾಜೀನಾಮೆ ಪತ್ರ ಬಿಸಾಡಿ ಪಶ್ಚಿಮ ಬಂಗಾಲಕ್ಕೆ ಹಿಂತಿರುಗಿದ್ದರು.
ಇವತ್ತು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಯಾವ ರೀತಿಯ ಪ್ರತಿಭಟನೆಗೆ ಇಳಿದಿವೆ ಎಂದರೆ ಮೋದಿಯನ್ನು ಹೇಗಾದರೂ ಮಾಡಿ ಇಳಿಸುವುದಕ್ಕೆ ಇದೇ ದೊಡ್ಡ ಹೆಜ್ಜೆ ಎಂಬಂತೆ ಬಾಣ ಬೀಡುತ್ತಿದ್ದಾರೆ. ಅವರಿಗೆ ಅಷ್ಟೇ ಅಲ್ಲ ಈ ಕಾಯ್ದೆಯ ವಿರುದ್ಧ ಹೋರಾಡುವವರಿಗೆ “ಪೌರತ್ವ ಗಿರತ್ವ ಎಲ್ಲಾ ಗೊತ್ತಿಲ್ಲ ಕಣ್ರೀ, ನಮ್ಮದೇನಿದ್ದರೂ ಮೋದಿ ಮತ್ತು ಅವರ ಸಿದ್ಧಾಂತದ ವಿರುದ್ಧ ಹೋರಾಟ” ಇಲ್ಲದೇ ಹೋದರೆ ಹಿಂದೂತ್ವಕ್ಕೂ, ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧವೇ ಇಲ್ಲದಿದ್ದರೂ ಈ ವಿಷಯದಲ್ಲಿ ಹಿಂದೂತ್ವವನ್ನು ತಂದದ್ದು ಮಾತ್ರವಲ್ಲ ಅದನ್ನು ಹುರಿದು ಮುಕ್ಕಬೇಕು ಎನ್ನುವ ಅರ್ಥದ ಇಂಗ್ಲೀಷ್ ಭಾಷೆಯ ಶಬ್ದವನ್ನು ಬಳಸಿ ಅವಮಾನ ಮಾಡಲಾಗಿದೆ. ನೀವು ವಿವಿಧ ಕಡೆ ನಡೆಯುತ್ತಿರುವ ಪ್ರತಿಭಟನೆಯ ಫೋಟೊ, ವಿಡಿಯೋಗಳನ್ನು ನೋಡುತ್ತಿದ್ದಾಗ ನಿಮಗೆ ಬೆಂಗಳೂರಿನ ನ್ಯಾಶನಲ್ ಆರ್ಟ್ ಕಾಲೇಜಿನ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಫೋಟೋ ಮೇಲೆ ಗಮನಕ್ಕೆ ಬಂದಿರಬಹುದು. ಅಲ್ಲಿ ಹಿಂದೂತ್ವವನ್ನು ಹುರಿದು ಮುಕ್ಕಬೇಕು ಎನ್ನುವ ಶಬ್ದಗಳನ್ನು ಆಂಗ್ಲ ಭಾಷೆಯಲ್ಲಿ ಪ್ಲೇ ಕಾರ್ಡ್ ಮೇಲೆ ಬರೆದು ವಿದ್ಯಾರ್ಥಿಗಳು ಹಿಡಿದುಕೊಂಡಿದ್ದಾರೆ. ಅಲ್ಲಿಗೆ ಈ ಒಟ್ಟು ಹೋರಾಟದ ಉದ್ದೇಶ ಹಳ್ಳಹಿಡಿಯುತ್ತಿರುವುದು ಸ್ಪಷ್ಟ. ಪೌರತ್ವಕ್ಕೂ ಹಿಂದೂತ್ವಕ್ಕೂ ಯಾವುದೇ ಸಂಬಂಧವಿಲ್ಲ.
ಒಂದಿಷ್ಟು ಹೆಚ್ಚು ಧೈರ್ಯ ಮತ್ತು ಬಹುಮತ ಕೈಯಲ್ಲಿ ಇದ್ದಲ್ಲಿ ಇದನ್ನು ಆವತ್ತೇ ಮನಮೋಹನ್ ಸಿಂಗ್ ತಂದುಬಿಡುತ್ತಿದ್ದರು. ಆಗಿನ್ನೂ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಅಂಬೆಗಾಲಿಟ್ಟು ಒಳಗೆ ಬರುತ್ತಿದ್ದ ದಿನಗಳು. ಆದರೆ ಸಿಂಗ್ ಗೆ ಆಗಲಿಲ್ಲ. ಆವತ್ತು ಈ ಕಾಯ್ದೆ ತರದಿದ್ದರೆ ನನ್ನ ರಾಜೀನಾಮೆ ತೆಗೆದುಕೊಳ್ಳಿ ಎಂದು ಸಂಸತ್ತಿನಲ್ಲಿ ಬೊಬ್ಬೆ ಹಾಕಿದ್ದ ಮಮತಾಗೆ ಈಗ ಈ ಕಾಯ್ದೆ ಬೇಡಾ. ಯಾಕೆಂದರೆ ಪಶ್ಚಿಮ ಬಂಗಾಲದಲ್ಲಿ ಮುಂದಿನ ಬಾರಿ ಗೆಲ್ಲಬೇಕಾದರೆ ಬಿಜೆಪಿಯನ್ನು ಕಟಕಟೆಯಲ್ಲಿ ಹೇಗಾದರೂ ಮಾಡಿ ನಿಲ್ಲಿಸಲೇಬೇಕೆಂಬ ಹಪಾಹಪಿ ಇದೆ. ಅತ್ತ ಎಡಪಕ್ಷಗಳಿಗೂ ಪಶ್ಚಿಮ ಬಂಗಾಲದಲ್ಲಿ ಕಮ್ ಬ್ಯಾಕ್ ಮಾಡಬೇಕಾದರೆ ಮೋದಿಯನ್ನೇ ಟಾರ್ಗೆಟ್ ಮಾಡಬೇಕು. ಆದ್ದರಿಂದ ಎಷ್ಟೇ ಬಸ್ಸು, ರೈಲು ಸುಟ್ಟು ಹೋಗಲಿ ನಮ್ಮ ರಾಜಕೀಯ ನಮಗೆ ಮುಖ್ಯ ಎನ್ನುವ ಉದ್ದೇಶ ಅವರುಗಳಿಗೆ ಇದ್ದರೆ ಕೆಲವು ಕಾಲೇಜುಗಳ ವಿದ್ಯಾರ್ಥಿಗಳಿಗೆ ಇನ್ನು ಕೂಡ ಹಬ್ಬದ ದಿವಸ ಯಾರದ್ದೋ ಮನೆಯಲ್ಲಿ ತಿಂದ ಬಿರಿಯಾನಿ ಜೀರ್ಣ ಆಗಿಲ್ಲ. ಅವರು ಇದನ್ನು ಕೋಮು ವಿಷಯಕ್ಕೆ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ. ಅವರಿಗೆ ಈಗ ಹಿಂದೂಗಳೇ ಟಾರ್ಗೆಟ್. ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಬದ್ಧ ವೈರಿ. ಹೇಗಾದರೂ ಮಾಡಿ ಹಿಂದೂತ್ವದ ವಿಷಯ ತಂದು ದೇಶವನ್ನು ಇನ್ನೊಮ್ಮೆ ತುಂಡು ಮಾಡುವ ಸಿದ್ಧತೆಯಲ್ಲಿದ್ದಾರೆ. ಅವರ ವಿರುದ್ಧ ಕಾಲೇಜಿನ ಪ್ರಿನ್ಸಿಪಾಲ್ ಕೇಸ್ ದಾಖಲಿಸಿದ್ದಾರೆ. ಎಂಟು ಜನರನ್ನು ಬಂಧಿಸಲಾಗಿದೆ. ಅಲ್ಲಿಗೆ ದೇಶದ ಯಾವ ಮೂಲೆಯಲ್ಲಿ ಪೌರತ್ವದ ಹೆಸರಿನಲ್ಲಿ ಯಾರು ಏನು ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ!
Leave A Reply