ವೈದ್ಯರ ಮೇಲೆ ಕಲ್ಲು ಬಿಸಾಡುವವರ ಕೈ ತುಂಡಾಗಿ ಹೋಗಲಿ!!

ಬೇರೆ ರಾಷ್ಟ್ರಗಳ ಬಗ್ಗೆ ಗೊತ್ತಿಲ್ಲ, ಆದರೆ ಭಾರತದಲ್ಲಿ ನಮ್ಮ ಸರಕಾರ ಕೇವಲ ಕೊರೊನಾ ವಿರುದ್ಧ ಮಾತ್ರ ಹೋರಾಡುವುದಲ್ಲ. ತಬ್ಲಿಘಿಗಳ ವಿರುದ್ಧ, ಕ್ವಾರಂಟೈನ್ ಆಗಲು ಕೇಳದ ಒಂದು ಧರ್ಮದ ಹಲವರ ವಿರುದ್ಧ ಮತ್ತು ಕಾಂಗ್ರೆಸ್ಸಿಗರ ವಿರುದ್ಧವೂ ಹೋರಾಡಬೇಕು. ಆದ್ದರಿಂದ ಫೈಟ್ ಅಷ್ಟು ಸುಲಭ ಇಲ್ಲ. ಇವರನ್ನೆಲ್ಲ ಮೀರಿಸಿ ಮೋದಿಯವರು ಗೆದ್ದರೆ ಅದು ಮೂರನೇ ಮಹಾಯುದ್ಧ ಗೆದ್ದಷ್ಟೇ ಮುಖ್ಯವಾಗಿರುತ್ತದೆ. ಉದಾಹರಣೆಗೆ ಮೊರಾದಾಬಾದ್ ಎನ್ನುವ ಜಿಲ್ಲೆಯನ್ನೇ ತೆಗೆದುಕೊಳ್ಳಿ. ಅಲ್ಲಿ ಒಂದು ಏರಿಯಾದಲ್ಲಿ ಇಬ್ಬರು ಕೋವಿಡ್ 19 ಸೋಂಕಿತರು ಇದ್ದಾರೆ ಎನ್ನುವ ಮಾಹಿತಿ ಸ್ಥಳೀಯ ವೈದ್ಯರಿಗೆ ಸಿಕ್ಕಿತ್ತು. ಅವರು ತಕ್ಷಣ ಆ ಸೋಂಕಿತರನ್ನು ಕರೆದು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡೋಣ, ಚಿಕಿತ್ಸೆ ಕೊಟ್ಟು ಗುಣಪಡಿಸೋಣ ಎಂದು ಹೋಗುತ್ತಾರೆ. ಅಲ್ಲಿ ಸೋಂಕಿತರ ಮನೆ ಹತ್ತಿರ ಹೋಗುತ್ತಲೇ ಅಕ್ಕಪಕ್ಕದ ಮನೆಗಳ ಟೇರೆಸಿನಿಂದ ಕಲ್ಲುಗಳು ಹೇಗೆ ಬಿದ್ದವು ಎಂದರೆ ವೈದ್ಯರಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಮಲಗಬೇಕಿದೆ. ಅವರು ಹೋದದ್ದು ಆ ಏರಿಯಾದವರ ಜೀವ ಉಳಿಸಲು. ಈಗ ಅವರೇ ಪೆಟ್ಟು ತಿಂದು ಮಲಗಬೇಕಿದೆ. ನಂತರ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಹೋಗಿ 23 ಮಂದಿಯನ್ನು ಬಂಧಿಸಿದ್ದಾರೆ. ಅವರಲ್ಲಿ 13 ಜನ ಹೆಂಗಸರು ಎನ್ನುವುದು ಗಮನಾರ್ಹ ವಿಷಯ.
ಇನ್ನು ಇಂದೋರ್ ಎನ್ನುವ ಪ್ರದೇಶಕ್ಕೆ ಹೋಗೋಣ. ಅಲ್ಲಿಯೂ ಇದೆ ಕಥೆ. ವಿಶೇಷ ಏನೆಂದರೆ ವೈದ್ಯರ ಮೇಲೆ ಕಲ್ಲು ಹೊಡೆದು ಬಂಧಿತರಾಗಿರುವವರಲ್ಲಿ ಮೂವರು ಕೋವಿಡ್ 19 ಸೋಂಕಿತರು. ಅದರ ಅರ್ಥ ತಮ್ಮನ್ನು ರಕ್ಷಿಸಲು ಬಂದವರನ್ನೇ ಮುಗಿಸಲು ಒಂದು ಧರ್ಮದ ಹಲವರು ನಿರ್ಧರಿಸಿಬಿಟ್ಟಿದ್ದಾರೆ. ಇಂತಹದೇ ಸನ್ನಿವೇಶವನ್ನು ಬಿಹಾರದ ಮೋತಿಹಾರ್ ಎನ್ನುವ ಪ್ರದೇಶಕ್ಕೆ ಕ್ವಾರಂಟೈನ್ ಮಾಡಲು ಹೋದ ವೈದ್ಯರು ಎದುರಿಸಿದ್ದಾರೆ. ಇದು ಕೇವಲ ಮೂರು ಉದಾಹರಣೆ. ಹೆಚ್ಚು ಕಡಿಮೆ ಅನೇಕ ಕಡೆ ವೈದ್ಯರು ಇಂತಹ ಕಹಿ ಅನುಭವವನ್ನು ಅನುಭವಿಸುತ್ತಿದ್ದಾರೆ. ಕಲ್ಲು ಹೊಡೆಯಲು ಬಂದವರು ಸತ್ತರೆ ಸಾಯುತ್ತಾರೆ, ಅಂತವರ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಹೇಳಿಬಿಡಬಹುದಿತ್ತು. ಆದರೆ ನಮ್ಮದು ಪಾಕಿಸ್ತಾನವಲ್ಲ. ಅಲ್ಲಿ ಹಿಂದೂಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಬಾರದೆಂದು ಇಮ್ರಾನ್ ಖಾನ್ ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾನೆ. ಅಲ್ಲಿ ಬಹುಸಂಖ್ಯಾತ ಮುಸ್ಲಿಮರು ಮಾತ್ರ ಬದುಕಿದರೆ ಸಾಕು ಎನ್ನುವ ನಿರ್ಧಾರಕ್ಕೆ ಅಲ್ಲಿನ ಸರಕಾರ ಬಂದಿದೆ. ಆದರೆ ನಮ್ಮಲ್ಲಿ ಎಲ್ಲಾ ಧರ್ಮದವರು ಮಾನವರು ಎನ್ನುವ ಅರ್ಥದಲ್ಲಿ ನಡೆಯುವ ಸರಕಾರ ಇದೆ.
ಇದು ಒಂದು ಧರ್ಮದವರ ಅಸಹಕಾರದ ಕಥೆಯಾದರೆ ಇನ್ನು ಈ ಮಧ್ಯೆ ಕಾಂಗ್ರೆಸ್ಸಿಗರು ನಮ್ಮದು ಇರಲಿ ಎಂದು ನೀಚ ಆಟ ಆಡಲು ತಯಾರಿ ನಡೆಸಿ ಸಿಕ್ಕಿಬಿದ್ದಿದ್ದಾರೆ. ಮಹಾರಾಷ್ಟ್ರದ ಕಾಂಗ್ರೆಸ್ಸಿಗ ವಿನಯ ದುಬೆ ಎನ್ನುವವನು ಬಾಂದ್ರಾದಲ್ಲಿ ಯಾವ ಪರಿಸ್ಥಿತಿಯನ್ನು ನಿರ್ಮಿಸಿದ್ದ ಎಂದರೆ ಗೋಣಿಯಲ್ಲಿ ಕೋಟಿಗಟ್ಟಲೆ ಹಣ ಇದೆ, ಈಗ ಹೆಲಿಕಾಪ್ಟರ್ ಮೂಲಕ ಆಕಾಶದಿಂದ ಸುರಿಸಲಾಗುತ್ತದೆ. ಸಿಕ್ಕಿದವರು ಹೆಕ್ಕಿಕೊಳ್ಳಿ ಎಂದು ಸೂಚನೆ ಕೊಡುವ ರೀತಿಯಲ್ಲಿ ಜನರಲ್ಲಿ ಆಸೆ ಹುಟ್ಟಿಸಿದ್ದ. ಅವನು ಏನು ಹೇಳಿದ್ದ ಎಂದರೆ ” ಇವತ್ತು ಮುಂಬೈನಿಂದ ನಿಮ್ಮ ನಿಮ್ಮ ಊರಿಗೆ ಹೋಗಲು ರೈಲಿನ ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ ಸ್ಟೇಶನ್ನಿಗೆ ಬಂದು ನಿಮ್ಮ ನಿಮ್ಮ ಊರಿಗೆ ಹೋಗುವ ರೈಲಿನಲ್ಲಿ ಹತ್ತಿ” ಎಂದು ಮುಂಬೈನಲ್ಲಿರುವ ವಿವಿಧ ರಾಜ್ಯಗಳ ಕೂಲಿಕಾರ್ಮಿಕರಲ್ಲಿ ಸುಳ್ಳು ಆಸೆ ಹುಟ್ಟಿಸಿದ್ದ. ಅದನ್ನು ನಂಬಿದ್ದ ಜನರು ಸಾವಿರಾರು ಸಂಖ್ಯೆಯಲ್ಲಿ ಬಂದು ಸೇರಿದ್ದರು. ನಂತರ ಇದು ಸುಳ್ಳಿನ ಕಂತೆ ಎಂದು ಗೊತ್ತಾಯಿತು. ಇಷ್ಟೆಲ್ಲ ಯಾಕೆ, ಹೀಗೆ ಮಂಗಳೂರಿನಲ್ಲಿಯೇ ಮೊನ್ನೆ ನಡೆದು ಹೋಗಿದೆ. ನಿಮ್ಮ ಅಕೌಂಟಿನಲ್ಲಿ ಎರಡೆರಡು ಸಾವಿರ ರೂಪಾಯಿ ಹಾಕುತ್ತೇವೆ ಎಂದು ಆಸೆ ಹುಟ್ಟಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು (!!) ಸ್ಥಳೀಯ ಕೂಲಿ ಕಾರ್ಮಿಕರನ್ನು ಕರೆಸಿ ಸಾಲಿನಲ್ಲಿ ನಿಲ್ಲಿಸಿದ್ದರು. ಸುಮಾರು 600 ಜನ ಹೇಗೆ ಗುಂಪು ಸೇರಿದ್ದರು ಎಂದರೆ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿಬಿಟ್ಟಿದ್ದರು. ನಂತರ ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಅಲ್ಲಿಂದ ಅಧಿಕಾರಿಗಳು ಕಾಲ್ಕಿತ್ತಿದ್ದಾರೆ.
ಇದೆಲ್ಲಾ ಏನು ಸೂಚಿಸುತ್ತದೆ. ಒಂದು ಕಡೆ ನಮ್ಮ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಅವರು ತಮ್ಮ ಎರಡು ವರ್ಷದ ಒಳಗಿನ ಪುಟ್ಟ ಮಗುವನ್ನು ಎತ್ತಿ ಆಡಿಸಲು ಪುರುಸೊತ್ತು ಇಲ್ಲ ಮತ್ತು ಅವಕಾಶವೂ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ನಾವೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿರುವಂತೆ ಅನೇಕ ವೈದ್ಯರು ದೂರದಿಂದಲೇ ತಮ್ಮ ಮಗುವನ್ನು ನೋಡಿ ಆನಂದ ಭಾಷ್ಪ ಸುರಿಸುತ್ತಿದ್ದಾರೆ. ಪೊಲೀಸರು ಮನೆಯ ಹೊರಗೆ ಕುಳಿತು ಚಾ ಸೇವಿಸಿ ತಿಂಡಿ ತಿಂದು ಡ್ಯೂಟಿಗೆ ಮರಳುತ್ತಿದ್ದಾರೆ. ಹೀಗೆ ಅನೇಕ ದೇವತಾ ಸ್ವರೂಪಿಗಳ ರೂಪದಲ್ಲಿರುವವರು ನಮ್ಮ ಉದ್ಧಾರಕ್ಕಾಗಿ ಜೀವವನ್ನೇ ಪಣವಾಗಿಟ್ಟು ಕರ್ತವ್ಯದಲ್ಲಿದ್ದರೆ ಕೆಲವರು ಪಾಪಿಗಳು ಕಲ್ಲು ಎತ್ತಿ ಇವರತ್ತ ಎಸೆಯುತ್ತಿದ್ದಾರೆ. ಅವರನ್ನು ಮನುಷ್ಯರು ಎನ್ನಲಾಗುತ್ತದೆಯಾ? ರಾಕ್ಷಸರಿಗಿಂತ ಬೇರೆ ಕೆಟ್ಟ ಶಬ್ದ ಇದೆಯಾ?
Leave A Reply