• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆವತ್ತು ಬಾಂದ್ರಾ, ನಿನ್ನೆ ಮಂಗಳೂರು. ಇಲ್ಲಿನ ವಿನಯ್ ದುಬೆ ಯಾರು?

Hanumantha Kamath Posted On May 9, 2020
0


0
Shares
  • Share On Facebook
  • Tweet It

ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದದ್ದು ಹೈಡ್ರಾಮಾ. ಉತ್ತರ ಭಾರತದ ವಿವಿಧ ರಾಜ್ಯಗಳಿಂದ ದಕ್ಷಿಣ ಕನ್ನಡಕ್ಕೆ ಬಂದು ವಿವಿಧ ಕೈಗಾರಿಕೆಗಳಲ್ಲಿ, ಕಟ್ಟಡ ನಿರ್ಮಾಣದಲ್ಲಿ, ತ್ಯಾಜ್ಯ ಸಂಗ್ರಹಣೆಯಲ್ಲಿ, ಸರಕಾರದ ನಿರ್ಮಾಣದ ಕಾಮಗಾರಿಗಳಲ್ಲಿ, ಮರಳು ಎತ್ತುವಿಕೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು 700 ಕ್ಕೂ ಹೆಚ್ಚಿನ ಸಂಖ್ಯೆಯ ಜನ ತಮ್ಮ ರಾಜ್ಯಗಳ ರೈಲು ಹತ್ತಲು ನಿಲ್ದಾಣಕ್ಕೆ ಬಂದುಬಿಟ್ಟಿದ್ದರು. ಆದರೆ ಹೋಗಲು ಯಾವುದೇ ರೈಲು ಇರಲಿಲ್ಲ. ರೈಲು ಇರುವ ಸಾಧ್ಯತೆಯೂ ಇರಲಿಲ್ಲ. ಯಾಕೆಂದರೆ ರೈಲು ಬಿಡುವ ಯಾವ ಪ್ರಸ್ತಾಪವೂ ಇರಲಿಲ್ಲ. ನಮಗೆ ರೈಲುಗಳಲ್ಲಿ ಕಳುಹಿಸಿಕೊಡಿ ಎಂದು ಕಾರ್ಮಿಕರದ್ದು ಒಂದೇ ಹಟ.
ಅಷ್ಟೊತ್ತಿಗೆ ಅಲ್ಲಿ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಬಂದರು. ಅವರ ಜೊತೆ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಬಂದರು. ಮಿಥುನ್ ರೈ ಕೈಯಲ್ಲಿ ಎಲ್ಲಿಂದಲೋ ಮೈಕ್ ಬಂತು. ಮಾತನಾಡಲು ಶುರು ಮಾಡಿದರು. ನಿಮ್ಮ ಜೊತೆ ನಾವಿದ್ದೇವೆ ಎಂದರು. ಅಖಿಲ ಭಾರತ ಮಟ್ಟದಲ್ಲಿ ಸೋನಿಯಾ ಗಾಂಧಿ ಕೊಟ್ಟಿರುವ ಕರೆಗೆ ಇಲ್ಲಿ ಪಾತ್ರ ನಿರ್ವಹಿಸಿ ಹೊರಟು ಹೋದರು. ಈಗ ಇಲ್ಲಿ ಉದ್ಭವಿಸಿರುವ ಪ್ರಶ್ನೆ ಏನೆಂದರೆ, ಉತ್ತರ ಭಾರತದ ಕಾರ್ಮಿಕರು ಹೋಗಲೇಬೇಕು ಎಂದು ನಿರ್ಧರಿಸಿದ್ದರೆ ಹೋಗಬೇಡಿ ಎಂದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ಅದರಿಂದ ಭಾರತದ ಕಾನೂನಿನ ಪ್ರಕಾರ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ. ಆದರೆ ಕಳೆದ 48 ದಿನಗಳ ತನಕ ಇಲ್ಲಿಯೇ ಇದ್ದವರು ಇನ್ನೇನೂ ಕೈಗಾರಿಕೆ, ಉದ್ಯಮಗಳು, ಕಟ್ಟಡ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳು ಶುರುವಾಗುವ ಈ ಹಂತದಲ್ಲಿ ಹೋಗುತ್ತೇವೆ ಎಂದು ಹಟ ಹಿಡಿದಿರುವುದರ ಹಿಂದೆ ಯಾರ ಷಡ್ಯಂತ್ರ ಇದೆ? ಯಾಕೆಂದರೆ ಉಚಿತ ಪ್ರಯಾಣಕ್ಕಾಗಿ ಹಟ ಮಾಡಿ ಅದು ಸಿಕ್ಕಿದ ಕೂಡಲೇ ಒಂದು ಫ್ರೀ ರೌಂಡ್ ಎಂಜಾಯ್ ಮಾಡಿ ಬರೋಣ ಎನ್ನುವ ಕಾರಣಕ್ಕೆ ಹೋಗಬೇಕೆ ವಿನ: ಇಲ್ಲಿಂದ ಹೋದ ಕೂಡಲೇ ಅವರ ಜಾರ್ಖಂಡ್, ಯುಪಿ, ಬಿಹಾರದಲ್ಲಿ ಅವರಿಗೇನು ದೊಡ್ಡ ಹುದ್ದೆ ಕಾಯುತ್ತಾ ಇರುವುದಿಲ್ಲ. ಹೋದವರು ಕಡ್ಡಾಯವಾಗಿ ಕ್ವಾರಂಟೈನ್ ನಲ್ಲಿ ಇರಲೇಬೇಕಾಗುತ್ತದೆ. ಅದರಿಂದ ಏನು ಲಾಭ? ಅದರ ಬದಲು ಮೇ 4 ರಿಂದ ಇಲ್ಲಿ ಕೆಲಸ ಶುರುವಾಗಿದೆ. ನಾಲ್ಕು ಕಾಸು ದುಡಿಯುವ ಹೊತ್ತಿದು. ಅದು ದುಡಿದರೆ ಮನೆಗಾದರೂ ಕಳುಹಿಸಬಹುದು. ಅದು ಬಿಟ್ಟು ಅಲ್ಲಿಗೆ ಹೋಗಿ ಮಲಗಿದರೆ ಇವರು ಇನ್ನಷ್ಟು ಭಾರವಾಗುತ್ತಾರೆ ವಿನ: ಬೇರೆನೂ ಇಲ್ಲ. ಮೋದಿ ಲಾಕ್ ಡೌನ್ ಘೋಷಿಸಿದ ತಕ್ಷಣ ಹೊರಟಿದ್ದರೆ ಮೂರು ವಾರ ಇದ್ದು ನಂತರ ಹದಿನೈದು ಮತ್ತೆ ಇದ್ದು ಬಳಿಕ ರೈಲು ಸಿಕ್ಕಿದರೆ ಮರಳಬಹುದಿತ್ತು. ಆದರೆ ಈಗ ಏನು? ಇನ್ನು ಕಾರ್ಮಿಕರು ಇಲ್ಲಿದ್ದರೆ ಅವರಿಗೆ ಊಟ, ತಿಂಡಿಗೆ ಏನೂ ಕೊರತೆ ಇರಲಿಲ್ಲ. ಕಿಟ್, ಉಚಿತ ಊಟ ಸಿಗುತ್ತಿತ್ತು. ಹಾಗಿರುವಾಗ ಇಷ್ಟು ದಿನ ಫ್ರೀ ಇದ್ದವರು ಈಗ ಹೊರಡುತ್ತಾರೆ ಎಂದರೆ ಮಂಗಳೂರು ಸಹಿತ ಜಿಲ್ಲೆಯ ಅಭಿವೃದ್ಧಿಯನ್ನು ತಡೆಯಲು ಯೋಜಿತ ಸಂಚು ನಡೆಯುತ್ತಿದೆ ಎಂದೇ ಅರ್ಥ ಅಲ್ಲವೇ?
ಇನ್ನು ಯಾವುದೇ ಕಾಮಗಾರಿಗೆ ಅಗತ್ಯವಾಗಿ ಬೇಕಾಗುವುದು ಮರಳು. ಅದನ್ನು ಎತ್ತುವವರಲ್ಲಿ 90% ಜನ ಇದೇ ಉತ್ತರ ಭಾರತದವರು. ಅವರು ಇಲ್ಲಿಂದ ಎದ್ದು ಹೋದರೆ ಮರಳಿನ ಮೇಲೆ ಅವಲಂಬಿತವಾಗಿರುವ ಪ್ರತಿ ನಿರ್ಮಾಣಕ್ಕೂ ಪೆಟ್ಟು ಬೀಳುತ್ತದೆ. ಇದರಿಂದ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೂ ಪೆಟ್ಟು ಬೀಳುವುದು ನೂರಕ್ಕೆ ನೂರು ಗ್ಯಾರಂಟಿ. ಇನ್ನು ಈಗ ತಕ್ಷಣ ತನಿಖೆ ಆಗಬೇಕಾಗಿರುವುದು ಯಾವುದೆಂದರೆ ಆ ಕಾರ್ಮಿಕರಿಗೆ ಎಲ್ಲಿಂದ ಸುಳ್ಳು ಸಂದೇಶ ಬಂದಿದೆ ಎನ್ನುವುದನ್ನು ಅಗತ್ಯವಾಗಿ ಕಂಡುಹಿಡಿಯಬೇಕು. ಅದರೊಂದಿಗೆ ನೀವು ವಿಡಿಯೋ ನೋಡಿದ್ದಿರಾದರೆ ಕೆಲವರು ಕೈಯಲ್ಲಿ ಭಿತ್ತಿಪತ್ರ( ಪ್ಲೇ ಕಾರ್ಡ್) ಹಿಡಿದು ಕುಳಿತುಕೊಂಡಿದ್ದಾರೆ. ಅದರ ಮೇಲೆ ಆಂಗ್ಲಭಾಷೆಯಲ್ಲಿ ಬರೆಯಲಾಗಿದೆ. ಇದರ ಉದ್ದೇಶ ಮಂಗಳೂರಿನಲ್ಲಿ ಆಗುತ್ತಿರುವ ಅನ್ಯಾಯ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿ ಎನ್ನುವುದೇ ಆಗಿದೆ. ಉತ್ತರ ಭಾರತದ ಕಾರ್ಮಿಕರು ಹಿಂದಿಯಲ್ಲಿ ಮಾತನಾಡುತ್ತಾರೆ ವಿನ: ಇಂಗ್ಲೀಷ್ ಅವರಿಗೆ ಅಪ್ಪಟ ವಿದೇಶಿ ಭಾಷೆ. ಅದರೊಂದಿಗೆ ಪ್ಲೇ ಕಾರ್ಡ್ ಹಿಡಿದು ಕುಳಿತುಕೊಳ್ಳಲು ಅವರು ನಿತ್ಯ ಪ್ರತಿಭಟನೆ ಮಾಡಿ ಗೊತ್ತಿರುವವವರು ಅಲ್ಲ. ಇನ್ನು ಅದು ಪ್ರಿಂಟ್ ತೆಗೆದು ಅದಕ್ಕೆ ಕೋಲು ಕಟ್ಟಿ ಹಿಡಿದು ಕುಳಿತುಕೊಳ್ಳಲು ಯಾರ ನೆರವಿದೆ ಎಂದು ನೋಡಬೇಕು. ಇನ್ನು ತಿಳಿದುಬಂದಿರುವ ಮಾಹಿತಿಯ ಪ್ರಕಾರ ಕೆಲವರು ಬಸ್ಸುಗಳನ್ನು ನಿರ್ಮಾಣ ಹಂತದ ಕಟ್ಟಡಗಳ ಮುಂದೆ ತಂದು ಬನ್ನಿ, ಊರಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಭ್ರಮೆ ಹುಟ್ಟಿಸುತ್ತಿದ್ದಾರಂತೆ. ಇನ್ನು ಕೊನೆಯದಾಗಿ ಸಾಮಾಜಿಕ ಅಂತರ ಅಲ್ಲಿ ನೆರೆದಿದ್ದವರಿಗೆ ಗೊತ್ತೆ ಇರಲಿಲ್ಲ. ಅವರ ಬೆಂಬಲಕ್ಕೆ ಬಂದ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಯಾವುದೋ ವ್ಯಕ್ತಿಯ ಹೆಗಲ ಮೇಲೆ ಕೈ ಹಾಕಿ ಆರಾಮವಾಗಿ ನಗುತ್ತಿದ್ದರು. ಮಿಥುನ್ ರೈ ಮೈಕ್ ಹಿಡಿದು ತೆಲುಗು ಸಿನೆಮಾದ ಹೀರೋ ರೀತಿಯಲ್ಲಿ ಭಾಷಣ ಹೊಡೆಯುತ್ತಿದ್ದರು. ಖಾದರ್ ಸುದ್ದಿಗೋಷ್ಟಿ ಮಾಡಿ ಜಿಲ್ಲಾಡಳಿತಕ್ಕೆ ಬೈಯುತ್ತಿದ್ದರು. ಉಳಿದದ್ದು ಹೇಳಬೇಕಾಗಿಲ್ಲ, ನಿಮಗೆ ಅರ್ಥವಾಗಿರುತ್ತದೆ!
0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
Hanumantha Kamath November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
Hanumantha Kamath November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
  • Popular Posts

    • 1
      ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • 2
      ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • 3
      ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!

  • Privacy Policy
  • Contact
© Tulunadu Infomedia.

Press enter/return to begin your search