• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಯುವಕ, ಯುವತಿಯರೇ ONYX ಒಳಗೆ ಕಾಲಿಡುವಾಗ ಎಚ್ಚರ.!

Tulunadu News Posted On January 31, 2020
0


0
Shares
  • Share On Facebook
  • Tweet It

ಮಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಮಧ್ಯರಾತ್ರಿ ಹೆಣ್ಣೊಬ್ಬಳು ನಡೆದುಕೊಂಡು ಹೋದರೆ ಗಾಂಧೀಜಿ ಕಂಡ ಕನಸು ನನಸಾಯಿತು ಎಂದು ಅಂದುಕೊಳ್ಳಬೇಡಿ. ಯಾಕೆಂದರೆ ಆ ಹೆಣ್ಣು ತೂರಾಡುತ್ತಾ ಹೋಗುತ್ತಿದ್ದಾಳಾ ಎಂದು ಮೊದಲು ಪರೀಕ್ಷಿಸಿ. ಅವಳು ಕುಡಿದ ನಶೆಯಲ್ಲಿ ಅಲ್ಲಿ ಎಲ್ಲಿಯಾದರೂ ನಿಂತು ವಾಂತಿ ಮಾಡುತ್ತಾ ಇದ್ದರೆ ಡೌಟೇ ಬೇಡಾ. ಆಕೆ ONYX ನಿಂದ ಅರ್ಧ ರಾತ್ರಿಯಲ್ಲಿ ಹೊರಗೆ ಬಂದಿದ್ದಾಳೆ ಎಂದೇ ಅರ್ಥ.

ONYX ಎಂಬ ಮಾನಿನಿಯರ ಮದಿರೆಯ ಲೋಕದಲ್ಲೊಂದು ಸುತ್ತು!

ONYX ಶುಕ್ರವಾರ, ಶನಿವಾರ, ಭಾನುವಾರ ಸೂರ್ಯ ಮುಳುಗುತ್ತಿದ್ದಂತೆ ಎದ್ದೇಳುತ್ತದೆ. ಸಭ್ಯ ಹೆಣ್ಣು ಮಕ್ಕಳು ಮನೆಯ ಒಳಗೆ ಹಾಕಲು ನಾಚಿಕೆಪಡುವ ಬಟ್ಟೆಗಳನ್ನು ಧರಿಸಿ ಯುವತಿಯರು ONYX ಮೆಟ್ಟಿಲು ಹತ್ತುತ್ತಾರೆ. ಒಳಗೆ ಮಾದಕ ದ್ರವ್ಯ ತೆಗೆದುಕೊಳ್ಳುವ ಇದೇ ಯುವತಿಯರು ಒಳಗೆ ಹೋಗುವಾಗ ಹಾಕಿದ ಬಟ್ಟೆ ಹೊರಗೆ ಬರುವಾಗ ಅಸ್ತವ್ಯಸ್ತ ಆಗದಿದ್ದರೆ ಅದೇ ಅವರ ಪುಣ್ಯ. ಅಷ್ಟಕ್ಕೂ ಸಮಯದ ಪರಿಧಿಯೇ ಇಲ್ಲದೆ ಒಪನ್ ಇರುವ ONYX ಒಳಗೆ ಇದ್ದರೆ ಹೊರಗೆ ಬಾಂಬ್ ಬಿದ್ದರೂ ಗೊತ್ತಾಗದಷ್ಟು ಯುವಕ, ಯುವತಿಯರು ಯಾವುದೋ ನಶೆಯಲ್ಲಿ ಮುಳುಗಿರುತ್ತಾರೆ.

ಇಷ್ಟೆಲ್ಲಾ ಯುವಕ, ಯುವತಿಯರಿಗೆ ಕಿಕ್ ಏರಿಸುವ ONYX ಇರುವ ಕಾಯರ್ ಮಂಜ್ ಎನ್ನುವ ಹೆಸರಿನ ಕಟ್ಟಡದ ಕೊನೆಯ floor ಗೆ ಪಾಲಿಕೆಯಿಂದ ಅನುಮತಿ ಇಲ್ಲ. ಆದರೂ ಪಾಲಿಕೆ ಕಟ್ಟಡದಿಂದ ಜೋರಾಗಿ ಕರೆದರೆ ಕೇಳಿಸುವಷ್ಟು ಹತ್ತಿರ ಇರುವ ONYX ವಿರುದ್ಧ ಹತ್ತಿರದ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುವ ನಾಗರಿಕರು ದೂರನ್ನು ನೀಡಿದರೂ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ನೀವು ರಾತ್ರಿ 9 ಗಂಟೆಯ ನಂತರ ಅತ್ತ ಕಡೆ ಹೋದರೆ ಅಕ್ಕಪಕ್ಕದ ಫ್ಲಾಟ್ ಗಳಲ್ಲಿ ವಾಸಿಸುವಂತಹ ಜನರ ಕಿವಿಗೆ ಬಡಿಯುವಷ್ಟು ಮ್ಯೂಸಿಕ್ ಬಾರಿಸಲಾಗುತ್ತಿರುತ್ತದೆ. ಒಟ್ಟಿನಲ್ಲಿ ಪೊಲೀಸರನ್ನು, ಪಾಲಿಕೆ ಅಧಿಕಾರಿಗಳನ್ನು ಚೆನ್ನಾಗಿ ಇಟ್ಟುಕೊಂಡು ಯುವಜನಾಂಗವನ್ನು ಹಾಳು ಮಾಡುವ ONYX ವಿರುದ್ಧ ಕ್ರಮ ತೆಗೆದುಕೊಳ್ಳುವವರು ಯಾರೂ ಇಲ್ವಾ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

ONYX ಎಂಜಿಲು ನೆಕ್ಕುವವರು ಯಾರು?

ಮಂಗಳೂರಿನ ಮುಖ್ಯ ರಸ್ತೆಯಲ್ಲಿರುವ ಈ ಪಬ್ ಗೆ ಹೇಗೆ ಅನುಮತಿ ಸಿಕ್ಕಿತು ಎನ್ನುವುದೇ ಸೋಜಿಗ. ಯಾಕೆಂದರೆ ಒಂದು ಪಬ್ ಅಷ್ಟು ಎತ್ತರದಲ್ಲಿ ಇರುವುದೇ ಡೇಂಜರ್. ಯಾವಾಗ ನಶೆ ಏರಿದ ಯುವಕರು, ಯುವತಿಯರು ಹೆಚ್ಚು ಕಡಿಮೆ ಮಾಡಿಕೊಂಡರೆ ಅಮೂಲ್ಯ ಜೀವಗಳು ಪ್ರಾಣ ಕಳೆದುಕೊಂಡರೆ ಅದನ್ನು ಭರಿಸುವವರು ಯಾರು? ಆ ಪ್ರಾಣಗಳನ್ನು ಮತ್ತೆ ತರಲು ಆಗುತ್ತಾ? ಆದ್ದರಿಂದ ಅಷ್ಟು ಎತ್ತರದಲ್ಲಿ ಪಬ್ ಗೆ ಅನುಮತಿ ಸಿಗುವುದಿಲ್ಲ. ಆದರೆ ONYX ಬಗ್ಗೆ ಅನುಮತಿ ಹೇಗೆ ಸಿಕ್ಕಿತು ಎನ್ನುವುದೇ ಆಶ್ಚರ್ಯ. ಇನ್ನು ಪಬ್ ಗೆ ಹೋಗುವ ಮೆಟ್ಟಿಲುಗಳು ಎಷ್ಟು ಇಕ್ಕಟ್ಟಾಗಿವೆ ಎಂದರೆ ಒಂದು ವೇಳೆ ಏನಾದರೂ ಅವಘಡಗಳು ಸಂಭವಿಸಿದರೆ ಹೊರಗೆ ಬರಲಾಗದೇ ಕೆಲವು ಪ್ರಾಣಗಳು ಸಾವಿನ ಅಂಚಿಗೆ ಬಂದು ನಿಲ್ಲಬಹುದು. ಆದ್ದರಿಂದ ಸರಿಯಾದ exit ಇಲ್ಲದ ಪಬ್ ಗೆ ಅನುಮತಿ ಕೊಟ್ಟಿರುವ ಮಹಾನುಭಾವರು ಯಾರು ಎನ್ನುವುದನ್ನು ನೋಡಬೇಕು. ಇನ್ನು ಪಬ್ ಗೆ ಅನುಮತಿ ಸಿಗುವಾಗ ಅಗ್ನಿ ಅನಾಹುತಗಳಾದರೆ ಅದನ್ನು ನಿಯಂತ್ರಣಕ್ಕೆ ತರುವ ಬಗ್ಗೆ ಮುಂಜಾಗ್ರತೆ ವಹಿಸಿಕೊಳ್ಳಬೇಕಾಗುತ್ತದೆ. ONYX ನಲ್ಲಿ ಅಂತಹ ಯಾವುದೇ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿಲ್ಲ.

ಮುಂಬೈ ಪಬ್ ನಲ್ಲಿ ನಡೆದ ಆ ಘಟನೆ!

ಹಿಂದಿನ ವರ್ಷ ಮುಂಬೈ ಮಹಾನಗರದಲ್ಲಿ ಪಬ್ ಒಂದರಲ್ಲಿ ಭರ್ತಡೇ ಪಾರ್ಟಿ ಮಾಡುತ್ತಿದ್ದಾಗ ಅಕಸ್ಮಾತ್ ಆಗಿ ಬೆಂಕಿ ಹುಟ್ಟಿ 5 ಜನರ ಯುವತಂಡವೊಂದು ಅಲ್ಲಿಯೇ ಸುಟ್ಟುಕರಕಲಾದ ಸಂಗತಿ ನಿಮಗೆ ನೆನಪಿರಬಹುದು. ಇನ್ನು ಗಾಂಜಾ ನಶೆಯಲ್ಲಿರುವ ಮತ್ತು ಮದ್ಯದ ಅಮಲಿನಲ್ಲಿ ಹೊರಳಾಡುತ್ತಿರುವ ಯುವತಿಯರ ಫೋಟೋ ತೆಗೆಯಲು ಅಲ್ಲಿ ಕೆಲವು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಅವರು ಯುವತಿಯರ ಅಶ್ಲೀಲ ಶೈಲಿಯ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಾರೆ. ಕೆಲವು ಫೋಟೋಗಳನ್ನು ಸಂಗ್ರಹಿಸಿಡುತ್ತಾರೆ. ಅದು ಭವಿಷ್ಯದಲ್ಲಿ ಯಾವುದಕ್ಕೆ ಬಳಕೆಯಾಗಬಹುದು ಎನ್ನುವ ಅಂದಾಜು ಆ ಹುಡುಗಿಯರಿಗೆ ಇರುವುದಿಲ್ಲ. ಒಂದು ವೇಳೆ ಯುವತಿ ಮದ್ಯದ ಅಮಲಿನಲ್ಲಿ ಟಾಯ್ಲೆಟಿಗೆ ಹೋಗುವಾಗ ಅಲ್ಲಿ ಹಿಡನ್ ಕ್ಯಾಮೆರಾ ಇಟ್ಟರೂ ಆಕೆಗೆ ಅದು ಅರಿವಾಗುವ ಸಾಧ್ಯತೆ ಇಲ್ಲ.

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search