ಸೋಂಕಿತರ ಜಾಗದಲ್ಲಿ ನಿಂತು ಯೋಚಿಸಿ, ದೀಪ ಅರ್ಥ ಆಗುತ್ತೆ!!
ಕುಮಾರಸ್ವಾಮಿ, ಖಾದರ್ ಸಹಿತ ಕೆಲವರು ಮತ್ತು ಅವರ ಒರಗೆಯವರು ಬಿಟ್ಟರೆ ಹೆಚ್ಚಿನವರು ಭಾನುವಾರ ರಾತ್ರಿ 9 ಗಂಟೆಗೆ ದೀಪ ಹಚ್ಚುವುದಕ್ಕೆ ಪರವಾಗಿಯೇ ಇದ್ದರು. ಕ್ರೈಸ್ತ ಸಮುದಾಯದ ಧರ್ಮಗುರುಗಳು ಕರೆ ಕೊಟ್ಟ ಕಾರಣ ಕ್ರೈಸ್ತ ಭಾಂದವರು ಕೂಡ ಕ್ಯಾಂಡಲ್ ಹಿಡಿದು ಒಗ್ಗಟ್ಟನ್ನು ಪ್ರದರ್ಶಿಸಿದರು. ಇನ್ನು ಸಿನೆಮಾ ತಾರೆಯರಲ್ಲಿ ಅಮಿತಾಬ್ ಬಚ್ಚನ್ ನಂತವರು ಟಾರ್ಚ್ ಹಿಡಿದು ಬ್ಯಾಲೆನ್ಸ್ ಮಾಡಿದರು. ಕೆಲವು ರಾಷ್ಟ್ರೀಯವಾದಿ ಮುಸಲ್ಮಾನ ಬಂಧುಗಳು ಕೂಡ ನಿನ್ನೆಯ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಒಟ್ಟಿನಲ್ಲಿ ಕೊರೊನಾ ವಿರುದ್ಧದ ಸಮರದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಪರಸ್ಪರ ತೋರಿಸುವ ಪ್ರಯತ್ನ ಯಶಸ್ವಿ ಆಗಿದೆ. ಯಾಕೆಂದರೆ ಆರೋಗ್ಯವಾಗಿರುವ ನಮಗೆ ಈ ದೀಪದ ಕಾನ್ಸೆಪ್ಟು ದೊಡ್ಡ ವಿಷಯವಾಗಿ ಕಾಣ್ತಾ ಇಲ್ಲದೆ ಇರಬಹುದು. ಆದರೆ ಇವತ್ತು ಕೊರೊನಾ ಸೋಂಕಿನಿಂದ ಬಳಲುತ್ತಾ ಆಸ್ಪತ್ರೆಯ ಮಂಚದ ಮೇಲೆ ಮಲಗಿರುವ ಸಾವಿರ ಜನ ನಮ್ಮ ದೇಶದಲ್ಲಿ ಇದ್ದಾರೆ. ಕ್ವಾರಂಟೈನ್ ಆಗಿರುವ ಸಹಸ್ರಾರು ಜನರು ಮನೆಗಳ ಕೊಠಡಿಗಳ ಒಳಗೆ ಬಂಧಿಯಾಗಿದ್ದಾರೆ. ಅವರಲ್ಲಿ ಹುಮ್ಮಸ್ಸು ತುಂಬಬೇಕು ಎನ್ನುವ ಕಾರಣಕ್ಕೆ ಇಂತಹ ಅಭಿಯಾನ ಅಗತ್ಯ ಇತ್ತು. ಯಾಕೆಂದರೆ ಒಂಟಿಯಾಗಿ ಯಾರ ಸಂಪರ್ಕಕ್ಕೂ ಬರದೇ 14 ದಿನ ತೆಗೆಯುವುದು ನಿಜಕ್ಕೂ ಮಾನಸಿಕ ಹಿಂಸೆ. ಎಷ್ಟೋ ಜನರಿಗೆ ಒಂದು ವಾರ ಕೆಲಸಕ್ಕೆ ಹೋಗಲಾರದೇ, ಇನ್ನು ಕೆಲವರಿಗೆ ತಾವು ನಿತ್ಯ ಶೌಚಕ್ಕೆ ಹೋಗುವ ಮೊದಲು ಕಾಫಿ ಕುಡಿಯುತ್ತಿದ್ದ ಹೋಟೇಲಿಗೆ ಕಾಲಿಡದೇ, ಇನ್ನು ಕೆಲವರಿಗೆ ಅಂಗಡಿ ಬಾಗಿಲು ವಾರಗಟ್ಟಲೆ ತೆಗೆಯದೇ, ಇನ್ನು ಕೆಲವರಿಗೆ ರಾತ್ರಿ ಊಟದ ಮೊದಲು ಇಳಿಸುತ್ತಿದ್ದ ದ್ರವ್ಯವನ್ನು ಬಾಯಿಗೆ ಹಾಕದೇ ಜೀವನವೇ ಮುಗಿದು ಹೋದಂತೆ ಆಗುತ್ತಿರುವಾಗ ಒಂದು ಕ್ಷಣ ಕ್ವಾರಂಟೈನ್ ಆಗಿರುವವರ ಪರಿಸ್ಥಿತಿ ಊಹಿಸಿ.
ಕ್ವಾರಂಟೈನ್ ನಲ್ಲಿರುವವರಿಗೆ ನೀವು ಹೀಗೆ ಧೈರ್ಯ ಕೊಡದೇ ಹೋದರೆ ಅವರಲ್ಲಿ ಹೆಚ್ಚಿನವರು ಒಂದೋ ಆತ್ಮಹತ್ಯೆ ಮಾಡಿಕೊಂಡು ಅಥವಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಜೀವನ ಅಂತ್ಯ ಮಾಡಿಕೊಳ್ಳುತ್ತಾರೆ. ಅವರಿಗೆ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ತೋರಿಸುವ ಅಗತ್ಯ ಇತ್ತು. ಅದಕ್ಕಾಗಿ ಮೋದಿ ಜನರಿಗೆ ದೀಪದ ಕ್ವಾನ್ಸೆಪ್ಟಿಗೆ ಕರೆ ಕೊಟ್ಟರು. ಅದನ್ನು ಮೂಢನಂಬಿಕೆ ಎಂದು ಬೇಕಾದರೆ ಹೇಳಿ, ಅವೈಜ್ಞಾನಿಕ ಕಾರಣ ಎಂದು ಬೇಕಾದರೆ ಹೇಳಿ. ಆದರೆ ಅದರಿಂದ ನೀವು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಆದರೆ ನೀವು ದೆಹಲಿಯ ತಬ್ಲೀಘಿ ಜಮಾತೆ ಸಮಾವೇಶದಲ್ಲಿ ಭಾಗವಹಿಸಿ ಊರಿಗೆ ಮರಳಿದ್ದೀರಿ ಎಂದಾದರೆ ಅದನ್ನು ಸ್ಥಳೀಯ ಆಸ್ಪತ್ರೆಗೆ ಹೋಗಿ ತಿಳಿಸಿ. ಜಿಲ್ಲಾಡಳಿತದ 1077 ಸಂಖ್ಯೆಗಾದರೂ ಕರೆ ಮಾಡಿ ತಿಳಿಸಿ. ಯಾಕೆಂದರೆ ನೀವು ಹೇಳದಿದ್ದರೆ ದೇಶ ಕಳೆದುಕೊಳ್ಳುವಂತದ್ದು ತುಂಬಾ ಇದೆ. ಯಾಕೆಂದರೆ ನೀವು ಅಲ್ಲಿಗೆ ಹೋಗಿ ಬಂದಿದ್ದಿರಿ ಎಂದಾದರೆ ನಿಮಗೆ ಕೊರೊನಾ ಸೋಂಕು ತಟ್ಟಿದೆ ಎಂದರ್ಥ ಅಲ್ಲ. ಇನ್ನು ನೀವು ಅಲ್ಲಿಗೆ ಹೋಗಿ ಬಂದಿದ್ದಿರಿ ಎಂದಾದರೆ ಅದು ಅಪರಾಧ ಅಲ್ಲ. ನಿಮಗೆ ಶಿಕ್ಷೆ ಕೊಡಲು ಕರೆಯುವುದು ಅಲ್ಲ. ಆದರೆ ನೀವು ಅದನ್ನು ಮುಚ್ಚಿ ತಿರುಗಾಡುತ್ತಿರುವುದು ನಂತರ ತನಿಖೆಯಿಂದ ಗೊತ್ತಾದರೆ ಸರಕಾರ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂದು ಗೊತ್ತಿಲ್ಲ. ಸದ್ಯ ಕೊರೊನಾ ಹೆಚ್ಚುತ್ತಿರುವುದರಲ್ಲಿ ಸಿಂಹಪಾಲು ತಬ್ಲಿಘಿಗಳದ್ದು ಇದೆ.
ನಮ್ಮ ದೀಪದ ಕ್ಯಾನ್ಸೆಪ್ಟು ಇನ್ನು ವಿದೇಶದವರು ಕೂಡ ಅನುಸರಿಸುವ ಸಾಧ್ಯತೆ ಇದೆ. ಆದರೆ ನಮ್ಮಲ್ಲಿ ಮೋದಿಯವರನ್ನು ಶತಾಯಗತಾಯ ವಿರೋಧಿಸಬೇಕೆನ್ನುವವರು ಮಾತ್ರ ಇದನ್ನು ಮಾಡಿಲ್ಲ. ಶಹೀನಾಭಾಗ್ ನಲ್ಲಿ ಸಿಎಎ ವಿರುದ್ಧ ಕುಳಿತವರನ್ನು ಬೆಂಬಲಿಸಿದವರು ಮಾಡಿಲ್ಲ. ಒಂದಿಷ್ಟು ಬುದ್ಧಿಜೀವಿಗಳು ಮಾಡಿಲ್ಲ. ಅದೇ ಬುದ್ಧಿಜೀವಿಗಳು ಗೌರಿ ಲಂಕೇಶ್ ಅವರಂತವರು ಸತ್ತಾಗ ಕ್ಯಾಂಡಲ್ ಹಿಡಿದು ಬೀದಿಗೆ ಬರುತ್ತಾರೆ. ಈಗ ಕೇಳಿದರೆ ದೀಪ ಉರಿಸಿದರೆ ಕೊರೊನಾ ಓಡುತ್ತಾ ಎನ್ನುತ್ತಾರೆ. ದೀಪ ಉರಿಸಿದರೆ ಗೌರಿ ಲಂಕೇಶ್ ಅವರಂತವರು ಬರುತ್ತಾರೆ ಎಂದಾದರೆ ಕೊರೊನಾ ಕೂಡ ಓಡುತ್ತದೆ ಎನ್ನಬೇಕು. ಆದರೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿದವನಿಗೆ, ಕ್ವಾರಂಟೈನ್ ನಿಂದ ಕೋಣೆಯಲ್ಲಿ ಒಬ್ಬಂಟಿಯಾದವನಿಗೆ ಹೊರಗೆ ನನಗಾಗಿ ಪ್ರಾರ್ತಿಸುವವರು ಇದ್ದಾರೆ ಎನ್ನುವ ಧೈರ್ಯ ಬಂದರೆ ಸಾಕು, ಮೋದಿ ಪ್ರಯತ್ನ ಸಾರ್ತಕ. ಕೆಲವು ಮೌಲ್ವಿಗಳು ಕೂಡ ಇದಕ್ಕೆ ಕೈ ಜೋಡಿಸಿದ್ದರೆ ಚೆನ್ನಾಗಿತ್ತು. 130 ಕೋಟಿ ಜನರಲ್ಲಿ ಎಲ್ಲರನ್ನು ಒಪ್ಪಿಸಲು ಆಗುತ್ತಾ!!
Leave A Reply