ಆದಿತ್ಯನಿಗೆ ಬಾಂಬ್ ಇಡಲು ಮೈಂಡ್ ವಾಶ್ ಆಗಿರಲಿಲ್ಲ, ಆದ್ದರಿಂದ…!
ಕೊನೆಗೂ ಆದಿತ್ಯ ರಾವ್ ಎನ್ನುವ ವ್ಯಕ್ತಿ ಬೆಂಗಳೂರಿನ ಪೊಲೀಸರಿಗೆ ಶರಣಾಗುವುದರೊಂದಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸಿಕ್ಕಿದ ಪ್ರಕರಣ ಸುಖಾಂತ್ಯ ಕಂಡಿದೆ. ಈಗ ಎದ್ದಿರುವ ಪ್ರಶ್ನೆ ಏನೆಂದರೆ ಅವನು ಹಿಂದೂ ಭಯೋತ್ಪಾದಕ ಎಂದು ಕೆಲವರು ಹೊಸ ವರಸೆಯೊಂದನ್ನು ಸೃಷ್ಟಿ ಮಾಡುತ್ತಿದ್ದಾರೆ. ಇನ್ನು ಕೆಲವರು ಬಿಜೆಪಿಯ ಸಾಮಾಜಿಕ ಜಾಲತಾಣದ ಯುವಕ ಸಂದೀಪ್ ಲೋಬೋ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ಸಂದೀಪ್ ಇರುವ ಫೋಟೋ ವೈರಲ್ ಮಾಡಿ ಸಂಘಕ್ಕೂ ಆದಿತ್ಯನಿಗೂ ಲಿಂಕ್ ಕಲ್ಪಿಸುತ್ತಿದ್ದಾರೆ. ಸಂದೀಪ್ ಲೋಬೋ ಹಾಗೂ ಆದಿತ್ಯ ಒಬ್ಬರೇ ಅಲ್ಲ.
ಇಲ್ಲಿ ಒಂದು ವಿಚಾರ ಸ್ಪಷ್ಟಪಡಿಸಿಕೊಳ್ಳೋಣ. ಅವನು ಹಿಂದೂ ಭಯೋತ್ಪಾದಕ ಎನ್ನುವವರಿಗೆ ನನ್ನ ಪ್ರಶ್ನೆ ಹೀಗಿದೆ. ಏನೆಂದರೆ ಆದಿತ್ಯನಿಗೆ ಬಾಂಬ್ ಇಡಲು ಎಲ್ಲಿಯೂ ಯಾವ ದೇವಸ್ಥಾನದಲ್ಲಿಯೂ ಮೈಂಡ್ ವಾಶ್ ಮಾಡಿಲ್ಲ. ಅವನು ಬಾಂಬ್ ಇಡಲು ಅವನಿಗೆ ಅವನ ಧರ್ಮದ ಕೆಲವು ಧರ್ಮಭೋದಕರು ಎಲ್ಲಿಯೂ ಭೋದನೆ ಮಾಡಿಲ್ಲ. ನೀನು ಬಾಂಬ್ ಇಟ್ಟರೆ ನಿನಗೆ ಪರಲೋಕದಲ್ಲಿ 72 ಸಾವಿರ ಅಪ್ಸರೆಯರು ಸಿಗುತ್ತಾರೆ ಎಂದು ಆಸೆ ಹುಟ್ಟಿಸಲಿಲ್ಲ. ನೀನು ಬಾಂಬ್ ಇಡು, ನಿನಗೆ ವಿದೇಶದಿಂದ ಹಣ ಕೊಡಿಸುವ ಆಸೆ ಹುಟ್ಟಿಸಲಿಲ್ಲ. ನೀನು ಬಾಂಬ್ ಇಟ್ಟು ಸತ್ತಾಗ ನಿನ್ನ ಕುಟುಂಬದವರಿಗೆ ಹಣ ಕೊಡುತ್ತೇವೆ ಎಂದು ಯಾರೂ ಅವನಿಗೆ ಹೇಳಿಲ್ಲ. ಅವನು ವಾಸವಿದ್ದ ಕೋಣೆಗೆ ಹೋದರೆ ಅಲ್ಲಿ ಯಾವುದೇ ಧರ್ಮದ ವಿರುದ್ಧದ ಯಾವುದೇ ಪುಸ್ತಕ, ಪೋಸ್ಟರ್, ಸಿಡಿ ಸಿಗುವುದಿಲ್ಲ. ಅವನು ಪಾಕಿಸ್ತಾನದಲ್ಲಿರುವ ಯಾರೊಂದಿಗೂ ಫೋನಿನಲ್ಲಿ ಮಾತನಾಡಿಲ್ಲ. ಅವನು ಮುಸ್ಲಿಮರ ವಿರುದ್ಧ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಕೊನೆಯದಾಗಿ ಅವನಿಗೂ ಕೇಸರಿ ಸಂಘಟನೆಗಳಿಗೂ ದೂರದೂರಕ್ಕೂ ಯಾವುದೇ ಸಂಬಂಧವಿಲ್ಲ. ಇನ್ನು ಅಕ್ಷರಶ: ಅವನಿಗೆ ಬಾಂಬ್ ಇಡಲು ಹೋಗುವಾಗ ತನ್ನ ಧರ್ಮ ಬಿಟ್ಟು ಉಳಿದವರು ಕಾಫೀರರು ಎಂದು ಪಠಿಸುವ ಅಗತ್ಯವೇ ಬಂದಿರಲಿಲ್ಲ. ಇಷ್ಟೆಲ್ಲ ಆದ ಮೇಲೆ ಆದಿತ್ಯ ರಾವ್ ಎನ್ನುವ ವ್ಯಕ್ತಿಯನ್ನು ಹಿಂದೂ ಭಯೋತ್ಪಾದಕ ಎನ್ನುವುದು ಯಾವ ಕಾರಣಕ್ಕೆ.
ಆತ ಎಂಬಿಎ ಪದವಿಧರ. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಎರಡು ವರ್ಷದಿಂದ ಮನೆಯಿಂದ ಹೊರಗೆ ಇದ್ದ. ಮೆಕಾನಿಕಲ್ ಇಂಜಿನಿಯರ್ ಕೂಡ ಕಲಿತಿದ್ದಾನೆ. ಎಲ್ಲಕ್ಕಿಂತ ಹೆಚ್ಚಾಗಿ ಅವನಿಗೆ ಧರ್ಮದ ಅಮಲು ತಲೆಗೆ ಹೋಗಿಲ್ಲ. ಅವನು ಬಾಂಬ್ ಇಡುವಾಗ ಅವನ ಹಿಂದೆ ಅವನಿಗೆ ಧರ್ಮದ ನೆರಳು ಇರಲೇ ಇಲ್ಲ. ಆದ್ದರಿಂದ ಅವನನ್ನು ಬೇಕಾದರೆ ಉಗ್ರ ಎಂದು ಕರೆಯಲಿ. ಆದರೆ ಹಿಂದೂ ಉಗ್ರ ಎನ್ನುವ ಹಣೆಪಟ್ಟಿ ಅವನಿಗೆ ಅನ್ವಯಿಸಲ್ಲ. ಒಂದು ವೇಳೆ ತನ್ನ ಧರ್ಮ ವಿಸ್ತರಿಸಲು ಬೇರೆ ಧರ್ಮದ ಅವನತಿಗೆ ಅವನು ಮೈಂಡ್ ವಾಶ್ ಒಳಗಾಗಿ ಹೀಗೆ ಮಾಡಿದ್ದರೆ ಅವನನ್ನು ಏನೂ ಬೇಕಾದರೂ ಹೇಳಬಹುದಿತ್ತು. ಆದರೂ ಈಗ ನಾನು ಹೇಳುವುದೇನೆಂದರೆ ಅವನು ತಪ್ಪು ಮಾಡಿರುವುದರಿಂದ ಅವನನ್ನು ಗಲ್ಲಿಗೇರಿಸಿದರೂ ಯಾವ ಹಿಂದೂ ಕೂಡ ಬೇಸರ ಮಾಡಲ್ಲ. ಅವನು ಈಗ ಮಾಡಿರುವುದು ಅವನ ಹುಚ್ಚಾಟಿಕೆ ಹೊರತು ಧರ್ಮದ ಅಮಲು ಏರಿ ಅಲ್ಲ. ಅವನು ಮಾಡಿರುವ ಕೃತ್ಯದಿಂದ ಅವನ ಕುಟುಂಬದವರನ್ನು ಕೂಡ ಸೇರಿಸಿ ಯಾರೂ ತಲೆತಗ್ಗಿಸಬೇಕಾಗಿಲ್ಲ.
ಯಾಕೆಂದರೆ ಅವನು ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕೂ ಮನೆಗೆ ಬಂದಿರಲಿಲ್ಲ ಎಂದು ಅವನ ಸಹೋದರ ಹೇಳಿದ್ದಾರೆ. ತಲೆಯನ್ನು ಯಾವಾಗಲೂ ಬೋಳಿಸಿದಂತೆ ಇರುತ್ತಿದ್ದ ಆದಿತ್ಯ ಯಾವ ಮಟ್ಟಿಗಿನ ಮೆಂಟಲ್ ಎಂದರೆ ಇಲ್ಲಿ ಬಾಂಬ್ ಇಟ್ಟು ನಂತರ ಇಲ್ಲಿಂದ ಲಾರಿ ಹತ್ತಿ ಬೆಂಗಳೂರು ತನಕ ಪ್ರಯಾಣಿಸಿ ನಂತರ ಅಲ್ಲಿ ಹಲಸೂರು ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ. ಅವನು ಹಿಂದೂ ಧರ್ಮದಲ್ಲಿ ಹುಟ್ಟಿದ್ದು ಆಕಸ್ಮಿಕ. ಬಾಂಬ್ ಇಟ್ಟಿದ್ದು ನಿಶ್ಚಿತ. ಆದರೆ ಅವನಿಗೆ ಬಾಂಬ್ ಇಡಲು ಮನಸ್ಥಿತಿ ಬರುವಂತಹ ಸಂದರ್ಭ ಏರ್ಪಡುವುದಕ್ಕೂ ಆತನ ಧರ್ಮಕ್ಕೂ ಸಂಬಂಧವೇ ಇಲ್ಲ. ಈಗಾಗಲೇ ಡಿಸಿಪಿ ವಿನಯ್ ಗಾಂವ್ಕರ್ ಹಾಗೂ ಎಸಿಪಿ ಬೆಳಿಯಪ್ಪ ಅವನನ್ನು ಮಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ. ಹಿಂದೆ ಹುಸಿ ಬಾಂಬ್ ಕರೆ ಮಾಡಿ ಜೈಲಿನಲ್ಲಿದ್ದ ಅನುಭವ ಆದಿತ್ಯನಿಗೆ ಇದೆ. ಈಗ ಮತ್ತೆ ಇರಲಿದ್ದಾನೆ. ಪದೇ ಪದೇ ಅವನು ಹೀಗೆ ಮಾಡುತ್ತಿರುವುದರಿಂದ ಒಂದಷ್ಟು ಸ್ಪಷ್ಟ, ಅವನು ಪಕ್ಕಾ ಮೆಂಟಲ್!
Leave A Reply