ದಕ್ಷಿಣ ಕನ್ನಡದ ಜನ ಪ್ರತಿನಿಧಿಗಳಿಗೆ ಇದು ಎಚ್ಚರಿಕೆ ಕರೆಗಂಟೆ!
ಕೊರೊನಾ ಮಹಾಮಾರಿ ಎಲ್ಲೆಡೆ ಪಸರಿಸುತ್ತಿದ್ದು ಇತ್ತೀಚೆಗೆ ಪತ್ರಕರ್ತರನ್ನೂ ಪರೀಕ್ಷೆಗೊಳಪಡಿಸಿಸಬೇಕೆಂದು ಸರ್ಕಾರ ತಿಳಿಸಿತ್ತು. ಹೀಗಾಗಿ ಕನ್ನಡ ಖಾಸಗಿ ಸುದ್ದಿವಾಹಿನಿಯ ಕ್ಯಾಮಾರಾಮ್ಯಾನ್‍ಗೂ ಕೊರೊನಾ ಟೆಸ್ಟ್ ಬಳಿಕ ಕೊರೊನಾ ಪಾಸಿಟಿವ್ ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕರ್ನಾಟದ ಐವರು ಮಂತ್ರಿಗಳನ್ನು ಕ್ವಾರೆಂಟ್‍ನಲ್ಲಿರಲು ಆರೋಗ್ಯ ಇಲಾಖೆ ಸೂಚಿಸಿದೆ. ರೋಗಿ 475 ಎಂದು ಕರೆಯಲ್ಪಡುವ ಆ ಪತ್ರಕರ್ತ 5 ಜನ ಮಂತ್ರಿಗಳನ್ನು ಭೇಟಿಯಾಗಿದ್ದು ಇಬ್ಬರು ಉಪಮುಖ್ಯಮಂತ್ರಿಗಳಾದ ಗೋವಿಂದ್ ಕಾರಾಜೋಳ ಮತ್ತು ಡಾ.ಎನ್. ಅಶ್ವಥ್ ನಾರಾಯಣ್, ವಸತಿ ಸಚಿವ ವಿ. ಸೋಮಣ್ಣ, ಪ್ರವಾಸೋದ್ಯಮ ಕನ್ನಡ ಮತ್ತು ಸಂಸ್ಕøತಿ ಸಚಿವ ಸಿ.ಟಿ.ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಈ ಐವರು ಮಾಧ್ಯಮದೊಂದಿಗೆ ಸಂವಾದವನ್ನು ನಡೆಸಿದ್ದು ಹೀಗಾಗಿ ಇವರನ್ನು ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಲಾಗಿದೆ.
ಹೌದು… ಇಡೀ ದೇಶ ಲಾಕ್‍ಡೌನ್ ಆಗಿದೆ ಈ ಸಂದರ್ಭದಲ್ಲಿ ಜನತೆಗೆ ಒಂದೊತ್ತಿನ ಊಟಕ್ಕೂ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಇದೆ. ಆ ಸಂದರ್ಭದಲ್ಲಿ ಆಹಾರದ ಕಿಟ್‍ಗಳನ್ನು ವಿತರಿಸುವ ಸಂದರ್ಭದಲ್ಲೂ ಶಾಸಕರು ಸಚಿವರು ತಮ್ಮನ್ನು ತಾವು ಮೈಮರೆತು ಕೆಲಸ ಮಾಡುತ್ತಿದ್ದೀರಿ. ಒಂದಷ್ಟು ಜನರನ್ನು ಕರೆದುಕೊಂಡು ಹೋಗಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೆ ಆಹಾರದ ಕಿಟ್‍ಗಳನ್ನು ವಿತರಿಸುತ್ತಿರುತ್ತೀರಿ. ದಕ್ಷಿಣ ಕನ್ನಡದಲ್ಲಿಯೂ ಇದೇ ರೀತಿ ತಪ್ಪು ನಡೆಯುತ್ತಿದೆ. ಮಂಗಳೂರಿನಲ್ಲಿಯೂ ನಿರಾಶ್ರಿತ ಕೂಲಿಕಾರ್ಮಿಕರು ಸೇರಿಕೊಂಡಿರುವ ಸಂದರ್ಭದಲ್ಲಿ ನಿರಾಶ್ರಿತರಿಗೆ ಊಟ ಬಡಿಸುವ ಸಮಯದಲ್ಲಿ, ಬಂದರು ಪ್ರದೇಶ, ಮುಂತಾದ ಕಡೆಗಳಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡದೆ, ಉಳ್ಳಾಲದ ಯುನಿಟಿ ಹಾಲ್ ಬಳಿ ಕಿಟ್ ಹಂಚಿಕೆಯಲ್ಲಿ, ಒಂದಷ್ಟು ಜನರು ಒಟ್ಟುಗೂಡಿದ್ದು ಮಹಾಮಾರಿ ರೋಗವನ್ನು ನಾವೇ ಮೈಗೆಳುದುಕೊಂಡಂತೆ.
ಲಾಕ್‍ಡೌನ್ ಆದಾಗಿನಿಂದ ಜನರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡುತ್ತಿದ್ದೀರಿ, ಅಗತ್ಯ ವಸ್ತುಗಳನ್ನು ಕೆಲವರ ಮನೆಗೆ ತಲುಪಿಸುತ್ತಿದ್ದೀರಿ ಇದು ಎಲ್ಲರಲ್ಲೂ ಖುಷಿ ತಂದುಕೊಟ್ಟಿದೆ. ಆದರೆ ಎಚ್ಚರಿಕೆಯಿಂದಿರಿ… ಕೊರೊನಾ ಮಹಾಮಾರಿ ಯಾರಿಗೆ, ಯಾವ ರೀತಿ ಮೈ ಗಂಟಿಕೊಳ್ಳುತ್ತೆ ಅನ್ನುವುದು ಊಹಿಸಿಲೂ ಅಸಾಧ್ಯ. ಇಂತಹ ಸಂದರ್ಭದಲ್ಲಿ ಜನ ಸೇವೆ ಮಾಡುವ ಶಾಸಕರುಗಳೇ ಎಚ್ಚರ ತಪ್ಪಬೇಡಿ. ಮುಂಜಾಗೃತಾ ಕ್ರಮವನ್ನು ಅನುಸರಿಸಿ. ಆಹಾರದ ಕಿಟ್‍ಗಳನ್ನು ವಿತರಿಸುವ ಸಂದರ್ಭದಲ್ಲೂ ಎಚ್ಚರಿಕೆಯಿಂದಿರಿ. ಅಲ್ಲದೆ ಲಾಕ್‍ಡೌನ್ ಇದ್ದರೂ ತಮಗೆ ಬೇಕಾದ ರೀತಿ ರಸ್ತೆಗಿಳಿಯುವವರ ಮೇಲೂ ನಿಗಾ ವಹಿಸಿ. ಈಗಾಗಲೇ ದಕ್ಷಿಣ ಕನ್ನಡ ಡೇಂಜರ್ ಝೋನ್‍ನವಲ್ಲಿರುವ ವಿಚಾರ ಎಲ್ಲರಿಗೂ ತಿಳಿದಿರುವಂತಹದ್ದು. ಈ ಸಂದರ್ಭದಲ್ಲಿ ಮತ್ತೆ ಮತ್ತೆ ಎಚ್ಚರ ತಪ್ಪಿದರೆ ಮುಂದೆ ಬಾರೀ ಬೆಲೆ ತೆರಬೇಕಾದ ಪರಿಸ್ಥಿತಿ ಎದುರಾಗಬಹುದು. ಇಡೀ ದೇಶದ ಜನರನ್ನು ರಕ್ಷಿಸಬೇಕಾದ ಸಚಿವರು ಶಾಸಕರೇ ಇಂದು ತಮ್ಮನ್ನು ತಾವು ಮೈ ಮರೆತು ಕೆಲಸ ನಿರ್ವಹಿಸುತ್ತಿದ್ದೀರಿ. ದಕ್ಷಿಣ ಕನ್ನಡದ ಜನ ಪ್ರತನಿಧಿಗಳಿಗೆ ಇದು ಎಚ್ಚರಿಕೆ ಕರೆಗಂಟೆ.
Leave A Reply