ಶಾಂತಿಯುತ ಪ್ರತಿಭಟನೆ- ಟೆಂಪೋದಲ್ಲಿ ಕಲ್ಲು, ಕೈಯಲ್ಲಿ ಪೆಟ್ರೋಲ್ ಬಾಂಬ್, ಗನ್ ಅಂಗಡಿಗೆ ದಾಳಿ!!
ಮೊತ್ತ ಮೊದಲಿಗೆ ಮಂಗಳೂರು ಪೊಲೀಸ್ ಕಮೀಷನರ್ ಡಾ.ಹರ್ಶ ಅವರಿಗೆ ಧನ್ಯವಾದ ಹೇಳಲೇಬೇಕು. ವಿರೋಧಪಕ್ಷಗಳ ನಾಯಕರು ಬಂದು ಗಂಟೆಗಟ್ಟಲೆ ಸುದ್ದಿಗೋಷ್ಟಿ ಮಾಡಿ ಪೊಲೀಸರ ಫೈರಿಂಗ್ ಬಗ್ಗೆ ಟೀಕಿಸಿದರು, ಆರೋಪಿಸಿದರು, ಏನೇನೋ ಹೇಳಿ ಹಂಗಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಬಂದರು. ಹತ್ತು ಲಕ್ಷ ಘೋಷಣೆ ಸತ್ತವರಿಗೆ ಮಾಡಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೊಲೀಸ್ ಸಿಬ್ಬಂದಿಗಳನ್ನು ಭೇಟಿ ಮಾಡಬೇಕು ಎಂದು ಯಾವ ಮಹಾನ್ ರಾಜಕೀಯ ನಾಯಕರಿಗೂ ಅನಿಸಲಿಲ್ಲ. ಆದರೆ ಪೊಲೀಸ್ ಕಮೀಷನರ್ ಎದೆಗುಂದಲಿಲ್ಲ. ಅವರಿಗೆ ತಾವು ತೆಗೆದುಕೊಂಡ ಕ್ರಮದ ಬಗ್ಗೆ ವಿಶ್ವಾಸವಿತ್ತು. ಅದರೊಂದಿಗೆ ಪ್ರತಿಭಟನಾಕಾರರನ್ನು ಬಿಟ್ಟು ಉಳಿದವರಿಗೆ ಪೊಲೀಸರ ಫೈರಿಂಗ್ ಅನಿವಾರ್ಯತೆಯ ಬಗ್ಗೆ ಗೊತ್ತಿತ್ತು. ಆದರೆ ಏನು ಮಾಡೋಕೆ ಆಗುತ್ತೆ? ಪೊಲೀಸ್ ಕಮೀಷನರ್ ತಮ್ಮ ಟ್ವಿಟರ್ ನಲ್ಲಿ ಸಂದೇಶ ಬರೆದರು. “ದಯವಿಟ್ಟು ನಿಮ್ಮ ಬಳಿ ಗಲಭೆಯ ದೃಶ್ಯಗಳು, ಫೋಟೋಗಳು ಇದ್ದರೆ ನಮಗೆ ಮೇಲ್ ಮಾಡಿ, ವಾಟ್ಸಪ್ ಕಳುಹಿಸಿ” ಅಷ್ಟೇ., ಬಂದ ವಿಡಿಯೋಗಳನ್ನು ನೋಡಿ ಪೊಲೀಸ್ ಇಲಾಖೆಯೇ ಬೆಚ್ಚಿಬಿದ್ದಿದೆ. ಅದರಲ್ಲಿ ಆಯ್ದ ಕೆಲವು ಭಯಾನಕ ದೃಶ್ಯಗಳನ್ನು ಪೊಲೀಸ್ ಕಮೀಷನರೇಟ್ ಕಚೇರಿಯಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹಾಕಲಾಗಿದೆ. ಅದರ ಕೆಲವು ವಿಡಿಯೋಗಳನ್ನು ನೋಡಿದರೆ ಪ್ರತಿಭಟನಾಕಾರರ ” ಶಾಂತಿಯುತ” ಪ್ರತಿಭಟನೆ ಗೊತ್ತಾಗುತ್ತಿದೆ.
ಮೊದಲನೇ ದೃಶ್ಯ: ಒಂದು ಟೆಂಪೋ ಬಂದು ನಿಲ್ಲುತ್ತದೆ. ಆ ಟೆಂಪೋದಲ್ಲಿ ಹತ್ತಾರು ಗೋಣಿಗಳು. ಪ್ರತಿ ಗೋಣಿಗಳು ಭರ್ತಿ. ಗೋಣಿಯಲ್ಲಿ ತುಂಬಿದ್ದದ್ದು ಫುಲ್ ಜಲ್ಲಿಕಲ್ಲುಗಳು. ಟೆಂಪೋ ಬಂದು ನಿಲ್ಲುತ್ತಿದ್ದಂತೆ ಶಾಂತಿಯುತ ಪ್ರತಿಭಟನಾಕಾರರು ಒಂದೊಂದೇ ಗೋಣಿಚೀಲವನ್ನು ಕೆಳಗೆ ಹಾಕಿ ಅದರಿಂದ ಕಲ್ಲುಗಳನ್ನು ಕೆಳಗೆ ರಾಶಿ ಹಾಕಿ ಅದನ್ನು ಪೊಲೀಸರ ಮೇಲೆ ಬಿಸಾಡುತ್ತಾರೆ.
ಎರಡನೇ ದೃಶ್ಯ: ಮಂಗಳೂರಿನ ಬಂದರು ಪೊಲೀಸ್ ಠಾಣೆಯ ಹತ್ತಿರದ ದೃಶ್ಯ. ಜುಮ್ಮಾ ಮಸೀದಿ ರಸ್ತೆ. ಎಂಎಂ ಕಿಣಿ, ಗನ್ಸ್ ಮತ್ತು ಬುಲೆಟ್ಸ್ ಪೂರೈಕೆ ಮಾಡುವ ಅಂಗಡಿ. ಆ ಅಂಗಡಿಯ ಒಳಗೆ ನುಗ್ಗಿ ಗನ್ಸ್ ಮತ್ತು ಬುಲೆಟ್ಸ್ ದೋಚಿ ಅದನ್ನು ಬಳಸಲು ಪ್ರತಿಭಟನಾಕಾರರು ಪ್ರಯತ್ನ ಮಾಡಿದ್ದರು. ಅಂಗಡಿ ಶಟರ್ ಲಾಕ್ ಆಗಿದ್ದ ಕಾರಣ ಪ್ರತಿಭಟನಾಕಾರರು ಯಶಸ್ವಿಯಾಗಿರಲಿಲ್ಲ. ಒಂದು ವೇಳೆ ಒಳಗೆ ನುಗ್ಗಿದ್ದಿದ್ದರೆ ಪೊಲೀಸರ, ಜನಸಾಮಾನ್ಯರ ಮೇಲೆ ಆ ಬುಲೆಟ್ಸ್ ಅನ್ನು ಪ್ರತಿಭಟನಾಕಾರರು ಪ್ರಯೋಗಿಸಿದಿದ್ದರೆ ಏನಾಗುತ್ತಿತ್ತು ಎಂದು ಊಹಿಸುವುದು ಕಷ್ಟ. ಲೆಕ್ಕವಿಲ್ಲದಷ್ಟು ಹೆಣಗಳು ಉರುಳುತ್ತಿದ್ದದ್ದರಲ್ಲಿ ಸಂಶಯವಿಲ್ಲ.
ದೃಶ್ಯ 3: ತಾವು ಪೊಲೀಸರ ಮೇಲೆ ಕಲ್ಲು ತೂರುತ್ತಾ ಇರುವ ತಮ್ಮ ದುಷ್ಕತ್ಯ ಹೊರಪ್ರಪಂಚಕ್ಕೆ ಗೊತ್ತಾಗದೇ ಇರಲು ಪ್ರತಿಭಟನಾಕಾರರು ಏನು ಮಾಡಿದ್ದರು, ಗೊತ್ತಾ? ಆ ರಸ್ತೆಯಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತೋ ಆ ಸಿಸಿಟಿವಿಗಳನ್ನು ತಿರುಗಿಸಿ ರಸ್ತೆಯಲ್ಲಿ ಆಗುತ್ತಿರುವ ಘಟನೆ ಚಿತ್ರಣ ಆಗದಂತೆ ನೋಡಿಕೊಂಡಿದ್ದಾರೆ.
ದೃಶ್ಯ 4: ಬಾಟಲಿಯಲ್ಲಿ ಪೆಟ್ರೋಲ್ ಬಾಂಬ್ ಹಾಕಿ ಬಂದರು ಠಾಣೆಯ ಒಳಗೆ ಬಿಸಾಡಿ ಠಾಣೆಯನ್ನು ಉಡಾಯಿಸಲು ಪ್ರಯತ್ನಇಂತಹ ನೂರಾರು ದೃಶ್ಯಗಳನ್ನು ಎದುರಿಗೆ ಇಟ್ಟು ಒಮ್ಮೆ ನೋಡಿದರೂ ಸಾಕು, ಪೊಲೀಸರು ಫೈರಿಂಗ್ ಮಾಡಿದ್ದು ನೂರಕ್ಕೆ ನೂರರಷ್ಟು ಅನಿವಾರ್ಯವಾಗಿತ್ತು ಎಂದು ಗ್ಯಾರಂಟಿಯಾಗುತ್ತದೆ.
ಇನ್ನು ಮುಖಕ್ಕೆ ಬಟ್ಟೆ ಕಟ್ಟಿ ಕಲ್ಲು ಬಿಸಾಡುತ್ತಿರುವ ಶಾಂತಿಯುತ ಪ್ರತಿಭಟನಾಕಾರರ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳುವುದೇನೆಂದರೆ ಅವರು ಆಶ್ರುವಾಯುವಿನಿಂದ ತಪ್ಪಿಸಲು ಹಾಗೆ ಮಾಡಿದರು ಎನ್ನುತ್ತಿದ್ದಾರೆ. ನಿಜವಾದ ವಿಷಯವೇನೆಂದರೆ ಆಶ್ರುವಾಯು ಸಿಡಿಸುವ ಮುನ್ನವೇ ಪ್ರತಿಭಟನೆಗೆ ಬಂದವರು ಮುಖಕ್ಕೆ ಬಟ್ಟೆ ಕಟ್ಟಿಯೇ ಫೀಲ್ಡಿಗೆ ಇಳಿದಿದ್ದರು. ಇನ್ನು ಬೆಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ಮಾಡುತ್ತಾ ಯುಟಿ ಖಾದರ್ ” ಈ ಗಲಭೆ ಬಿಜೆಪಿಯೊಳಗಿರುವ ಯಡಿಯೂರಪ್ಪನವರ ಶತ್ರುಗಳು ಮಾಡಿ ಯಡಿಯೂರಪ್ಪನವರ ಹೆಸರು ಹಾಳು ಮಾಡಲು ಯತ್ನಿಸುತ್ತಿದ್ದಾರೆ” ಎನ್ನುತ್ತಿದ್ದಾರೆ. ಬಹುಶ: ಖಾದರ್ ದಕ್ಷಿಣ ಕನ್ನಡ ಜಿಲ್ಲೆಯವರಾಗಿರುವುದರಿಂದ ಒಂದಿಷ್ಟು ಪ್ರಬುದ್ಧತೆ ಇರಬಹುದು ಎಂದುಕೊಳ್ಳಲಾಗಿತ್ತು. ಆದರೆ ಯಾವಾಗ ಅವರು ಇಂತಹ ಹೇಳಿಕೆಗಳನ್ನು ಕೊಡಲು ಶುರು ಮಾಡಿದರೋ ಅವರಿಂದಲೇ ಮಂಗಳೂರಿನಲ್ಲಿ ಈ ಪ್ರಮಾಣದ ಗಲಭೆ ಆಗಿರುವುದು ಸ್ಪಷ್ಟವಾಗಿದೆ. ಅವರು ತಾವು ಬೆಂಕಿ ಕೊಡುವ ಹೇಳಿಕೆ ಕೊಟ್ಟು ಅದನ್ನು ನಿಜ ಮಾಡಲು ಷಡ್ಯಂತ್ರ ಹೆಣೆದಿರುವುದು ಅವರ ಹೇಳಿಕೆಯಿಂದಲೇ ನಿಜವಾಗಿದೆ. ಇನ್ನೊಂದು ವಿಷಯ ಖಾದರ್ ಗಮನದಲ್ಲಿ ಇರಲಿ. ಪೊಲೀಸರಿಗೆ ಬಂದ ಗುಪ್ತಚರ ಮಾಹಿತಿ ಪ್ರಕಾರ ಮಂಗಳೂರಿನಲ್ಲಿ ದೊಡ್ಡ ವಿಧ್ವಂಸಕ ಕೃತ್ಯ ಮಾಡಲು ಹೊರಗಿನಿಂದ ಜನ ಬಂದಿದ್ದಾರೆ. ಕರ್ಪ್ಯೂ ಹಾಕದಿದ್ದರೆ ಮಂಗಳೂರು ಹಿಂದೆಂದೂ ಕಂಡು ಕೇಳರಿಯದ ದುರಂತಕ್ಕೆ ಕಾರಣವಾಗಲಿದೆ. ಪೊಲೀಸ್ ಕಮೀಷನರ್ ಯಾವುದೇ ರಿಸ್ಕ್ ತೆಗೆದುಕೊಳ್ಳದೇ ಜನರ ಪ್ರಾಣ ಉಳಿಸಿಕೊಳ್ಳಲು ಕರ್ಫರ್ೂ ಘೋಷಿಸಬೇಕಾಯಿತು!
ಪೂರ್ಣ ವಿಡಿಯೋ ನೋಡಿ
ಮಂಗಳೂರಿನ ಗಲಭೆಗೆ ಯಾರು ಕಾರಣ, ಸಾಕ್ಷಿ ಸಮೇತ ಹೊರ ಬರುತ್ತಿದೆ!
Gepostet von Tulunadu News am Montag, 23. Dezember 2019
ಮಂಗಳೂರನ್ನು ಗಲಭೆ ಪ್ರದೇಶವನ್ನಾಗಿ ಮಾಡಿದ್ದು ಯಾರು? ಮಂಗಳೂರನ್ನೂ ಹೊತ್ತಿ ಹೊರಿಸಿದ್ದು ಯಾರು? ಮಂಗಳೂರಿನಲ್ಲಿ ಕರ್ಫ್ಯೂ ಜಾರಿಗೆ ಕಾರಣ ಯಾರು? ಮಂಗಳೂರಿನ ಕೋಮುಸೌಹಾರ್ದತೆ ಹಾಳು ಮಾಡಿದ್ದು ಯಾರು? ಕಾಶ್ಮೀರದ ಕಲ್ಲು ತೂರಾಟಗಾರರನ್ನು ಮಂಗಳೂರಿಗೆ ಕರೆತಂದದ್ದು ಯಾರು? ಇವೆಲ್ಲದಕ್ಕೂ ಪೂರ್ಣ ಉತ್ತರ ಇಲ್ಲಿ ಇದೆ. ವಿಡಿಯೋ ನೋಡಿ.
Gepostet von Tulunadu News am Montag, 23. Dezember 2019
ಪ್ರತಿಭಟನೆಯ ನೆಪದಲ್ಲಿ ಮಂಗಳೂರಿನ ಸಾರ್ವಜನಿಕರ ಆಸ್ತಿ ಹಾನಿ ಮಾಡಿದವರು, ಮತ್ತು ಗಲಭೆಗೆ ಕಾರಣರಾದವರ ವಿಡಿಯೋ ಮಂಗಳೂರು ಪೋಲಿಸರು ಬಿಡುಗಡೆ ಮಾಡಿದ್ದಾರೆ.
Gepostet von Tulunadu News am Montag, 23. Dezember 2019
Leave A Reply