• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬಿಜೆಪಿಯಲ್ಲಿ ಒಂದು ಮನೆಗೆ ಒಂದೇ ಜನಪ್ರತಿನಿಧಿ ನಿಯಮ ತನ್ನಿ!!

Hanumantha Kamath Posted On June 1, 2020
0


0
Shares
  • Share On Facebook
  • Tweet It

ಇಡೀ ಭಾರತ ಕೊರೊನಾ ವಿರುದ್ಧ ಹೋರಾಡುತ್ತಿದೆ. ಎರಡು ಹೊತ್ತಿನ ಊಟಕ್ಕೆ ಎಷ್ಟೋ ಕಡೆ ಜನ ಒದ್ದಾಡುತ್ತಿದ್ದಾರೆ. ಜನಪ್ರತಿನಿಧಿಗಳು, ಸಮಾಜ ಸೇವಾ ಸಂಘಟನೆಗಳು, ದಾನಿಗಳು ತಮ್ಮ ಕೈಯಲ್ಲಿದ್ದಷ್ಟು ಸಹಾಯ ಮಾಡುತ್ತಿದ್ದರೆ, ಕರ್ನಾಟಕದ ಒಂದು ಭಾಗದ ಜನಪ್ರತಿನಿಧಿಗಳು ಮಾತ್ರ ಊಟಕ್ಕೆ ಸೇರಿದ್ವಿ ಎಂದು ಹಲ್ಲುಕಿರಿದು ನಗುತ್ತಾ ಒಳಗೊಳಗೆ ರಾಜ್ಯ ಸರಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಅವರಲ್ಲಿ ಬೆಳಗಾವಿಯ ಬಿಜೆಪಿ ಶಾಸಕರು ಮತ್ತು ಅವರ ಅಣ್ಣತಮ್ಮಂದಿರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರು ಊಟದ ನೆಪದಲ್ಲಿ ಒಂದೆಡೆ ಸೇರಿ ಯಡಿಯೂರಪ್ಪನವರಿಗೆ ಚಟ್ನಿ ಅರೆಯುವುದನ್ನು ನೋಡಿ ಜನತೆ ಅಸಹ್ಯ ಪಡುತ್ತಿದ್ದಾರೆ. ಅಷ್ಟಕ್ಕೂ ಅವರು ಸೇರುತ್ತಿರುವುದು ಕೊರೊನಾ ವಿರುದ್ಧ ಜನರನ್ನು ಹೇಗೆ ರಕ್ಷಿಸುವುದು ಎನ್ನುವ ವಿಚಾರಕ್ಕೆ ಅಲ್ಲ. ತಮಗೆ ಮಂತ್ರಿ ಸ್ಥಾನ, ವಿಧಾನಪರಿಷತ್ ಸ್ಥಾನ ಮತ್ತು ರಾಜ್ಯಸಭಾ ಸ್ಥಾನದಲ್ಲಿ ಯಾವುದು ಕೊಡುತ್ತೀರಿ ಎಂದು ಚೌಕಾಶಿ ಮಾಡಲು ಸೇರುತ್ತಿದ್ದಾರೆ.
ತಮ್ಮ “ಕತ್ತಿ”ಗೆ ಸಾಣೆ ಹೊಡೆಸಿದ್ದು ಸಾಕಾಗಲಿಲ್ಲ ಎಂದು ಸಹೋದರನಿಗೆ ರಾಜ್ಯಸಭಾ ಸ್ಥಾನ ಕೊಡಿ ಅಥವಾ ತಮ್ಮನ್ನು ಮಂತ್ರಿ ಮಾಡಿ ಎಂದು ಒಬ್ಬರು ಹಟ ಮಾಡುತ್ತಿದ್ದರೆ, ಇನ್ನು ಕೆಲವರು ತಮಗೆ ವಿಧಾನಪರಿಷತ್ ಸ್ಥಾನ ಕೊಡಿಸಿ ಎಂದು ದಂಬಾಲು ಬೀಳುತ್ತಿದ್ದಾರೆ. ಜೂನ್-ಜುಲೈ ನಲ್ಲಿ ವಿಧಾನಪರಿಷತ್ ಆರೇಳು ಸ್ಥಾನಗಳಿಗೆ ಬಿಜೆಪಿಯ ಅಭ್ಯರ್ಥಿಗಳ ನೇಮಕ ನಡೆಯಲಿದೆ. ಆದರೆ ಯಡಿಯೂರಪ್ಪನವರು ಅದರಲ್ಲಿ ಬಹುತೇಕ ಸ್ಥಾನವನ್ನು ಕಾಂಗ್ರೆಸ್ ಮತ್ತು ಪಕ್ಷೇತರರಾಗಿ ಇದ್ದು ನಂತರ ಬಿಜೆಪಿಗೆ ಬಂದವರಿಗೆ ಕೊಡಬೇಕಾಗಿದೆ. ಆದರೆ ಎಂಟಿಬಿ ನಾಗರಾಜ್, ವಿಶ್ವನಾಥ್ ಸೋತಿರುವುದರಿಂದ ಅವರಿಗೆ ಪುನ: ವಿಧಾನಪರಿಷತ್ ಕೊಡುವುದು ಯಾಕೆ? ಅವರಿಗೆ ಚುನಾವಣೆಗೆ ನಿಲ್ಲಬೇಡಿ, ನೇರವಾಗಿ ವಿಧಾನಪರಿಷತ್ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದೆವಲ್ಲ, ಆದರೂ ನಿಂತಿದ್ದಾರೆ. ಈಗ ಯಾಕೆ ಕೊಡುವುದು ಎಂದು ಮೂಲ ಬಿಜೆಪಿಗರ ಪ್ರಶ್ನೆ. ಆದರೆ ರಾಜಕಾರಣದಲ್ಲಿ 2+2 ಎನ್ನುವುದು ಯಾವಾಗಲೂ 4 ಆಗಲೇಬೇಕಾಗಿಲ್ಲ. ಎಂಟಿಬಿ ನಾಗರಾಜ್ ಬೇಡವೆಂದರೂ ನಿಂತಿರಬಹುದು. ನಿಲ್ಲದೇ ಹೋದರೆ ಸೋಲಿಗೆ ಹೆದರಿ ಹಿಂಬಾಗಿಲಿನಿಂದ ವಿಧಾನಪರಿಷತ್ ಗೆ ಹೋದರು ಎಂದು ಯಾರಾದರೂ ಹಂಗಿಸಬಹುದು ಎನ್ನುವ ಕಾರಣಕ್ಕೆ ಅವರು ಸ್ಪರ್ಧಿಸಿರಬಹುದು. ಆದರೆ ಅವರನ್ನು ಸೋಲಿಸಿದ್ದು ಯಾರು? ಬಿಜೆಪಿಯ ಮೂಲ ಕಾರ್ಯಕರ್ತರಾಗಿದ್ದು ಈಗ ಪಕ್ಷೇತರ ಶಾಸಕರಾಗಿರುವ ಬಚ್ಚೇಗೌಡರ ಮಗನಲ್ಲವೇ? ಅವರು ಸ್ಪರ್ಧಿಸದಿದ್ದರೆ ಇವರು ಸೋಲುತ್ತಿರಲಿಲ್ಲ. ಇನ್ನು ನಾಗರಾಜ್ ಮತ್ತು ರಮೇಶ್ ಜಾರಕಿಹೊಳಿ ಸೇರಿಯೇ ಕಾಂಗ್ರೆಸ್ ಸರಕಾರದ ಅವನತಿಗೆ ಕಹಳೆ ಊದಿರುವುದು. ಅವರಿಬ್ಬರು ಮೌನವಾಗಿದಿದ್ದರೆ ಇವತ್ತಿಗೂ ಬಿಜೆಪಿ ಶಾಸಕರು ಪ್ರತಿಭಟನೆ ಮಾಡುತ್ತಾ ವಿರೋಧ ಪಕ್ಷದಲ್ಲಿಯೇ ಇರಬೇಕಿತ್ತು. ಇನ್ನು ವಿಶ್ವನಾಥ್.
ವಿಶ್ವನಾಥ್ ಸೋತಿರಬಹುದು. ಆದರೆ ದೇವೆಗೌಡರ ವಿರುದ್ಧ ರಣಕಹಳೆ ಊದಲು ಒಂದು ಗುಂಡಿಗೆ ಸಾಲುವುದಿಲ್ಲ. ಹಾಗಿರುವಾಗ ಜೆಡಿಎಸ್ ನಿಂದ ಹೊರಗೆ ಬಂದು ಹೋರಾಡಿ ವೀರೋಚಿತ ಸೋಲು ಕಂಡಿದ್ದಾರೆ ವಿನ: ಅಲ್ಲಿಯೇ ಮೌನವಾಗಿ ಇದ್ದು ಗೌಡರ ಕಾಲು ಒತ್ತುವ ಕೆಲಸದಲ್ಲಿಯೇ ಇದ್ದರೆ ಅವರು ಸೋಲುತ್ತಿರಲಿಲ್ಲ. ಇದ್ದದ್ದರಲ್ಲಿ ಶಂಕರ್ ಜಾಣರು. ಚುನಾವಣೆಗೆ ನಿಲ್ಲಲೇ ಇಲ್ಲ. ನಾನು ಹೇಳುವುದೇನೆಂದರೆ ಒಂದು ಮನೆಯಲ್ಲಿ ಒಬ್ಬರು ಶಾಸಕರು, ಸಂಸದರು ಆಗಿದ್ದರೆ ಅವರ ಮನೆಯಿಂದ ಇನ್ನೊಬ್ಬರಿಗೆ ಯಾವತ್ತೂ ಶಾಸಕ, ಸಂಸದ ಕೊಡುವ ಕ್ರಮ ಇಲ್ಲ ಎಂದು ನಿಯಮ ತರಬೇಕು. ಈಗ ಯಡಿಯೂರಪ್ಪನವರ ಮನೆಯಲ್ಲಿ ಅವರು ಮುಖ್ಯಮಂತ್ರಿ. ಅವರ ಮಗ ಸಂಸದ. ಹೀಗಿರುವುದರಿಂದಲೇ ಕತ್ತಿ, ಚೂರಿ, ಬ್ಲೇಡ್, ಕತ್ತರಿಯೆಲ್ಲವೂ ತಮ್ಮ ಮನೆಯಲ್ಲಿಯೂ ಹಾಗೆ ಮಾಡಿ ಎಂದು ಹೇಳುತ್ತಿರುವುದು. ಇದು ತಪ್ಪಬೇಕಾದರೆ ಒಂದು ಮನೆಯಲ್ಲಿ ಒಬ್ಬ ಜನಪ್ರತಿನಿಧಿ ಇದ್ದರೆ ಇನ್ನೊಬ್ಬರಿಗೆ ಅವಕಾಶ ಇಲ್ಲ ಎಂದು ಬಿಜೆಪಿ ನಿಯಮ ತರಬೇಕು.
ಇನ್ನು ಯುಟಿ ಖಾದರ್ ಸಾಹೇಬ್ರು ಹೊರರಾಜ್ಯದ ಕನ್ನಡಿಗರನ್ನು ಆದಷ್ಟು ಬೇಗ ಕರೆತನ್ನಿ ಎಂದು ರಾಜ್ಯ ಸರಕಾರದ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇವತ್ತಿನ ಪರಿಸ್ಥಿತಿಯಲ್ಲಿ ಹೇಳುವುದಾದರೆ ನಮ್ಮವರು ಈಗ ಯಾವ ರಾಜ್ಯದಲ್ಲಿ ಎಲ್ಲಿದ್ದಾರೋ ಅಲ್ಲಿಯೇ ಪರಿಸ್ಥಿತಿ ಸುಧಾರಿಸುವ ತನಕ ಇರುವುದು ಬಹಳ ಒಳ್ಳೆಯದು. ಯಾಕೆಂದರೆ ಉಡುಪಿಯಲ್ಲಿ ಕೋವಿಡ್ 19 ಸೊಂಕಿತರ ಸಂಖ್ಯೆ ಜ್ವರದಂತೆ ಏರುತ್ತಿದೆ. ಅಷ್ಟು ಮಂದಿಗೆ ಚಿಕಿತ್ಸೆ ಕೊಡಲು ಇಲ್ಲಿ ವ್ಯವಸ್ಥೆ ಆಗಬೇಕು. ಅದರ ಬದಲು ನಮ್ಮವರು ಸದ್ಯ ಪ್ರಯಾಣ ಮಾಡದೇ ಅಲ್ಲಿಯೇ ಇದ್ದಲ್ಲಿ ಸೊಂಕು ಹರಡುವುದಿಲ್ಲ. ಈಗ ಅಲ್ಲಿಂದ ಧಾವಂತದಲ್ಲಿ ಸಿಕ್ಕಿದ ವಾಹನಗಳಲ್ಲಿ, ಬಸ್ಸುಗಳಲ್ಲಿ ಬಂದರೆ ಅಪಾಯ ದಾರಿಯಲ್ಲಿ ಬರುವಾಗಲೇ ಕಾದಿರುತ್ತದೆ. ಖಾದರ್ ಅವರು ರಾಜಕೀಯ ಕಾರಣಕ್ಕಾಗಿ ಹುಸಿ ಪ್ರೀತಿ ತೋರಿಸುತ್ತಿದ್ದಾರೆ. ಅದರ ಬದಲು ಸೂಕ್ತವಾಗಿ ಯೋಚಿಸಿ ಮುಂದಡಿ ಇಡುವುದು ಒಳ್ಳೆಯದು. ನಾಳೆ ನೀವು ಬರುವಾಗ ಹೆಚ್ಚು ಕಡಿಮೆ ಆದರೆ ನಿಮ್ಮ ಕೈ ನಿಮ್ಮ ತಲೆಯ ಮೇಲೆ, ಖಾದರ್ ಇನ್ನೊಂದು ಸುದ್ದಿಗೋಷ್ಟಿ ಮಾಡುತ್ತಿರುತ್ತಾರೆ. ಅಷ್ಟೇ!
0
Shares
  • Share On Facebook
  • Tweet It




Trending Now
ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
Hanumantha Kamath January 20, 2026
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Hanumantha Kamath January 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
  • Popular Posts

    • 1
      ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • 2
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 3
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 4
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search