ಟ್ರಂಪ್ ದೆಹಲಿಯಲ್ಲಿ ಕಾಲಿಡದಂತೆ ಗಲಭೆ ಹಬ್ಬಿಸುವ ಪ್ಲಾನ್ ಫ್ಲಾಪ್ ಆಗೋಯ್ತು!!
ದೆಹಲಿಯಲ್ಲಿ ಪ್ರತಿಭಟನೆ ಮಾಡಿದರೆ ಅದು ವಿಶ್ವ ಮಟ್ಟಕ್ಕೆ ತಲುಪುತ್ತದೆ ಎನ್ನುವುದು ಗೊತ್ತಾಗದಷ್ಟು ದಡ್ಡರು ವಿರೋಧ ಪಕ್ಷದಲ್ಲಿ ಇಲ್ಲ. ಇನ್ನು ಪ್ರತಿಭಟನೆ ಕಾನೂನು ಮಿತಿಯೊಳಗೆ ಇದ್ದರೆ ಅದು ಅಮೇರಿಕಾದ ಅಧ್ಯಕ್ಷರನ್ನು ತಲುಪುವುದಿಲ್ಲ ಎಂದು ಗೊತ್ತಿಲ್ಲದವರು ಜನಪಥ್ ನಲ್ಲಿಯೂ ಇಲ್ಲ. ಇನ್ನು ಒಂದೆರಡು ಜನರ ಸಾವು ಮತ್ತಿಷ್ಟು ಜನರಿಗೆ ಗಂಭೀರ ಗಾಯ ಆಗದಿದ್ದರೆ ಮಾಧ್ಯಮಗಳಲ್ಲಿ ಮುಖ್ಯ ನ್ಯೂಸ್ ಆಗಿ ಬರುವುದಿಲ್ಲ ಎಂದು ತಿಳಿಯದಷ್ಟು ಮುಗ್ಧರು ವಿಪಕ್ಷಗಳ ಥಿಂಕ್ ಟ್ಯಾಂಕ್ ಗಳಲ್ಲಿ ಇರಲು ಸಾಧ್ಯವೂ ಇಲ್ಲ. ನೀವು ಪ್ರತಿಭಟನೆ ಮಾಡಿ ಅದು ನಮ್ಮ ಅದೃಷ್ಟಕ್ಕೆ ವಿಕೋಪಕ್ಕೆ ಹೋದರೆ ನಾವು ಒಂದೆರಡು ಟ್ವಿಟ್ ಮಾಡಿದ ನಾಟಕ ಆಡುತ್ತೇವೆ ಎಂದು ಮೊದಲೇ ಹೇಳಿದ್ದ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಚಿತ್ರಕಥೆ ವಿಪಕ್ಷಗಳು ಅಂದುಕೊಂಡಂತೆ ನಡೆಯುತ್ತಿದೆ.
ನಮಗೆಲ್ಲ ಗೊತ್ತಿರುವಂತೆ ಸಿಎಎ ವಿರುದ್ಧ ಇರುವವರಿಗೆ ಮೊದಲ ಶತ್ರುಗಳೇ ಪೊಲೀಸರು. ಅದು ಮಂಗಳೂರಿನಿಂದ ದೆಹಲಿಯ ತನಕ ಒಂದೇ ಫಾರ್ಮುಲ. ಅದು ಬಂದರಿನ ಕಂಡತ್ತಪಳ್ಳಿ ಇರಲಿ, ದೆಹಲಿಯ ಜಾಫರಾಬಾದ್ ಇರಲಿ ಸಿಎಎ ವಿರೋಧಿಗಳದ್ದು ಒಂದೇ ಅಸ್ತ್ರ. ಸೋಮವಾರ ನಡೆದ ಪ್ರತಿಭಟನೆ ವಿಕೋಪಕ್ಕೆ ಹೋಗಿ ಪ್ರತಿಭಟನಾಕಾರರು ಅಗ್ನಿಶಾಮಕ ದಳದ ವಾಹನ ಸೇರಿದಂತೆ ಹಲವು ವಾಹನಗಳಿಗೆ, ಮನೆಗಳಿಗೆ, ಪೆಟ್ರೋಲ್ ಬಂಕ್ ಗಳಿಗೆ , ಅಂಗಡಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪೊಲೀಸರು ಹಿಂಸಾಚಾರ ಮಿತಿ ಮೀರುತ್ತಿರುವುದನ್ನು ಹತ್ತಿಕ್ಕಲು ಹೋದಾಗ ಪೊಲೀಸ್ ಹೆಡ್ ಕಾನ್ಸಸ್ಟೇಬಲ್ ಸೇರಿದಂತೆ ಡಿಸಿಪಿ ಹಾಗೂ ಹಲವಾರು ಪೊಲೀಸರು ಗಾಯಗೊಂಡಿದ್ದಾರೆ. ಮಂಗಳೂರಿನಲ್ಲಿಯೂ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಹೊರಟಿದ್ದ ಪ್ರತಿಭಟನಾಕಾರರ ಕೈಯಲ್ಲಿ ಬಂದೂಕುಗಳಿದ್ದ ಅಂಗಡಿಯ ಕೀ ಸಿಕ್ಕಿ ಅಂಗಡಿ ತೆರೆಯಲ್ಪಟ್ಟಿದ್ದರೆ ಏನಾಗುತ್ತಿತ್ತು ಎಂದು ನೀವೆ ಯೋಚಿಸಿ. ಬಂದೂಕುಗಳು ಯದ್ವಾತದ್ವಾ ಹಾರಾಡಿ ಮಂಗಳೂರು ಅಕ್ಷರಶ: ರಣರಂಗವಾಗುತ್ತಿತ್ತು.
ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ದೆಹಲಿಗೆ ಬಂದಿಳಿಯುವ ಕೆಲವೇ ಗಂಟೆಗಳ ಮೊದಲು ದೆಹಲಿಯ ಆಸುಪಾಸಿನಲ್ಲಿ ಗಲಭೆ ತಾರಕಕ್ಕೆ ಏರಿದೆ. ಅದರರ್ಥ ಏನು? ಟ್ರಂಪ್ ಭಾರತ ದೆಹಲಿ ಭೇಟಿ ರದ್ದುಮಾಡಿ ಕೇಂದ್ರ ಸರಕಾರಕ್ಕೆ ಮುಜುಗರ ಉಂಟು ಮಾಡಬೇಕು ಎಂದು ತಾನೇ. ದೆಹಲಿಯಲ್ಲಿ ಗಲಭೆ ಸ್ಪೋಟಿಸಿದೆ ಎಂದು ಟ್ರಂಪ್ ರಕ್ಷಣೆ ಹೊತ್ತ ಅಧಿಕಾರಿಗಳು ಟ್ರಂಪ್ ಕಿವಿಯಲ್ಲಿ ದೆಹಲಿಗೆ ಕಾಲಿಡುವುದು ಬೇಡಾ ಎಂದು ಹೇಳಿದರೆ ಏನಾಗುತ್ತದೆ? ವಿಶ್ವದ ಎದುರು ಭಾರತದ ಮರ್ಯಾದೆ ಹರಾಜಾಗುತ್ತಿತ್ತು. ಈ ಯೋಜನೆ ವಿಪಕ್ಷಗಳ ಮುಖಂಡರಲ್ಲಿತ್ತು. ಆದ್ದರಿಂದ ಗಲಭೆ ಜಾಸ್ತಿ ಮಾಡಿ ಒಂದಿಬ್ಬರು ಪೊಲೀಸರ ಹೆಣಗಳು ಬೀಳಲಿ ಎಂದು ಸೂಚನೆ ಹೋಗಿರಬಹುದು. ಇದರ ಪರಿಣಾಮದಿಂದ ದೆಹಲಿಯ ಕೆಲವು ಪ್ರದೇಶಗಳು ಬೆಂಕಿಯ ಜ್ವಾಲೆಯಲ್ಲಿ ಬೆಂದವು. ಎಲ್ಲವೂ ಮುಗಿದ ಬಳಿಕ ಸೋನಿಯಾ, ಕೇಜ್ರಿವಾಲ್ ಸಹಿತ ಕೆಲವರು ಜನರೇ ಶಾಂತಿಯನ್ನು ಕಾಪಾಡಿ ಎಂದು ಟ್ವೀಟ್ ಮಾಡಿದರು.
ಯಾರೇ ಆಗಲಿ ಪ್ರತಿಭಟನೆ ಮಾಡುವ ಹಕ್ಕಿದೆ. ಕೇಂದ್ರ ಸರಕಾರ ಮಾಡಿದ್ದೆಲ್ಲವನ್ನು ಸರಿ ಎಂದು ಹೇಳಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಕ್ ಗುಪ್ತಾ ನಿನ್ನೆಯಷ್ಟೇ ಹೇಳಿದ್ದಾರೆ. ಭಿನ್ನಾಭಿಪ್ರಾಯ ಮತ್ತು ಪ್ರತಿರೋಧ ಎರಡರ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಸರಕಾರದ ವಿರುದ್ಧ ಮಾತನಾಡಬಾರದು ಎಂದು ನಾನು ಹೇಳುವುದಿಲ್ಲ. ಸರಕಾರದ ವಿರುದ್ಧ ಮಾತನಾಡಿದ ಕೂಡಲೇ ಅವರು ದೇಶದ್ರೋಹಿ ಕೂಡ ಆಗುವುದಿಲ್ಲ. ದೇಶದ ವಿರುದ್ಧ ಮಾತನಾಡುವುದಕ್ಕೂ, ಸರಕಾರದ ವಿರುದ್ಧ ಮಾತನಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಮೊನ್ನೆ ಅಮೂಲ್ಯ ಲಿಯೋನಾ ಮಾತನಾಡಿದ್ದು ದೇಶದ ವಿರುದ್ಧ. ದೆಹಲಿಯ ಕಾನೂನು, ಸುವ್ಯವಸ್ಥೆ ಕೇಂದ್ರ ಸರಕಾರದ ಕೈಯಲ್ಲಿ ಇರುವುದರಿಂದ ಅದನ್ನು ಶೀಘ್ರದಲ್ಲಿ ಹತೋಟಿಗೆ ತರಲು ಕೇಂದ್ರ ತನ್ನ ಸಂಪೂರ್ಣ ತಾಕತ್ತನ್ನು ಹಾಕಬೇಕಾಗುತ್ತದೆ. ಯಾಕೆಂದರೆ ಟ್ರಂಪ್ ಜೊತೆ ಅಂತರಾಷ್ಟ್ರೀಯ ಮಾಧ್ಯಮಗಳ ದಂಡೇ ಬಂದಿರುತ್ತದೆ. ಅವರು ಟ್ರಂಪ್ ಕಾರ್ಯಕ್ರಮಗಳಿಗೆ ಒಂದಿಷ್ಟು ದಕ್ಕೆಯಾದರೂ ಭಾರತದಲ್ಲಿ ಯಾವುದೂ ಸರಿ ಇಲ್ಲ ಎನ್ನುವುದನ್ನು ಇಡೀ ವಿಶ್ವಕ್ಕೆ ಸಾರುತ್ತದೆ. ವಿಪಕ್ಷಗಳ ನಾಯಕರೊಂದಿಗೆ ಪಾಕಿಸ್ತಾನದ ಮುಖಂಡರೂ ಬಯಸುತ್ತಿದ್ದದ್ದು ಇದನ್ನೇ!!
Leave A Reply