• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸವೆಯದಿರಲಿ ಮೂಳೆ ,ಭದ್ರವಾಗಿರಲಿ ನಿಮ್ಮ ನಾಳೆ.

TNN Correspondent Posted On August 9, 2017


  • Share On Facebook
  • Tweet It

ಯೌವನ ಪ್ರಾಯದಲ್ಲಿಯೇ ಮೂಳೆಗಳ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ  ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿತ ಕಾಯಿಲೆಯಿಂದ  ನರಳುವ  ಸಂಭವ  ಕಡಿಮೆಯಾಗುತ್ತದೆ .ಮೂಳೆಗಳು ಗಟ್ಟಿಯಾಗಿದ್ದರೆ ದೇಹ ಗಟ್ಟಿಯಾಗಿರುತ್ತದೆ .ಇದಕ್ಕಾಗಿ ಕ್ಯಾಲ್ಸಿಯಂ ಬಹಳ  ಅವಶ್ಯವಾಗಿದೆ  .ಇದೆ  ಕಾರಣದಿಂದ  ಹುಟ್ಟುವ   ಮಗುವಿಗೂ  ಗರ್ಭವಾಸ್ಥೆಯಲ್ಲಿ  ಕ್ಯಾಲ್ಸಿಯಂ ನ  ಪೂರೈಕೆ ಹೆಚ್ಚು  ಇರಬೇಕೆಂದು  ವೈದ್ಯರು  ಸಲಹೆ  ನೀಡುತ್ತಾರೆ .ಕೇವಲ ಔಷಧಿಗಳಿಂದ ಮಾತ್ರ ಮೂಳೆಗಳನ್ನು ಸ್ವಸ್ಥವಾಗಿಡಲು  ಸಾಧ್ಯವಿಲ್ಲ ಇದಕ್ಕೆ   ನಿಯಮಿತ ವ್ಯಾಯಾಮ ಮತ್ತು ಕ್ಯಾಲ್ಸಿಯಂ ಹಾಗೂ ವಿಟಮಿನ್  ಡಿ ಹೊಂದಿರುವ ಪೌಷ್ಟಿಕ   ಅಹಾರ ಸೇವನೆಯಿಂದ ಮೂಳೆಗಳನ್ನು ಗಟ್ಟಿಗೊಳಿಸಬಹುದು  .ಹಾಗಿದ್ದರೆ  ಯಾವ  ಯಾವ  ಆಹಾರಗಳನ್ನು   ಸೇವಿಸಬಹುದು   ,ಬನ್ನಿ  ನೋಡೋಣ.

ಹಾಲು -ಇದು  ಸಂಪೂರ್ಣ  ಅಹಾರ ಎಂದೇ ಪರಿಗಣಿಸಲಾಗಿದೆ  .ಇದರಲ್ಲಿ  ಕ್ಯಾಲ್ಸಿಯಂ ಹೆಚ್ಚಿನ  ಪ್ರಮಾಣದಲ್ಲಿದೆ .ಆದ್ದರಿಂದ ದಿನಾಲೂ ಒಂದು ಲೋಟ ಹಾಲು ಕುಡಿಯುವುದು ಆರೋಗ್ಯಕರ.ಗರ್ಭಿಣಿ ಮಹಿಳೆಯು ಎರಡು ಲೋಟ ಹಾಲು ಕುಡಿಯುವುದೊಳ್ಳೆಯದು ಯಾಕೆಂದರೆ ಆಕೆ ಇಬ್ಬರ ಅಹಾರ ಸೇವಿಸಬೇಕು .ಹಾಲನ್ನು ಚೆನ್ನಾಗಿ ಕುಡಿಸಿ ಕುಡಿಯಬೇಕು ,ಆದಷ್ಟೂ ಹಾಲು ತಾಜಾವಾಗಿರಲಿ .

ಕಿತ್ತಳೆ ಹಣ್ಣಿನ ರಸ.

ಕಿತ್ತಳೆ ಹಣ್ಣು ಒಳ್ಳೆಯದು  .ಇದನ್ನು ಹಾಗೆಯೆ ತಿನ್ನಬಹುದು ,ಇದರ ನಾರಿನಂಶ ಇಷ್ಟ ಪಡದವರು ರಸ ತೆಗೆದು ಕುಡಿಯಬಹುದು.ರಸ ತೆಗೆಯುವಾಗ ಕೆಲವು ಅಂಶಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು .ಇದಕ್ಕೆ ಸಕ್ಕರೆಯನ್ನು ಬೆರೆಸದಿರಿ ,ತಾಜಾ ಜೇನು ತುಪ್ಪವನ್ನು ಬಳಸಿ .ಪ್ಯಾಕ್ ಆಗಿರುವ ಕಿತ್ತಳೆ ರಸ ಕುಡಿಯಬೇಡಿ ,ಇದರಲ್ಲಿ ರಸ ಹಾಳಾಗದಂತೆ  ರಾಸಾಯನಿಕಗಳನ್ನು ಸೇರಿಸಿರಬಹುದು ಆದರೂ ಅನಿವಾರ್ಯ ಸಂದರ್ಭದಲ್ಲಿ ಇದನ್ನು ಸೇವಿಸಬಹುದು .

ಬಾದಾಮಿ ಬೀಜಗಳು

ಬಾದಾಮಿ ಒಂದು ಅತುತ್ತಮ ಒಣ ಹಣ್ಣು .ಇದು ಬಹೂಪಯೋಗಿ .ಇದು ಕ್ಯಾಲ್ಸಿಯಂ ನ್ನು ಸಹ ಪೂರೈಸುತ್ತದೆ .ಇದನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಸಿಪ್ಪೆ ತೆಗೆದು ತಿನ್ನಬೇಕು .ಇದರ ಹಾಲು ಸಹ ಕುಡಿಯಬಹುದು .ದಿನಕ್ಕೆ ನಾಲ್ಕು ಇಲ್ಲವೇ ಐದು ಬಾದಾಮಿಯನ್ನು ಸೇವಿಸಬಹುದು ,ಇದು ನಿಮ್ಮ ದಿನ ನಿತ್ಯದ  ಆಹಾರಗಳಲ್ಲಿ ಒಂದಾಗಲಿ .

ಫಿಗ್  ಹಣ್ಣು

ಇದು ಕೂಡ ಅತ್ಯುತ್ತಮ ಕ್ಯಾಲ್ಸಿಯಂ ಪೂರೈಸುವ ಆಹಾರಗಳಲ್ಲಿ ಒಂದಾಗಿದೆ .ವಾರದಲ್ಲೊಮ್ಮೆ ಇದರ ಸೇವನೆ ಕೂಡ ದೇಹಕ್ಕೆ ಬೇಕಾದ ಕ್ಯಾಲ್ಸಿಯಂ  ನ್ನು ಪೂರೈಸುತ್ತದೆ .ಆದ್ದರಿಂದ ಎಲುಬಿನ  ತೊಂದರೆಯಿಂದ  ದೂರವಿರಬಹುದು .

ಮೊಸರು

ಇದೊಂದು ಅದ್ಭುತ್ಥ ಅಹಾರ ,.ಬೆಳ್ಳಗೆ.ನುಣುಪಾಗಿ ಇರುವ ಇದು ಅಮೃತವೇ ಸರಿ .ಬ್ಯಾಕ್ಟೀರಿಯಾಗಳು ಇರುವ ಕರಣ ಇದು ಆರೋಗ್ಯಕರ .ಇದರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಸಿಗುತ್ತದೆ .ಇದನ್ನು ಸ್ವಲ್ಪ ಉಪ್ಪು ಸೇರಿಸಿ ಇಲ್ಲವೇ ಸಕ್ಕರೆ ಸೇರಿಸಿ ತಿನ್ನಬಹುದು .ಇದರಿಂದ  ತಂಬುಳಿ ,ಮೊಸರು ಬಜ್ಜಿ ,ಹುಳಿ ಕೂಡ ತಯಾರಿಸಿ ತಿನ್ನಬಹುದು .ಇದು ತಂಪು ,ಹಿತಕರ ರುಚಿಕರ ,ನಿಮ್ಮ ಎಲುಬಿನ ರಕ್ಷಕ .

ಕ್ಯಾಲ್ಸಿಯಂ ದೇಹಕ್ಕೆ ಅತಿ ಅಗತ್ಯ .ಇದರಿಂದ ಎಲುಬಿನ ಬೆಳವಣಿಗೆ ಚೆನ್ನಾಗಿ ಆಗಿ ಎಲುಬು ಸವೆತ ತಪ್ಪುತ್ತದೆ .ವಯಸ್ಸಾದ ಮೇಲೆ ಈ ನೋವಿಗೆ  ಈಡಾಗುವ ಮುನ್ನ ಎಚ್ಚರಿಕೆ ವಹಿಸಿ

 

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search