ದ.ಕ. ಜಿಲ್ಲೆಯಲ್ಲಿ ಕೊರೊನಾಗೆ ಇನ್ನೊಂದು ಬಲಿ!
Posted On April 30, 2020
0

ದಕ್ಷಿಣ ಕನ್ನಡ ಜಿಲ್ಲೆಯಲ್ಲಿಕೊರೊನಾ ಸೋಂಕಿಗೆ ಇನ್ನೊಂದು ಬಲಿಯಾಗಿದೆ. ಬಂಟ್ವಾಳ ಕಸಬ ಗ್ರಾಮದ ಮಹಿಳೆ ಗುರುವಾರ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮೂರಕ್ಕೇರಿದೆ. ಮೂವರು ಮಹಿಳೆಯರಾಗಿದ್ದು, ಬಂಟ್ವಾಳ ಕಸಬದ ಒಂದೇ ಪ್ರದೇಶದವರು ಎಂಬುದು ವಿಶೇಷ.
ಗುರುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಕೊರೊನಾ ಸೋಂಕು ಪತ್ತೆಯಾಗಿದೆ. ಬೋಳೂರು ಸಮೀಪದ 58 ವರ್ಷ ಪ್ರಾಯದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೊಂಕಿತರ ಸಂಖ್ಯೆ 22ಕ್ಕೆ ಏರಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ. ಕಾಸರಗೋಡು ಜಿಲ್ಲೆಯಲ್ಲಿ ಇಂದು ಒಂದು ಕೊರೊನಾ ಪಾಸಿಟಿವ್ ವರದಿಯಾಗಿದೆ. ಇಡೀ ಕೇರಳ ದಲ್ಲಿ ಇಂದು 2 ಪಾಸಿಟಿವ್ ಮಾತ್ರ ವರದಿಯಾಗಿದೆ. ಇದುವರೆಗೆ ಕೇರಳದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಕರ್ನಾಟಕ ದಲ್ಲಿ ಗುರುವಾರ 30 ಹೊಸ ಪ್ರಕರಣ ವರದಿಯಾಗಿದೆ. ಈ ಮೂಲಕ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆಯಾಗಿದೆ. ಇದುವರೆಗೆ 21 ಮಂದಿ ಮೃತಪಟ್ಟಿದ್ದಾರೆ.
- Advertisement -