• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯಡಿಯೂರಪ್ಪನವರು ಯೋಗಿ ಆಗಬೇಕು ಎನ್ನುವ ಆಸೆ ಯಾಕೆ?

Hanumantha Kamath Posted On April 21, 2020


  • Share On Facebook
  • Tweet It

ಮೊತ್ತ ಮೊದಲಿಗೆ ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಏನು ಮಾಡಬೇಕು ಎಂದರೆ ಪಾದರಾಯನಪುರದಲ್ಲಿ ಸಾರ್ವಜನಿಕ ಸೊತ್ತು ಎಷ್ಟು ನಷ್ಟವಾಗಿದೆ ಎಂದು ಲೆಕ್ಕ ಹಾಕಲು ಅಧಿಕಾರಿಗಳಿಗೆ ಹೇಳಬೇಕು. ನಂತರ ಆರೋಪಿಗಳಿಗೆ ನೋಟಿಸ್ ನೀಡಬೇಕು. ಇಷ್ಟು ದಿನ ಗಳ ಒಳಗೆ ಬಂದು ಕಟ್ಟಿ ಇಲ್ಲ ಇಂತಿಷ್ಟು ವರ್ಷ ಜೈಲಿನಲ್ಲಿಯೇ ಇರಿ ಎನ್ನುವ ಕಾನೂನು ಬರಬೇಕು. ನಷ್ಟವನ್ನು ನಾಶಪಡಿಸಿದವರಿಂದಲೇ ವಸೂಲಿ ಮಾಡಬೇಕು. ಕೇವಲ ನಷ್ಟವಾಗಿರುವುದನ್ನು ಮಾತ್ರವಲ್ಲದೆ ಅದರ ಮೂರು ಪಟ್ಟು ದಂಡ ವಸೂಲಿ ಮಾಡಬೇಕು. ಆಗ ಮುಂದಿನ ಬಾರಿ ಹಾಗೆ ಸರಕಾರಿ ಸ್ವತ್ತನ್ನು ನಾಶಮಾಡಲು ಮುಂದಾಗುವವರಿಗೆ ಒಳಗೆ ಹೆದರಿಕೆ ಶುರುವಾಗುತ್ತದೆ. ಅದರೊಂದಿಗೆ ಪೊಲೀಸರ ಮೇಲೆ, ಆಶಾಕಾರ್ಯಕರ್ತೆಯರ ಮೇಲೆ, ಸರಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದವರ ಆಸ್ತಿಯನ್ನು ಜಪ್ತಿ ಮಾಡಬೇಕು. ಅದನ್ನು ಬಹಿರಂಗ ಏಲಂ ಮಾಡಬೇಕು. ಅದರಿಂದ ಬಂದ ಹಣವನ್ನು ಹಲ್ಲೆಗೊಳಗಾದವರಿಗೆ ಹಂಚಿಬಿಡಬೇಕು. ಇನ್ನು ಮೂರನೇಯದಾಗಿ ಕನಿಷ್ಟ ಒಂದು ವರ್ಷ ಹಲ್ಲೆ ಮಾಡಿದವರಿಗೆ ಜಾಮೀನು ಸಿಗದ ಹಾಗೆ ಮಾಡಬೇಕು. ಯಾವಾಗ ಜೈಲಿನ ಒಳಗೆ ಒಂದು ವರ್ಷ ಕೊಳೆಯುತ್ತಾರೋ ಆಗ ಈ ಜೀವನವೇ ಬೇಸರವೆನಿಸುತ್ತದೆ. ಅದರ ನಂತರ ಜಮೀರ್ ಅಹ್ಮದ್ ಅವರೇ ಮುಂದೆ ನಿಂತು ಪೊಲೀಸರಿಗೆ ಹೊಡೆಯಿರಿ ಎಂದರೂ ಕೈ ಮುಂದೆ ಬರುವುದಿಲ್ಲ. ಹೀಗೆ ಮಾಡುವ ಮೂಲಕ ಬಿಎಸ್ ವೈ ಸರಕಾರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡರೆ ಆಗ ಮುಂದಿನ ಬಾರಿ ಹಲ್ಲೆ ಬಿಡಿ, ಒಂದು ಸಣ್ಣ ಕಲ್ಲು ಎತ್ತಲೂ ಕೂಡ ಕೆಲವರಿಗೆ ಧೈರ್ಯ ಬರುವುದಿಲ್ಲ. ಇನ್ನು ವೈದ್ಯರ, ಪೊಲೀಸರ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಮಾಡಿದವರಿಗೆ ಕನಿಷ್ಟ 5 ವರ್ಷ ಜಾಮೀನಿಲ್ಲ ಎಂದು ಸುಗ್ರಿವಾಜ್ಞೆ ತರಲಿ ಎಲ್ಲವೂ ಸರಿಯಾಗುತ್ತದೆ. ಇದೆಲ್ಲ ಮಾಡಲು ಯಡಿಯೂರಪ್ಪನವರಿಗೆ ಆಗುತ್ತಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಸರಿಯಾಗಿ ನೋಡಿದರೆ ಪಾದರಾಯನಪುರದ ಘಟನೆಗೆ ಸರಕಾರ ಕಠಿಣ ಕ್ರಮ ತೆಗೆದುಕೊಂಡರೆ ಭಾರತೀಯ ಜನತಾ ಪಾರ್ಟಿ ಸರಕಾರಕ್ಕೆ ಲಾಭವೇ ವಿನ: ನಷ್ಟವಿಲ್ಲ. ಎರಡು ಲಾಭಗಳಿವೆ. ಒಂದು ಮುಂದಿನ ದಿನಗಳಲ್ಲಿ ದಂಗೆ ಎನ್ನುವುದೇ ಇರುವುದಿಲ್ಲ. ಇನ್ನೊಂದು ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ಸಾಮಾನ್ಯ ಜನರಿಗೆ ಸರಕಾರದ ಮೇಲೆ ಅಭಿಮಾನ ಹುಟ್ಟುತ್ತದೆ.

ಇನ್ನು ಬಿಎಸ್ ವೈ ಸುತ್ತಮುತ್ತ ಇರುವ ಅಧಿಕಾರಿಗಳು ಸಿಎಂಗೆ ಸರಿಯಾದ ಮಾಹಿತಿ ಕೊಡಬೇಕೆ ವಿನ: ಏನೇನೋ ನಿರ್ಧಾರ ತೆಗೆದುಕೊಳ್ಳಲು ಪ್ರೇರೆಪಿಸಿ ನಂತರ ಕೇಂದ್ರದಿಂದ ಛೀಮಾರಿ ಹಾಕಿದ ನಂತರ ಹಿಂತೆಗೆದುಕೊಳ್ಳುವಂತೆ ಮಾಡಬಾರದು. ಯಾಕೆಂದರೆ ಕೋವಿಡ್ 19ರ ವಿರುದ್ಧದ ಯುದ್ಧ ರಾಜ್ಯಗಳ ನಡುವಿನ ಸಂಗತಿ ಅಲ್ಲ. ಇದು ಜಾಗತಿಕ ವರ್ತಮಾನ. ಕೇಂದ್ರದಲ್ಲಿ ಕುಳಿತಿರುವವರಿಗೆ ಯಾವಾಗ ಏನು ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಗೊತ್ತಿರುತ್ತೆ. ಅಲ್ಲಿಂದ ಮಾಹಿತಿ ಬರದೇ ಮೊನ್ನೆ ಮಾಡಿದ ಹಾಗೆ ನಾಳೆಯಿಂದ ಲಾಕ್ ಡೌನ್ ವಿನಾಯಿತಿ, ದ್ವಿಚಕ್ರ ವಾಹನಗಳು ಹೊರಗೆ ಬರಬಹುದು, ಐಟಿ ಬಿಟಿ ಕಂಪೆನಿಗಳು ಕೆಲಸ ಮಾಡಬಹುದು, ಹೀಗೆ ಹಾಗೆ ಎಂದು ಘೋಷಣೆ ಮಾಡಿದ ಬಳಿಕ ಜನರ ವಿರೋಧ ಬಂದ ಕೂಡಲೇ ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು. ಇನ್ನು ತಬ್ಲಿಘಿಗಳ ವಿರುದ್ಧ ಕಮೆಂಟ್ ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಡಿಯೂರಪ್ಪನವರು ಹೇಳಿ ಅವರದ್ದೇ ಪಕ್ಷದವರು “ಕಾರ್ಯಕರ್ತರೇ ನಿಮಗೆ ತೊಂದರೆ ಆದರೆ ನಾವಿದ್ದೇವೆ” ಎಂದು ಹೇಳಿ ಅದು ಕೂಡ ಯಡ್ಡಿಜಿಗೆ ಮುಜುಗರವಾಯಿತು. ಇನ್ನು ಇದೇ ಜಮೀರ್ ಕ್ಷೇತ್ರದಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆದಾಗ ಸೂಕ್ತ ಕ್ರಮ ಕೈಗೊಂಡಿದ್ದರೆ ಪಾದರಾಯನಪುರ ಆಗುತ್ತಿರಲಿಲ್ಲ. ಮುಸ್ಲಿಂ ಶಾಸಕರ ಸಭೆ ಕರೆದು ವಿನಂತಿಸುವುದಕ್ಕಿಂತ ಎಚ್ಚರಿಕೆ ಕೊಟ್ಟಿದ್ದರೆ ಸರಿಯಾಗುತ್ತಿತ್ತು. ಹೀಗೆ ಯಡಿಯೂರಪ್ಪನವರ ಪ್ರತಿ ನಡೆಯ ಹಿಂದೆ ವೈಫಲ್ಯಗಳಿವೆ. ಅವರಿಗೆ ವಯಸ್ಸಾಗಿದೆ ನಿಜ, ಆದರೆ ಅವರಿಗೆ ಸಲಹೆ ಕೊಡುವವರಲ್ಲಿ ಯುವ ಅಧಿಕಾರಿಗಳು ಇರಬಹುದಲ್ಲ. ಒಂದು ಕಡೆ “ವಿಜಯ” ಇನ್ನೊಂದೆಡೆ “ರಾಘವೇಂದ್ರ” ಇದ್ದರೂ ಈ ಪರಿ ತೊಂದರೆಗೆ ಸಿಲುಕುತ್ತಿರುವ ಯಡ್ಡಿಜಿ ತಮ್ಮ ರಾಜಕೀಯ ಜೀವನದ ಕೊನೆಯ ಇನ್ಸಿಂಗ್ಸ್ ನಲ್ಲಿ “ಯುದ್ಧ ಸೋತ ದೊರೆ” ಎಂದು ಆಗದಿರಲಿ!

  • Share On Facebook
  • Tweet It


- Advertisement -


Trending Now
ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
Hanumantha Kamath June 29, 2022
ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
Hanumantha Kamath June 27, 2022
Leave A Reply

  • Recent Posts

    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
  • Popular Posts

    • 1
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 2
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • 3
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 4
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 5
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search