ತಂದೆಯ ನಿಧನದ ಅನುಕಂಪ ಬಿಟ್ಟು ಗೆಲ್ಲಲು ಬೇರೆ ಏನು ಕಾರಣ ಇತ್ತು ಖಾದರ್!!
ಯು.ಟಿ.ಖಾದರ್ ಪಕ್ಷ ಯಾವುದೇ ಇರಲಿ. ಅಂಗಾರ ಅವರನ್ನು ಬಿಟ್ಟರೆ ಜಿಲ್ಲೆಯಲ್ಲಿ ಅವರೇ ಸೀನಿಯರ್. ಅವರು ಈ ಕೊರೊನಾ ಕದನದ ಅವಧಿಯಲ್ಲಿ ಆದಷ್ಟು ಸಂಯಮದಿಂದ ವರ್ತಿಸಿ ಎಲ್ಲಾ ಶಾಸಕರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕಿತ್ತು. ಅವರಿಗೆ ಎರಡೂವರೆ ಬಾರಿ ಗೆದ್ದಿರುವ ಅನುಭವ ಇದೆ. ಆದರೆ ಖಾದರ್ ತಲೆಯಲ್ಲಿ ಇನ್ನೂ ಮಂತ್ರಿಗಿರಿಯ ಅಮಲು ಇಳಿಯದೇ ಇರುವುದರಿಂದ ತಮ್ಮ ಎದುರು ಸಾವಿರಾರು ಕಿಟ್ ವಿತರಿಸಿ ಜನರ ಪ್ರೀತಿ ಸಂಪಾದಿಸುತ್ತಿರುವ ಬಿಜೆಪಿಯ ಹೊಸ ಶಾಸಕರು ಬಚ್ಚಾಗಳಂತೆ ಎಂದು ಖಾದರ್ ಅಂದುಕೊಂಡಿದ್ದಾರೆ. ಅಂಗಾರ ಅವರು ಮಾತನಾಡುವುದಿಲ್ಲ. ಉಳಿದ ಫಸ್ಟ್ ಎಂಟ್ರಿ ಶಾಸಕರನ್ನು ಏನು ಕೇರ್ ಮಾಡುವುದು ಎಂದು ಖಾದರ್ ನಿರ್ಧರಿಸಿಬಿಟ್ಟಿದ್ದಾರೆ. ಮಂತ್ರಿಯಾಗಿದ್ದಾಗ ಸಿದ್ಧರಾಮಯ್ಯ ಕ್ಯಾಬಿನೆಟ್ ಹಾಗೂ ನಂತರ ಕುಮಾರಸ್ವಾಮಿ ಕ್ಯಾಬಿನೆಟ್ ನಲ್ಲಿ ಕುಳಿತು ಅಲ್ಲಿ ಮಂತ್ರಿಗಳು ಪರಸ್ಪರ ಏಕವಚನದಲ್ಲಿ ಮಾತನಾಡುವುದನ್ನು ನೋಡಿರುವ ಖಾದರ್ ಅವರು ಘಟ್ಟದಿಂದ ಇಳಿದುಬಂದ ಮೇಲೆಯೂ ಅಲ್ಲಿನ ಸಂಸ್ಕೃತಿಯನ್ನು ಮರೆತ್ತಿಲ್ಲ. ಅದೇ ಈಗ ಸಮಸ್ಯೆಯಾಗಿರುವುದು.
ಕಳೆದ ಬಾರಿ ವಿಧಾನಸಭೆಯಲ್ಲಿಯೂ ಖಾದರ್ ಯಾವುದೋ ವಿಷಯದಲ್ಲಿ ಹರೀಶ್ ಪೂಂಜಾ ಅವರಿಗೂ ” ಹೋಗೋ, ಕುತ್ಕೋ, ಸುಮ್ನಿರು” ಎಂದೆಲ್ಲ ಭಾಷೆ ಬಳಸಿದ್ದರು. ನಂತರ ನಾವು ಸೋದರರಂತೆ ಎಂದು ಹೇಳಿಕೊಂಡಿದ್ದರು. ಒಂದು ವೇಳೆ ಖಾದರ್ ಅವರಿಗೆ ತಾನು ಜಿಲ್ಲೆಯ ಹಿರಿಯಣ್ಣನೇ ಆಗಬೇಕು ಎಂದು ಮನಸ್ಸಿದ್ದರೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಲು ಕೂಡ ಗೊತ್ತಿರಬೇಕು. ಇನ್ನು ಶಾಸಕ ವೇದವ್ಯಾಸ ಕಾಮತ್ ಶಾಸಕರಾಗುವ ಮುಂಚೆ ಏನು ಮಾಡಿದ್ದಾರೆ. ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು ಎಂದು ನಿನ್ನೆ ಡಿಸಿ ಸಭೆಯಲ್ಲಿ ಖಾದರ್ ಬಹಿರಂಗವಾಗಿ ಮೂದಲಿಸಿದ್ದಾರೆ. ವೇದವ್ಯಾಸ ಕಾಮತ್ ತಮ್ಮ ಪಕ್ಷಕ್ಕಾಗಿ ಅನೇಕ ತ್ಯಾಗ ಮಾಡಿದ ಕಾರಣ ಅವರಿಗೆ ಟಿಕೆಟ್ ಸಿಕ್ಕಿದ್ದು ಮತ್ತು ಪಕ್ಷ ಅವರನ್ನು ಗೆಲ್ಲಿಸಿದ್ದು. ಅದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಆದರೆ ಖಾದರ್ ಶಾಸಕರಾಗಲು ಏನು ಅರ್ಹತೆ ಇಟ್ಟುಕೊಂಡಿದ್ದರು? ಹೆಚ್ಚೆಂದರೆ ಒಂಭತ್ತು ಕೆರೆ ಜಾಗದಲ್ಲಿ ಕಳಪೆ ಮನೆಗಳನ್ನು ಇವರ ತಂದೆ ಶಾಸಕರಾಗಿದ್ದಾಗ ಕಟ್ಟಿಸುತ್ತಿದ್ದಾಗ ಅದನ್ನು ನಿಂತು ನೋಡಿದ್ದು ಖಾದರ್ ಸಾಧನೆಯಾ? ಯುಟಿ ಫರೀದ್ ಅವರು ಶಾಸಕರಾಗಿದ್ದಾಗಲೇ ನಿಧನರಾಗಿದ್ದ ಕಾರಣ ಖಾದರ್ ಅವರಿಗೆ ಉಪಚುನಾವಣೆಯಲ್ಲಿ ಅನುಕಂಪದ ಅಲೆಯಲ್ಲಿ ಟಿಕೆಟ್ ಸಿಕ್ಕಿತ್ತು. ಇಲ್ಲದೇ ಹೋದರೆ ಉಳ್ಳಾಲದಲ್ಲಿ ಇವರನ್ನು ನುಂಗಿ ನೀರು ಕುಡಿಯಬಲ್ಲ ಇವರದ್ದೇ ಧರ್ಮದ ಕೋಟಿಪತಿಗಳು ಆವಾಗ ತಯಾರಾಗಿಯೇ ಇದ್ದರು. ಏನೋ ತಂದೆಯ ಹೆಸರು ಮತ್ತು ಅಲ್ಲಿನ ಹಿಂದೂಗಳ ಸತ್ಯನಾರಾಯಣ ಪೂಜೆ, ಗೃಹಪ್ರವೇಶ, ನೇಮಕೋಲಕ್ಕೆ ಬಂದು ಪ್ರಸಾದ ಸ್ವೀಕರಿಸಿ ನಾಮಗೀಮ ಹಾಕುತ್ತಾರೆ ಎನ್ನುವ ಕಾರಣಕ್ಕೆ ಅಭಿವೃದ್ಧಿ ಏನೂ ಮಾಡದಿದ್ದರೂ ಹಿಂದೂಗಳು ಕೂಡ ಪರವಾಗಿಲ್ಲ ಎಂದು ವೋಟ್ ಹಾಕಿದ್ದಾರೆ ವಿನ: ಖಾದರ್ ಏನೂ ಅಭಿವೃದ್ಧಿಯ ಹರಿಕಾರ ಎಂದು ಗೆಲ್ಲಿಸುತ್ತಿಲ್ಲ.
ಇನ್ನು ಸಭೆ ಮುಗಿಸಿ ಹೊರಗೆ ಬರುವಾಗ ಶಾಸಕ ಕಾಮತ್ ನೇರಾ ಖಾದರ್ ಬಳಿ ಬಂದು ಸೌಹಾರ್ದಯುತವಾಗಿ ಮಾತನಾಡಿದ್ದಾರೆ. ಅದನ್ನು ಸ್ವಚ್ಚ ರಾಜಕೀಯ ಎನ್ನುವುದು. ಕಾಮತ್ ಮನಸ್ಸು ಮಾಡಿದರೆ ಹಗೆ ಇಟ್ಟುಕೊಳ್ಳಬಹುದಿತ್ತು. ಆದರೆ ವೇದವ್ಯಾಸ ಕಾಮತ್ ಅವರಿಗೆ ಅಂತಹ ರಾಜಕೀಯ ಮಾಡಿ ಗೊತ್ತಿಲ್ಲ. ನಾಳೆ ಖಾದರ್ ವೇದವ್ಯಾಸ ಕಾಮತ್ ಅವರ ಮೇಲೆ ಮುನಿಸು ಇರುವ ಅತೃಪ್ತ ಬಿಜೆಪಿಗರೊಂದಿಗೆ ಡೀಲ್ ಕುದುರಿಸಿ ಕಾಮತ್ ಹೆಸರಿಗೆ ಕಳಂಕ ತರಲು ಪ್ರಯತ್ನ ಮಾಡಿ ಅದು ಕಾಮತ್ ಅವರಿಗೆ ಗೊತ್ತಾದರೂ “ಇರಲಿ ಬಿಡಿ, ದೇವರಿದ್ದಾನೆ” ಎಂದು ಬಿಡುವ ಜಾಯಮಾನದವರು. ಹಾಗಿರುವಾಗ ಮುಳುಗುತ್ತಿರುವ ಹಡಗಿನಲ್ಲಿ ಕುಳಿತ ನಾವಿಕನಂತಿರುವ ಖಾದರ್ ಹಡಗು ದಡ ಸೇರಲು ಏನು ಮಾಡಬೇಕೋ ಅದನ್ನು ಮಾಡಬೇಕೆ ವಿನ: ಬೇರೆ ಹಡಗಿನವರಿಗೆ ಕಲ್ಲು ಹೊಡೆಯಬಾರದು. ಅಷ್ಟಕ್ಕೂ ಮುಂದಿನ ತಿಂಗಳು ಐವನ್ ಡಿಸೋಜಾ ಅವರ ಶಾಸಕತ್ವ ಕೂಡ ಕೊನೆಯಾಗುತ್ತದೆ. ಹರೀಶ್ ಕುಮಾರ್ ಶಾಸಕರು ಎಂದು ಅವರ ಪಕ್ಷದವರಿಗೆ ನೆನಪಾಗುವುದು ವಿಧಾನಪರಿಷತ್ ನಲ್ಲಿ ಯಾವುದಾದರೂ ಫೋಟೋದಲ್ಲಿ ನೋಡಿದಾಗ. ಹಾಗಿರುವಾಗ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾಗಿರುವ ಯುಟಿ ಖಾದರ್ ಅವರೇ ವೇದವ್ಯಾಸ ಕಾಮತ್ ಹಣದ ಬಲದಿಂದ ಶಾಸಕರಾದರು ಎನ್ನುತ್ತಿರಲ್ಲ, ಹಣಬಲದಲ್ಲಿ ಕುಬೇರನಿಗೆ ಸವಾಲು ಹಾಕುವಂತಿದ್ದ ಯುಬಿ ಮಲ್ಯ ಯಾಕೆ ಪಕ್ಷ ಕಟ್ಟಲು ಆಗಲಿಲ್ಲ. ಖ್ಯಾತ ಪತ್ರಿಕೋದ್ಯಮಿ ಒಬ್ಬರಿಗೆ ಯಾಕೆ ಪಕ್ಷ ಬೆಳೆಸಲು ಆಗಲಿಲ್ಲ. ಇನ್ನು ಹಣವಿಲ್ಲದೇ ನೀವು ನಿಂತು ಗೆದ್ದು ತೋರಿಸಿ. ಗಾಜಿನ ಮನೆಯಲ್ಲಿ ಕುಳಿತ “ಸಹೋದರರು” ಬೇರೆಯವರ ಮನೆಗೆ ಕಲ್ಲು ಹೊಡೆಯಬಾರದು.!
Leave A Reply