• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಂಪ್ವೆಲ್ ಕಲಶ ಎತ್ತಲು ಕಾಂಗ್ರೆಸ್ಸಿಗೆ ಬೇಕಾಯಿತು ನಾಲ್ಕು ವರ್ಷ!!

Hanumantha Kamath Posted On January 2, 2020
0


0
Shares
  • Share On Facebook
  • Tweet It

ಜುಲೈ 12, 2013 ರಂದು ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಹಾಗೂ ಆಗಿನ ಮಂಗಳೂರು ನಗರ ದಕ್ಷಿಣ ಶಾಸಕರು ಒಂದು ಸುದ್ದಿಗೋಷ್ಟಿಯಲ್ಲಿ ಮಂಗಳೂರಿನ ಪಂಪ್ವೆಲ್ ನಲ್ಲಿದ್ದ ಕಳಶದ ಬಗ್ಗೆ ಮಾತನಾಡುತ್ತಾರೆ. ಆಗಿನ ಶಾಸಕರು ಏನು ಹೇಳುತ್ತಾರೆ ಎಂದರೆ ” ಪಂಪ್ವೆಲ್ ಕಾಮಗಾರಿ ನಿರಾತಂಕವಾಗಿ ಮುಂದುವರೆಯಬೇಕಾದರೆ ಪಂಪ್ವೆಲ್ ನಲ್ಲಿರುವ ಕಲಶವನ್ನು ತೆಗೆದು ಸ್ಥಳಾಂತರಿಸಬೇಕು. ಅದನ್ನು ಜಿಲ್ಲಾಡಳಿತ ಮಾಡುತ್ತಿಲ್ಲ. ಜಿಲ್ಲಾಡಳಿತದ ಅಸಹಕಾರ ಹೀಗೆ ಮುಂದುವರೆದರೆ ಪಂಪ್ವೆಲ್ ಕಾಮಗಾರಿಗೆ ಅಡಚಣೆಯಾಗುತ್ತದೆ”.

ನನ್ನ ಜಾಗೃತ ಓದುಗರಲ್ಲಿ ನಾನು ಈಗ ಕೇಳುವುದಿಷ್ಟೇ. ಆವತ್ತು ಮಾತನಾಡಿದ ಆ ಶಾಸಕರು ಈಗ ಮನೆಯಲ್ಲಿದ್ದಾರೆ. ಈಗ ಮಾಜಿ ಶಾಸಕರಾಗಿರುವ ಅವರು ಮೂರು ವಿಷಯಗಳನ್ನು ಆವತ್ತು ಒಪ್ಪಿಕೊಂಡಂತೆ ಆಗಿದೆ. ಒಂದನೇಯದಾಗಿ ಕಳಶದ ಸ್ಥಳಾಂತರ 2013 ರ ತನಕ ಆಗಿಲ್ಲ( ಕಾಮಗಾರಿ ಶುರುವಾಗಿದ್ದದ್ದು 2009 ರಲ್ಲಿ). ಎರಡನೇಯದಾಗಿ ಕಳಶದ ಸ್ಥಳಾಂತರ ಮಾಡಲು ಜಿಲ್ಲಾಡಳಿತ ಅಸಹಕಾರ ತೋರುತ್ತಿದೆ. ಮೂರನೇಯದಾಗಿ ಹೀಗೆ ಮುಂದುವರೆದರೆ ಕಾಮಗಾರಿಗೆ ಅಡಚಣೆಯಾಗುತ್ತದೆ. 2013 ರಲ್ಲಿ ಇವರು ಹೀಗೆ ಸುದ್ದಿಗೋಷ್ಟಿ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಕೊನೆಗೆ ಕಲಶ ಅಲ್ಲಿಂದ ಸ್ಥಳಾಂತರ ಆದದ್ದು 2016 ರಲ್ಲಿ ಅಂದರೆ ಮೂರು ವರ್ಷಗಳ ಬಳಿಕ. 2013 ರಲ್ಲಿ ಯಾರ ಸರಕಾರ ಇತ್ತು. ಕಾಂಗ್ರೆಸ್. ಜಿಲ್ಲಾ ಉಸ್ತುವಾರಿ ಸಚಿವರು ಯಾವ ಪಕ್ಷದವರಾಗಿದ್ದರು? ಕಾಂಗ್ರೆಸ್. ಆಗ ಇದ್ದ ಶಾಸಕರು ಯಾವ ಪಕ್ಷದವರು? ಕಾಂಗ್ರೆಸ್. ಪಾಲಿಕೆ ಯಾವ ಪಕ್ಷದ ಆಡಳಿತದಲ್ಲಿತ್ತು? ಕಾಂಗ್ರೆಸ್. ಎಲ್ಲವೂ ಕಾಂಗ್ರೆಸ್ ಮಯವಾಗಿದ್ದರೂ ಇವೆಲ್ಲರಿಗೆ ಸೇರಿ ಒಂದು ಕಲಶ ಎತ್ತಿ ಬೇರೆಡೆ ಇಡಲು ಮೂರ್ನಾಕು ವರ್ಷಗಳು ಬೇಕಾಯಿತು ಎಂದರೆ ಜನಸಾಮಾನ್ಯರು ಅರ್ಥ ಮಾಡಿಕೊಳ್ಳಬೇಕು. ಈಗ ಅದೇ ಮಾಜಿ ಶಾಸಕರು, ಮಾಜಿ ಉಸ್ತುವಾರಿಗಳು ಪಂಪ್ವೆಲ್ ಕಾಮಗಾರಿ ತಡವಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಮೇಲೆ ಆರೋಪ ಹಾಕುತ್ತಾರೆ, ಜನರಿಗೆ ಏನೂ ಗೊತ್ತಾಗುವುದಿಲ್ಲ ಎನ್ನುವ ಭ್ರಮೆಯೊಂದಿಗೆ.

ಇಲ್ಲಿಗೆ ಕಾಂಗ್ರೆಸ್ಸಿನ ಬಂಡವಾಳ ಹೊರಗೆ ಬೀಳುತ್ತದೆ. ಈಗ ಗೂಗಲ್ ಇರುವುದರಿಂದ ಏಳು ವರ್ಷಗಳ ಹಿಂದೆ ಮಾಡಿದ ಸುದ್ದಿಗೋಷ್ಟಿ ಮತ್ತು ಆವತ್ತು ಅವರು ಮಾತನಾಡಿದ್ದೇನು ಎನ್ನುವುದು ಕೂಡ ಗೊತ್ತಾಗುತ್ತದೆ. ಮಲ್ಲಿಕಟ್ಟೆಯಲ್ಲಿ ಆಫೀಸ್ ಮಾಡಿಕೊಂಡಿದ್ದ ಮಾಜಿ ಶಾಸಕರು ಮನಸ್ಸು ಮಾಡಿದ್ದರೆ ಪಾಲಿಕೆಯಲ್ಲಿದ್ದ ಮೇಯರ್ ಗೆ ಫೋನ್ ಮಾಡಿ ಕಲಶ ಶೀಘ್ರ ವಾರದೊಳಗೆ ಬೇರೆಡೆ ಸ್ಥಳಾಂತರಿಸಬೇಕು ಎಂದು ಸೂಚನೆ ಕೊಡಬಹುದಿತ್ತು. ರಮಾನಾಥ ರೈಗಳು ಜೋರಾಗಿ ನಾಳೆಯೇ ಕಲಶ ಶೀಫ್ಟ್ ಆಗಬೇಕು, ನಾನು ಬಂಟ್ವಾಳದಿಂದ ಬೆಳಿಗ್ಗೆ ಸರ್ಕೂಟ್ ಹೌಸಿಗೆ ಬಂದು ಕುತ್ಕೊವಾಗ ಕಲಶ ಕಾಣಿಸಬಾರದು ಎಂದು ಜಿಲ್ಲಾಧಿಕಾರಿಗೆ ಸೂಚನೆ ಕೊಟ್ಟಿದ್ದರೆ ಆಗಿ ಹೋಗುತ್ತಿತ್ತು. ಆದರೆ ಇವರುಗಳು ಮಾಡಿಸಿಲ್ಲ. ಅಷ್ಟಕ್ಕೂ ಇವರು ಬಯಸುತ್ತಿದ್ದದ್ದೇನು? ನಳಿನ್ ಬೆಳಿಗ್ಗೆ ಬೇಗ ಏಳುತ್ತಾರೆ. ನಾಲ್ಕು ಜನ ಕೂಲಿಯವರನ್ನು ಕರೆದುಕೊಂಡು ಹೋಗಿ ಕಲಶ ಎತ್ತಿ ಆಚೆ ಇಟ್ಟು ಮತ್ತೆ ಬೇರೆ ಕೆಲಸಕ್ಕೆ ಹೋಗಲಿ ಅಂತಾನಾ. ನಾಚಿಕೆ ಆಗಲ್ವಾ ಕಾಂಗ್ರೆಸ್ಸಿಗರೇ? ಎಲ್ಲ ಅಧಿಕಾರ ನಿಮ್ಮ ಕೈಲಿದ್ದು ಒಂದು ಮಣ್ಣಿನ ಕಲಶ ನಿಮಗೆ ತೆಗೆಯಲು ಆಗಲಿಲ್ಲ ಎಂದ ಮೇಲೆ ಆಗಿನ ಉಸ್ತುವಾರಿಗಳು, ಮಾಜಿ ಕೆಎಎಸ್ ಗಳು ಮಾಡಿದ್ದೇನು? ಅಷ್ಟಕ್ಕೂ ಕಲಶವನ್ನು ಪಂಪ್ವೆಲ್ ನಿಂದ ಎತ್ತಿ ಝೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಹೋಗಬೇಕಾಗುವಂತಹ ಕಷ್ಟ ಏನು ಕಾಂಗ್ರೆಸ್ ಮುಂದೆ ಇರಲಿಲ್ಲ. ಕೇವಲ ನೂರು ಮೀಟರ್ ಆಚೆ ಇಡಲು ಇವರಿಗೆ ಮೂರು ವರ್ಷ ಬೇಕಾಯಿತು ಎಂದರೆ ಅಷ್ಟು ದೊಡ್ಡ ಪ್ಲೈ ಒವರ್ ಆಗಲು ಹತ್ತು ವರ್ಷ ತಗುಲಿದ್ದರಲ್ಲಿ ನನಗೆ ಆಶ್ಚರ್ಯ ಕಾಣುತ್ತಿಲ್ಲ.

ಅದರ ಅರ್ಥ ನಳಿನ್ ಕುಮಾರ್ ಹೆಸರು ಕೆಡಿಸಲು ಶುದ್ಧ ಷಡ್ಯಂತ್ರವೊಂದು ನಡೆಯುತ್ತಲೇ ಇತ್ತು. ಕೊನೆಗೆ ಪೂಜ್ಯ ಖಾವಂದರು ಧರ್ಮಸ್ಥಳದಿಂದ ಬಂದು ಜಿಲ್ಲಾಧಿಕಾರಿಯವರೊಂದಿಗೆ ಮಾತನಾಡಿ ನಂತರ ಅದಕ್ಕೆ ಬೇರೆ ಜಾಗ ನೋಡಿ ಕಲಶ ಶಿಫ್ಟ್ ಮಾಡಿಸಿದರು. ಅದರ ನಂತರವೇ ಕಾಮಗಾರಿಗೆ ವೇಗ ಸಿಕ್ಕಿದ್ದು. ಇನ್ನು ಇಂಡಿಯನ್ ರೋಡ್ ಕಾಂಗ್ರೆಸ್ ಎನ್ನುವ ಸಂಸ್ಥೆ ಇದೆ. ಅವರಿಗೆ ಒಂದು ಪ್ಲೈ ಒವರ್ ಎಷ್ಟು ಎತ್ತರ ಇರಬೇಕು ಎನ್ನುವ ಬಗ್ಗೆ ಮಾನದಂಡಗಳೇ ಇವೆ. ಅವರ ನಿಯಮಾವಳಿಯಲ್ಲಿ ಪ್ಲೈ ಒವರ್ ಎತ್ತರ ಐದೂವರೆ ಮೀಟರ್ ಎತ್ತರ ಇರಬೇಕು. ಅವರು ಪಂಪ್ವೆಲ್ ನಲ್ಲಿ ಮಾಡಿದ್ದೆಷ್ಟು? ಅದನ್ನು ನಾಳೆ ಹೇಳುತ್ತೇನೆ.!

0
Shares
  • Share On Facebook
  • Tweet It




Trending Now
2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
Hanumantha Kamath July 31, 2025
ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
Hanumantha Kamath July 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
  • Popular Posts

    • 1
      2008 ಮಾಲೆಗಾಂ ಬಾಂಬ್ ಬ್ಲಾಸ್ಟ್ ಪ್ರಕರಣ: ಪ್ರಗ್ಯಾ ಸಿಂಗ್, ಕರ್ನಲ್ ಪುರೋಹಿತ್ ಸೇರಿ 7 ಜನ ದೋಷಮುಕ್ತ!
    • 2
      ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • 3
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 4
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 5
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್

  • Privacy Policy
  • Contact
© Tulunadu Infomedia.

Press enter/return to begin your search