ಪ್ರಸವ ಪೂರ್ವ ಶಿಕ್ಷಣ -ಪ್ರಾಮುಖ್ಯತೆ ಮತ್ತು ಆಯಾಮಗಳು
ಪ್ರಸವ ಪೂರ್ವ ಶಿಕ್ಷಣ -ಪ್ರಾಮುಖ್ಯತೆ ಮತ್ತು ಆಯಾಮಗಳು
ಒಳ್ಳೆಯ ಉದ್ಯೋಗ ಸಿಗುವುದಕ್ಕೆ ಮೂಲ ಅರ್ಹತೆಯಾಗಿ ವಿಶ್ವವಿದ್ಯಾಲಯದ ಪದವಿಯನ್ನು ಪರಿಗಣಿಸಲಾಗುತ್ತದೆ.ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗಲು ಉತ್ತಮ ಅಂಕಗಲೇ ಅರ್ಹತೆಯಾಗಿವೆ. ಎಲ್ಲದಕ್ಕೂ ಅರ್ಹತೆಗಳಿವೆ ಹಾಗಿದ್ರೆ ಒಳ್ಳೆಯ ಪೋಷಕರಾಗೋದಕ್ಕಿರುವ ಅರ್ಹತೆಗಳೇನು?ಒಳ್ಳೆಯ ಶಾಲೆಗೆ ಕೈ ತುಂಬ ದುಡ್ಡು ನೀಡಿ ಸೇರಿಸಿ ,ಪ್ರತಿಷ್ಠಿತ ಕಾಲೇಜಿಗೆ ಸೇರಿಸಿ ಬೇಕಾದ್ದನ್ನು ಕೊಡಿಸಿ ,ಅಬ್ಬರದಿಂದ ಮದುವೆ ಮಾಡಿ ಆಸ್ತಿ ಮಾಡುವ ಹೆತ್ತವರು ಅತ್ಯುತ್ತಮ ಪೋಷಕರಾ?ಅಥವಾ ಇದೆಲ್ಲಕ್ಕಿಂತ ಮಿಗಿಲಾದ ಪೋಷಕರ ಕರ್ತವ್ಯ ಏನಾದ್ರೂ ಇದ್ಯಾ?ಇದೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗೋದು ಪ್ರಸವಪೂರ್ವ ಸಂದರ್ಭದಲ್ಲಿ.
ಪ್ರಸವಪೂರ್ವ ತರಬೇತಿ ತಂದೆ ,ತಾಯಿ ಹಾಗೂ ಹುಟ್ಟಲಿರುವ ಮಗುವಿನ ಭಾವನಾತ್ಮಕ ,ಮಾನಸಿಕ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ.
ಪ್ರಸವ ಪೂರ್ವ ಶಿಕ್ಷಣ ಎಂದರೇನು?
ಗರ್ಭದೊಳಗಿರುವ ಮಗುವಿಗೆ ಮಾನವ ಜೀವನದ ಬಗ್ಗೆ ಜ್ಞಾನವನ್ನು ನೀಡುವ ತರಬೇತಿಯೇ ಪ್ರಸವ ಪೂರ್ವ ಶಿಕ್ಷಣ.ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ವಿಜ್ಞಾನ.ಇದು ಮಗುವನ್ನು ಅತಿ ಬುದ್ಧಿವಂತನನ್ನಾಗಿಸುವ ಅಥವಾ ತೊಂದರೆಯೇ ಇಲ್ಲದ ಮಗುವನ್ನು ನೀಡುವ ತರಬೇತಿ ಅಲ್ಲ.ಬದಲಾಗಿ ಇದು ಮಗುವಿನ ಬಗ್ಗೆ ತಾಯಿ ತಂದೆಗೆ ಮತ್ತು ಜೀವನದ ಬಗ್ಗೆ ಮಗುವಿಗೆ ನೀಡಲ್ಪಡುವ ಜ್ಞಾನ.
ಗರ್ಭಧಾರಣೆ ಮಾಡಿಸುವುದು ಮಾತ್ರ ತನ್ನ ಕರ್ತವ್ಯ ,ಉಳಿದೆಲ್ಲವೂ ಪತ್ನಿಗೆ ಬಿಟ್ಟಿರುವುದು ಎಂಬ ಗಂಡಸರ ಮನಸ್ಥಿಗೆ ಪ್ರಸವಪೂರ್ವ ಶಿಕ್ಷಣ ಹೊಸ ಆಯಾಮವನ್ನು ನೀಡುತ್ತದೆ.ಮಗುವಿಗೆ ಕೇವಲ ಊಟ ,ಶಿಕ್ಷಣ,ಸೂರು ನೀಡುವುದಷ್ಟೇ ಅಲ್ಲ ಜೀವನದ ಎಲ್ಲ ಸಂದರ್ಭಗಳನ್ನು ಖುದ್ದಾಗಿ ಎದುರಿಸಲು ಶಕ್ತರಾಗುವಂತೆ ಅಪ್ಪ ಅಮ್ಮ ಬೆಂಗಾವಲಾಗಲು ಇದು ಪ್ರೇರೇಪಣೆ ನೀಡುತ್ತದೆ.
ಇದರಲ್ಲಿ ಮುಖ್ಯವಾಗಿ ಏಳು ಆಯಾಮಗಳಿವೆ.
ದೈಹಿಕ,ಭಾವನಾತ್ಮಕ,ಬೌದ್ಧಿಕ ,ಸಂವೇದನಾತ್ಮಕ ,ರಚನಾತ್ಮಕ,ಆಧ್ಯಾತ್ಹ್ಮಿಕ ಮತ್ತು ದೈವಿಕ ಆಯಾಮಗಳು.
ಈ ಏಳೂ ವಿಭಾಗಗಳನ್ನು ಉದ್ದೀಪನಗೊಳಿಸಲು ಕೆಲವು ಸರಳ ,ಮನೆಯಲ್ಲೇ ಮಾಡಬಹುದಾದ ಚಟುವಟಿಕೆಗಳು ಇವೆ.ಇದರಿಂದ ಗರ್ಭಾವಸ್ಥ ಮಗು ,ತಾಯಿ ,ತಂದೆ ಹಾಗೂ ಸಂಪೂರ್ಣ ಕುಟುಂಬ ಪೂರ್ಣ ಫಲವನ್ನು ಪಡೆಯಬಹುದಾಗಿದೆ.ಇದನ್ನು ತಜ್ಞ ತರಬೇತಿದಾರರಿಂದ ಪಡೆಯಬಹುದು .
ನೆನೆಪಿಡಿ .ಪ್ರಸವಪೂರ್ವ ಸಂದರ್ಭ ಹುಟ್ಟುವ ಮಗುವಿಗೆ ಅಡಿಪಾಯ ಹಾಕುವ ದಿನಗಳು.ಇದನ್ನು ಪಡೆಯುವುದರಿಂದ ಮುಂದೆ ಮಗು ಜೀವನವನ್ನು ಎದುರಿಸಲು,ಸರಿಯಾದ ನಿರ್ಧಾರಗಳನ್ನು ಕೈಗೊಳ್ಳಲು ಹಾಗೂ ಜೀವನವನ್ನು ಬಂದ ಹಾಗೆ ಯಾವುದೇ ಅಳುಕಿಲ್ಲದೆ ಸ್ವೀಕರಿಸಲು ಸಹಾಯ ಮಾಡುತ್ತದೆ.ಪೋಷಕರು ತಮ್ಮ ನಿರ್ಧಾರಗಳನ್ನು ಮಗುವಿನ ಮೇಲೆ ಹೇರದೆ ,ಕೇವಲ ಅಗತ್ಯ ಪೂರೈಸುವ ಮನುಷ್ಯರಾಗದೆ ದಾರಿ ತೋರುವ ಮಾರ್ಗದರ್ಶಿಗಳು ಆಗಲು ಈ ಶಿಕ್ಷಣ ಸಹಾಯ ಮಾಡುತ್ತದೆ.
ಸೂಪರ್ ಮಗು ಬೇಕು ಅನ್ನೋದು ಎಲ್ಲ ತಾಯಿ ತಂದೆಯರ ಕನಸು ,ಆದ್ರೆ ಅದಕ್ಕೋಸ್ಕರ ತಾವು ಸೂಪರ್ ಪೋಷಕರಾಗಬೇಕು ಅನ್ನುವ ಸತ್ಯವನ್ನು ಹಲವಾರು ಮರೆಯುತ್ತಾರೆ.ಪ್ರಸವ ಪೂರ್ವ ಶಿಕ್ಷಣ ಈ ಬಿರುಕನ್ನು ಪೂರ್ಣಗೊಳಿಸುತ್ತದೆ.
Leave A Reply