ತಂದೆಯ ಹೆಸರು ಗೊತ್ತಿಲ್ಲದೇ ಚುನಾವಣೆಗೆ ಹೇಗೆ ನಿಂತ್ರಿ ಸಿದ್ಧು, ಜಮೀರ್!!
Posted On January 12, 2020
- Advertisement -
ಇಷ್ಟು ವಿರೋಧ ಮಾಡುವುದು ಸಾಕಾಗುವುದಿಲ್ಲ ಎಂದು ಮುಂದಿನ ವಾರ ಅಡ್ಯಾರ್ ಬಳಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಘೋಷಣೆ ಮಾಡಿದೆ. ಇದು ಇನ್ನೊಂದು ಗಲಭೆಗೆ ಕಾರಣವಾದರೆ ಮಂಗಳೂರನ್ನು ರಕ್ಷಿಸುವವರ್ಯಾರು? ಬೇಕಾದರೆ ಸಿಎಎ ಬಗ್ಗೆ, ಎನ್ ಆರ್ ಸಿ ಬಗ್ಗೆ ಸೂಕ್ತ ಮಾಹಿತಿ ಇದ್ದವರನ್ನು ಕರೆದು ಜನಜಾಗೃತಿ ಮಾಡಿಸುವ ಕೆಲಸವನ್ನು ಅಡ್ಯಾರ್ ನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಮಾಡಲಿ. ಅಲ್ಲಿ ಆರುಂಧತಿ ರಾಯ್ ಅಂತವರು ಬಂದು ಮನೆಯ ವಿಳಾಸ, ತಂದೆಯ ಹೆಸರು ಏನೇನೋ ತಪ್ಪು ಹೇಳಿ ಎಂದು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರೆ ದೇಶ ಮತ್ತೊಂದು ಆಂತರಿಕ ಸಮರ ಎದುರಿಸಬೇಕಾಗುತ್ತದೆ. ಇತ್ತ ಸಿದ್ಧರಾಮಯ್ಯನವರು ತಮ್ಮ ಬಳಿ ತಂದೆ ಹೆಸರು ಕೇಳಿದರೆ ಗೊತ್ತಿಲ್ಲ ಎನ್ನುತ್ತೇನೆ ಎಂದು ಹೇಳಿ ಜನರಲ್ಲಿ ಉದ್ರೇಕಿಸುವ ಕೆಲಸ ಮಾಡುತ್ತಿದ್ದಾರೆ. ಅತ್ತ ಜಮೀರ್ ನನ್ನ ತಾಯಿಗೆ ನಾಲ್ಕು ಗಂಡಂದಿರು ತಲಾಕ್ ನೀಡಿದ್ದಾರೆ. ಆದ್ದರಿಂದ ನಾನು ಯಾರ ಮಗ ಎಂದು ಹೇಗೆ ಗೊತ್ತಾಗುವುದು ಎಂದಿದ್ದಾರೆ. ಹಾಗಾದರೆ ಇಲ್ಲಿ ಒಂದು ವಿಷಯ ಬರುತ್ತದೆ. ಅದೇನೆಂದರೆ ಚುನಾವಣೆಯ ಸಂದರ್ಭದಲ್ಲಿ ಸ್ಪರ್ಧಿಸುವಾಗ ಇವರು ತಮ್ಮ ತಂದೆಯ ಹೆಸರು ಹೇಳಲಿಲ್ಲವೇ. ಹಾಗಾದರೆ ಈಗ ಗೊತ್ತಿಲ್ಲ ಎನ್ನುವುದು ಯಾಕೆ?
ಇದರ ನಡುವೆ ಉರಿಯುವ ಬೆಂಕಿಗೆ ಸರಿಯಾಗಿ ತುಪ್ಪ ಸುರಿಯುವ ಕೆಲಸವನ್ನು ಕುಮಾರಸ್ವಾಮಿಯವರು ಮಾಡಿದ್ದಾರೆ. ಯಾವುದೋ ವಿಡಿಯೋ ತಂದು ತಾವೇನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಬಹುಶ: ದಕ್ಷಿಣ ಕನ್ನಡದಲ್ಲಿ ಅಕೌಂಟ್ ತೆರೆಯುವ ಮನಸ್ಸು ಇರಬಹುದು. ಆದರೆ ಕನಿಷ್ಟ ಗ್ರಾಮ ಪಂಚಾಯತ್ ನಲ್ಲಿಯಾದರೂ ಗೆಲ್ಲುವ ಪರಿಸ್ಥಿತಿಯನ್ನು ಜೆಡಿಎಸ್ ಕಳೆದು ಹಲವಾರು ವರ್ಷಗಳೇ ಆಗಿ ಹೋಗಿದೆ. ತಾವು ನಿರ್ಮಿಸಿದ ಮಗನ ಸಿನೆಮಾಗಳು ಫ್ಲಾಪ್ ಆಗುವಂತೆ ಈ ಸಿಡಿ ಕೂಡ ಫ್ಲಾಪ್ ಆಗಿದೆ!!
Leave A Reply