• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ತಡೆಯಾಜ್ಞೆ ತರಲು ಕೆಲವೇ ಗಂಟೆಗಳು, ಸತ್ಯ ಶೋಧಿಸಲು ಎಷ್ಟು ದಿನಗಳು!

TNN Correspondent Posted On August 5, 2017


  • Share On Facebook
  • Tweet It

ಇನ್ನು ಏನಿದ್ದರೂ ಸತ್ಯ ಹುಡುಕುತ್ತಾ ಇರುವುದು. ಅಂದರೆ ಸತ್ಯ ಕಾಣೆಯಾಗಿದೆ ಅಂತ ಅಲ್ಲ. ಆದರೆ ಸತ್ಯ ಹುಡುಕುವವರು ಎಷ್ಟು ದಿನ ತೆಗೆದುಕೊಳ್ಳುತ್ತಾರೆ ಅಷ್ಟು ದಿನ ನಮ್ಮ ಜನಪ್ರತಿನಿಧಿಗಳಿಗೆ ನಿರಾಳ. ಅದಕ್ಕಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಸಮಯ ತೆಗೆದುಕೊಳ್ಳಲಾಗಿದೆ. ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಯ ಹೆಸರಿಗೆ ತಡೆಯಾಜ್ಞೆ ತರಲು ಶಾಸಕ ಜೆ ಆರ್ ಲೋಬೊ ಅವರು ತೆಗೆದುಕೊಂಡಿರುವುದು ಕೆಲವೇ ಕೆಲವು ಗಂಟೆಗಳು. ಹಾಗೇ ಸತ್ಯ ಶೋಧನ ಸಮಿತಿಯವರು ಕೂಡ ಕೆಲವೇ ಕೆಲವು ಗಂಟೆಗಳಲ್ಲಿ ಸತ್ಯ ಶೋಧಿಸಬೇಕು, ಅದು ಯಾವ ಮೂಲೆಯಲ್ಲಿ ಅಡಗಿದರೂ ಶೋಧಿಸಿ ಹೊರಗೆ ತೆಗೆಯಬೇಕು.

ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ, ಇತಿಹಾಸ ವಿಭಾಗದ ಪ್ರೊಫೆಸರ್, ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ಒಳಗೊಂಡು ಸಮಿತಿ ರಚಿಸಲಾಗಿದೆ. ಈ ಸಮಿತಿ ನೀಡುವ ವರದಿಯ ಆಧಾರದಲ್ಲಿ ಮುಂದಿನ ಸಭೆಯಲ್ಲಿ ಉಸ್ತುವಾರಿ ಸಚಿವರು ರಸ್ತೆ ನಾಮಕರಣಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಮಾನ ಕೈಗೊಳ್ಳುವರು ಎಂದು ಜಿಲ್ಲಾಧಿಕಾರಿ ಡಾ|ಜಗದೀಶ್ ಹೇಳಿದ್ದಾರೆ.

ನೋಡಬೇಕಾಗಿರುವುದು ಒಂದು ದಾಖಲೆ ಮಾತ್ರ, ಎಲೋಶಿಯಸ್ ಕಾಲೇಜಿನ ಪ್ರತಿನಿಧಿ ನರಹರಿಯವರು 1976 ರಲ್ಲಿಯೇ ಆ ರಸ್ತೆಗೆ ಎಲೋಶಿಯಸ್ ಕಾಲೇಜು ರಸ್ತೆ ಎಂದು ನಾಮಕರಣವಾಗಿದೆ ಎಂದು ಹೇಳಿದ್ದಾರೆ. ಅದನ್ನು ತೆಗೆದುಕೊಂಡು ಪರಿಶೀಲಿಸುವುದು. ಅಷ್ಟೇ. ಅದರೊಂದಿಗೆ ವಿಜಯಾ ಬ್ಯಾಂಕಿನ ನೌಕರರ ಸಂಘದವರ ದಾಖಲೆ ಪರಿಶೀಲಿಸುವುದು, ಅಲ್ಲಿಗೆ ಮುಗಿಯಿತು. ಅದಕ್ಕೆ ಒಂದು ತಿಂಗಳು ಬೇಡಾ. ಬೇಕಾದರೆ ಸತ್ಯಶೋಧನಾ ಸಮಿತಿಯವರು ಜೆ ಆರ್ ಲೋಬೋ ಅವರ ಹತ್ತಿರ ಒಂದು ಘಂಟೆ ಟ್ರೈನಿಂಗ್ ತೆಗೆದುಕೊಳ್ಳಲಿ. ಅವರು ತಡೆಯಾಜ್ಞೆ ತಂದಷ್ಟೇ ವೇಗವಾಗಿ ತಡೆಯಾಜ್ಞೆ ತೆರವು ಕಾರ್ಯ ಆಗಲಿ.

ಇನ್ನು ನಿನ್ನೆಯ ಸಭೆಯಲ್ಲಿ ಶಾಸಕ ಜೆಆರ್ ಲೋಬೋ ಅವರು ಮಾತನಾಡುವಾಗ “ನಾನು ಈ ವಿಷಯದಲ್ಲಿ ಒಂದು ಸೈಡ್ ಹೋಗಿಲ್ಲ, ಸ್ವಜಾತಿ ಪ್ರೇಮ ಮಾಡಿಲ್ಲ” ಎಂದು ಹೇಳಿದ್ದಾರೆ. ಅದು ನಿಜವಾಗಿದ್ದರೆ ಶಾಸಕರೇ, ನಿಮ್ಮ ಬಳಿ ವಿಜಯಾ ಬ್ಯಾಂಕಿನವರು ಬಂದು ನಾಮಕರಣಕ್ಕೆ ಆಮಂತ್ರಣ ಕೊಡುವಾಗ ಅಲ್ಲಿಯೇ ಹೇಳಬಹುದಿತ್ತಲ್ಲ. ಅದು ಬಿಟ್ಟು ನಾಮಕರಣದ ಎಲ್ಲಾ ಸಿದ್ಧತೆ ಮುಗಿದು ನಾಮಫಲಕ ಅನಾವರಣದ ಹಿಂದಿನ ದಿನ ನೀವು ಬೆಂಗಳೂರಿನಲ್ಲಿ ಕುಳಿತು ವಿಕೋಪ ಪರಿಹಾರದ ಕಾರ್ಯಾಚರಣೆಯಲ್ಲಿ ಯೋಧರು ಸಮರೋಪಾದಿಯಲ್ಲಿ ಹೋರಾಡಿ ನಮ್ಮ ಜನರನ್ನು ರಕ್ಷಿಸುತ್ತಾರಲ್ಲ, ಹಾಗೆ ಕೆಲಸ ಮಾಡಿದ್ದು ಯಾಕೆ? ನೀವು ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರು ಇಟ್ಟರೆ ಅಶಾಂತಿ ಉಂಟಾಗುತ್ತದೆ ಎಂದು ಬರೆದುಕೊಟ್ಟಿರಲ್ಲ, ತಡೆಯಾಜ್ಞೆ ತರುವಲ್ಲಿ ವಿಫಲರಾಗಿದ್ದಲ್ಲಿ ಅಶಾಂತಿ ಉಂಟಾಗುವುದು ನಿಮ್ಮ ಮನಸ್ಸಿನಲ್ಲಿಯೋ ಅಥವಾ ಊರಿನಲ್ಲಿಯೋ. ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರಿಟ್ಟರೆ ಅಶಾಂತಿ ಆಗುತ್ತದೆ ಎನ್ನುವ ಮೂಲಕ ಕ್ರೈಸ್ತರು ಗಲಾಟೆ ಮಾಡುತ್ತಾರೆ ಎಂದು ಪರೋಕ್ಷವಾಗಿ ನೀವು ಹೇಳಿದಂತೆ ಆಗಲ್ವಾ?

ಇನ್ನು ವಿವಾದ ಆದ ನಂತರ ವಿಜಯಾ ಬ್ಯಾಂಕಿನ ನೌಕರರ ಬಳಿ ನೀವು ಬಿಷಪ್ ಅವರ ಹತ್ತಿರ ಮಾತನಾಡಿ ಎಂದು ಹೇಳಿದ್ದಿರಲ್ಲ, ಅದರ ಅರ್ಥ ಏನು ಶಾಸಕ ಲೋಬೋ ಅವರೇ. ರಸ್ತೆಯ ಹೆಸರನ್ನು ಇಡುವುದು ಯಾರು, ಹೇಗೆ ಎಂದು ನಿಯಮ ಗೊತ್ತಿರುವ ನೀವೆ ಹೀಗೆ ಸೂಚನೆ ಕೊಟ್ಟರೆ ಅದರಿಂದ ನಾವು ಏನು ತಿಳಿದುಕೊಳ್ಳಬೇಕು. ಸ್ವಜಾತಿ ಪ್ರೇಮ ಇಲ್ಲ ಎಂದೇ ನೀವು ಹೇಳುವುದಾದರೆ ನಿಯಮ ಏನಿದೆಯೋ ಹಾಗೆ ಹೋಗಬೇಕು ಎನ್ನುವುದು ಸರಿಯೋ ಅಥವಾ ಅಶಾಂತಿ ಆಗುತ್ತದೆ, ಬಿಷಪ್ ಅವರತ್ರ ಮಾತನಾಡಿ ಹೀಗೆ ಬೇರೆ ಬೇರೆ ಮಾತನಾಡುವುದರ ಹಿಂದೆ ಉದ್ದೇಶ ಏನಿದೆ? ಒಂದು ವೇಳೆ ಬಿಷಪ್ ಅವರು ಎಲೋಶಿಯಸ್ ಕಾಲೇಜು ರಸ್ತೆ ಎಂದೇ ಇಡಬೇಕು ಎಂದು ಹೇಳಿದರೆ ನೀವು ಹಾಗೆ ಇಡಲು ಒತ್ತಡ ತರುತ್ತಿರಿ ಎಂದು ಅರ್ಥ ಬರಲ್ವಾ? ನಿಮಗೆ ಕಾನೂನುಗಳಿಗಿಂತ ಬಿಷಪ್ ಆಜ್ಞೆ ದೊಡ್ಡದು ಎಂದರೆ ಮುಂದಿನ ಬಾರಿ ಎಂಎಲ್ ಗೆ ನಿಲ್ಲುವಾಗ ಬಿಷಪ್ ಹೌಸಿನಲ್ಲಿಯೇ ವೋಟ್ ಕೇಳಿ ಮನೆಗೆ ಹೋಗಿ. ಇನ್ನು ಮಹಾನಗರ ಪಾಲಿಕೆಯಲ್ಲಿ ಒಂದು ಆಜ್ಞೆ ಹೊರಡಿಸಿ ಯಾವುದೇ ವರದಿಯನ್ನು ಬಿಷಪ್ ಅವರು ಒಪ್ಪಿದರೆ ಮಾತ್ರ ಜಾರಿಗೆ ತರಲಾಗುವುದು ಎಂದು ಹೇಳಿ. ನಾಡಿದ್ದು ಸತ್ಯಶೋಧನಾ ಸಮಿತಿಯವರು ಬಿಷಪ್ ಅವರಿಂದ ಒಪ್ಪಿಗೆ ಪಡೆದೇ ವರದಿ ಸಚಿವರಿಗೆ ಕೊಡಬೇಕು ಎಂದು ಕೂಡ ಹೇಳಿಬಿಡಿ. ಯಾಕೋ ಎಲ್ಲಾ ನಿಯಮ ವಿಜಯಾ ಬ್ಯಾಂಕಿನ ನೌಕರರ ಪರವಾಗಿ ಇದ್ದರೂ “ಸತ್ಯ” ಗೆಲ್ಲುತ್ತಾ ಅಥವಾ ಕೊಡಿಯಾಲ್ ಬೈಲ್ ನಲ್ಲಿ ವಿಲವಿಲನೆ ಒದ್ದಾಡಿ ಪ್ರಾಣ ಬಿಡುತ್ತಾ ಎನ್ನುವ ಸ್ಥಿತಿ ನಿರ್ಮಾಣವಾಗಿದೆ

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search