• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured

ವಿದೇಶದಿಂದ ಬರುವವರು ಇಲ್ಲಿ ಪೂರ್ಣಕುಂಭ ಸ್ವಾಗತ ಅಪೇಕ್ಷಿಸಬೇಡಿ!!

Tulunadu News Posted On May 17, 2020
0


0
Shares
  • Share On Facebook
  • Tweet It

ನೀವು ದುಬೈಯಿಂದ ಭಾರತಕ್ಕೆ ಬೇಕಾದರೆ ಬನ್ನಿ, ಅಮೇರಿಕಾದಿಂದ ಬೇಕಾದರೆ ಬನ್ನಿ ಅಥವಾ ವಿಶ್ವದ ಯಾವುದೇ ರಾಷ್ಟ್ರದಿಂದ ಬೇಕಾದರೆ ಬನ್ನಿ. ನೀವು ಇಲ್ಲಿ ಬರುತ್ತಿರುವುದು ನಿಮ್ಮ ತಾಯ್ನಾಡಿಗೆ. ನೀವು ಇಲ್ಲಿ ಅತಿಥಿಗಳಲ್ಲ. ನೀವು ನಮ್ಮವರೇ. ನಿಮ್ಮದೇ ಮನೆಗೆ ಬರುತ್ತಿದ್ದೀರಿ. ಹಾಗಾದರೆ ಅದರಲ್ಲಿ ವಿವಾದವನ್ನು ಎಬ್ಬಿಸುತ್ತಿರುವುದು ಯಾಕೆ? ಅಷ್ಟಕ್ಕೂ ಅನೇಕರದ್ದು ಮುಖ್ಯ ಸಮಸ್ಯೆ ಏನೆಂಬುದನ್ನು ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು.  ಒಮ್ಮೆ ಮಂಗಳೂರಿಗೆ ಹೋಗಿ ಬಿದ್ದರೆ ಸಾಕಪ್ಪ ಎಂದು ಕಳೆದ ಎರಡು ತಿಂಗಳಿನಿಂದ ನೂರಾರು ಸಲ ವಿದೇಶಿ ಮಣ್ಣಿನಲ್ಲಿ ಕುಳಿತು ಹೇಳಿಕೊಂಡವರಿಗೆ ಸರಕಾರ ಎಲ್ಲಾ ವ್ಯವಸ್ಥೆ ಮಾಡಿ ಏರ್ ಲಿಫ್ಟ್ ಮಾಡಿ ತಂದದ್ದೇ ದೊಡ್ಡ ಉಪಕಾರ. ಹಾಗಿರುವಾಗ ಇಲ್ಲಿ ಬಂದ ಕೂಡಲೇ ಪ್ರತಿಯೊಬ್ಬರು ವಿಮಾನ ನಿಲ್ದಾಣದ ಹೊರಗೆ ಈ ನೆಲಕ್ಕೆ ಅಡ್ಡಬಿದ್ದು ನಮಸ್ಕರಿಸಬೇಕಿತ್ತು.
ಹಾಗಂತ ನಾನು ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾಡಿದ್ದು ಎಲ್ಲವೂ ಸರಿ ಎಂದು ಹೇಳುತ್ತಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಸ್ವಲ್ಪ ಜಾಸ್ತಿಯೇ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ಅಂತಹ ತೊಂದರೆ ಬೇರೆ ಏನೂ ಆಗಿದೆ. ಮೊದಲನೇಯದಾಗಿ ನಿಮಗೆ ವಿಮಾನ ನಿಲ್ದಾಣದಿಂದ ಹೊರಗೆ ಬರಲು ತುಂಬಾ ಸಮಯದ ವಿಳಂಬ ಆಯಿತು ಎಂದು ಹೇಳುತ್ತಿದ್ದೀರಿ. ಈಗ ನೀವು ಬರುತ್ತಿರುವುದು ಸಾಮಾನ್ಯ ದಿನಗಳಲ್ಲಿ ಅಲ್ಲ. ಇಡೀ ದೇಶವೇ ಹತ್ತು ಗಂಟೆಗೆ ಬಾಗಿಲು ಹಾಕಿ ಮಲಗಿಕೊಂಡಿದೆ. ಹಾಗಿರುವಾಗ ನಿಮಗಾಗಿ ಬಂದು ಥರ್ಮಲ್ ಚೆಕ್ ಅದು ಇದು ಮಾಡುತ್ತಾರಲ್ಲ, ಅವರ ಶ್ರಮವನ್ನು ನಾವು ಮೊದಲು ಮೆಚ್ಚಬೇಕು. ಆ ಆರೋಗ್ಯ ಯೋಧರಿಗೆ ಮೊದಲ ಸಲಾಂ. ಇನ್ನು ನಿಮ್ಮ ಬ್ಯಾಗ್ ಎತ್ತಿ ಹಾಕಲು ಯಾರು ಮುಂದೆ ಬಂದಿಲ್ಲ ಎನ್ನುವ ದೂರು. ಇಡೀ ವಿಮಾನದಲ್ಲಿದ್ದ 177 ರಲ್ಲಿ 37 ಜನ ಗರ್ಭಿಣಿಯರು. 37 ಗರ್ಭಿಣಿಯರು ಮಾತ್ರವಲ್ಲ, ಕೆಲವು ವೃದ್ಧರು ಕೂಡ ಅದರಲ್ಲಿ ಇದ್ದರು. ಜಿಲ್ಲಾಡಳಿತದಿಂದ 40 ಜನ ಅಧಿಕಾರಿಗಳು ಅಲ್ಲಿ ಇದ್ದರು. ಎಲ್ಲ ವ್ಯವಸ್ಥೆಗಳನ್ನು ಮಾಡುತ್ತಿದ್ದರು. ಆದರೆ ಅವರು ನಿಮ್ಮ ಕೂಲಿಯಾಳುಗಳಾಗಿ ಅಲ್ಲಿಗೆ ಬಂದಿರಲಿಲ್ಲ. ದುಬೈಯಿಂದ ಭಾರತಕ್ಕೆ ಬಂದ ಕೂಡಲೇ ಕೆಲವರಿಗೆ ಇಲ್ಲಿನವರ ಬಗ್ಗೆ ಒಂದಿಷ್ಟು ಕೀಳರಿಮೆ ಬಂದಿರುತ್ತದೆ. ಅದು ನೀವು ವಿದೇಶದಿಂದ ರಜೆಯ ಮೇಲೆ ಭಾರತಕ್ಕೆ ಬರುವ ಹಲವರಲ್ಲಿ ಒಂದಿಷ್ಟು ಗಮನಿಸಿರಬಹುದು. ಇಲ್ಲಿಯೇ ಹುಟ್ಟಿರುತ್ತಾರೆ. ಇಲ್ಲಿಯೇ ಸರಕಾರಿ ಶಾಲೆಗಳಲ್ಲಿ ಕಲಿತಿರುತ್ತಾರೆ. ಸೈಕಲಿನಲ್ಲಿ ಶಾಲೆಗೆ ಹೋಗಿ ಲಾಲಿಪಾಪ್ ತಿಂದು ರಾತ್ರಿ ಗಂಜಿ ಉಂಡು ಮಲಗಿರುತ್ತಾರೆ. ಕೊನೆಗೆ ಇಲ್ಲಿ ಹೋಟೇಲಿನಲ್ಲಿ ಕೆಲಸ ಮಾಡುವುದಕ್ಕಿಂತ ಅದೇ ವಿದೇಶದಲ್ಲಿ ರೂಂಬಾಯ್ ಆಗಿ ಕೆಲಸ ಮಾಡಿದರೆ ಕೆಲವೇ ವರ್ಷಗಳಲ್ಲಿ ತುಂಬಾ ದುಡಿಯಬಹುದು ಎಂದು ಅಲ್ಲಿಗೆ ಹೋಗಿರುತ್ತಾರೆ. ರಜೆಗೆ ಬಂದರೆ ಅವರ ಹಾವಭಾವವೇ ಬದಲಾಗಿರುತ್ತದೆ. ನಾನು ಎಲ್ಲರೂ ಎಂದು ಹೇಳುವುದಿಲ್ಲ.
ಇನ್ನೊಂದು ವಿಷಯ ನಮ್ಮ ಹಿತೈಷಿ ಓದುಗ ಮಿತ್ರರಿಗೆ ಗೊತ್ತಿರಬಹುದು. ದುಬೈಯಿಂದ ಹೊರಡುವ ಮೊದಲು ಈ ಎಲ್ಲಾ 177 ಜನರು ಭಾರತ ಸರಕಾರದ ಎಲ್ಲಾ ಷರತ್ತುಗಳಿಗೆ ಬದ್ಧರಿದ್ದೆವೆ ಎಂದು ಲಿಖಿತವಾಗಿ ಸಹಿ ಮಾಡಿಯೇ ವಿಮಾನ ಹತ್ತಿದ್ದರು. ಅದರ ಮೊದಲನೇ ಷರತ್ತು “ನನ್ನ ಸ್ವಂತ ರಿಸ್ಕಿನಲ್ಲಿಯೇ ಪ್ರಯಾಣಿಸುತ್ತಿದ್ದೇನೆ”. ಇನ್ನು ಸ್ವಂತ ಖರ್ಚಿನಲ್ಲಿ ಕ್ವಾರಂಟೈನ್, ಸ್ವಂತ ಖರ್ಚಿನಲ್ಲಿ ಊಟ, ತಿಂಡಿ ಮಾಡುತ್ತೇನೆ ಎಂದು ಬರೆದು ಸಹಿ ಹಾಕಿ ಇಲ್ಲಿಗೆ ಬಂದ ಕೂಡಲೇ ನಮ್ಮವರೇ ನಮಗೆ ಉಲ್ಟಾ. ಹೊಟೇಲ್ ಊಟದ ವ್ಯವಸ್ಥೆ ಮಾಡಿದರೂ ತಮಗೆ ಇಂತಹುದೇ ಊಟ ಬೇಕೆಂದು ಹಟ, ಹೊಟೇಲಿಗೆ ಹಣ ಜಾಸ್ತಿಯಾಯಿತು ಎಂದು ಹಟ, ಕಮೀಷನ್ ಏಜೆಂಟುಗಳು ಎಂದು ಎಲ್ಲರ ಮುಂದೆ ಅಧಿಕಾರಿಗಳಿಗೆ ಲೇವಡಿ ಎಲ್ಲವೂ ನಡೆದಿದೆ. ಎಲ್ಲರೂ ಮಾಡಿದ್ದಾರೆ ಎಂದಲ್ಲ. ಆದರೆ ಕೆಲವರಿಂದ ಇಡೀ ಅಧಿಕಾರಿ ಸಮೂಹಕ್ಕೆ ಬೇಸರವಾಗಿದೆ. ಇನ್ನು ಒಂದು ವೇಳೆ ಗರ್ಭಿಣಿಯರಿಗೆ ಬ್ಯಾಗ್ ಎತ್ತಲು ಆಗಿಲ್ಲ, ಪತಿಗೆ ದೈಹಿಕವಾಗಿ ಬೇರೆ ತೊಂದರೆ ಇತ್ತು ಎಂದಾದರೆ ಅವರು ತಮ್ಮ ಜೊತೆ ಬಂದವರಿಗೆ ವಿನಂತಿ ಮಾಡಬಹುದಿತ್ತು. ಎಲ್ಲವೂ ಇಲ್ಲಿಯವರೇ. ಸ್ವಲ್ಪ ಸಹಾಯ ಮಾಡಬಹುದೇ ಎಂದರೆ ಆಗಲ್ಲ, ಹೋಗ್ರಿ ಎಂದು ಯಾರೂ ಹೇಳಲ್ಲ. ಆದರೆ ವಿನಂತಿ ಮಾಡುವ ರೀತಿಯಲ್ಲಿ ಇರುತ್ತೆ. ಇನ್ನು ಇಂತಹ ಸಂದರ್ಭದಲ್ಲಿ ಕೂಲಿಗಳು ಸಿಗುವುದು ಕಷ್ಟ. ಅವರಿಗೂ ಜೀವದ ಹೆದರಿಕೆ ಇಲ್ಲವೇ. ಬಂದವರಲ್ಲಿ 16 ಮಂದಿಗೆ ಕೋವಿಡ್ 19 ಸೊಂಕು ಇದೆ ಎಂದು ಪತ್ತೆಯಾಗಿರುವಾಗ ಯಾರು ತಾನೆ ಧೈರ್ಯ ಮಾಡಿ ಆ ರಾತ್ರಿಯಲ್ಲಿ ಕೆಲಸಕ್ಕೆ ಬರುತ್ತಾರೆ. ಇಷ್ಟೆಲ್ಲದರ ನಡುವೆಯೂ ಸೇವೆ ಸಲ್ಲಿಸಿದ ಎಲ್ಲಾ ಅಧಿಕಾರಿಗಳಿಗೆ, ಆರೋಗ್ಯ ಸಿಬ್ಬಂದಿಗಳಿಗೆ, ವಿಮಾನ ನಿಲ್ದಾಣದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ, ಪ್ರಯಾಣಿಕರನ್ನು ಹೋಟೆಲಿಗೆ ತಲುಪಿಸಿದ ಬಸ್ಸುಗಳ ಚಾಲಕರಿಗೆ ದೊಡ್ಡ ಥ್ಯಾಂಕ್ಸ್!
0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search