ಮೊಯ್ದೀನ್ ಬಾವರಿಗೆ ಹಿಂದೂ ಹೆಣ್ಣುಮಕ್ಕಳು ಬರಬೇಕಂತೆ, ಮುಸ್ಲಿಂ ಹೆಂಗಸರು ಬೇಡ್ವಂತೆ!!
ಇವತ್ತು ಬುಧವಾರ ಮಂಗಳೂರಿನ ಅಡ್ಯಾರ್ ನಲ್ಲಿ ಕನಿಷ್ಟ ಒಂದು ಲಕ್ಷ ಮುಸ್ಲಿಮರನ್ನು ಸೇರಿಸಿ ಬೃಹತ್ ಪ್ರತಿಭಟನೆ ಮಾಡುವ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ “ಕೈ” ಹಾಕಿದೆ. ಅದಕ್ಕೆ ಪೂರ್ಣವಾಗಿ ಕಾಂಗ್ರೆಸ್ ಕಡೆಯಿಂದ ಬೆಂಬಲ ಸಿಕ್ಕಿದೆ. ಇಲ್ಲಿ ಎರಡು ವಿಷಯಗಳಿವೆ. ಪ್ರತಿಭಟನಾ ಸಭೆಗೆ ಬೆಂಬಲ ಕೊಡುವ ಮೂಲಕ ಕಾಂಗ್ರೆಸ್ ತನ್ನ ಕೈ ಜಾರುತ್ತಿರುವ ಮುಸ್ಲಿಂ ವೋಟ್ ಬ್ಯಾಂಕನ್ನು ಮತ್ತೆ ಸುಭದ್ರಗೊಳಿಸುವ ಕಸನು ಕಾಣುತ್ತಿದೆ.
ಮತ್ತೊಂದೆಡೆ ಒಂದು ವೇಳೆ ಸಭೆಯಲ್ಲಿ ಸಭೆಯಲ್ಲಿ ಭಾಷಣಕಾರರ ಪ್ರಚೋದನೆ ಹೆಚ್ಚಾಗಿ ಏನಾದರೂ ಮುಂದಕ್ಕೆ ಹೆಚ್ಚು ಕಡಿಮೆ ಆದರೆ ನಾವು ಆಯೋಜಕರು ಅಲ್ಲ ಎಂದು ಹೇಳಿ ಮುಸ್ಲಿಂ ಸೆಂಟ್ರಲ್ ಕಮಿಟಿಯನ್ನು ನಡುನೀರಿನಲ್ಲಿ ಕೈ ಬಿಡುವ ಸಕತ್ ಪ್ಲಾನ್ ಕಾಂಗ್ರೆಸ್ಸಿನದ್ದು. ಇದರಿಂದ ಒಂದು ಸ್ಪಷ್ಟ. ಕಾಂಗ್ರೆಸ್ ಮುಸ್ಲಿಮರನ್ನು ಸಂಪೂರ್ಣವಾಗಿ ನಂಬುವುದಿಲ್ಲ ಆದರೆ ವೋಟ್ ಗಾಗಿ ಮಾತ್ರ ಬೇಕು ಎನ್ನುವುದನ್ನು ಸಾಕ್ಷಿ ಮೂಲಕ ಸಾಬೀತುಪಡಿಸಿದೆ. ಈ ಪ್ರತಿಭಟನಾ ಸಭೆಗೆ ಬರುವ ಮಾಧ್ಯಮದವರಿಗೆ ಪಾಸ್ ಕೊಡಲಾಗುತ್ತಿದ್ದು ಅದನ್ನು ಮಂಗಳೂರಿನಲ್ಲಿರುವ ಕಾಂಗ್ರೆಸ್ ಕಚೇರಿಗೆ ಬಂದು ಸ್ವೀಕರಿಸಬೇಕು ಎಂದು ವಾಟ್ಸಪ್ ಸಂದೇಶ ಕಾಂಗ್ರೆಸ್ ಕಚೇರಿಯಿಂದ ಹೋಗಿದೆ. ಕಾಂಗ್ರೆಸ್ ನವರು ಈಗಾಗಲೇ ತಮ್ಮ ಬೆಂಬಲದ ಘೋಷಣೆ ಮಾಡಿರುವುದಕ್ಕೆ ಸಾಕ್ಷಿಯಾಗಿ ಅವರ ಮಾಜಿ ಶಾಸಕ ಮೊಯ್ದೀನ್ ಬಾವ ಪತ್ರಿಕಾ ಹೇಳಿಕೆ ಕೊಟ್ಟಿರುವುದು ಮಾತ್ರವಲ್ಲ, ಈ ಸಭೆಗೆ ಮುಸ್ಲಿಂ ಮಹಿಳೆಯರಿಗೆ ಸ್ವಾಗತವಿಲ್ಲ ಎಂದು ಹೇಳಿದ್ದಾರೆ. ಇದನ್ನು ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಹೇಗೆ ನೋಡುತ್ತೆ ಎಂದೇ ಈಗಿರುವ ಪ್ರಶ್ನೆ. ಕಾಂಗ್ರೆಸ್ಸ್ ಹಾಗಾದರೆ ಮಹಿಳೆಯರಿಗೆ ಪ್ರಾತಿನಿಧ್ಯ ಕೊಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದೆಯಾ? ಸಿಎಎ ಬಗ್ಗೆ ಹೋರಾಟದಲ್ಲಿ ಮುಸ್ಲಿಂ ಮಹಿಳೆಯರು ಭಾಗವಹಿಸಬಾರದಾ? ಇಸ್ಲಾಂ ಮತ್ತು ಕಾಂಗ್ರೆಸ್ ಪಕ್ಷವನ್ನು ಒಂದೇ ತಕ್ಕಡಿಯಲ್ಲಿ ತೂಗುವುದಕ್ಕೆ ಕಾಂಗ್ರೆಸ್ ಒಪ್ಪಿಗೆ ಇದೆಯಾ? ಕಾಂಗ್ರೆಸ್ ತನ್ನನ್ನು ಮುಸ್ಲಿಮರ ಪಕ್ಷ ಎಂದು ಬ್ರಾಂಡ್ ಮಾಡಿಕೊಳ್ಳಲು ತಯಾರಾಗಿದೆಯಾ? ಈ ಎಲ್ಲ ಪ್ರಶ್ನೆಗಳು ಉದ್ಭವವಾಗುತ್ತದೆ.
ಇನ್ನು ಕಾಂಗ್ರೆಸ್ ಮಾಜಿ ಶಾಸಕ ಮೊಯ್ದೀನ್ ಬಾವ ಒಂದು ಹೆಜ್ಜೆ ಮುಂದೆ ಹೋಗಿ ಬೇರೆ ಧರ್ಮದ ಮಹಿಳೆಯರು ಈ ಸಭೆಯಲ್ಲಿ ಬರಬಹುದು ಎಂದಿದ್ದಾರೆ. ಹಾಗಾದರೆ ಈ ಸಭೆಯ ಮುಖ್ಯದ್ವಾರದಲ್ಲಿ ನಿಲ್ಲುವ ಮೊಯ್ದೀನ್ ಬಾವನ ಜನರು ಅಲ್ಲಿ ಬರುವ ಮಹಿಳೆಯರನ್ನು ಸ್ಕಾನ್ ಮಾಡಿ ಹಿಂದು, ಮುಸ್ಲಿಂ, ಕ್ರೈಸ್ತ ಎಂದು ಪರೀಕ್ಷಿಸಿ ಬಿಡುತ್ತಾರಾ? ಒಂದು ವೇಳೆ ಬುರ್ಖಾ ಹಾಕಿದ್ದರೆ ಮುಸ್ಲಿಂ ಮಹಿಳೆ ಎಂದು ಮೊಯ್ದೀನ್ ಬಾವ ಹೇಳುವುದಾದರೆ ಕಳೆದ ಬಾರಿ ಬುರ್ಖಾ ಹಾಕಿ ದೆಹಲಿಯ ಒಳಗೆ ನುಗ್ಗಿದ್ದ ಮುಸ್ಲಿಂ ಯುವಕರು ಬುರ್ಖಾವನ್ನು ಒಂದು ಸಾಧನವನ್ನಾಗಿ ಬಳಸಿ ದೇಶದ್ರೋಹ ಕೆಲಸ ಮಾಡುತ್ತಿದ್ದದ್ದನ್ನು ದೇಶವೇ ನೋಡಿದೆ. ಬೇರೆ ಮಹಿಳೆಯರಿಗೆ ಸ್ವಾಗತ ಎಂದು ಹೇಳುವ ಮೊಯ್ದೀನ್ ಬಾವ ಮಹಿಳೆಯರಲ್ಲಿ ತಾರತಮ್ಯ ಮಾಡಿದ್ದಾರೆ.
ಹಾಗಾದರೆ ಮುಂದಿನ ಬಾರಿ ಇವರು ಚುನಾವಣೆಗೆ ನಿಂತರೆ ಹಿಂದೂ, ಕ್ರೈಸ್ತ್ರ ಮಹಿಳಾ ಮತದಾರರ ಮತ ಬೇಡವಾ? ಅಲ್ಲಿ ಗಲಾಟೆ ನಡೆದರೆ ಹಿಂದೂ ಮಹಿಳೆಯರೇ ನಡುವೆ ಸಿಕ್ಕಿ ಅಪ್ಪಚ್ಚಿ ಆಗಲಿ ಎಂದು ಬಾವ ಬಯಸುತ್ತಿದ್ದಾರಾ? ಒಟ್ಟಿನಲ್ಲಿ ಅಲ್ಪಸಂಖ್ಯಾತ ಮತಗಳನ್ನು ಕ್ರೋಢಿಕರಿಸಿ, ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸಕ್ಕೆ ಸೆಂಟ್ರಲ್ ಕಮಿಟಿಯ ಹಿಂದೆ ಮೊಯ್ದೀನ್ ಬಾವ, ಯುಟಿ ಖಾದರ್ ನಿಂತಿದ್ದಾರೆ. ಈ ಸಭೆಯಲ್ಲಿ ಸಿಎಎ, ಎನ್ ಆರ್ ಸಿ ಬಗ್ಗೆ ಹೇಳುವುದಕ್ಕಿಂತ ಹೆಚ್ಚಾಗಿ ಮುಸ್ಲಿಮರನ್ನು ಇನ್ನಷ್ಟು ಭಯಭೀತರನ್ನಾಗಿ ಮಾಡುವ ಕೆಲಸ ನಡೆಯಲಿದೆ. ಮುಸ್ಲಿಮರು ಹೆಚ್ಚು ಆತಂಕಿತರಾಗಬೇಕು ಎಂದು ಹೆದರಿಸುವ ಕೆಲಸ ಮಾಡಿ ದೇಶದ ಒಳಗೆ ಆಂತರಿಕ ಕ್ಷೊಭೆಗೆ ಈ ಸಭೆ ಕಾರಣವಾಗಲಿದೆ. ಜನರು ಎಷ್ಟೇ ಎಲ್ಲಿಂದಲೂ ಬಂದರೂ ಅವರಿಗೆ ಪೊಲೀಸರು ಸುರಕ್ಷೆಯ ಕಾರಣದಿಂದ ಅಡ್ಡಗಟ್ಟಬಾರದು. ಒಂದು ವೇಳೆ ಅಡ್ಡಗಟ್ಟಿದರೆ ಅಲ್ಲಿ ಗಲಾಟೆ ಆಗಬಹುದು ಎನ್ನುವ ಅರ್ಥದ ಮಾತುಗಳನ್ನು ಬಾವ ಹೇಳಿದ್ದಾರೆ. ಡೌಟೇ ಇಲ್ಲ, ಡಿಸೆಂಬರ್ 19 ರಂದು ಬಂದರು ಪ್ರದೇಶದಲ್ಲಿ ನಡೆದ ಘಟನೆಯನ್ನು ಪ್ರತಿಭಟನಾಕಾರರು ಮತ್ತೆ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಬಹುದು ಎಂದು ಸೂಕ್ಷ್ಮ ಎಚ್ಚರಿಕೆ ಕೂಡ ನೀಡಲಾಗಿದೆ. ಹಾಗಾದರೆ ಅಡ್ಯಾರ್ ನ ಆಸುಪಾಸಿನಲ್ಲಿ ಇರುವ ಕಲ್ಲುಗಳಿಗೆ ಇವತ್ತು ಹಾರಾಡುವ ಅವಕಾಶ ಪ್ರತಿಭಟನಾಕಾರರು ಕೊಡುತ್ತಾರಾ ಎಂದು ಈಗ ಉಳಿದಿರುವ ಪ್ರಶ್ನೆ!
Leave A Reply