ಖಾಸಗಿ ಅನುದಾನ ರಹಿತ ಶಾಲೆಗಳು ಭೋಧನ ಶುಲ್ಕ ಹೆಚ್ಚಿಸಿದರೆ ಕಠಿಣ ಕ್ರಮ!
ಖಾಸಗಿ ಅನುದಾನ ರಹಿತ ಶಾಲೆಗಳ ಭೋಧನ ಶುಲ್ಕ ಹೆಚ್ಚಿಸದಂತೆ ಸೂಚನೆ, ಶೈಕ್ಷಣಿಕ ಶುಲ್ಕ ಹೆಚ್ಚಿಸಿದರೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ
ಖಾಸಗಿ ಅನುದಾನ ರಹಿತ ಶಾಲೆಗಳ ಬೋಧನಾ ಶುಲ್ಕ ಹೆಚ್ಚಿಸಿದರೆ ಕ್ರಮ ಜರಗಿಸುವುದಾಗಿ ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಖಡಕ್ ಎಚ್ಚರಿಕೆ ರವಾನಿಸಿದೆ.
ಕೋವಿಡ್ 19 ಭೀತಿಯಿಂದ ಸರಕಾರ ಜಾರಿಗೊಳಿಸಿದ್ದ ಲಾಕ್ ಡೌನ್ ನಿಂದ ಜನ ಸಾಮಾನ್ಯರ ಆರ್ಥಿಕತೆಯ ಮೇಲೂ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ಖಾಸಗಿ ಶಾಲೆಗಳಲ್ಲಿ ಶುಲ್ಕ ಹೆಚ್ಚಳದ ವಿರುದ್ಧ ಜನರು ಸರಕಾರಕ್ಕೆ ದೂರು ನೀಡಿದ್ದಾರೆ.
ಸಾರ್ವಜನಿಕರ ಅಳಲಿಗೆ ಪ್ರತಿಕ್ರಯಿಸಿರುವ ಶಿಕ್ಷಣ ಇಲಾಖೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೈಗಾರಿಕಾ ವಲಯ ಹಾಗೂ ಆರ್ಥಿಕ ಚಟುವಟಿಕೆಗಳು ಸ್ಥಬ್ದವಾಗಿರುವಹಿನ್ನೆಲೆಯಲ್ಲಿ ಬೋಧನಾ ಶುಲ್ಕ ಹೆಚ್ಚಿಸದಂತೆ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ರವಾನಿಸಿದೆ.
ಕರ್ನಾಟಕ ಶಿಕ್ಷಣ ಕಾಯ್ದೆ – 1983, ಸೆಕ್ಷನ್ -133, ಉಪ ನಿಯಮ -(2)ರ ಅಡಿ ಅಧಿಕಾರ ಉಪಯೋಗಿಸಿ ಎಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳು 2020-21 ನೇ ಶೈಕ್ಷಣಿಕ ಸಾಲಿನಲ್ಲಿ ಬೋಧನಾ ಶುಲ್ಕ ಹೆಚ್ಚಿಸದಂತೆ ಸೂಚನೆ ನೀಡಿದೆ. ಸರಕಾರದ ನಿಯಮ ಉಲ್ಲಂಘಿಸಿ ಹೆಚ್ಚುವರಿ ಶುಲ್ಕ ಪಡೆದರೆ ಕರ್ನಾಟಕ ಶಿಕ್ಷಣ ಕಾಯ್ದೆ -124(ಎ) ಅಡಿ ಕ್ರಮ ಜರಗಿಸುವುದಾಗಿ ಎಚ್ಚರಿಕೆ ರವಾನಿಸಿದೆ.
Leave A Reply