• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಂಪ್ ವೆಲ್ ನಲ್ಲಿ ಹೊಸ ನಿಲ್ದಾಣಕ್ಕೆ ಮುಹೂರ್ತ ಫಿಕ್ಸ್!!

Tulunadu News Posted On May 15, 2020
0


0
Shares
  • Share On Facebook
  • Tweet It

ಮಂಗಳೂರಿನ ಜನರಿಗೊಂದು ಶುಭ ಸುದ್ದಿ ಎಂದೇ ಹೇಳಬಹುದು. ಕೊನೆಗೂ ಮಂಗಳೂರಿನಲ್ಲಿ ಸುಸಜ್ಜಿತ ಬಸ್ ನಿಲ್ದಾಣವೊಂದು ಪಂಪ್ ವೆಲ್ ನಲ್ಲಿ ನಿರ್ಮಾಣವಾಗಲು ಮುಹೂರ್ತ ಕೂಡಿ ಬಂದಿದೆ. ಅದು ಕೇವಲ ಬಸ್ ನಿಲ್ದಾಣವಾಗಿರದೇ ಕೇಂದ್ರ ಸಾರಿಗೆ ಸಮುಚ್ಚಯವಾಗಲಿದೆ. ಅಂದಾಜು 445 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಬಸ್ ನಿಲ್ದಾಣದ ಕಾಮಗಾರಿಗಳು ಮುಗಿಯಲು ಮೂರು ವರ್ಷದ ಗಡುವನ್ನು ನೀಡಲಾಗಿದೆ. ನಮ್ಮ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಇಚ್ಚಾಶಕ್ತಿ ತೋರಿಸಿದರೆ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಉದ್ಘಾಟನೆ ಮಾಡುವ ಸಾಧ್ಯತೆ ಇದೆ. ನಮ್ಮ ಜಿಲ್ಲೆಯ ದೊಡ್ಡ ದೊಡ್ಡ ಯೋಜನೆಗಳು ನಿಗದಿತ ಸಮಯದೊಳಗೆ ಮುಗಿದ ಲಕ್ಷಣ ಕಡಿಮೆ ಇರುವುದರಿಂದ ಉದ್ಘಾಟನೆ ಸಮಯದಲ್ಲಿ ಯಾರು ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಈಗ ಹೇಳುವುದು ಕಷ್ಟಸಾಧ್ಯ. ಆದರೆ ಈ ಯೋಜನೆಗೂ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ ಒಂದು ದಶಕಗಿಂತಲೂ ಹಿಂದಿನ ನಂಟಿದೆ.
ಯಡಿಯೂರಪ್ಪನವರು ಹಿಂದಿನ ಬಾರಿ 2008 ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇಂತದ್ದೊಂದು ಬೃಹತ್ ಮಟ್ಟದ, ಪೂರ್ಣ ಪ್ರಮಾಣದ, ಅತ್ಯಾಧುನಿಕ ಸೌಲಭ್ಯದ ಬಸ್ ನಿಲ್ದಾಣ ಆಗುವುದಕ್ಕೆ ಯೋಜನೆ ಸಿದ್ಧವಾಗಿತ್ತು. ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಕೃಷ್ಣ ಜೆ ಪಾಲೇಮಾರ್. ಮಂಗಳೂರಿಗೆ ಇಲ್ಲಿಯ ತನಕ ಒಂದು ಉತ್ತಮ ಬಸ್ ನಿಲ್ದಾಣ ಎಂದು ಇರಲೇ ಇಲ್ಲ. 1996 ರ ತನಕ ಹಂಪನಕಟ್ಟೆಯ ಕಿಷ್ಕಿಂದೆಯಂತಹ ಜಾಗದಲ್ಲಿ ದಿನಕ್ಕೆ 300 ರಷ್ಟು ಬಸ್ಸುಗಳು ಬಂದು ತಮ್ಮ ಟ್ರಿಪ್ ಅವಧಿಯಲ್ಲಿ ಕೆಲವು ನಿಮಿಷ ನಿಂತು ಜನರನ್ನು ಹತ್ತಿಸಿ ಹೋಗುತ್ತಿದ್ದವು. ಯಾವಾಗ ಭರತ್ ಲಾಲ್ ಮೀನಾ ಜಿಲ್ಲಾಧಿಕಾರಿಯಾಗಿ ಬಂದರೋ ಈ ಬಸ್ ನಿಲ್ದಾಣದಿಂದ ನಗರದೊಳಗೆ ಟ್ರಾಫಿಕ್ ಸಮಸ್ಯೆಯಾಗುತ್ತದೆ. ಸರ್ವಿಸ್ ಬಸ್ಸುಗಳು ನಗರವನ್ನು ಪ್ರವೇಶಿಸುವುದು ಬೇಡಾ ಎಂದುಬಿಟ್ಟರು. ಅದಕ್ಕಾಗಿ ಮಂಗಳೂರು ಹೃದಯಭಾಗವನ್ನು ಪ್ರವೇಶಿಸುವ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಬಸ್ ನಿಲ್ದಾಣವನ್ನು ರಚನೆ ಮಾಡುವುದಕ್ಕೆ ಕೈ ಹಾಕಿದರು. ಉಡುಪಿ ಕಡೆಯಿಂದ ಬರುವ ಬಸ್ಸುಗಳಿಗೆ ಕೊಟ್ಟಾರ ಚೌಕಿಯಲ್ಲಿ, ಮೂಡಬಿದ್ರೆ-ಕಾರ್ಕಳದಿಂದ ಬರುವ ಬಸ್ಸುಗಳಿಗೆ ಮಲ್ಲಿಕಟ್ಟೆಯಲ್ಲಿ, ಕಾಸರಗೋಡು ಕಡೆಯಿಂದ ಬರುವ ಬಸ್ಸುಗಳಿಗೆ ಪಂಪ್ ವೆಲ್ ನಲ್ಲಿ ಹಾಗೂ ಧರ್ಮಸ್ಥಳ, ಸುಬ್ರಹ್ಮಣ್ಯ, ಮಡಿಕೇರಿ, ಉಪ್ಪಿನಂಗಡಿ ಕಡೆಯಿಂದ ಬರುವ ಬಸ್ಸುಗಳಿಗೆ ಕಂಕನಾಡಿಯಲ್ಲಿ ಜಾಗ ಗುರುತಿಸಿದ್ದರು.
ಜನರು ಈ ಮೇಲಿನ ಊರುಗಳಿಂದ ಬಂದು ಈ ನಿರ್ದಿಷ್ಟ ಜಾಗಗಳಲ್ಲಿ ಇಳಿದು ಅಲ್ಲಿಂದ ತಮಗೆ ಬೇಕಾದ ಸಿಟಿಯ ಒಳಗಿನ ಜಾಗಗಳಿಗೆ ಸಿಟಿ ಬಸ್ಸುಗಳಲ್ಲಿ ಹೋಗುವುದೆಂದು ನಿಶ್ಚಯಿಸಲಾಗಿತ್ತು. ಆದರೆ ಈ ವ್ಯವಸ್ಥೆಗೆ ಸರ್ವಿಸ್ ಬಸ್ಸು ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ಅದಕ್ಕೆ ಆಗ ರಾಜ್ಯದಲ್ಲಿ ಮತ್ತು ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ರಾಜಕೀಯ ಪಕ್ಷಗಳು ಮತ್ತು ವಿಪಕ್ಷಗಳು ಕೂಡ ಬಸ್ಸು ಮಾಲೀಕರ ತಾಳಕ್ಕೆ ತಕ್ಕಂತೆ ಕುಣಿದಿದ್ದವು. ಯಾಕೆಂದರೆ ತಮ್ಮ ಯಾವುದೇ ಕಾರ್ಯಕ್ರಮಕ್ಕೆ ಇದೇ ಬಸ್ಸು ಮಾಲೀಕರು ಬೇಕಾದಷ್ಟು ಬಸ್ಸುಗಳನ್ನು ಉಚಿತವಾಗಿ ಒದಗಿಸುತ್ತಿದ್ದರಲ್ಲ. ಕೊನೆಗೆ ಬಸ್ಸು ನಿಲ್ದಾಣದ ವಿವಾದ ಪರಿಹಾರ ಆಗುವ ತನಕ ಸ್ಟೇಟ್ ಬ್ಯಾಂಕಿನ ಸನಿಹದಲ್ಲಿರುವ ಹಾಕಿ ಗ್ರೌಂಡಿಗೆ ಬಸ್ಸು ನಿಲ್ದಾಣ ತಾತ್ಕಾಲಿಕ ನೆಲೆಯಲ್ಲಿ ಶಿಫ್ಟ್ ಆಯಿತು. ಇದೆಲ್ಲಾ ಆಗಿ ಎರಡು ದಶಕಗಳ ಮೇಲಾಗಿವೆ. ಪಂಪ್ ವೆಲ್ ನಲ್ಲಿ ಜಾಗ ಗುರುತಿಸಿ ಆಗಿದೆ. ಭೂಸ್ವಾಧೀನ ಮಾಡಿಯಾಗಿದೆ. 25 ಲಕ್ಷ ರೂಪಾಯಿಯಲ್ಲಿ ಲ್ಯಾಂಡ್ ಫಿಲ್ ಆಗಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬಸ್ ನಿಲ್ದಾಣದ ಸಂಪರ್ಕ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದೆ. ಇನ್ನೇನಿದ್ದರೂ ಕಾಮಗಾರಿಗೆ ಚಾಲನೆ ಸಿಗುವುದು ಮಾತ್ರ ಬಾಕಿ. ಇನ್ನು ಬಸ್ ನಿಲ್ದಾಣದ ಬ್ಲೂಪ್ರಿಂಟ್ ನೋಡಿದರೆ ಹೈಕ್ಲಾಸ್ ಮಾದರಿಯಲ್ಲಿ ಇದು ಕಾರ್ಯವೆಸಗಲಿದೆ. ಅದರ ಒಳಗೆ ಏನೇನಿದೆ ಎನ್ನುವ ಐಡಿಯಾವನ್ನು ನಾಳಿನ ಅಂಕಣದಲ್ಲಿ ಬರೆಯಲಿದ್ದೇನೆ. ಅದೆಲ್ಲ ನೋಡಿ ಖುಷಿಪಡಲು ಇನ್ನು ಕನಿಷ್ಟವಾದರೂ ಮೂರು ವರ್ಷ ಬೇಕೆ ಬೇಕು. ಬಸ್ ನಿಲ್ದಾಣದ ಸುತ್ತಮುತ್ತಲಿನ ಜಾಗಕ್ಕೆ ಬಂಗಾರದ ಬೆಲೆ ಸಿಗಲಿದೆ. ಜಾಗ ಯಾವ ಬಿಲ್ಡರ್ ನವರದ್ದು ಆಗಿದ್ದರೂ ಅವರು ಅದೃಷ್ಟವಂತರು. ಯಾಕೆಂದರೆ ಅವರ ಅದೃಷ್ಟಕ್ಕೆ ಬಸ್ ನಿಲ್ದಾಣ ಅವರ ರಿಯಲ್ ಎಸ್ಟೇಟ್ ಪಕ್ಕದಲ್ಲಿಯೇ ಎದ್ದು ನಿಲ್ಲಲಿದೆ!
0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Tulunadu News July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search