• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕತ್ತಿ, ಕೋರೆ, ಪಿಕ್ಕಾಸು ನಿಮ್ಮ ಬಳಿಯೇ ಇರಲಿ ಎಂದದ್ದು ಬಿಜೆಪಿ ಹೈಕಮಾಂಡ್!!

Hanumantha Kamath Posted On June 9, 2020


  • Share On Facebook
  • Tweet It

ಭಾರತೀಯ ಜನತಾ ಪಾರ್ಟಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೂ ರಾಜ್ಯಸಭಾ ಸ್ಥಾನ ಸಿಗುತ್ತದೆ ಎಂದು ಎಲ್ಲಾ ಕಡೆ ಹೇಳಲಾಗುತ್ತಿದೆ. ಆದರೆ ಈಗ ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಿರುವ ಈರಣ್ಣ ಕಡಾಡಿ ಹಾಗೂ ಅಶೋಕ್ ಗಸ್ತಿ ಅವರು ಕೇವಲ ಸಾಮಾನ್ಯ ಕಾರ್ಯಕರ್ತರಾಗಿರಲಿಲ್ಲ. ಅವರು ಬೆಳಗಾವಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಬಿಜೆಪಿಯನ್ನು ಬೂತ ಮಟ್ಟದಿಂದ ಕಟ್ಟಿ ಬೆಳೆಸಿ ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸಿದ್ದಾರೆ. ಆ ಭಾಗದಲ್ಲಿ ಬಿಜೆಪಿ ಏನೂ ಇಲ್ಲದಿದ್ದ ಸಂದರ್ಭದಿಂದ ಹಿಡಿದು ಇವತ್ತು ಬಿಜೆಪಿಯ ಪ್ರಬಲ ಕೋಟೆಯಾಗಿ ಆ ಭಾಗಗಳು ನಿಂತಿರುವುದರ ಹಿಂದೆ ಈ ಇಬ್ಬರು ನಾಯಕರ ಪಾತ್ರ ಇದೆ.

ಅದಕ್ಕಾಗಿ ಅವರನ್ನು ಗುರುತಿಸಿ ಪಕ್ಷ ರಾಜ್ಯಸಭೆಗೆ ಕರೆಸಿಕೊಂಡಿದೆ. ಸಾಮಾನ್ಯವಾಗಿ ರಾಜ್ಯ ಸಭೆ ಎಂದಕೂಡಲೇ ಯಾವುದೇ ಪಕ್ಷ ಇರಲಿ ಅದು ಶ್ರೀಮಂತರಿಗೆ ಮುಡಿಪಾಗಿಟ್ಟ ಸ್ಥಾನಗಳು ಎಂದೇ ಗುರುತಿಸಲ್ಪಟ್ಟಿವೆ. ವಿಜಯ ಮಲ್ಯ ಅವರಿಂದ ಹಿಡಿದು ಸಚಿನ್ ತೆಂಡ್ಕೂಲರ್ ಅವರ ತನಕ ಅನೇಕ ಖ್ಯಾತನಾಮರು ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದಾರೆ. ಅದೇ ರೀತಿಯಲ್ಲಿ ಕೆಲವರು ಕಲೆ, ಸಾಹಿತ್ಯ, ಕ್ರೀಡೆ, ಸಿನೆಮಾ, ಉದ್ಯಮ, ಅನಿವಾಸಿ ಭಾರತೀಯ ಎನ್ನುವ ಬೇರೆ ಬೇರೆ ಕೆಟಗರಿ ಮೂಲಕ ಆಯ್ಕೆಯಾಗಿ ಹೋಗಿದ್ದಾರೆ. ಯಾರು ರಾಜ್ಯಸಭೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದರು ಎನ್ನುವುದು ನಮಗೆ ಗೊತ್ತಿದೆ. ಆದರೆ ಚಿಂತಕರ ಚಾವಡಿಗೆ ತನ್ನದೇ ಆಗಿರುವ ಗರಿಮೆ, ಹಿರಿಮೆ ಇರುವುದು ನಮ್ಮಲ್ಲಿ ಹೆಚ್ಚಿನ ಪಕ್ಷಗಳಿಗೆ ಮರೆತು ಹೋಗಿದೆ.

ಒಂದೋ ಹಣ ಇರಬೇಕು ಇಲ್ಲ ಯಾವುದಾದರೂ ಪ್ರಬಲ ಮನೆತನದ ಹಿನ್ನಲೆ ಇರಬೇಕು ಎಂದು ಎಲ್ಲ ಪಕ್ಷಗಳು ಕಂಡುಕೊಂಡಿದ್ದ ಸತ್ಯ. ಇದೆರಡೂ ಆಗದಿದ್ದರೆ ಆತ ಲೋಕಸಭೆಯಲ್ಲಿ ಸೋತು ಹೋಗಿರುವ ಅಥವಾ ಲೋಕಸಭೆಯಲ್ಲಿ ಗೆಲ್ಲಲಾಗದ ಪಕ್ಷದ ಥಿಂಕ್ ಟ್ಯಾಂಕ್ ಆಗಿರಬೇಕು. ಆದರೆ ಇದೆಲ್ಲವನ್ನು ಮೀರಿ ಒಬ್ಬ ವ್ಯಕ್ತಿ ರಾಜ್ಯಸಭೆಗೆ ಆಯ್ಕೆಯಾಗುವುದಾದರೆ ಅದು ನಿಜಕ್ಕೂ ರಾಜಕೀಯ ಗೊತ್ತಿಲ್ಲದ ವ್ಯಕ್ತಿಗಳ ಕಣ್ಣಿನ ಹುಬ್ಬು ಏರುವಂತೆ ಮಾಡುವುದು ನಿಜ. ಒಂದು ನೀರಸವಾಗಿ ಕಳೆದುಹೋಗಲಿದ್ದ ಈ ಬಾರಿಯ ರಾಜ್ಯಸಭಾ ಚುನಾವಣೆಯನ್ನು ತುಂಬಾ ಆಶ್ಚರ್ಯಕರ ರೀತಿಯಲ್ಲಿ ಬದಲಾಯಿಸಿದ್ದು ಬಿಜೆಪಿಯ ಹೈಕಮಾಂಡ್. ಅದು ರಾಜ್ಯ ನಾಯಕರಿಗೆ ಹೊಸದಲ್ಲ. ಮೋದಿ ಹಾಗೂ ಶಾ ದೆಹಲಿಯ ಗದ್ದುಗೆಯನ್ನು ಏರಿದಾಗಲೇ ಇಂತಹ ಶಾಕ್ ಗಳನ್ನು ಪ್ರತಿ ರಾಜ್ಯದ ಬಿಜೆಪಿ ಮುಖಂಡರು ಅನುಭವಿಸುತ್ತಿದ್ದಾರೆ. ಟ್ವಿಸ್ಟ್ ಇಲ್ಲದೆ ರಾಜಕೀಯ ಮಾಡಿ ಗೊತ್ತೆ ಇಲ್ಲವೇನೋ ಎನ್ನುವಂತೆ ಕೈಗೆ ಗ್ಲೌಸ್, ಮುಖಕ್ಕೆ ಹೆಲ್ಮೆಟ್ ಹಾಕಿ ಆಟಕ್ಕೆ ಇಳಿಯುವುದು ಶಾ ತಂತ್ರ. ಈಗ ರಾಷ್ಟ್ರೀಯ ಅಧ್ಯಕ್ಷರಾಗಿ ಜೆಪಿ ನಡ್ಡಾ ಅವರು ಇದ್ದರಾದರೂ ಆ ಟ್ವಿಸ್ಟ್, ಟರ್ನ್ ಗಳು ಇನ್ನೂ ಇದೆ ಎಂದರೆ ಅದರ ಅರ್ಥ ಸ್ಟೆರಿಂಗ್ ಇನ್ನು ಗುಜರಾತಿಗಳ ಕೈಯಲ್ಲಿಯೇ ಇದೆ. ಈ ಮೂಲಕ ಬಿಜೆಪಿ ಪಾರ್ಟಿ ವಿದ್ ಡಿಫರೆನ್ಸ್ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ. ಕತ್ತಿ, ಕೋರೆ, ಪಿಕ್ಕಾಸು ಯಾವುದೂ ಬೇಡಾ ನಮ್ಮ ಬಳಿ ಜೆಸಿಬಿ ಇದೆ ಎಂದು ತೋರಿಸಿಕೊಡುವ ಮೂಲಕ ಕೇಂದ್ರ ನಾಯಕರು ಪಕ್ಷವನ್ನು ತಮ್ಮ ಕೈಯಲ್ಲಿ ಉಳಿಸಿಕೊಂಡಿದ್ದಾರೆ.

ಇನ್ನು ಕಾಂಗ್ರೆಸ್ಸಿನಿಂದ ಹಳೆಹುಲಿ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಜೀವನದಲ್ಲಿ ಪ್ರಥಮ ಬಾರಿ ರಾಜ್ಯಸಭೆಯನ್ನು ಪ್ರವೇಶಿಸಲಿದ್ದಾರೆ. ಒಂದಷ್ಟರ ಮಟ್ಟಿಗೆ ಅವರಿಗೆ ಡಿಮೋಶನ್. ಯಾಕೆಂದರೆ ಒಂಭತ್ತು ಬಾರಿ ವಿಧಾನಸಭೆ ಮತ್ತು ಎರಡು ಬಾರಿ ಲೋಕಸಭೆಗೆ ನೇರವಾಗಿ ಜನರಿಂದ ಆಯ್ಕೆಯಾಗಿದ್ದ ಖರ್ಗೆ ಈ ಬಾರಿ ಸೋತ ಕಾರಣ ಮನೆಯಲ್ಲಿಯೇ ಕೂರುವಂತಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಪ್ರತಿನಿಧಿಸಲು ಉತ್ತಮ ಹಿಂದಿ ಬಲ್ಲ ಮತ್ತು ಆಳವಾದ ರಾಜಕೀಯ ಜ್ಞಾನ ಬೇಕಾಗುವ ಮತ್ತು ಎದುರಿಗೆ ಬಿಜೆಪಿಯ ಸಚಿವರು ನಿಂತು ಆರ್ಭಟಿಸುವಾಗ ಸಮರ್ಥ ಸೇನಾನಿ ನಮ್ಮ ಪಕ್ಷದಲ್ಲಿ ಇರಬೇಕಾಗಿರುವುದರಿಂದ ಅದರೊಂದಿಗೆ ರಾಹುಲ್ ಗೆ ಲೋಕಸಭೆಯ ಪಾಠ ಹೇಳಿಕೊಡಲು ದೆಹಲಿಯಲ್ಲಿ ಒಬ್ಬ ಟಿವಿಶನ್ ಮಾಸ್ಟರ್ ಕೂಡ ಅಗತ್ಯ ಇರುವುದರಿಂದ ಒಬ್ಬ ದಲಿತ ನಾಯಕನಿಗೆ ರಾಜ್ಯಸಭಾ ನೀಡುವ ದೃಷ್ಟಿಯಿಂದ ಸೋನಿಯಾ ಎಲ್ಲಾ ಆಯಾಮಗಳಲ್ಲಿ ಸರಿ ಹೊಂದುವ ಖರ್ಗೆಜಿ ಇರಲಿ ಎಂದು ಹೇಳಿದ್ದಾರೆ.

ಅದರೊಂದಿಗೆ ರಾಜಕೀಯ ಜೀವನದ ಕಟ್ಟಕಡೆಯ ಇನ್ನಿಂಗ್ಸ್ ಆಡಲು ಮನಸ್ಸಿಲ್ಲದ ಮನಸ್ಸಿನಿಂದ ದೇವೆಗೌಡರು ಕಣಕ್ಕೆ ಇಳಿಯುತ್ತಿರುವುದು ಸದ್ಯದ ಮಟ್ಟಿಗೆ ಜೆಡಿಎಸ್ ಗೆ ಖುಷಿ. ಯಾಕೆಂದರೆ ಖರ್ಗೆ ಹಾಗೂ ಗೌಡರು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಈಗ ಇರುವ ಅನೇಕ ಸಂಸದರು ಹುಟ್ಟುವ ಮೊದಲೇ ಸದನದಲ್ಲಿ ಇದ್ದವರು. ಅವರಿಬ್ಬರ ಉಪಸ್ಥಿತಿ ರಾಜ್ಯಸಭೆಗೆ ಒಂದಿಷ್ಟು ಘನತೆ ತರಬಹುದು. ಆದರೆ ಬಿಜೆಪಿಯಿಂದ ಆಯ್ಕೆ ಆಗಲಿರುವ ಅಶೋಕ್ ಗಸ್ತಿ, ಈರಣ್ಣ ಕಡಾಡಿಯವರಿಂದ ಬಿಜೆಪಿಯಲ್ಲಿ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಕಾರ್ಯಕರ್ತರಿಗೆ ಒಂದು ವಿಷಯ ಗ್ಯಾರಂಟಿಯಾಗಿದೆ. ನಾವು ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದರೆ, ಯಾವುದೇ ಗುಂಪುಗಾರಿಕೆ ಇಲ್ಲದೆ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ಶಾಸಕರೂ ಆಗಬಹುದು, ಸಂಸದರೂ ಆಗಬಹುದು, ರಾಜ್ಯಾಧ್ಯಕ್ಷರೂ ಆಗಬಹುದು, ವಿಧಾನಪರಿಷತ್ ಅಥವಾ ರಾಜ್ಯಸಭೆಗೂ ಹೋಗಬಹುದು, ನಿಗಮ ಮಂಡಳಿಗೂ ಹೋಗಬಹುದು. ಅದೃಷ್ಟ ಇದ್ದರೆ ಮುಖ್ಯಮಂತ್ರಿ, ಪ್ರಧಾನಿ, ರಾಷ್ಟ್ರಪತಿಯೂ ಆಗಬಹುದು!!

  • Share On Facebook
  • Tweet It


- Advertisement -


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Hanumantha Kamath February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Hanumantha Kamath February 2, 2023
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search