ಲಾಕ್ ಡೌನ್ ಸಂಕಷ್ಟದಲ್ಲಿರುವವರಿಗೆ ಮುಖ್ಯಮಂತ್ರಿಗಳಿಂದ ರೂ.1,610 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ!
1. ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಹಿಂದಿನ 2 ಸಾವಿರ ರೂ. ನೀಡುವ ಯೋಜನೆಯಲ್ಲಿ ಹೆಚ್ಚುವರಿಯಾಗಿ 3 ಸಾವಿರ ರೂ ಬಿಡುಗಡೆಗೊಳಿಸಲಾಗುವುದು
2. ಕಳೆದ ವರ್ಷ ಘೋಷಿಸಿದ್ದ ನೇಕಾರರ ಸಾಲಮನ್ನಾ ಯೋಜನೆ ಬಾಕಿ 80 ಕೋಟಿ ರೂ. ಬಿಡುಗಡೆ. 2019ರ ಜನವರಿ 1ರಿಂದ ಮಾರ್ಚ್ 31ರವರೆಗೆ 1 ಲಕ್ಷದೊಳಗಿನ ಸಾಲ ಪಾವತಿಸಿರುವ ನೇಕಾರರ ಮೊತ್ತ ಅವರಿಗೆ ಮರುಪಾವತಿಗೆ ಕ್ರಮ.
ನೇಕಾರರ ಸಮಾನ್ ಯೋಜನೆ ಘೋಷಣೆ – ರಾಜ್ಯದ ಅಂದಾಜು 54,000 ಕೈಮಗ್ಗ ನೇಕಾರರಿಗೆ ಪ್ರತಿವರ್ಷ 2 ಸಾವಿರ ರೂ.
3. ಕಂದಾಯದ ಬಾಕಿ ಮೊತ್ತ ಕಂತುಗಳಲ್ಲಿ ಪಾವತಿಗೆ ಅವಕಾಶ. 30.06.2020 ರವರೆಗೆ ಕಂದಾಯ ಬಾಕಿ ಉಳಿಸಿಕೊಂಡ ಗ್ರಾಹಕರ ವಿದ್ಯುತ್ ಸಂಪರ್ಕ್ ಕಡಿತವಿಲ್ಲ.
4. ನಿಗದಿತ ಸಮಯದೊಳಗೆ ವಿದ್ಯುತ್ ಬಿಲ್ ಪಾವತಿಸುವ ಗ್ರಾಹಕರಿಗೆ ಪ್ರೋತ್ಸಾಹ/ರಿಯಾಯಿತಿ.
ಮುಂಗಡ ಪಾವತಿಸುವವರಿಗೆ ಪ್ರೋತ್ಸಾಹ ಧನ
ವಿದ್ಯುತ್ ಬಿಲ್ ವಿಳಂಬ ಪಾವತಿ ಬಡ್ಡಿ ಕಡಿತ.
5. ಬೃಹತ್ ಕೈಗಾರಿಕೆಗಳ ಚೇತರಿಕೆ ನಿಟ್ಟಿನಲ್ಲಿ ವಿದ್ಯುತ್ ಬಿಲ್ ನ ಫಿಕ್ಸ್ಡ್ ದರದ ಪಾವತಿಯನ್ನು 2 ತಿಂಗಳ ಅವಧಿಗೆ ಯಾವುದೇ ಬಡ್ಡಿ, ದಂಡ ಬಡ್ಡಿ ರಹಿತ ಮುಂದೂಡಿಕೆ
6. ಅತಿಸಣ್ಣ, ಸಣ್ಣ, ಮಧ್ಯಮ ಉದ್ದಿಮೆದಾರರ ವಹಿವಾಟು ಚೇತರಿಕೆಗೆ ಉತ್ತೇಜನ ನೀಡಲು ವಿದ್ಯುತ್ ಬಿಲ್ ನ ಫಿಕ್ಸ್ಡ್ ದರ 2 ತಿಂಗಳ ಅವಧಿಗೆ ಪೂರ್ತಿ ಮನ್ನಾ.
7. ರಾಜ್ಯದ ಸುಮಾರು 7,75,000 ಆಟೋ, ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ. ನೆರವು
8. ಲಾಕ್ ಡೌನ್ ನಿಂದಾಗಿ ನಷ್ಟ ಅನುಭವಿಸಿದ ಅಂದಾಜು 2,30,000 ಕ್ಷೌರಿಕ ವೃತ್ತಿಯಲ್ಲಿರುವವರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ. ನೆರವು.
9. ಲಾಕ್ ಡೌನ್ ನಿಂದಾಗಿ ನಷ್ಟ ಅನುಭವಿಸಿದ ರಾಜ್ಯದಲ್ಲಿರುವ ಅಂದಾಜು 60,000 ಅಗಸ ವೃತ್ತಿಯಲ್ಲಿರುವವರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ. ನೆರವು.
10. ರೈತರು ಬೆಳೆದು ನಷ್ಟವಾದ ಹೂವಿನ ಬೆಳೆಗಳಿಗೆ ಗರಿಷ್ಠ ಒಂದು ಹೆಕ್ಟೇರ್ ಗೆ ಮಿತಿಗೊಳಪಟ್ಟು, ಪ್ರತಿ ಹೆಕ್ಟೇರ್ ಗೆ 25 ಸಾವಿರ ರೂ. ಪರಿಹಾರ ಧನ.
Leave A Reply