ಮೇಲ್ನೋಟಕ್ಕೆ ಕಾಣುವ ದೃಶ್ಯಗಳನ್ನುಆಧರಿಸಿ ವೀಡಿಯೋ ಶೇರ್ ಮಾಡುವ ಮುನ್ನಾ ಆಲೋಚಿಸಿ!
ನಿನ್ನೆ ಅಂದರೆ ಎಪ್ರಿಲ್ 16 ನೇ ತಾರೀಕು ಮಂಗಳೂರಿನ ಲಾಲ್ ಭಾಗ್ ಸಮೀಪ ಎಂದು ಹೇಳಲಾಗುವ ಪೋಲಿಸರು ಮತ್ತು ಒಬ್ಬ ಹಿರಿಯ ವ್ಯಕ್ತಿಯ ನಡುವೆ ನಡೆದ ಮಾತುಕತೆ ವೀಡಿಯೋ ಈಗಾಗಲೇ ವೈರಲ್ ಆಗಿದೆ.ಕುತೂಹಲಕಾರಿ ವೀಡಿಯೋ ಎಂದಾಕ್ಷಣ ಪ್ರತಿಯೊಬ್ಬರು ಶೇರ್ ಮಾಡುತ್ತಾರೆ.ಆದರೆ ಆ ವೀಡಿಯೋ ದಲ್ಲಿ ಮೇಲ್ನೋಟಕ್ಕೆ ಕಾಣುವ ದೃಶ್ಯಗಳನ್ನು ಆಧರಿಸಿ ಯಾವುದು ತಪ್ಪು ಯಾವುದು ಸರಿ ಎಂಬುವ ನಿರ್ಧಾರಕ್ಕೆ ಈ ಕ್ಷಣಕ್ಕೆ ಬರುವುದು ಬೇಡ ಎಂಬುವುದು ತುಳುನಾಡಿನ ಜವಾಬ್ದಾರಿಯುತ ಮಾಧ್ಯಮವಾಗಿ ನಮ್ಮ ಕಳಕಳಿಯ ವಿನಂತಿ.
ವೀಡಿಯೋ ದ್ರಶ್ಯದಲ್ಲಿ ಏನಿದೆ? :- ಮೊಬೈಲ್ ನಲ್ಲಿ ಸೆರೆಯಾದ ವೀಡಿಯೋದಲ್ಲಿ ಲಾಕ್ ಡೌನ್ ಸಂಧರ್ಭದಲ್ಲಿ ಪಾಸ್ ರಹಿತವಾಗಿ ಚಲಿಸುತ್ತಿರುವ ಕಾರನ್ನು ತಡೆಹಿಡಿದು ಪೋಲಿಸರು ಪಾಸ್ ಕೇಳುತ್ತಾರೆ.ಆ ಹಿರಿಯ ವ್ಯಕ್ತಿ ಯಾವ ಪಾಸ್ ಅಂತ ಲಾಕ್ ಡೌನ್ ಅರಿವೇ ಇಲ್ಲದ ರೀತಿ ವರ್ತಿಸುತ್ತಾರೆ.ಮೇಲಾಗಿ ನನ್ನನ್ನು ಇಲ್ಲಿಯ ತನಕ ವಾಹನ ರೆಕಾರ್ಡ್ ಗಾಗಿ ನಿಲ್ಲಿಸಿದ್ದಾರೆ ಬಿಟ್ಟರೆ ಯಾರೊಬ್ಬರೂ ಪಾಸ್ ಗಾಗಿ ನಿಲ್ಲಿಸಲಿಲ್ಲ ಅಂತ ಗಟ್ಟಿ ಸ್ವರದಲ್ಲಿ ಅನುಚಿತವಾದ ರೀತಿಯಲ್ಲಿ ಹೇಳಿದಾಗ ಪೋಲಿಸರು ಸಿಟ್ಟುಗೊಂಡು ಕಾರ್ ಎದುರು ಬ್ಯಾರಿಕೇಡ್ ಇಡುತ್ತಾರೆ.ಇದರಿಂದ ವಿಚಲಿತರಾದ ಆ ಹಿರಿಯ ವ್ಯಕ್ತಿ ಅವಾಚ್ಯ ಶಬ್ದಗಳಲ್ಲಿ ಬೈದದ್ದು ಕಾಣಿಸುತ್ತದೆ ಮತ್ತು ಆ ವ್ಯಕ್ತಿಗೆ ಕಿವಿಯೂ ಸರಿಯಾಗಿ ಕೇಳಿಸುವುದಿಲ್ಲ, ಲಾಕ್ ಡೌನ್ ಬಗ್ಗೆ ಮಾಹಿತಿಯೇ ಇಲ್ಲವೇನೋ, ಮಾನಸಿಕ ಕಾಯಿಲೆ ಇದ್ದ ಹಾಗೆ, ದುರ್ವರ್ತನೆ, ಇವೆಲ್ಲ ವೀಡಿಯೋ ನೋಡಿದಾಗ ಮೇಲ್ನೋಟಕ್ಕೆ ತಿಳಿಯುವ ಅಂಶಗಳು.
ವೀಡಿಯೋ ಹಿನ್ನಲೆ ಏನು?:- ಜವಾಬ್ದಾರಿಯುತ ಮಾಧ್ಯಮವಾಗಿ ನಾವು ಆ ವ್ಯಕ್ತಿಯ ಪರಿವಾರವನ್ನು ಸಂಪರ್ಕಿಸಿದಾಗ ಅವರಿಗೆ Alzheimer’s disease (ಒಂದು ತರಹ ವಿಸ್ಮ್ರತಿ ರೋಗ) ಇರುವುದು ತಿಳಿಯಿತು.ಅದಲ್ಲದೇ ಅವರ ಇಬ್ಬರು ಹೆಣ್ಣು ಮಕ್ಕಳು ಕೂಡ ವಿದೇಶದಲ್ಲಿದ್ದು ಅವರ ಹೆಂಡತಿ ಮಾತ್ರ ಇದ್ದು ದಿನದ 24 ಘಂಟೆಯೂ ಅವರ ಆರೈಕೆಯಲ್ಲಿ ತೊಡಗಿರುತ್ತಾರೆ.ನಿನ್ನೆ ಮಧ್ಯಾಹ್ನ ಒಂದು ಕ್ಷಣ ಅವರ ಹೆಂಡತಿ ನಿದ್ರೆಗೆ ಜಾರಿದ ಸಂಧರ್ಭದಲ್ಲಿ ಹೆಂಡತಿಯ ಅರಿವಿಗೆ ಬಾರದೇ ಕಾರು ಚಲಾಯಿಸಿ ಮನೆಯಿಂದ ಹೊರಟು ಬಿಟ್ಟಿದ್ದಾರೆ.ತಾನು ಎಲ್ಲಿಗೆ ಹೊರಟಿದ್ದೇನೆ ಅಂತ ಮರೆತು ಪುನಃ ಮನೆ ಕಡೆ ಬರುವಾಗ ದಾರಿಯಲ್ಲಿ ಪೋಲಿಸರು ತಡೆದಿದ್ದಾರೆ.ನಂತರ ಏನಾಯ್ತು ಎಂಬುವುದು ವೀಡಿಯೋದಲ್ಲಿ ಇದೆ.
ಹಾಗಾದರೆ ಇಲ್ಲಿ ತಪ್ಪು ಯಾರದ್ದು ಅಂತ ಹೇಳಲು ಈ ಕ್ಷಣದಲ್ಲಿ ಕಷ್ಟ. ರಾತ್ರಿ ಹಗಲು ಎನ್ನದೇ ಅವರ ಧರ್ಮಪತ್ನಿ ಅವರ ಆರೈಕೆ ಮಾಡುತ್ತಿದ್ದಾಳೆ.ಆ ವ್ಯಕ್ತಿಗೆ ಗೊತ್ತಾಗದೇ ಬರುವ ಸಿಟ್ಟು ಸಹಿಸಿಕೊಂಡಿದ್ದೂ ಪತಿ ಸೇವೆ ಮಾಡುತ್ತಿದ್ದಾಳೆ.ವೀಡಿಯೋ ವೈರಲ್ ಆಗಿ ತನ್ನನ್ನು ಅಪರಾಧಿ ಇಟ್ಟದ್ದನ್ನು ನೋಡಿ ಈಗ ಆಕೆ ತುಂಬಾ ನೊಂದು ಕೊಂಡಿದ್ದಾರೆ.ಇನ್ನೊಂದು ಕಡೆ ಪೋಲಿಸರು ಕೂಡ ಅವರಿಗೆ ನೀಡಿದ ಜವಾಬ್ದಾರಿ ಮತ್ತು ಕರ್ತವ್ಯವನ್ನು ತುಂಬಾ ನಿಷ್ಠೆಯಿಂದ ಮಾಡಿದ್ದಾರೆ.ಮತ್ತೊಂದು ಕಡೆ ನೋಡುವಾಗ ಆ ವ್ತಕ್ತಿಗೆ ಏನು ನಡೆಯುತ್ತಿದೆ ಎಂಬುವುದು ಈ ಕ್ಷಣದ ವರೆಗೂ ತಿಳಿದಿಲ್ಲ.
ಆದ್ದರಿಂದ ಒಂದು ಜವಾಬ್ದಾರಿಯುತ ಮಾಧ್ಯಮವಾಗಿ ಜವಾಬ್ದಾರಿಯುತ ನಾಗರಿಕರಲ್ಲಿ ಈ ಕ್ಷಣದಿಂದಲೇ ಆ ವೀಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ ಪೋಲಿಸರು ಎಲ್ಲವನ್ನೂ ಕೂಲಂಕುಷವಾಗಿ ಪರಾಮರ್ಶಿಸಿ ಒಂದು ನಿರ್ಧಾರಕ್ಕೆ ಬರುವ ತನಕ ಯಾವುದೇ ತೀರ್ಮಾನಕ್ಕೆ ಬರಬಾರದಾಗಿ ತಮ್ಮಲ್ಲಿ ಕಳಕಳಿಯ ವಿನಂತಿ.
Leave A Reply