ಮಂಗಳೂರಿನ ವಾರ್ತಾ ಇಲಾಖೆಯಲ್ಲೊಬ್ಬ ದೇಶದ್ರೋಹಿ!
ಒಂದು ಸರಕಾರಿ ಕಚೇರಿ ಎಂದ ಮೇಲೆ ಅಲ್ಲಿ ಕೆಲಸ ಮಾಡುವವರು ಸರಕಾರಿ ಉದ್ಯೋಗಿಗಳಾಗಿರುತ್ತಾರೆ. ಅವರಿಗೆ ಸರಕಾರ ಸಂಬಳ ಕೊಡುತ್ತದೆ. ಅವರು ಸರಕಾರಕ್ಕೆ ಬದ್ಧರಾಗಿ ಇರಬೇಕು. ಒಂದು ವೇಳೆ ಆಗುವುದಿಲ್ಲವಾದರೆ ಜಿಲ್ಲಾಧಿಕಾರಿಯಾಗಿದ್ದ ಸೆಂಥಿಲ್ ಅವರಂತೆ ರಾಜೀನಾಮೆ ಕೊಟ್ಟು ಹೋಗಿಬಿಡಬೇಕು. ಅದು ಬಿಟ್ಟು ಸರಕಾರಿ ವ್ಯವಸ್ಥೆಯಲ್ಲಿಯೇ ಇದ್ದು ಉಣ್ಷುವ ತಟ್ಟೆಯಲ್ಲಿಯೇ ಇನ್ನೊಂದು ಮಾಡಬಾರದು. ಅದನ್ನು ಮಾಡುತ್ತಿರುವ ಮಹಾನುಭಾವನ ಹೆಸರು ಖಾದರ್ ಶಾ. ಈ ಮನುಷ್ಯ ದಕ್ಷಿಣ ಕನ್ನಡ ಜಿಲ್ಲೆಯ ವಾರ್ತಾಧಿಕಾರಿ.
ಅಲ್ಲಿ ಇದ್ದೇ ಎಷ್ಟು ಮೇಯುವ ಕೆಲಸ ಮಾಡಿದ್ದಾರೆ, ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವುದನ್ನು ಇವತ್ತು ನಾನು ಬರೆಯುತ್ತಿಲ್ಲ. ನಾನು ಇವತ್ತು ಹೇಳುತ್ತಿರುವುದು ಭ್ರಷ್ಟಾಚಾರಕ್ಕಿಂತ ದೊಡ್ಡದಾಗಿರುವ ಅಪರಾಧ ದೇಶದ್ರೋಹದ ಕಾರ್ಯ. ಖಾದರ್ ಶಾ ಅವರು ವಾರ್ತಾ ಇಲಾಖೆಯ ವತಿಯಿಂದ ಪತ್ರಕರ್ತರಿಗೆ ಸರಕಾರದ ಕಾರ್ಯಕ್ರಮಗಳನ್ನು ತಿಳಿಸುವ ವಾಟ್ಸಪ್ ಗ್ರೂಪ್ ನ ಅಡ್ಮಿನ್. ಆ ಗ್ರೂಪಿಗೆ ಅಡ್ಮಿನ್ ಮಾತ್ರ ಯಾವುದೇ ಸಂದೇಶಗಳನ್ನು ಕಳುಹಿಸಿಕೊಡಲು ಸಾಧ್ಯವಿದೆ. ಈ ಖಾದರ್ ಶಾ ವಾರ್ತಾ ಇಲಾಖೆಯ ವಾಟ್ಸಪ್ ಗ್ರೂಪಿನಲ್ಲಿ ಏನು ಮಾಡುತ್ತಾರೆ ಎಂದರೆ ತಮಗೆ ಪ್ರಿಯವಾದ ಕಾರ್ಯಕ್ರಮಗಳನ್ನು ಪ್ರಚಾರಪಡಿಸುತ್ತಾರೆ. ಖಾದರ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಗೆ ವೈಯಕ್ತಿಕವಾಗಿ ವಿರೋಧ ಇರಬಹುದು. ಅವರು ವಿದ್ಯಾವಂತರಾಗಿರುವುದರಿಂದ ( ಹಾಗೆಂದು ಅಂದುಕೊಂಡು ಕಾಂಗ್ರೆಸ್ ಕೃಪಾಕಟಾಕ್ಷದಿಂದ ಕೆಲಸ ಸಿಕ್ಕಿರಬಹುದು) ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಂಡು ಅದರ ಬಗ್ಗೆ ವೈಯಕ್ತಿಕವಾಗಿ ಅದರ ಪ್ರಯೋಜನವನ್ನು ತಮ್ಮ ಸಮುದಾಯದವರಿಗೆ ಹೇಳಿಕೊಡಬಹುದಿತ್ತು. ಒಂದು ವೇಳೆ ಅಷ್ಟು ದೊಡ್ಡ ಮನಸ್ಸು ಖಾದರ್ ಶಾ ಅವರಿಗೆ ಇಲ್ಲದಿದ್ದರೆ ಕನಿಷ್ಟ ಸುಮ್ಮನೆ ಕುಳಿತುಕೊಳ್ಳಬೇಕು. ಅದರೆ ಅದು ಬಿಟ್ಟು ತಮ್ಮನ್ನು ನಂಬಿ ಒಂದು ವಾಟ್ಸಪ್ ಗ್ರೂಪ್ ಅಡ್ಮಿನ್ ಮಾಡಿದರೆ ಅದರಲ್ಲಿ ಇವರು ಸಿಎಎ ವಿರುದ್ಧದ ಕಾರ್ಯಕ್ರಮಗಳಿಗೆ ಪ್ರಚಾರ ಕೊಡುತ್ತಿದ್ದಾರೆ.
ವಾರ್ತಾಧಿಕಾರಿಯೊಬ್ಬರ ಕರ್ತವ್ಯ ಏನು ಎನ್ನುವುದನ್ನು ಮೊದಲು ವಿವರಿಸುತ್ತೇನೆ. ಉದಾಹರಣೆಗೆ ಒಬ್ಬ ಸಚಿವರು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ಕೊಟ್ಟು ಇಲ್ಲಿ ಪ್ರಗತಿ ಪರಿಶೀಲನೆ ಮಾಡಲು ಬರುತ್ತಿದ್ದಾರೆ ಎಂದು ಅಂದುಕೊಳ್ಳೋಣ. ಆಗ ಮುಂಚಿತವಾಗಿ ಡಿಸಿ ಕಚೇರಿಗೆ ಮಾಹಿತಿ ಬಂದ ಕೂಡಲೇ ಅದರಲ್ಲಿ ಸರಕಾರಿ ಕಾರ್ಯಕ್ರಮಗಳನ್ನು ಆಯ್ದು ಅದನ್ನು ಪತ್ರಕರ್ತರಿಗೆ ತಿಳಿಸಿಕೊಡಬೇಕು. ಅದಕ್ಕಾಗಿ ಈಗಿನ ದಿನಗಳಲ್ಲಿ ವಾಟ್ಸಪ್ ಸುಲಭದ ವಿಧಾನ ಇರುವುದರಿಂದ ಅದರಲ್ಲಿ ಮಾಹಿತಿ ಹಾಕಿದರೆ ಪತ್ರಕರ್ತರು ಅದನ್ನು ಗಮನಿಸುತ್ತಾರೆ ಎನ್ನುವ ಕಾರಣಕ್ಕೆ ವಾಟ್ಸಪ್ ಗ್ರೂಪ್ ರಚಿಸಲಾಗುತ್ತದೆ. ಆದರೆ ಅದನ್ನು ಮಿಸ್ ಯೂಸ್ ಮಾಡುವುದು ಕರ್ತವ್ಯ ಲೋಪ ಆಗುತ್ತದೆ. ಆದರೆ ಖಾದರ್ ಏನು ಮಾಡುತ್ತಿದ್ದಾರೆ ಎಂದರೆ ಮುಸ್ಲಿಂ ಸೆಂಟ್ರಲ್ ಕಮಿಟಿಯವರು ಇತ್ತೀಚೆಗೆ ಸಿಎಎ ವಿರುದ್ಧ ಮಾಡಿದ ಪ್ರತಿಭಟನೆಯ ಬಗ್ಗೆ ಮಾಹಿತಿಯನ್ನು ವಾರ್ತಾ ಇಲಾಖೆಯ ಗ್ರೂಪಿನಲ್ಲಿ ಹಾಕಿದ್ದಾರೆ. ಇನ್ನು ಮಾಜಿ ಶಾಸಕ ಮೊಯ್ದೀನ್ ಬಾವ ಅವರು ಸಿಎಎ ವಿರುದ್ಧ ಮಾಡುವ ಸುದ್ದಿಗೋಷ್ಟಿಯ ಮಾಹಿತಿಯನ್ನು ಕೂಡ ಹಾಕುತ್ತಾರೆ. ಒಂದು ವೇಳೆ ಮೊಯ್ದೀನ್ ಬಾವ ಇವರಿಗೆ ಖಾಸಾ ಸಂಬಂಧಿಯಾಗಿದ್ದರೂ ಅವರ ಕಾರ್ಯಕ್ರಮದ ಬಗ್ಗೆ ಸರಕಾರಿ ಸೇವೆಯಲ್ಲಿರುವ ವ್ಯಕ್ತಿಯೊಬ್ಬ ತನ್ನ ಸರಕಾರದ ಕಾರ್ಯಕ್ರಮಕ್ಕಾಗಿ ಇರುವ ಗ್ರೂಪನ್ನು ದುರುಪಯೋಗಪಡಿಸುವಂತಿಲ್ಲ. ಇನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯಲ್ಲಿಯೇ ಖಾದರ್ ಶಾ ಸದಸ್ಯರಾಗಿದ್ದರೂ ಸರಕಾರಿ ಕಾರ್ಯಕ್ಕಾಗಿ ಇರುವ ವಾಟ್ಸಪ್ ಗ್ರೂಪ್ ಬಳಸುವಂತಿಲ್ಲ. ಆದರೆ ಕಾಂಗ್ರೆಸ್ ಸರಕಾರವೇ ಇದ್ದ ಕಾರಣ ಖಾದರ್ ಶಾ ಅವರಿಗೆ ತಮ್ಮ ವೈಯಕ್ತಿಕ ಪ್ರೀತಿಯನ್ನು ತೋರಿಸಿದರೆ ಲಾಭವೇ ಆಗುತ್ತಿತ್ತು. ಶಹಭಾಷ್ ಗಿರಿ ಸಿಗುತ್ತಿತ್ತೇನೊ. ಇಲ್ಲಿ ಹಾಗೆ ನಡೆಯಲ್ಲ ಎನ್ನುವುದನ್ನು ಖಾದರ್ ಶಾ ಅರ್ಥ ಮಾಡಿಕೊಳ್ಳಬೇಕು. ಹೀಗೆ ತಮ್ಮ ಕೈ ಕೆಳಗಿನ ಅಧಿಕಾರಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಸರಕಾರಕ್ಕೆ ಪತ್ರ ಬರೆಯಬೇಕು. ಜಿಲ್ಲೆಯ ಶಾಸಕರು ಈ ಬಗ್ಗೆ ವಾರ್ತಾ ಸಚಿವರ ಗಮನಕ್ಕೆ ಈ ಪ್ರಕರಣ ತರಬೇಕು. ಆಗುತ್ತಾ?
Leave A Reply