ಸಾವರ್ಕರ್ ಹೆಸರು ಮೇಲ್ಸೆತುವೆ ಇಡಲು ಹೆದರಿದ ಯಡಿಯೂರಪ್ಪ!!
Posted On May 28, 2020

- Advertisement -
ವೀರ್ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರು ಹೌದಾ ಅಲ್ವಾ ಎನ್ನುವ ಅನುಮಾನ ನಮ್ಮ ರಾಜ್ಯದಲ್ಲಿ ಇರುವುದು ಇಬ್ಬರಿಗೆ ಮಾತ್ರ. ಅದರಲ್ಲಿ ಒಬ್ಬರು ಸಿದ್ಧರಾಮಯ್ಯ ಮತ್ತೊಬ್ಬರು ಕುಮಾರಸ್ವಾಮಿ. ಇದೇ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತುಮಕೂರಿನಲ್ಲಿ ಒಂದು ಉದ್ಯಾನವನ್ನು ಅಲ್ಲಿನ ಪಾಲಿಕೆ ನಿರ್ಮಿಸಿತ್ತು. ಅದಕ್ಕೆ ಹೆಸರು ಸ್ವಾತಂತ್ರ್ಯ ವೀರ ವಿ.ದಾ.ಸಾವರ್ಕರ್. ಅದನ್ನು ಆಗಿನ ಕಾಂಗ್ರೆಸ್ ಸರಕಾರದ ಘಟಾನುಘಟಿ ನಾಯಕರೇ ಉದ್ಘಾಟನೆ ಮಾಡಿದ್ರು. ಪರಮೇಶ್ವರ್, ಟಿಬಿ.ಜಯಚಂದ್ರ, ರೋಶನ್ ಬೇಗ್ ಸಮ್ಮುಖದಲ್ಲಿಯೇ ಅದು ಉದ್ಘಾಟನೆಗೊಂಡಿತ್ತು. ಆಗ ಯಾವ ಕಾಂಗ್ರೆಸ್ಸಿನ ಮಂತ್ರಿಯವರು ಇದನ್ನು ವಿರೋಧಿಸಿಲ್ಲ. ಇದು ಬಿಡಿ, ಸಣ್ಣಪುಟ್ಟ ನಾಯಕರ ವಿಷಯ. ಸಿದ್ಧರಾಮಯ್ಯ ಈಗ ಯಾವ ಪಕ್ಷದಲ್ಲಿ ಇದ್ದಾರೋ ಆ ಪಕ್ಷದ ಅಧಿನಾಯಕಿ ಇಂದಿರಾಗಾಂಧಿಯವರೇ ಸಾವರ್ಕರ್ ಅವರನ್ನು ಸ್ವಾತಂತ್ರ್ಯಯೋಧ ಎಂದು ಹೇಳಿದ್ದರು. ಹೇಳಿದ್ದು ಅಂದರೆ ನೀವು ದಾಖಲೆ ಕೇಳಬಹುದು, ಅವರು ಸ್ವತ: ಅದನ್ನು ಬರೆದಿದ್ದಾರೆ. ಅದಕ್ಕೆ ತಮ್ಮ ಸಹಿ ಹಾಕಿದ್ದಾರೆ. ಅದರ ಪ್ರತಿಯನ್ನು ಇವತ್ತು ಪೋಸ್ಟ್ ಮಾಡುತ್ತಿದ್ದೇನೆ. ಇದು ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲದಿದ್ದರೆ ತಮ್ಮ ಒರಗೆಯ ಬುದ್ಧಿಜೀವಿಗಳನ್ನು ಕರೆದು ಕೇಳುವುದು ಒಳ್ಳೆಯದು. ಇನ್ನು ಕುಮಾರಸ್ವಾಮಿಯವರಿಗೆ ಸದ್ಯ ಪ್ರಚಾರದಲ್ಲಿರಲು ವಿಷಯವೇನಿಲ್ಲ. ಅದಕ್ಕಾಗಿ ಅವರ ಬಗ್ಗೆ ಬರೆಯುವುದು ವೇಸ್ಟ್. ಇನ್ನು ಕಾಂಗ್ರೆಸ್ ಪಕ್ಷದವರ ಮಟ್ಟಿಗೆ ಸ್ವಾತಂತ್ರ್ಯಯೋಧರೆಂದರೆ ಅದು ನೆಹರೂ ಮಾತ್ರ. ಅವರಿಗೆ ಬೇರೆಯವರ ಬಗ್ಗೆ ಅಷ್ಟು ಪರಿಚಯ ಇಲ್ಲ. ಸ್ವಾತಂತ್ರ್ಯ ಸಂಗ್ರಾಮ ಎಂದರೆ ಬ್ರಿಟಿಷರೊಂದಿಗೆ ಕಚೇರಿಯೊಳಗೆ ಕುಳಿತು ಸಿಗಾರ್ ಸೇದುತ್ತಾ ಹರಟೆ ಹೊಡೆಯುವುದು ಎಂದು ಸಿದ್ಧರಾಮಯ್ಯ ಅಂದುಕೊಂಡಿರಬಹುದು. ಆದರೆ ಸಾವರ್ಕರ್ ನಿಜವಾದ ದೃಷ್ಟಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಅವರಿಗೆ ಕಾಲಾಪಾನಿ ಶಿಕ್ಷೆಯಾಗಿತ್ತು. ಅದು ಕೂಡ ಎರಡೆರಡು ಬಾರಿ. ನೀವು ಅಂಡಮಾನ್ ನ ಕಾಲಾಪಾನಿ ಜೈಲ್ ನೋಡಿಬಂದರೆ ಅದರ ವಿಕಾರತೆ ಗೊತ್ತಾಗುತ್ತದೆ. ಸಿದ್ಧರಾಮಯ್ಯ ಹೋಗಿರಲಿಕ್ಕಿಲ್ಲ. ಸಾವರ್ಕರ್ ಇದ್ದ ಜೈಲಿನ ಕೊಠಡಿಯಿಂದ ಹೊರಗೆ ನೋಡಿದರೆ ವಾರಕ್ಕೊಮ್ಮೆ ಸ್ವಾತಂತ್ರ್ಯಯೋಧರನ್ನು ಬಟಾಬಯಲಿನಲ್ಲಿ ಗಲ್ಲಿಗೇರಿಸುತ್ತಿದ್ದ ದೃಶ್ಯಗಳು ಕಾಣಿಸುತ್ತಿತ್ತಂತೆ. ನಿಮ್ಮ ಕಣ್ಣೇದುರೆ ವಾರಕ್ಕೆ ಮೂರ್ನಾಕು ಜನ ಗಲ್ಲಿಗೇರುವ ದೃಶ್ಯ ನೋಡುವುದು ಎಂದರೆ ಗುಂಡಿಗೆ ಗಟ್ಟಿ ಇದ್ದರೆ ಮಾತ್ರ ಸಾಧ್ಯ.
Leave A Reply