ಉಂಡು ಹೋದ..ಕೊಂಡು ಹೋದ ಆಂಟೋನಿ.. ಎಲೆ ಹಾಕಿ ಬಳಸಿದ್ದು ಶಾಸಕರು…
ನೀವು ಮನೆ ಕಟ್ಟಲು ಹೊರಡುತ್ತೀರಿ, ಅದಕ್ಕೆ ಇಷ್ಟು ಎಂದು ಬಜೆಟ್ ನಿಗದಿಗೊಳಿಸುತ್ತೀರಿ. ಅದನ್ನು ಅಷ್ಟರೊಳಗೆ ಮುಗಿಸಲು ಎಲ್ಲಾ ಪ್ರಯತ್ನ ಮಾಡುತ್ತಿರುತ್ತಿರಿ. ಏಕೆಂದರೆ ಅದು ನಿಮ್ಮ ಮನೆ. ನಾನು ಮಧ್ಯಮ ವರ್ಗದವರ, ಕಷ್ಟ ಪಟ್ಟು ದುಡಿದು ಒಂದು ಸ್ವಂತ ಮನೆ ಕಟ್ಟುವ ಕನಸು ಕಾಣುವವರ ಬಗ್ಗೆ ಮಾತನಾಡುತ್ತಿದ್ದೆನೆ. ಒಂದು ವೇಳೆ ಮನೆಯ ಬಜೆಟ್ ಜಾಸ್ತಿ ಆದರೆ ನಿಮಗೆ ಟೆನ್ಷನ್ ಆಗುತ್ತದೆ. ಹೆಚ್ಚೆಂದರೆ ಒಂದು ಪಾವಿನಷ್ಟು ಜಾಸ್ತಿಯಾದರೆ ಪರವಾಗಿಲ್ಲ. ಆದರೆ ನೀವು ಲೆಕ್ಕ ಹಾಕಿದ ಡಬ್ಬಲ್ ಆಗಲು ಸಾಧ್ಯವಿಲ್ಲವಲ್ಲ. ಆದರೆ ಮಂಗಳೂರು ಮಹಾನಗರ ಪಾಲಿಕೆ ಎನ್ನುವ ಮನೆಯ ಸದಸ್ಯರು, ಅಲ್ಲಿ ಕೆಲಸಕ್ಕೆಂದು ನೇಮಕವಾಗಿರುವ ಕೆಲಸದಾಳುಗಳಾಗಿರುವ ಅಧಿಕಾರಿಗಳಿಗೆ ಪಾಲಿಕೆಯ ಖಜಾನೆಯಲ್ಲಿ ಶೇಖರಣೆಯಾಗುವ ಹಣ ತಾವು ಕಷ್ಟಪಟ್ಟು ದುಡಿದದ್ದು ಅಲ್ಲವಲ್ಲ, ಆದ್ದರಿಂದ ಅದನ್ನು ಬೇಕಾಬಿಟ್ಟಿ ಮುಗಿಸಲು ಇವರಿಗೆ ಯಾವ ಟೆನ್ಷನ್ ಕೂಡ ಆಗುವುದಿಲ್ಲ. ಅದಕ್ಕಾಗಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರು ನಮ್ಮ ಪಾಲಿಕೆಯನ್ನು ದೋಚುತ್ತಿದ್ದರೂ ಇವರು ಏನೂ ಮಾಡುತ್ತಿಲ್ಲ. ಮನಪಾ ಈ ತ್ಯಾಜ್ಯ ಸಂಗ್ರಹಣೆ ಎಂದು ಬಜೆಟಿನಲ್ಲಿ ತೆಗೆದು ಇಟ್ಟಿರುವ ಹಣ ಕಳೆದ ಮಾರ್ಚ ನಿಂದ ಈ ಮಾರ್ಚ ತನಕ ಸುಮಾರು 15 ಕೋಟಿ ರೂಪಾಯಿಗಳು. ಅದರೊಳಗೆ ಅಷ್ಟು ತ್ಯಾಜ್ಯ ಸಂಗ್ರಹಣೆಯ ಖರ್ಚು ಮುಗಿದು ಹೋಗಬೇಕು. ಆದರೆ ಮೊನ್ನೆ ನವೆಂಬರ್ ಒಳಗೆ ಪಾಲಿಕೆ ಈಗಾಗಲೇ ಹದಿನೆಂಟು ಕೋಟಿಯನ್ನು ಇದಕ್ಕಾಗಿ ಖರ್ಚು ಮಾಡಿ ಆಗಿದೆ. ಇನ್ನೂ ಮಾರ್ಚ ಮುಗಿಯುವಷ್ಟರಲ್ಲಿ ಅದು ಎಷ್ಟು ಕೋಟಿ ಆಗುತ್ತದೆ ಎನ್ನುವುದು ಪಾಲಿಕೆಗೆ ಅಂದಾಜೆ ಇಲ್ಲ. ಅದು 28ರಿಂದ 30 ಕೋಟಿ ದಾಟಿದರೂ ಆಶ್ಚರ್ಯವಿಲ್ಲ. ಹಾಗೆ ಇವರು ಬೇಕಾಬಿಟ್ಟಿ ಖರ್ಚು ಮಾಡುವ ಹಣಕ್ಕೆ ಕೇಳುವವರಿಲ್ಲವೇ. ನಮ್ಮಂತಹ ಮಧ್ಯಮ ವರ್ಗದವರು ಒಂದು ತಿಂಗಳಿನ ಖರ್ಚನ್ನು ಲೆಕ್ಕ ಹಾಕಿ ಇಷ್ಟರೊಳಗೆ ಜೀವನ ಸಾಗಿಸಬೇಕು ಎಂದು ಪ್ಲಾನ್ ಮಾಡುತ್ತಾ ಇರುವಾಗ ಅಷ್ಟು ಕಲಿತು ಪಾಲಿಕೆಯ ಗೌರವಾನ್ವಿತ ಹುದ್ದೆಯಲ್ಲಿರುವವರು ಕಣ್ಣು ಮುಚ್ಚಿ ಹಾಗೆ ಹಣ ವ್ಯಯಿಸುತ್ತಾರೆಂದರೆ ಪಾಪದವನ ಹೊಟ್ಟೆಗೆ ಬೆಂಕಿ ಬೀಳಲ್ವಾ? ಕೋಟಿ ಕೋಟಿ ಎಂದರೆ ಸುಮ್ಮನೆ ಬರುತ್ತದಾ? ಅದು ಕೂಡ ಈ ಆಂಟೋನಿ ಸಂಸ್ಥೆಯವರು ನಮ್ಮ ನಗರವನ್ನು ಏನೂ ಕ್ಲೀನ್ ಸಿಟಿ ಮಾಡಿಕೊಟ್ಟಿದ್ದಾರಾ? ಅವರು ಮಾಡಿರುವ ತೇಪೆ ಹಾಕುವಂತಹ ಕೆಲಸಕ್ಕೆ ಈಗ ಖರ್ಚು ಮಾಡುತ್ತಿರುವುದೇ ಹೆಚ್ಚು. ಹಾಗಂತ ಅವರು ಒಪ್ಪಂದದಲ್ಲಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದರೆ ಎರಡು ಕೋಟಿ ಬಿಲ್ ಆಗಿದ್ದರೂ ಕೊಡಬಹುದಿತ್ತೆನೊ. ಆದರೆ ಈಗ ಅವರು ಮಾಡಿರುವ ಕೆಲಸಕ್ಕೆ ನಾನಾಗಿದ್ದರೆ ಅರವತ್ತು ಲಕ್ಷ ಕೂಡ ಪಾಸು ಮಾಡಲು ಯೋಚನೆ ಮಾಡುತ್ತಿದ್ದೆ. ಆದರೆ ಏನು ಮಾಡುವುದು, ಆಂಟೋನಿ ಸಂಸ್ಥೆಯ ಬೆನ್ನು ಬಿದ್ದು ಕೆಲಸ ಮಾಡಿಸ ಬೇಕಾದ ಅರೋಗ್ಯ ಅಧಿಕಾರಿ ಡಾ ಮಂಜ್ಯಯ ಶೆಟ್ಟಿಯವರು ಕಣ್ಣು ಮುಚ್ಚಿ ಬಿಲ್ ಪಾಸ್ ಮಾಡುತ್ತಾರೆ ಹಾಗಿರುವಾಗ ಅಂಟೋನಿಯವರು ಕೆಲಸಯಾಕೆ ಮಾಡುತ್ತಾರೆ . ನಿವೃತ್ತರಾದರು ಈ ಅರೋಗ್ಯ ಅಧಿಕಾರಿ ಡಾ ಮಂಜಯ್ಯ ಶೆಟ್ಟಿಯವರು ಹೇಗೆ ಈಗಲೂ ಅರೋಗ್ಯ ಅಧಿಕಾರಿಯಾಗಿದ್ದಾರೆ ಎಂಬ ಬಗ್ಗೆ ಮುಂದೆ ಬರೆಯುತ್ತೆನೆ.ಅಂಟೋನಿಯವರನ್ನು ಏನು ಮಾಡುವುದು. ಎಲ್ಲಿಯ ತನಕ ಹೀಗೆ ಉಂಡು ಹೋದ..ಕೊಂಡು ಹೋದ ಆಂಟೋನಿಯಂತವರು ಇರುವಾಗ ಅವರ ಹೆಡೆಮುರಿ ಕಟ್ಟಿ ಕೆಲಸ ಮಾಡಿಸ ಬೇಕಾದ ಪಾಲಿಕೆ ಇಲ್ಲದಾಗ.ನೀವು ಕಟ್ಟುವ ತೆರಿಗೆ ಹಣ ಸರಿಯಾಗಿ ಬಳಕೆ ಆಗುತ್ತೆ ಎನ್ನುವ ಆಸೆ ಇಟ್ಟುಕೊಳ್ಳಲೇ ಬಾರದು. ಆದರೆ ಕೇಳಿದರೆ ಪಾಲಿಕೆ ಜನರ ಮೇಲೆಯೇ ಆರೋಪ ಹೊರಿಸುತ್ತದೆ. ನಾಗರಿಕರು ಸರಿಯಾಗಿ ತ್ಯಾಜ್ಯ ಸಂಗ್ರಹಣೆಯ ತೆರಿಗೆಯನ್ನು ಕಟ್ಟುತ್ತಿಲ್ಲ,ಹಸಿಕಸ,ಒಣಕಸ ವಿಂಗಡಿಸಿ ಕೊಡುತ್ತಿಲ್ಲಎಂದು ಜನರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ ತನ್ನ ಹೆಸರು ಹಾಳಾಗದಂತೆ ನೋಡುತ್ತಿದೆ. ಅವರ ಪ್ರಕಾರ ಇಲ್ಲಿಯ ತನಕ ಒಟ್ಟಾದ ತ್ಯಾಜ್ಯ ಸಂಗ್ರಹಣೆಯ ತೆರಿಗೆ ಸುಮಾರು ನಾಲ್ಕು ಕೋಟಿ ಮಾತ್ರ. ಅದು ಯಾವುದಕ್ಕೂ ಸಾಕಾಗುವುದಿಲ್ಲ. ಹತ್ತು ಹತ್ತು ವರ್ಷದಿಂದ ಉದ್ದಿಮೆ ಪರವಾನಿಗೆ ಇಲ್ಲದೆ ಉದ್ದಿಮೆ ನಡೆಸುವ ಅಂಗಡಿಗಳಿದ್ದರು ಅರೋಗ್ಯ ಅಧಿಕಾರಿ ಸುಮ್ಮನಿದ್ದಾರೆ. ಅದಕ್ಕೆ ನಾನು ಅವರಿಗೆ ಹೇಳುವುದು, ನಿಮ್ಮ ಅಧಿಕಾರಿಗಳೇ ಸರಿಯಾಗಿ ತೆರಿಗೆ ಸಂಗ್ರಹ ಮಾಡುತ್ತಿಲ್ಲ. ಒಂದು ಮನೆಯವರು ವಿದ್ಯುತ್ ಬಿಲ್ ಕಟ್ಟಿಲ್ಲದಿದ್ದರೆ ಹದಿನೈದು ದಿನಗಳೊಳಗೆ ಮೆಸ್ಕಾಂ ಸಿಬ್ಬಂದಿಗಳು ಬಂದು ಫ್ಯೂಸ್ ತೆಗೆದು ಹೋಗುವುದಿಲ್ಲವೇ. ಅದಕ್ಕಾಗಿ ಯಾರು ಕೂಡ ಎಷ್ಟೆ ಕಷ್ಟವಾಗಲಿ ಕರೆಂಟ್ ಬಿಲ್ ಕಟ್ಟುವುದನ್ನು ತಪ್ಪಿಸುವುದಿಲ್ಲ.
ಇಲ್ಲಿ ಕೂಡ ಹಾಗೆ ಮಾಡಿ. ಅದು ಬಿಟ್ಟು ಈ ಆಂಟೋನಿಯವರು ಸರಿಯಿಲ್ಲದೆ ಇರುವುದಕ್ಕೆ ಹಿಂದಿನ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಹೇಳಿ ನುಣುಚಿಕೊಳ್ಳುವುದು ಬೇಡಾ. ಹಿಂದಿನ ಕಾಂಗ್ರೆಸ್ ಸರಕಾರ ಪಾಲಿಕೆಯಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವಾಗಲೇ ಈ ಆಂಟೋನಿಯವರಿಗೆ ಮಂಗಳೂರಿಗೆ ಪ್ರವೇಶ ಸಿಕ್ಕಿದ್ದು ಎಂದೇ ಇಟ್ಟುಕೊಳ್ಳೋಣ.ಆಗ ಆಂಟೋನಿಯವರು ಸರಿಯಿಲ್ಲ ಎಂದು ಗೊತ್ತಾದರೆ ಅದನ್ನು ವಿರೋಧಿಸಬಹುದಿತ್ತಲ್ಲ. ಆಗ ಪಾಲಿಕೆಯಲ್ಲಿ ಬಿಜೆಪಿ,ಕಾಂಗ್ರೆಸ್ಸಿವರು ಇದ್ದರು. ಎಲ್ಲರೂ ಒಟ್ಟಾಗಿ ಆಂಟೋನಿಗೆ ಪ್ರವೇಶ ಕೊಟ್ಟು, ಕಾಂಗ್ರೆಸ್ಸಿನ ಕೆಲ ಸದಸ್ಯರು ಆಂಟೋನಿಯವರ ಮೇಲೆ ವಿಪರೀತ “ಪ್ರೀತಿ” ತೋರಿಸಿ ಈಗ ಆ ಸಂಸ್ಥೆ ದಾರಿ ತಪ್ಪಿದ ಮಗನ ಸ್ಥಿತಿಗೆ ಬಂದಿರುವಾಗ ಅದರ ತಂದೆ ಬಿಜೆಪಿಯವರು ಎಂದು ಹೇಳುವುದು ಸರಿಯಿಲ್ಲ. ಇನ್ನೂ ತ್ಯಾಜ್ಯದ ಬಗ್ಗೆ ಬರೆಯುತ್ತಾ ಕೂರುವುದರಲ್ಲಿ ಅರ್ಥವಿಲ್ಲ. ಜನರ ತೆರಿಗೆಯ ಹಣ ಉಳಿಯಬೇಕಾದರೆ ಮನೆಯ ಯಜಮಾನ ಸ್ಟ್ರಾಂಗ್ ಇರಬೇಕು.ಮನೆ ಯಾಜಮನ ಅರೋಗ್ಯ ಅಧಿಕಾರಿ ಡಾ ಮಂಜಯ್ಯ ಶೆಟ್ಟಿ ಸರಿ ಇಲ್ಲದಿರುವುದರಿಂದ ಇವರ ಪೆಟ್ಟು ಪಾಪದವರಿಗೆ ಮಾತ್ರ. ಯಾಕೆಂದರೆ ಪತ್ತುಮುಡಿ ಸೌಧ ಎನ್ನುವ ಪ್ರಸಿದ್ಧ ಬಿಲ್ಡಿಂಗ್ ವೊಂದು ನಮ್ಮ ಮಂಗಳೂರಿನ ಬಳ್ಳಾಲ್ ಭಾಗ್ ಸಮೀಪವಿದೆ. ಅದರ ಕೆಳಗೆ ಜನತಾ ಡಿಲಕ್ಸ್ ಎನ್ನುವ ಹೆಸರು ವಾಸಿ ಹೋಟೆಲಿದೆ. ಅಲ್ಲಿ ನೀವು ಅನೇಕ ಸಲ ಹೋಗಿರಬಹುದು. ಅಲ್ಲಿ ನೀವು ತಿಂಡಿ ತಿನ್ನುತ್ತಾ ಕೂತಿರುವುದು ಕಟ್ಟಡದ Parking ಜಾಗದಲ್ಲಿ ಎಂದರೆ ನಿಮಗೆ ಶಾಕ್ ಆಗುತ್ತದಾ? Parking ಜಾಗದಲ್ಲಿ ಹೊಟೇಲು, ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ಮತ್ತು ಸುಮ್ಮನಾಗಿರುವ ಮಹಾನಗರ ಪಾಲಿಕೆ. ಈ ಮೂರು ಶಬ್ದದಲ್ಲೇ ಕಥೆಯ ಓನ್ ಲೈನ್ ಗೊತ್ತಾಗಿರಬೇಕಲ್ಲ. ಆದರೆ ಅದರ ಚಿತ್ರಕಥೆ ಮತ್ತು ಪಾತ್ರಧಾರಿಗಳು, ನಾಯಕ ನಟ ಎಲ್ಲಾ ಗೊತ್ತಾಗಬೇಕಲ್ಲ.
Leave A Reply