ಕೇಸರಿ ಕೊಂಬು ಹೊನ್ನಿನ ಬಣ್ಣದ ಅರಶಿನ ,ಹಲವು ರೋಗಗಳಿಗೂ ರಾಮಬಾಣ
ಅರಶಿನದ ಬಗ್ಗೆ ಯಾರಿಗೆ ತಿಳಿದಿಲ್ಲ ?ಚಿತ್ರಾನ್ನ ,ಸಾಂಬಾರ್ ,ರಸಂ ,ಮಾಂಸದ ಅಡುಗೆ ,ಸೌಂದರ್ಯದ ಲೇಪನ ಹೀಗೆ ಎಲ್ಲದರಲ್ಲೂ ಬಹೂಪಯೋಗಿ ಅರಿಶಿನ .ಕುಂಕುಮ ತಯಾರಿಕೆಯಲೂ ಅರಿಶಿನದ್ದೇ ಸಿಂಹಪಾಲು.ಹೊನ್ನಿನ ಬಣ್ಣದ ಈ ಅರಿಶಿನ ಆರ್ಥಿಕ ಬೆಳೆಯೂ ಆಗಿದ್ದು ನಾಗರ ಪಂಚಮಿಯಂದು ಇದರ ಎಲೆಯ ಕಡುಬು ತಯಾರಿಸಲೇಬೇಕು .ಇಷ್ಟೆಲ್ಲಾ ಉಪಯೋಗವಿರುವ ಅರಿಶಿನ ಆರೋಗ್ಯದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ .ಇದರ ಬಗ್ಗೆ ಈಗ ತಿಳಿಯೋಣ .
೧. ಇದರಲ್ಲಿ ಸಾಕಷ್ಟು ಆರೋಗ್ಯವರ್ಧಕ ಅಂಶಗಳಿದ್ದು ಸಂಧಿವಾತದಿಂದ ಶಮನ ನೀಡುತ್ತದೆ .ಅರಿಶಿನ ಬೆರೆಸಿದ ನೀರು ಕುಡಿಯುವ ಮೂಲಕ ದೇಹದ ಜೀವಕೋಶಗಳು ಘಾಸಿಗೊಳ್ಳುವುದನ್ನು ತಪ್ಪಿಸುತ್ತದೆ .ಇದರಿಂದ ಸಂಧಿವಾತ ಹಾಗೂ ಉರಿಯಿಂದ ಕೂಡಿದ್ದ ಗಂಟುಗಳ ಸಮಸ್ಯೆಯನ್ನು ನಿವಾರಿಸುತ್ತದೆ .
೨.ಒಂದು ಸ್ಪೂನ್ ಅರಿಶಿನದ ಪುಡಿಯನ್ನು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಸ್ತ್ರೀಯರ ಮುಟ್ಟಿನ ಸಂದರ್ಭದಲ್ಲಿ ಆಗುವ ಹೊಟ್ಟೆ ನೋವು ಕಡಿಮೆಯಾಗುತ್ತದೆ.ಇದು ಒಂದು ನೈಸರ್ಗಿಕ ನೋವು ನಿವಾರಕವಾಗಿದೆ.
೩.ಮಳೆಗಾಲದಲ್ಲಿ ಶೀತವಾಗುವುದು ಸಹಜ.ಇದಕ್ಕೆ ಮನೆಮದ್ದಾಗಿ ಅರಿಶಿನವನ್ನು ಉಪಯೋಗಿಸಬಹುದು .ಕೆಂಡದ ಮೇಲೆ ಅರಿಶಿನದ ಪುಡಿಯನ್ನು ಹಾಕಿ ಅದರ ಗಾಳಿಯನ್ನು ಒಳಗೆಳೆಯುವುದರಿಂದ ಕಟ್ಟಿದ್ದ ಕಫ ನೀರಾಗುತ್ತದೆ .ಈ ಗಾಳಿಯನ್ನು ಉಸಿರಾಡುವಾಗ ಮೊದಲಿಗೆ ಉರಿಯೆನ್ನಿಸಿ ಕಣ್ಣಿನಲಿ ನೀರು ಬರಬಹುದು ಆದರೆ ಇದು ಸಹಜ ಮತ್ತು ಕೆಲವೇ ನಿಮಿಷಗಳ ಪ್ರಕ್ರಿಯೆಯಾಗಿದೆ .
೪.ಮುಖದಲ್ಲಿನ ಮೊಡವೆ ,ಕಜ್ಜಿಗಳಿಗೆ ಇದು ರಾಮಬಾಣವಾಗಿದೆ .ಇದಕ್ಕೆ ಆದಷ್ಟು ಅರಿಶಿನದ ಕೊಂಬನ್ನು ಬಳಸುವುದು ಒಳ್ಳೆಯದು .ಹಸಿ ಅರಿಶಿನದ ಕೊಂಬನ್ನು ತೇಯ್ದು ಅದರ ಗಂಧವನ್ನು ಮುಖಕ್ಕೆ ಲೇಪಿಸಿಕೊಳ್ಳಬಹುದು ಒಣ ಚರ್ಮದವರು ಇದಕ್ಕೆ ಹಾಲನ್ನು ಲೇಪಿಸಿ ಉಪಯೋಗಿಸಬಹುದು ಎಣ್ಣೆ ಚರ್ಮದವರು ಸ್ವಲ್ಪ ನಿಂಬೆ ರಸಕ್ಕೆ ನೀರನ್ನು ಬೆರೆಸಿ ತೆಳು ಮಾಡಿ ಅರಿಶಿನಕ್ಕೆ ಸೇರಿಸಿ ಲೇಪನ ಹಚ್ಚಿಕೊಳ್ಳಬಹುದು .
೫.ಅರಿಶಿನದ ಹಾಲು ಅಥವಾ ಚಿನ್ನದ ಹಾಲನ್ನು ಮಾಡಿ ಕುಡಿಯುವುದು ಹಲವು ರೋಗಗಳಿಗೆ ಶಮನವನ್ನು ನೀಡುತ್ತದೆ .ಇದು ಆಹ್ಲಾದಕಾರಿ ಜೊತೆಗೆ ಆರೋಗ್ಯಕಾರಿ.ಇದನ್ನು ಮಾಡುವ ವಿಧಾನ ಹೀಗಿದೆ .೨ ಕಪ್ ಹಾಲಿಗೆ ೧ ಸ್ಪೂನ್ ಅರಿಶಿನ ಪುಡಿಯನ್ನು ಬೆರೆಸಿ ಜೊತೆಗೆ ಅರ್ಧ ಸ್ಪೂನ್ ದಾಲ್ಚಿನ್ನಿ ಸೇರಿಸಿ ನಂತರ ಚಿಟಿಕೆಯಷ್ಟು ಕಾಳುಮೆಣಸನ್ನು ಹಾಕಿ ಕಾಲು ಚಮಚದಷ್ಟು ತುರಿದ ಶುಂಠಿಯನ್ನು ಬೆರೆಸಿ ಬೇಕಿದ್ದಲ್ಲಿ ೧ ಚಮಚದಷ್ಟು ಜೇನುತುಪ್ಪವನ್ನು ಸೇರಿಸಬಹುದು .ಈಗ ಇವೆಲ್ಲವನ್ನೂ ಮಿಕ್ಸಿಯಲ್ಲಿ ನುಣ್ಣನೆ ತಿರುಗಿಸಿ ಪ್ಯಾನ್ ನಲ್ಲಿ ೩ರಿಂದ ೫ ನಿಮಿಷದಷ್ಟು ಕಾಲ ಕುಡಿಸಿ ಬಿಸಿಬಿಸಿಯಾಗಿ ಸೇವಿಸಿ.ಗಂಟಲು ಕೆರೆತ ,ಶೀತ ಎಲ್ಲವನ್ನೂ ಕಡಿಮೆ ಮಾಡುವುದರೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯಶಾಲಿಯಾಗಲು ಇದು ಅತ್ಯಂತ ಸಹಕಾರಿ.
ಇದರೊಂದಿಗೆ ಸಾಂಬಾರ್ ರಸಂ ಹೀಗೆ ಎಲ್ಲ ತಿನ್ನೋ ಆಹಾರದಲ್ಲಿ ಅರಿಶಿನವನ್ನು ಉಪಯೋಗಿಸಿ .ಆರೋಗ್ಯವಾಗಿರಿ
Leave A Reply