• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಂಟ್ವಾಳದ ಎರಡು ಕೊಲೆಗಳಿಂದ ಲಾಭ ಒಬ್ಬ ವ್ಯಕ್ತಿಗಾ?

TNN Correspondent Posted On August 8, 2017
0


0
Shares
  • Share On Facebook
  • Tweet It

ಶರತ್ ಮಡಿವಾಳ ಅವರ ಕೊಲೆಯ ಹಿಂದಿರುವ ಕಾಣದ “ಕೈ”ಗಳನ್ನು ಬಂಧಿಸಲು ತಡ ಮಾಡುತ್ತಿರುವ ಪೊಲೀಸ್ ಅಧಿಕಾರಿಗಳೇ ಅಲ್ಲಿನ ಸ್ಥಳೀಯ ನಾಗರಿಕರು ಮಾತನಾಡುತ್ತಿರುವ ಕಥೆಯ ಹಿಂದಿನ ಮರ್ಮವನ್ನು ಅರಿತುಕೊಂಡರೆ ಸತ್ಯ ಹೊರಗೆ ಬರಬಹುದು. ಅಷ್ಟಕ್ಕೂ ಆ ಕಥೆ ಏನು?

ಮೊದಲಿಗೆ ನಡೆದ ಕೊಲೆ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಅವರದ್ದು. ಅವರ ಕೊಲೆಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆ ಪ್ರಕರಣದ ಪ್ರಮುಖ ಆರೋಪಿ ಭರತ್ ಕುಮ್ಡೇಲು. ಆತನೊಂದಿಗೆ ಇತರ ಆರೋಪಿಗಳನ್ನು ಕೂಡ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಅಷ್ಟಕ್ಕೂ ಅಶ್ರಫ್ ಕಲಾಯಿ ಕೊಲೆ ಯಾಕಾಯಿತು. ಅಶ್ರಫ್ ಇವತ್ತಲ್ಲ ನಾಳೆ ಜಾತ್ಯಾತೀತ ಪಕ್ಷಗಳಿಗೆ ಗೆಲ್ಲಲು ಸಂಕಟ ತರಬಲ್ಲ ನಾಯಕನಾಗಿ ಬೆಳೆಯುತ್ತಿದ್ದರು. ಒಂದು ಕಡೆ ಅಶ್ರಫ್ ಜನಸಾಮಾನ್ಯರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡು ಎಲ್ಲರ ಕಷ್ಟನೋವುಗಳಿಗೆ ಸ್ಪಂದಿಸುತ್ತಿದ್ದರು. ಕಳೆದ ಚುನಾವಣೆಯಲ್ಲಿ ತಮ್ಮ ಏರಿಯಾದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಅಭ್ಯರ್ಥಿ ಒದಗಿಸಿಕೊಟ್ಟವರು ಇದೇ ಅಶ್ರಫ್. ಅಶ್ರಫ್ ಜೀವಂತವಾಗಿ ಇದ್ದರೆ ಯಾರದ್ದಾದರೂ ರಾಜಕೀಯ ಜೀವನ ಅಂತ್ಯಗೊಳ್ಳುವ ಸಾಧ್ಯತೆ ಇತ್ತು. ಅದಕ್ಕಾಗಿ ಅವರು ಸೆಟ್ ಮಾಡಿದ್ದು ಬಜರಂಗದಳದ ಸ್ಥಳೀಯ ಮುಖಂಡರನ್ನು. ಭರತ್ ಕುಮ್ಡೇಲು ಮತ್ತು ಟೀಮ್ ಸೇರಿ ಅಶ್ರಫ್ ಕಲಾಯಿಯನ್ನು ಮುಗಿಸಿದ್ರು ಎನ್ನುವುದು ಪೊಲೀಸರ ಸದ್ಯದ ತನಿಖೆಯಿಂದ ಹೊರ ಬಂದಿರುವ ಸಂಗತಿ.

ಅಷ್ಟಕ್ಕೂ ಭರತ್ ಮತ್ತು ಅವನ ಸ್ನೇಹಿತರಿಗೆ ಅಶ್ರಫ್ ಒಬ್ಬ ಮುಸ್ಲಿಂ ಎನ್ನುವ ಕಾರಣಕ್ಕೆ ಎದುರಾಳಿ ಆಗಿರಬಹುದೇ ವಿನ: ಬೇರೆ ಯಾವ ಕಾರಣವೂ ಅಲ್ಲಿ ಕಾಣುವುದಿಲ್ಲ. ಅಶ್ರಫ್ ಹಾಗೂ ಭರತ್ ಅಜನ್ಮ ಶತ್ರುಗಳಲ್ಲ. ಒಬ್ಬರನ್ನು ಒಬ್ಬರು ಕೊಂದು ಹಾಕಬೇಕೆನ್ನುವಷ್ಟು ದ್ವೇಷ ಇರಲಿಲ್ಲ. ಆದರೂ ಭರತ್ ಮತ್ತು ಇತರ ಆರೋಪಿಗಳು ಈ ಅಶ್ರಫ್ ಅವರನ್ನು ಕೊಂದು ಹಾಕುತ್ತಾರೆ ಎಂದರೆ ಅವರಿಗೆ ಧರ್ಮ ಕ್ಕಿಂತ ದೊಡ್ಡ ಮಟ್ಟದ ಹಣ “ಕೈ” ಬದಲಾವಣೆ ಆಗಿದೆ ಎಂದು ಅರ್ಥ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು. ಇಲ್ಲಿ ಅಶ್ರಫ್ ಬಿಜೆಪಿಯವರೊಂದಿಗೂ ಚೆನ್ನಾಗಿಯೇ ಇದ್ದ ಕಾರಣ ಅವರನ್ನು ಕೊಲ್ಲಬೇಕೆನ್ನುವ ದ್ವೇಷ ಯಾರಿಗೆ ಎನ್ನುವುದನ್ನು ಪೊಲೀಸರು ತನಿಖೆ ಮಾಡಬೇಕು.

ಅದಕ್ಕೆ ಕೆಲವು ದಿನಗಳ ನಂತರ ಶರತ್ ಮಡಿವಾಳ ಅವರ ಹತ್ಯೆಯಾಗುತ್ತದೆ. ಮೇಲ್ನೋಟಕ್ಕೆ ಇದು ಅಶ್ರಫ್ ಕೊಲೆಗೆ ಪ್ರತೀಕಾರ ಎನ್ನಲಾಗುತ್ತದೆ. ಆದರೆ ಅದು ಅಪ್ಪಟ ಸುಳ್ಳು ಎಂದು ಸರಿಯಾಗಿ ತನಿಖೆ ನಡೆದರೆ ಗೊತ್ತಾಗಬಹುದು. ಶರತ್ ದಕ್ಷಿಣ ಕನ್ನಡ ಜಿಲ್ಲೆಯ ಮರಳು ಮಾಫಿಯಾದ ವಿರುದ್ಧ ಯುದ್ಧ ಸಾರಿದ್ದರು. ನಂದಾವರದಲ್ಲಿ ಖಾಲಿ ಜಮೀನಿನಲ್ಲಿ ಮರಳು ಹೇರಳವಾಗಿ ರಾಶಿ ಬಂದು ಬೀಳುತ್ತಿದ್ದದ್ದು ಅವರ ಗಮನಕ್ಕೆ ಬರುತ್ತಿತ್ತು. ಆ ಪ್ರದೇಶದಿಂದ ಮರಳು ಬೇರೆಡೆ ಅವ್ಯಾಹತವಾಗಿ ಸರಬರಾಜು ಆಗುತ್ತಿತ್ತು. ಶರತ್ ಆ ಪ್ರದೇಶದ ಬಗ್ಗೆ ಪರೀಕ್ಷಿಸಿದಾಗ ಆ ಮರಳು ಬಂದು ಸ್ಟಾಕ್ ಆಗುತ್ತಿದ್ದ ಜಾಗ ಮಾಜಿ ಶಾಸಕ ಯೋಗೀಶ್ ಭಟ್ ಅವರದ್ದು ಎಂದು ಗೊತ್ತಾಯಿತು. ಅದನ್ನು ಯೋಗೀಶ್ ಭಟ್ಟರ ಗಮನಕ್ಕೆ ತಂದ ಶರತ್ ಆ ಜಾಗಕ್ಕೆ ಸುತ್ತಲೂ ಬೇಲಿ ಹಾಕಿಸಿ ಅದಕ್ಕೆ ಗೇಟ್ ಎಲ್ಲಾ ಮಾಡಿಸಿ ಅಲ್ಲಿ ಮರಳು ಸ್ಟಾಕ್ ಆಗದಂತೆ ನೋಡಿಕೊಂಡರು. ಇದು ಮರಳು ಮಾಫಿಯಾದವರನ್ನು ಕೆರಳಿಸಿತು. ಅವರಿಗೆ ದೊಡ್ಡ ತಲೆನೋವಾಯಿತು. ತಾವು ಏನು ಮಾಡಿದರೂ ಅಡ್ಡಗಾಲು ಹಾಕಲು ಒಬ್ಬ ಇದ್ದಾನೆ ಎಂದು ಅವರಿಗೆ ತಿಳಿಯಿತು. ಅವರು ಸಮಯ ಕಾಯುತ್ತಿದ್ದರು. ಯಾವಾಗ ಅಶ್ರಫ್ ಕೊಲೆಯಾಯಿತೊ ಅದರ ಕೆಲವು ದಿನಗಳ ನಂತರ ಮತ್ತೊಂದು ಹೆಣ ಬೀಳಿಸಲಾಯಿತು. ಮುಸ್ಲಿಂ ಕೊಲೆಗೆ ಪ್ರತೀಕಾರ ಎಂದು ಸುದ್ದಿ ಹಬ್ಬಿಸಲಾಯಿತು. ಯಾರಿಗೂ ಮರಳಿನ ವಿಷಯ ಹೊಳೆಯಲೇ ಇಲ್ಲ.ಈಗ ಪೊಲೀಸರು ಅಲ್ಲಿ ಮರಳು ಸ್ಟಾಕ್ ಮಾಡುತ್ತಿದ್ದವರು ಯಾರು ಎಂದು ನೋಡಿದರೆ ವಿಷಯ ಬಯಲಿಗೆ ಬರುತ್ತದೆ. ಯಾರೋ ಒಬ್ಬನೇ ವ್ಯಕ್ತಿಗೆ ಈ ಎರಡೂ ಕೊಲೆಗಳಿಂದ ಲಾಭ ಆಗಿರಬಹುದಾ? ಪ್ರಶ್ನೆ ಹಾಗೆ ಉಳಿದಿದೆ. ಉತ್ತರ ಹುಡುಕುವ ಧೈರ್ಯ ಪೊಲೀಸರು ಮಾಡುವುದು ಯಾವಾಗ

0
Shares
  • Share On Facebook
  • Tweet It




Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Tulunadu News April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search