ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ದಿವಾಕರ ಪಾಂಡೇಶ್ವರ ಆಯ್ಕೆ!
Posted On February 28, 2020

ಮಂಗಳೂರು: ಮಹಾನಗರ ಪಾಲಿಕೆ ಮೇಯರ್ ಆಗಿ ಬಿಜೆಪಿಯ ಹಿರಿಯ ಸದಸ್ಯ ಕಂಟೋನ್ಮಂಟ್ 46ನೇ ವಾರ್ಡ್ ನ ದಿವಾಕರ ಪಾಂಡೇಶ್ವರ ಹಾಗೂ ಉಪ ಮೇಯರ್ ಆಗಿ ಕುಳಾಯಿ 9 ನೇ ವಾರ್ಡ್‌ನ ವೇದಾವತಿ ಹೆಸರು ಅವರ ಆಯ್ಕೆಯಾಗಿದ್ದಾರೆ, 60 ಸದಸ್ಯ ಬಲದ ಮನಪಾ ಚುನಾವಣೆಯಲ್ಲಿ 44 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಭರ್ಜರಿ ಬಹುಮತ ಹೊಂದಿದೆ. ಮೇಯರ್- ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ -ಸಾಮಾನ್ಯ ಮಹಿಳ ಮೀಸಲು ಹೊಂದಿದೆ. ದಿವಾಕರ ಅವರು ಕಂಟೋನ್ಮಂಟ್ ವಾರ್ಡ್‌ನಿಂದ ಮೂರನೇ ಬಾರಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಕ್ಷ ಹಿರಿತನಕ್ಕೆ ಮನ್ನಣೆ ನೀಡಿದೆ. ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಿಂದ ಮೇಯರ್ ಆಯ್ಕೆ ನಡೆದ ಕಾರಣ ಉಪ ಮೇಯರ್ ಸ್ಥಾನ ಮಂಗಳೂರು ನಗರ ಉತ್ತರ ಕ್ಷೇತ್ರದ ಕಾರ್ಪೋರೇಟರ್‌ಗೆ ನೀಡಲಾಗಿದೆ
- Advertisement -
Leave A Reply