ಹುಬ್ಬಳ್ಳಿಯಲ್ಲಿ ಕುಳಿತು ವಿಡಿಯೋ ಮಾಡಿ ಪಾಕಿಸ್ತಾನಕ್ಕೆ ಜೈ ಎನ್ನುವ ಮಾತುಗಳನ್ನು ಆಡಿದ ಬೀದಿ ನಾಯಿಗಳಿಗೆ ಪೊಲೀಸ್ ಠಾಣೆಯಲ್ಲಿಯೇ ಜಾಮೀನು ಸಿಕ್ಕಿದೆ ಎನ್ನುವ ವಿಷಯ
ಎರಡು ವರ್ಷಗಳ ಮೊದಲು ನೀವು ಓದಿದ್ದರೆ ಅಥವಾ ಕೇಳಿದ್ದರೆ ” ಛೇ, ಬಿಡ್ರಿ, ಕಾಂಗ್ರೆಸ್ ಸರಕಾರ ಇದೆ. ಅವರಿದ್ದಾಗ ಇದೆಲ್ಲಾ ಮಾಮೂಲಿ” ಎನ್ನುತ್ತಿದ್ದರೇನೋ. ಆದರೆ ವಿಷಯ ಏನೆಂದರೆ ಜಾಮೀನು ಸಿಕ್ಕಿರುವುದು ಕಾಂಗ್ರೆಸ್ ಸರಕಾರ ಇರುವಾಗ ಅಲ್ಲ ಬಿಜೆಪಿ ಸರಕಾರ ಇರುವಾಗ.
“ಅವರು ದೇಶದ್ರೋಹಿಗಳು” ಎನ್ನುವ ಶಬ್ದವನ್ನು ಅತೀ ಹೆಚ್ಚು ಬಳಸಿದ್ದು ಬಿಜೆಪಿಗರು. ಎಲ್ಲಿಯ ತನಕ ಅಂದರೆ ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಬಿಡುಗಡೆ ಮಾಡಿ ಎಂದು ಚಕ್ರವರ್ತಿ ಸೂಲಿಬೆಲೆಯಂತಹ ರಾಷ್ಟ್ರಚಿಂತಕರು ಹೇಳಿದಾಗ ಇದೇ ಸದಾನಂದ ಗೌಡರಂತಹ ತಿಥಿ ಕಾರ್ಯಕ್ರಮದಲ್ಲಿಯೂ ಸ್ಮೈಲ್ ಕೊಡುವಂತಹ ನಾಯಕರು ಅವರು ದೇಶದ್ರೋಹಿಗಳು ಎಂದು ಹೇಳಿ ಬಿಟ್ಟಿದ್ದರು. ಯಾಕೆಂದರೆ ದೇಶದ್ರೋಹಿಗಳು ಎಂದು ಯಾರನ್ನೂ ಬೇಕಾದರೂ ಕರೆಯಲು ನಾಲಗೆಯ ತುದಿಯಲ್ಲಿ ಆ ಶಬ್ದ ಕಾಯುತ್ತಿತ್ತು. ಆದರೆ ನಮ್ಮ ರಾಷ್ಟ್ರದ ಮಣ್ಣಿನಲ್ಲಿ ಕುಳಿತು, ಇಲ್ಲಿಯ ಆಹಾರ, ನೀರು ಸೇವಿಸಿ, ಇಲ್ಲಿನ ಸರಕಾರ ಕೊಡ ಮಾಡುವ ಸೌಲಭ್ಯಗಳಿಂದ ಶಿಕ್ಷಣವನ್ನು ಪಡೆದು, ಇಲ್ಲಿನ ಇಂಟರ್ ನೆಟ್ ಬಳಸಿ ನಮ್ಮದೇ ದೇಶದ ವಿರೋಧ ಮಾತನಾಡಿ ಶತ್ರು ರಾಷ್ಟ್ರಕ್ಕೆ ಜೈ ಎನ್ನುವವರ ಪರ ಇಲ್ಲಿ ಠಾಣೆಯಲ್ಲಿಯೇ ಜಾಮೀನು ಆಗುತ್ತದೆ ಮತ್ತು ಇನ್ನೂ ಆಶ್ಚರ್ಯದ ವಿಷಯ ಎಂದರೆ ರಾಜ್ಯದಲ್ಲಿ ಬಿಜೆಪಿಯದ್ದೇ ಆಡಳಿತ ಇರುತ್ತದೆ.
ಇಡೀ ದೇಶ ಫುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರಯೋಧರನ್ನು ಸ್ಮರಿಸುತ್ತಿರುವಾಗ ಹುಬ್ಬಳ್ಳಿಯಲ್ಲಿ ಕುಳಿತು ಪಾಕಿಸ್ತಾನಕ್ಕೆ ಜೈ ಹೇಳಿದವರನ್ನು ತಕ್ಷಣ ಬಂಧಿಸಿ ಅವರಿಗೆ ಏಳೇಳು ವರ್ಷಕ್ಕೂ ಜಾಮೀನು ಸಿಗದಂತೆ ಮಾಡಿದ್ದರೆ ಈ ರಾಜ್ಯ ಸರಕಾರವನ್ನು ತಲೆ ಮೇಲೆ ಹೊತ್ತು ಕೊಂಡಾಡಬಹುದಿತ್ತು. ಇನ್ನು ಅತ್ತ ಹುಬ್ಬಳ್ಳಿಯ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಆ ಯುವಕರನ್ನು ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿರುವಾಗಲೇ ಇತ್ತ ಆ ಯುವಕರಿಗೆ ಜಾಮೀನು ಸಿಗುತ್ತದೆ. ಇಬ್ಬರು ಜಗಳ ಮಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದರೆ ನಮ್ಮ ದೇಶದಲ್ಲಿ ಪೊಲೀಸ್ ಠಾಣೆಯಲ್ಲಿ ಜಾಮೀನು ಸಿಗಲು ತಪಸ್ಸು ಮಾಡಬೇಕು. ಹಾಗಿರುವಾಗ ದೇಶದ್ರೋಹಿಗಳಿಗೆ ಇಲ್ಲಿ ಜಾಮೀನು ತಕ್ಷಣ ಸಿಗುತ್ತದೆ ಎಂದರೆ ನೀವೆ ಯೋಚಿಸಿ ನಮ್ಮ ರಾಜ್ಯವನ್ನು ಇಮ್ರಾನ್ ಖಾನ್ ಆಳುತ್ತಿದ್ದಾನಾ, ಯಡಿಯೂರಪ್ಪ ಆಳುತ್ತಿದ್ದಾರಾ?
ಅಲ್ಪಸಂಖ್ಯಾತ ತುಷ್ಟೀಕರಣಕ್ಕೂ ಒಂದು ಲಿಮಿಟ್ ಇದೆ. ಸಜ್ಜನ ರಾಷ್ಟ್ರವಾದಿ ಮುಸ್ಲಿಂ ಬಂಧುಗಳು ಕೂಡ ಪಾಕಿಸ್ತಾನಕ್ಕೆ ಜೈ ಎನ್ನಲು ಬಯಸಲ್ಲ. ಹಾಗಿರುವಾಗ ಯಾವುದೂ ತಲೆಕೆಟ್ಟಿರುವ ಯುವಕರು ಹೇಳಿದ ತಕ್ಷಣ ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಬದಲು ಅವರ ವಿರುದ್ಧ ಬಂಧಿಸಲು ಸೂಕ್ತ ದಾಖಲೆ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ ಎಂದರೆ ಫೇಸ್ ಬುಕ್ ಪೇಜ್ ನಲ್ಲಿ ಅಪಲೋಡ್ ಮಾಡಿದ ಅದೇ ಯುವಕರು ಪೊಲೀಸರ ದಯನೀಯ ಸ್ಥಿತಿಯನ್ನು ಕಂಡು ನಗುತ್ತಿರಬೇಕು. ಹಾಗಾದರೆ ಪೊಲೀಸರ ಮೇಲೆ ಒತ್ತಡ ಹಾಕುತ್ತಿರುವ ಬಿಜೆಪಿಯ ಒಳಗಿನ ಇಮ್ರಾನ್ ಖಾನ್ ಸಹೋದರರು ಯಾರು? ಈಗಾಗಲೇ ಸವದಿಯವರನ್ನು ವಿಧಾನಪರಿಷತ್ ಗೆ ಆಯ್ಕೆ ಮಾಡುವ ಚುನಾವಣೆಯಲ್ಲಿ ಏಳು ಮಂದಿ ಬಿಜೆಪಿಯ ಶಾಸಕರು ಅಡ್ಡ ಮಲಗಿ ಯಡಿಯೂರಪ್ಪನವರ ನಿದ್ರೆ ಹಾರಿಸಿಬಿಟ್ಟಿದ್ದಾರೆ. ಇದು ಬಿಎಸ್ ವೈ ಪಾಲಿಗೆ ಮೊದಲ ಎಚ್ಚರಿಕೆಯ ಗಂಟೆ. ಹಾಗಿರುವಾಗ ಪಾಕಿಸ್ತಾನಕ್ಕೆ ಜೈ ಹೇಳಿದ್ರೂ ಬಿಟ್ಟು ಬಿಡಿ ಎಂದು ಅವರ ಒಳಗಿನವರು ಯಾರಾದರೂ ಪೊಲೀಸರ ಮೇಲೆ ಒತ್ತಡ ತಂದಿದ್ದರೆ ಅದು ಬಿಜೆಪಿಗೆ ಶೋಭೆ ತರುವುದಿಲ್ಲ. ವಿರಾಟ್ ಕೊಹ್ಲಿಯ ಅಪ್ಪಟ ಪಾಕ್ ದೇಶದ ಅಭಿಮಾನಿ ಹುಡುಗನೊಬ್ಬ ವಿಶ್ವಕಪ್ ನ ಒಂದು ಪಂದ್ಯದಲ್ಲಿ ಕೊಹ್ಲಿ ಶತಕ ಹೊಡೆದದ್ದಕ್ಕೆ ಮನೆಯ ಮೇಲೆ ಭಾರತದ ಧ್ವಜ ಹಾರಾಡಿಸಿದಾಗ ಹಿಂದೆ ಮುಂದೆ ನೋಡದೆ ಜೈಲಿನೊಳಗೆ ದಬ್ಬಿದ್ದ ಪಾಕಿಸ್ತಾನ ಸರಕಾರ ಆ ಹುಡುಗನನ್ನು ಇನ್ನೂ ಬಿಟ್ಟಿಲ್ಲ. ಹಾಗಿರುವಾಗ ವೇದಿಕೆ ಕಂಡರೆ ಕೇಸರಿ ಶಾಲು ಹಾಕಿ ಗಂಟಲು ಕಿರುಚಿಕೊಳ್ಳುವಂತೆ ಭಾರತ್ ಮಾತಾ ಕೀ ಜೈ ಎನ್ನುವವರು ಈಗ ಮಾಡುತ್ತಿರುವುದು ವಿಚಿತ್ರ ಎನಿಸುತ್ತಿದೆ. ಬಿಜೆಪಿಯವರ ಇಂತಹ ನಡೆಯ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ಸಿಗರು ಅದ್ಭುತ ನಾಟಕ ಆಡುತ್ತಿದ್ದಾರೆ. ಅದೇನೆಂದರೆ ಆ ಯುವಕರನ್ನು ಶೀಘ್ರದಲ್ಲಿ ಬಂಧಿಸಿ ಎಂದು ಘೋಷಣೆ ಕೂಗುತ್ತಿರುವುದು. ಕಾಂಗ್ರೆಸ್ ಪರಿಸ್ಥಿತಿಯನ್ನು ತನ್ನ ಅನುಕೂಲಕ್ಕೆ ಬಳಸಲು ಹೊರಡುತ್ತಿದೆ. ಬಿಜೆಪಿ ಅರ್ಥ ಮಾಡಿಕೊಂಡರೆ ಒಳ್ಳೆಯದು. ಅದು ಬಿಟ್ಟು ಸವದಿಗೆ ಮತ ಹಾಕದ ಏಳು ಕಳ್ಳರು ಯಾರು ಎಂದು ಇಡೀ ವರ್ಷ ಯೋಚಿಸುತ್ತಾ ಕುಳಿತರೆ ಚಾಪೆ ಜಾರಿದ್ದು ಗೊತ್ತೇ ಆಗಲಿಕ್ಕಿಲ್ಲ. ಸದ್ಯ ಆ ದೇಶದ್ರೋಹಿ ಯುವಕರನ್ನು ಮತ್ತೆ ಬಂಧಿಸಲಾಗಿದೆ. ಆದರೆ ಅದು ತಡವಾಗಿತ್ತು ಎನ್ನುವುದು ಬಿಜೆಪಿ ನಾಯಕರಿಗೆ ಗೊತ್ತಾದರೆ ಸಾಕು!
Leave A Reply