• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸೋನಿಯಾ ವಿರುದ್ಧ ಕೇಸ್ ಹಿಂತೆಗೆದುಕೊಂಡರೆ ಅದು ಬಿಜೆಪಿಯ ಅವನತಿಯ ಮೊದಲ ಮೆಟ್ಟಿಲು!!

Tulunadu News Posted On May 23, 2020
0


0
Shares
  • Share On Facebook
  • Tweet It

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ವಿರುದ್ಧ ದೂರು ಕೊಡಲು ತುಂಬಾ ಧೈರ್ಯ ಬೇಕು. ಎರಡನೇಯದಾಗಿ ಆ ದೂರು ತೆಗೆದುಕೊಂಡು ಎಫ್ ಐ ಆರ್ ದಾಖಲಿಸಲು ಪೊಲೀಸ್ ಅಧಿಕಾರಿ ನೂರು ಸಲ ಯೋಚಿಸಬೇಕಾಗುತ್ತದೆ. ಅಂತಹ ಒಂದು ಧೀಮಂತ ಕೆಲಸ ಮಾಡಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಕೀಲ ಪ್ರವೀಣ್. ಅವರು ತಮ್ಮ ಊರಿನ ಪೊಲೀಸ್ ಠಾಣೆಯಲ್ಲಿ ಸೋನಿಯಾ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ವಿಷಯ ಏನೇನು ನಿಮಗೆ ಗೊತ್ತೆ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಐಟಿ ಸೆಲ್ ಅದ್ಯಾವುದೋ ಧಾವಂತದಲ್ಲಿ, ಸೋಲಿನ ಹತಾಶೆ ಮರೆಯಬೇಕು ಎಂಬಂತೆ, ಏನೇನೋ ಬರೆದರೆ ಯಾರ್ಯಾರಿಗೋ ಇಷ್ಟವಾಗುತ್ತೆ ಎಂಬಂತೆ ತಮ್ಮ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಿರುವಂತೆ ತೋರುತ್ತಿದೆ. ಅದು ಸೋನಿಯಾ ಟ್ವಿಟರ್ ಮೂಲಕ ಮತ್ತೆ ಹೊರಗೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ ದೇಶದ ಪ್ರಧಾನಿಯವರ ವಿರುದ್ಧ ಮಾತನಾಡುವ, ಬರೆಯುವ ಹಕ್ಕಿಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಬರೆಯುವ ವಿಷಯದಲ್ಲಿ ಸತ್ಯಾಂಶ ಇರಬೇಕು. ಪಿಎಂ ಕೇರ್ ಫಂಡ್ ಗೆ ಸಹಾಯಧನ ನೀಡಿ ಎಂದು ಮೋದಿಯವರು ಕರೆ ಕೊಟ್ಟಿದ್ದು ತಮ್ಮ ವೈಯಕ್ತಿಕ ಖರ್ಚಿಗೆ ಹಣ ಸಾಲುವುದಿಲ್ಲ ಎಂದಲ್ಲ. ಸಂಸತ್ತಿನ ಕ್ಯಾಂಟಿನ್ ನಲ್ಲಿ ಉಪಹಾರ ಸೇವಿಸಿ ಅದರ ಬಿಲ್ ಪೂರ್ಣವಾಗಿ ನೀಡಿ ಧನ್ಯವಾದ ಹೇಳಿ ತಮ್ಮ ಕೋಣೆಗೆ ತೆರಳುವ ಮೋದಿಯವರಿಗೆ ಪಿಎಂ ಕೇರ್ ಫಂಡ್ ನಿಂದ ಆಗಬೇಕಾದದ್ದು ಏನೂ ಇಲ್ಲ. ಅವರಿಗೆ ಅಪಾರ ಸಂಪತ್ತನ್ನು ಸೃಷ್ಟಿಸಿ ಅದನ್ನು ತಮ್ಮ ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಅನಿವಾರ್ಯತೆ ಇಲ್ಲ. ಅವರಿಗೆ ದುರಾಸೆಯನ್ನೇ ತುಂಬಿಕೊಂಡ ಅಳಿಯ ಇಲ್ಲ. ವಿದೇಶಗಳಲ್ಲಿ ಮೋಜು ಮಾಡಿ, ಗಾಂಜಾ, ಅಫೀಮು ಸೇವಿಸುವ ಮಗ ಇಲ್ಲ. ಅಮೇರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ಳಲು ಆಗಾಗ ಹೋಗಿ ಬರುವ ಖರ್ಚು ಇಲ್ಲ. ಅವರಿಗೆ ಡಿಕೆಶಿಗೆ ಆದಂತೆ ಅಪಾರ ಸಂಪತ್ತು ಎಲ್ಲಿಂದ ಬಂತು ಎಂದು ಕೋರ್ಟಿನಲ್ಲಿ ಹೋರಾಡಲು ದೊಡ್ಡ ದೊಡ್ಡ ವಕೀಲರ ಖರ್ಚು ಕೂಡ ಇಲ್ಲ. ಹಾಗಿರುವಾಗ ಪಿಎಂ ಕೇರ್ ಫಂಡ್ ಗೆ ಬರುತ್ತಿರುವ ಸಹಸ್ರ ಕೋಟಿ ರೂಪಾಯಿಯಿಂದ ಅವರು ಮಾಡಬೇಕಾಗಿರುವುದಾದರೂ ಏನು? ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಅವರಿಗೆ ಟ್ವೀಟರ್ ನಲ್ಲಿ ಏನು ಬರೆಯಬೇಕು ಎಂದು ಗೊತ್ತಿಲ್ವಾ?
ಈ ಒಟ್ಟು ವಿಷಯಕ್ಕೆ ಇನ್ನೊಂದು ಮಗ್ಗಲು ಇದೆ. ಸೋನಿಯಾ ಟ್ವಿಟರ್ ನಲ್ಲಿ ಆರೋಪ ಮಾಡಿದ್ರು. ಅದರ ವಿರುದ್ಧ ದೂರು ದಾಖಲಾಯಿತು. ಎಫ್ ಐಆರ್ ದಾಖಲಾಯಿತು. ಎಲ್ಲವೂ ಸರಿ. ಆದರೆ ಕಾಂಗ್ರೆಸ್ಸಿನ ಕರ್ನಾಟಕದ ರಾಜ್ಯಾಧ್ಯಕ್ಷ ಡಿಕೆಶಿವಕುಮಾರ್ ಈ ವಿಷಯವನ್ನು ಸವಾಲಾಗಿ ತೆಗೆದುಕೊಂಡರು. ಅವರಿಗೆ ಅರ್ಜೆಂಟಾಗಿ ರಾಜ್ಯದಲ್ಲಿ ತಮ್ಮ ಪವರ್ ತೋರಿಸಬೇಕು. ತಮ್ಮ ಮಾತಿಗೆ ಸಿಎಂ ಕೂಡ ಏನೂ ಎದುರಾಡುವುದಿಲ್ಲ ಎಂದು ದೆಹಲಿಯ ಜನಪಥ್ 10ರಲ್ಲಿ ಕುಳಿತಿರುವ ವಯೋವೃದ್ಧ ಕಾಂಗ್ರೆಸ್ಸಿಗರಿಗೆ ತಿಳಿಸಬೇಕು ಎನ್ನುವ ಹಪಾಹಪಿ ಶುರುವಾಯಿತು. ಅಷ್ಟೇ ಅಲ್ಲದೆ ಡಿಕೆಶಿ ಅಧ್ಯಕ್ಷರಾಗಿ ನೇಮಕವಾದ ನಂತರ ಹೈಕಮಾಂಡ್ ಅನ್ನು ಸಂತುಷ್ಟಗೊಳಿಸಲು ಅವರಿಗೆ ಸಿಕ್ಕಿದ ದೊಡ್ಡ ಅವಕಾಶವೂ ಹೌದು. ಆದರೆ ಯಾವಾಗ ಡಿಕೆಶಿ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು ಭೇಟಿಯಾಗಿ ಪ್ರಕರಣವನ್ನು ಹಿಂದಕ್ಕೆ ಪಡೆಯುವಂತೆ ಮನವಿ ಮಾಡಿದರೋ ಬಿಎಸ್ ವೈ ಕೂಡ ಆಯಿತು ಎಂದಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ. ಒಂದು ವೇಳೆ ಯಡಿಯೂರಪ್ಪ ಕಾಂಗ್ರೆಸ್ಸಿಗರ ಮನವಿಗೆ ಒಪ್ಪಿ ಕೇಸ್ ಹಿಂದಕ್ಕೆ ಪಡೆಯಲು ಮುಂದಾದರೋ ಅದು ರಾಜ್ಯದಲ್ಲಿ ಬಿಜೆಪಿ ಪಾಲಿಗೆ ಮೊದಲ ಮೊಳೆ.
ಇಲ್ಲಿ ಒಂದು ಸಣ್ಣ ತಾಂತ್ರಿಕ ಅಂಶ ಇದೆ. ನೀವು ಈ ಹಿಂದೆ ಹೊಸದಾಗಿ ರಾಜ್ಯ ಸರಕಾರ ಅಧಿಕಾರ ಸ್ವೀಕರಿಸಿದ ತಕ್ಷಣ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸಿ ತಮ್ಮ ಬೆಂಬಲಿಗರ ಮೇಲಿನ ಕೇಸುಗಳನ್ನು ಹಿಂದಕ್ಕೆ ಪಡೆಯುವ ಸಂಪ್ರದಾಯವನ್ನು ನೋಡಿರಬಹುದು. ಆದರೆ ಇಂತಹ ಪ್ರಕರಣದಲ್ಲಿ ಸರಕಾರ ನೇರಾನೇರವಾಗಿ ಹಾಗೇ ಮಾಡಲು ಸಾಧ್ಯವಿಲ್ಲ. ಹಾಗಂತ ಆಗುವುದೇ ಇಲ್ಲ ಎಂದೂ ಅಲ್ಲ. ಕೆಲವು ಅಪರೂಪದ ಪ್ರಕರಣಗಳಲ್ಲಿ ಮುಖ್ಯಮಂತ್ರಿಯವರು ತಮ್ಮ ವಿಶೇಷ ಅಧಿಕಾರ ಬಳಸಿ ನ್ಯಾಯಾಲಯಕ್ಕೆ ಅರ್ಜಿ ಹಾಕಿ ಕೇಸ್ ಹಿಂದಕ್ಕೆ ಪಡೆಯುವ ಪ್ರಕ್ರಿಯೆಗೆ ಮುಂದಾಗಬಹುದು. ಆಗ ನ್ಯಾಯಾಲಯ ದೂರು ನೀಡಿದ ವ್ಯಕ್ತಿಗೆ ನೋಟಿಸು ನೀಡಿ ಅವರ ಅಭಿಪ್ರಾಯ ಕೇಳುತ್ತದೆ. ಆಗ ದೂರುದಾರ ಆಕ್ಷೇಪಣೆ ಸಲ್ಲಿಸಿದರೆ ಕೇಸ್ ರದ್ದಾಗುವುದಿಲ್ಲ. ದೂರುದಾರ ಒಪ್ಪಿದರೆ ಕೇಸ್ ಹಿಂದಕ್ಕೆ ಪಡೆದಂತೆ ಆಗುತ್ತದೆ. ಆದರೆ ನಾನು ಹೇಳುವುದು ಇಂತಹ ಯಾವುದೇ ಪ್ರಸಂಗಕ್ಕೆ ಬಿಎಸ್ ಯಡಿಯೂರಪ್ಪ ಮುಂದಾಗಬಾರದು. ಯಾಕೆಂದರೆ ಸೋನಿಯಾ ಟ್ವೀಟರ್ ನಲ್ಲಿ ಬರೆದದ್ದು ಶುದ್ಧಾನುಶುದ್ಧ ಸುಳ್ಳು. ಕೇವಲ ಸುಳ್ಳು ಮಾತ್ರವಲ್ಲ, ಅಪ್ಪಟ ನಂಬಿಕೆದ್ರೋಹ. ಮೋದಿಯವರನ್ನು ಕಾಂಗ್ರೆಸ್ಸಿಗರೂ ಇಲ್ಲಿಯ ತನಕ ಏನೇನೋ ಬೈದಿದ್ದಾರೆ. ಈಗ ಇಂತಹ ಆರೋಪ. ಕೇಸ್ ಹಿಂದಕ್ಕೆ ಪಡೆದರೆ ಅದು ಬಿಜೆಪಿಗೆ ಮತ ಕೊಟ್ಟ ಕೋಟ್ಯಾಂತರ ಮತದಾರರಿಗೆ ಸಿಎಂ ಮಾಡುವ ಅನ್ಯಾಯ. ಯಡ್ಡಿಗೆ ಪ್ರಾಯದ ಜೊತೆ ಬುದ್ಧಿ ಕೂಡ ಮಾಗಿದೆ ಎಂದು ಅಂದುಕೊಂಡಿದ್ದೇವೆ!!
0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search