• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಲಿಕೆಯಲ್ಲಿ ಕೆಲಸ ಆಗಬೇಕಾದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬನ್ನಿ!!

Hanumantha Kamath Posted On March 4, 2020
0


0
Shares
  • Share On Facebook
  • Tweet It

ಜನರಿಗೆ ಸುಲಭವಾಗಲಿ ಎಂದು ರಾಜ್ಯ ಸರಕಾರ ನಿಯಮಗಳನ್ನು ತಂದರೆ ನಮ್ಮ ಅಧಿಕಾರಿಗಳು ಕೊಂಕಣ ಸುತ್ತಿ ಮೈಲಾರಕ್ಕೆ ಬರುವಂತಹ ರೀತಿಯಲ್ಲಿ ಅದನ್ನು ಅನುಷ್ಟಾನಕ್ಕೆ ತರುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಮಂಗಳೂರು ಮಹಾನಗರ ಪಾಲಿಕೆ. ನಾಗರಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪಾಲಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಕೇಂದ್ರ ವಲಯ, ಸುರತ್ಕಲ್ ವಲಯ ಮತ್ತು ಕದ್ರಿ ವಲಯ. ಇವೇ ಆ ಮೂರು ವಲಯಗಳು. ಕೇಂದ್ರ ವಲಯದ ಕಚೇರಿ ಲಾಲ್ ಭಾಗ್ ನಲ್ಲಿದ್ದರೆ, ಸುರತ್ಕಲ್ ವಲಯದ ಕಚೇರಿ ಸುರತ್ಕಲ್ ನಲ್ಲಿದೆ. ಆದರೆ ಕದ್ರಿ ವಲಯದ ಕಚೇರಿಯನ್ನು ಹಿಂದಿನ ಕಾಂಗ್ರೆಸ್ ಆಡಳಿತ ಏನು ಮಾಡಿತ್ತು ಎಂದರೆ ಅದನ್ನು ಕೂಡ ಲಾಲ್ ಭಾಗ್ ನಲ್ಲಿರುವ ಪಾಲಿಕೆಯ ಕಟ್ಟಡದಲ್ಲಿಯೇ ಮುಂದುವರೆಸಿತ್ತು.

ಈಗಿನ ಪಾಲಿಕೆಯ ಕಮೀಷನರ್ ಅವರು ಏನು ಮಾಡಿದ್ದಾರೆ ಎಂದರೆ ಹೊಸದಾಗಿ ಪಾಲಿಕೆಯ ವಾಪ್ತಿಯ 60 ವಾರ್ಡುಗಳನ್ನು ವಿಂಗಡಿಸಿದ್ದಾರೆ. ಅದು ಹೇಗೆಂದರೆ 1-20 ಸುರತ್ಕಲ್ ವಲಯ, 21 ರಿಂದ 40 ರ ತನಕ ಕೇಂದ್ರ ವಲಯ ಮತ್ತು 41 ರಿಂದ 60 ರವರೆಗಿನ ವಾರ್ಡುಗಳನ್ನು ಕದ್ರಿ ವಲಯವನ್ನಾಗಿ ವಿಂಗಡಿಸಿದ್ದಾರೆ. ಕದ್ರಿ ವಲಯದ ಕಚೇರಿ ಕದ್ರಿಯಲ್ಲಿಯೇ ಇರಲಿದೆ. ಆದರೆ ಇದು ಎಷ್ಟು ಅವೈಜ್ಞಾನಿಕ ಎನ್ನುವುದನ್ನು ನಾನು ಈಗ ವಿವರಿಸುತ್ತೇನೆ.

ಹಿಂದೆ ಮೂರು ವಲಯಗಳನ್ನು 20 ವಾರ್ಡುಗಳಂತೆ ಸಮಾನಾಂತರವಾಗಿ ವಿಂಗಡಿಸಿರಲಿಲ್ಲ. ಯಾಕೆಂದರೆ ನೋಡಲು 20-20-20 ಸರಿಯಾಗಿದೆ ಎಂದು ಅನಿಸಿದರೂ ಪ್ರಾಕ್ಟಿಕಲ್ ಆಗಿ ಅದು ಜಾರಿಯಾಗುವಾಗ ನಾಗರಿಕರಿಗೆ ಎಷ್ಟು ಕಿರಿಕಿರಿ ಉಂಟು ಮಾಡುತ್ತದೆ ಎಂದು ಹೇಳುತ್ತೇನೆ. ಉದಾಹರಣೆಗೆ 41 ನೇ ಸೆಂಟ್ರಲ್ ವಾರ್ಡನ್ನು ತೆಗೆದುಕೊಳ್ಳೋಣ. ಆ ವಾರ್ಡಿನಲ್ಲಿ ಬರುವ ಬಜಿಲಕೇರಿಯ ಯುವಕನೊಬ್ಬ ಪಾಲಿಕೆಯಲ್ಲಿ ಏನಾದರೂ ಕೆಲಸ ಮಾಡಲು ಇದ್ದರೆ ಅಲ್ಲಿನವರಿಗೆ ಮೊದಲು ಸಿಗುವುದು ಲಾಲ್ ಭಾಗ್ ಕಟ್ಟಡ. ಅವರು ಅದನ್ನು ಬಿಟ್ಟು ಮುಂದೆ ಕದ್ರಿಗೆ ಹೋಗಿ ಕೆಲಸ ಮಾಡಿಸಬೇಕಾದ ಪರಿಸ್ಥಿತಿಯನ್ನು ಈಗ ಪಾಲಿಕೆ ಅಧಿಕಾರಿಗಳು ಸೃಷ್ಟಿಸಿದ್ದಾರೆ. ಬೇಕಾದರೆ ಪಾಲಿಕೆಯ ಹಿಂದಿನ ರಸ್ತೆಯಲ್ಲಿ ಸೀದಾ ಹೋದರೆ ಸಿಗುವ ಡೊಂಗರಕೇರಿ ವಾರ್ಡನ್ನೇ ತೆಗೆದುಕೊಳ್ಳಿ. ಅಲ್ಲಿನವರಿಗೆ ನಿಸ್ಸಂಶಯವಾಗಿ ಹತ್ತಿರ ಇರುವುದು ಲಾಲ್ ಭಾಗ್. ಆದರೆ ಅದು ಈಗ ಕದ್ರಿಗೆ ಸೆರುತ್ತದೆ. ಒಬ್ಬ ವ್ಯಕ್ತಿಗೆ ಸುಲಭವಾಗಲಿ ಎಂದು ಬರುವ ನಿಯಮಗಳು ಹೀಗೆ ಆದರೆ ಹೇಗೆ?

ಮಂಗಳೂರಿನಲ್ಲಿ ಇರುವವರಿಗೆ ಕದ್ರಿಯ ಆಸುಪಾಸಿನಲ್ಲಿರುವ ಏರಿಯಾಗಳ ಬಗ್ಗೆ ಗೊತ್ತಿರುತ್ತದೆ. ಕುಡುಪು, ಪದವು, ಬೆಂದೂರ್ ವೆಲ್, ಶಿವಭಾಗ್ ಸಹಿತ ಹೆಚ್ಚೆಂದರೆ 12 ವಾರ್ಡುಗಳನ್ನು ಸೇರಿ ಕದ್ರಿ ವಲಯವನ್ನಾಗಿ ಮಾಡಬಹುದು. ಇನ್ನು ನಿಖರವಾಗಿ ಹೇಳಬೇಕಾದರೆ ವಾರ್ಡ್ 19-23 ಹಾಗೂ 32-38. ಹಾಗೇ ಸುರತ್ಕಲ್ ವಲಯಕ್ಕೆ 1-16 ಮತ್ತು 18 ಹಾಗೂ ವಾರ್ಡ್ 60 ಸೇರಿದರೆ ಅಲ್ಲಿನ ಜನರಿಗೆ ಅನುಕೂಲವಾಗುತ್ತದೆ. ಕೊನೆಯದಾಗಿ ಉಳಿದ ವಾರ್ಡುಗಳನ್ನು ಕೇಂದ್ರ ವಲಯಕ್ಕೆ ಸೇರಿಸಿದ್ದಲ್ಲಿ ಜನೋಪಯೋಗಿ ನಿಯಮ ಎಂದೆನಿಸುತ್ತಿತ್ತು. ಆದರೆ ಹಾಗೆ ಆಗಲೇ ಇಲ್ಲ. ನಿಮಗೆ ತಿರುವೈಲ್ ವಾರ್ಡ್ ಗೊತ್ತಿರಬಹುದು. ಅದು ಇಷ್ಟು ವರ್ಷ ಕದ್ರಿ ವಲಯದಲ್ಲಿತ್ತು. ಆ ವಾರ್ಡಿನ ಒಬ್ಬ ನಾಗರಿಕ ಇನ್ನು ಯಾವುದೇ ಕೆಲಸ ಆಗಬೇಕಾದರೆ ಎರಡು ಬಸ್ಸು ಚೆಂಜ್ ಮಾಡಿ ಸುರತ್ಕಲ್ ಗೆ ಹೋಗಬೇಕು. ಹಾಗೇ ಬೆಂಗರೆಯನ್ನು ಸುರತ್ಕಲ್ ನಿಂದ ಕದ್ರಿಗೆ ಹಾಕಿದ್ದಾರೆ.

ಮಂಗಳೂರಿನ ಭೌಗೋಳಿಕ ವ್ಯಾಪ್ತಿಯ ಅರಿವಿಲ್ಲದ ಅಧಿಕಾರಿಗಳಿಗೆ ವಲಯವನ್ನು ವಿಂಗಡಿಸುವ ಕೆಲಸವನ್ನು ಕೊಟ್ಟರೆ ಆಗ ಹೀಗೆ ಆಗುವುದು. 60 ವಾರ್ಡುಗಳನ್ನು 20 ರಂತೆ ಮೂರು ವಾರ್ಡುಗಳಾಗಿ ಮಾಡಲು ದೊಡ್ಡ ದೊಡ್ಡ ಡಿಗ್ರಿ ಕಲಿಯಬೇಕಾಗಿಲ್ಲ. ಅದನ್ನು ನಾಲ್ಕನೇ ತರಗತಿಯ ಮಗು ಕೂಡ ಮಾಡುತ್ತದೆ. ಆದರೆ ಜನರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಲು ತಲೆ ಬೇಕು. ಅದರ ಕೊರತೆ ಪಾಲಿಕೆಯಲ್ಲಿದೆ. ಕಾಮನ್ ಸೆನ್ಸ್ ಇಲ್ಲದವರನ್ನು ತಲೆ ಮೇಲೆ ಕೂರಿಸಿದರೆ ಹೀಗೆ ಆಗುವುದು!!

0
Shares
  • Share On Facebook
  • Tweet It




Trending Now
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Hanumantha Kamath July 18, 2025
ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
Hanumantha Kamath July 17, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
  • Popular Posts

    • 1
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 2
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 3
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 4
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • 5
      ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!

  • Privacy Policy
  • Contact
© Tulunadu Infomedia.

Press enter/return to begin your search