• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರವೀಂದ್ರ ಶೆಟ್ಟಿಯವರ ನಮ್ಮ ಮಂಗಳೂರು ಇತಿಹಾಸದ ವಾಸ್ತವವನ್ನು ಭವಿಷ್ಯಕ್ಕೆ ತಿಳಿಸುವ ಪುಸ್ತಕ!!

Hanumantha Kamath Posted On June 24, 2020


  • Share On Facebook
  • Tweet It

ನಾನು ಹಲವಾರು ವರ್ಷಗಳಿಂದ ಹತ್ತಿರದಿಂದ ನೋಡಿಕೊಂಡು ಬರುತ್ತಿರುವ ಪತ್ರಕರ್ತಮಿತ್ರ ರವೀಂದ್ರ ಶೆಟ್ಟಿಯವರು ಒಂದು ಪುಸ್ತಕ ಬರೆದಿದ್ದಾರೆ. ಅದರ ಒಂದು ಪ್ರತಿಯನ್ನು ನನಗೆ ನೀಡಿದ್ದಾರೆ. ಓದುವಾಗಲೇ ನಮ್ಮ ಊರಿನ ಬಗ್ಗೆ ಇಷ್ಟೊಂದು ಮಾಹಿತಿಗಳಿವೆಯಾ ಎನ್ನುವ ಕುತೂಹಲ ಮೂಡುತ್ತಾ ಹೋಗುತ್ತದೆ. ನಿಜಕ್ಕೂ ಒಂದು ಸಂಗ್ರಾಹ್ಯ ಯೋಗ್ಯ ಪುಸ್ತಕ. ಮಂಗಳೂರಿನ ಬಗ್ಗೆ ಸಂಪೂರ್ಣ ಜ್ಞಾನಭಂಡಾರ ಒಂದೇ ಪುಸ್ತಕದಲ್ಲಿ ನಿಮಗೆ ಬೇಕು ಎಂದು ಅನಿಸಿದರೆ ಆ ಪುಸ್ತಕವನ್ನು ಖರೀದಿಸಿ ಮನೆಯಲ್ಲಿ ಅಥವಾ ನಿಮ್ಮ ಕಚೇರಿಯಲ್ಲಿ ಇಟ್ಟುಕೊಂಡಿರಿ.

ನಮ್ಮ ಮಂಗಳೂರು ಮಹಾನಗರ ಪಾಲಿಕೆಯ ಆರಂಭದ ವರ್ಷದಿಂದ ಹಿಡಿದು ಇಲ್ಲಿಯ ತನಕದ ಮೇಯರ್, ಮನಪಾ ಸದಸ್ಯರ ಪೂರ್ಣ ಮಾಹಿತಿ, ಜನಪ್ರತಿನಿಧಿಗಳ ಹೆಸರು, ಫೋಟೋ ಇರುವ ಏಕೈಕ ಪುಸ್ತಕ ಎಂದರೆ ತಪ್ಪಾಗಲಿಕ್ಕಿಲ್ಲ. ಅದರೊಂದಿಗೆ ಮಂಗಳೂರಿನ ಪ್ರವಾಸಿ ತಾಣಗಳು, ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳ ವಿವರಗಳು ಇದರಲ್ಲಿವೆ. ಒಂದು ಕಾಲದಲ್ಲಿ ಮಂಗಳೂರಿನಲ್ಲಿದ್ದ ಸಿನೆಮಾ ಥಿಯೇಟರ್ ಗಳಿಂದ ಹಿಡಿದು ಇವತ್ತು ಉಳಿದಿರುವ ಸಿನೆಮಾ ಥಿಯೇಟರ್ ಗಳ ಪೂರ್ಣ ವಿವರಗಳು ಕೂಡ ಇದರಲ್ಲಿವೆ. ಇನ್ನು ನಗರದಲ್ಲಿ ಸುತ್ತಾಡುವ ಪ್ರತಿ ಬಸ್ ಗಳ ನಂಬ್ರ, ರೂಟ್ ಗಳನ್ನು ಕೂಡ ಇದರಲ್ಲಿ ನೀಡಿರುವುದನ್ನು ಗಮನಿಸಿದಾಗ ರವೀಂದ್ರ ಶೆಟ್ಟಿಯವರು ಯಾವ ವರ್ಗವನ್ನು ಕೂಡ ಮುಟ್ಟದೆ ಬಿಟ್ಟಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಶಿಕ್ಷಣ ಸಂಸ್ಥೆಗಳು, ಮಾರುಕಟ್ಟೆಗಳು, ಪಾರ್ಕುಗಳ ಜೊತೆಜೊತೆಗೆ ಬಹಳ ಪ್ರಮುಖವಾಗಿ ನಮ್ಮ ಪಾಲಿಕೆಯಲ್ಲಿ ಯಾವ ಸೌಲಭ್ಯಗಳು ಸಿಗುತ್ತವೆ ಎನ್ನುವುದನ್ನು ಮತ್ತು ಅದನ್ನು ಹೇಗೆ ಪಡೆಯಬೇಕು ಎನ್ನುವುದರ ಕುರಿತು ಕೂಡ ರವೀಂದ್ರ ಶೆಟ್ಟಿಯವರು ಇದರಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದಾರೆ.

ಇಂತಹ ಪುಸ್ತಕಗಳನ್ನು ರಚಿಸುವುದು ಎಂದರೆ ಒಂದು ರೀತಿಯಲ್ಲಿ ಕುರುಡರು ಆನೆಯನ್ನು ವರ್ಣನೆ ಮಾಡಿದ ಹಾಗೆ. ಇನ್ನೊಂದು ರೀತಿಯಲ್ಲಿ ಒಂದು ಕಾದಂಬರಿ ಅಥವಾ ಆತ್ಮಚರಿತ್ರೆ ಬರೆದಾಗ ಸಿಗುವಷ್ಟು ಪ್ರಚಾರ ಇದರಲ್ಲಿ ಸಿಗುವುದಿಲ್ಲ. ಏಕೆಂದರೆ ಅನೇಕ ಜನರಿಗೆ ಮಂಗಳೂರಿನ ಬಗ್ಗೆ ನಮಗೆಲ್ಲಾ ಗೊತ್ತಿದೆ ಎನ್ನುವ ಹುಂಬ ವಿಶ್ವಾಸವಿದೆ. ಆದರೆ ಈ ಪುಸ್ತಕವನ್ನು ನೋಡುತ್ತಿದ್ದಂತೆ ನಮಗೆ ಮಂಗಳೂರಿನ ಬಗ್ಗೆ ಗೊತ್ತಿರುವುದು ಕೇವಲ 10 ಶೇಕಡಾ ಎಂದು ಅನಿಸದೇ ಇರದು. ಉಳಿದ 90% ಮಾಹಿತಿಯನ್ನು ಈ ಪುಸ್ತಕ ನೀಡುತ್ತದೆ. ಅಷ್ಟು ಮಾಹಿತಿಯನ್ನು ಒಟ್ಟು ಮಾಡುವುದು ಮತ್ತು ಅದನ್ನು ತಪ್ಪಿಲ್ಲದೇ ದಾಖಲಿಸಿ ಪ್ರಿಂಟ್ ಮಾಡಿ ಜನರ ಮುಂದೆ ಇಡುವುದಕ್ಕೆ ನೂರಲ್ಲ, ಸಾವಿರ ಬಾರಿ ಯೋಚಿಸಬೇಕು. ಯಾಕೆಂದರೆ ಕಾದಂಬರಿಕಾರನೊಬ್ಬ ತಪ್ಪು ಮಾಡಿದರೆ ಅದನ್ನು ಆ ಕಾದಂಬರಿಯ ಟ್ವಿಸ್ಟ್ ಎಂದು ಪಕ್ಕಕ್ಕೆ ಇಡಬಹುದು. ಆದರೆ ಇಂತಹ ಪುಸ್ತಕ ಬರೆದು ಅದರಲ್ಲಿ ಒಂದೆರಡು ತಪ್ಪು ಇದ್ದರೆ ಅದನ್ನೇ ಕೆಲವರು ದೊಡ್ಡದು ಮಾಡುವ ವಿಷಯ ಇರುತ್ತದೆ. ಆ ರಿಸ್ಕ್ ಅನ್ನು ಮನಸ್ಸಿನಲ್ಲಿ ಇಟ್ಟು ರವೀಂದ್ರ ಶೆಟ್ಟಿಯವರು ಅಗಾಧ ಸಮುದ್ರದಲ್ಲಿ ದೋಣಿಯ ಸವಾರಿ ಮಾಡಿದ್ದಾರೆ. ಅಷ್ಟಕ್ಕೂ ಈ ಪುಸ್ತಕದಿಂದ ಅವರಿಗೆ ಲಾಭ ಆಗುವಂತದ್ದು ಏನೂ ಇರುವುದಿಲ್ಲ. ಆದರೆ ಈ ಪುಸ್ತಕ ನಿಮ್ಮ ಶೆಲ್ಫ್ ನಲ್ಲಿ ಇದ್ದರೆ ನಿಮ್ಮ ಮನೆ, ಕಚೇರಿಗೆ ಒಂದು ಚೆಂದ. ಕಥೆ, ಕಾದಂಬರಿ, ಆತ್ಮಚರಿತ್ರೆ ಒಮ್ಮೆ ಓದಿದ ಮೇಲೆ ಮತ್ತೆ ಓದುವ ಆಸಕ್ತಿ ಇರುವುದಿಲ್ಲ, ಆದರೆ ಈ ಪುಸ್ತಕ ಹಾಗೆ ಅಲ್ಲ. ಇದು ಮುಂದಿನ ಪೀಳಿಗೆಯ ಪುಸ್ತಕ. ಇದರಲ್ಲಿ ಮಾಹಿತಿ ಮಾತ್ರವಲ್ಲ, ಫೋಟೋ ಕೂಡ ಇದೆ. ಪಾಲಿಕೆ ಆರಂಭವಾಗುವಾಗ ಎಂಭತ್ತರ ಆರಂಭದ ದಶಕದಲ್ಲಿ ಈಗ ಇರುವ ಮಧ್ಯವಯಸ್ಕರು ಸಣ್ಣ ಮಕ್ಕಳಾಗಿದ್ದರು. ಅದರ ನಂತರ ಲೆಕ್ಕವಿಲ್ಲದಷ್ಟು ಜನರು ಪಾಲಿಕೆಯ ಸದಸ್ಯರಾಗಿ ಹೋಗಿದ್ದಾರೆ. ಅವರಲ್ಲಿ ಎಷ್ಟೋ ಜನ ಈಗ ರಾಜಕೀಯದಲ್ಲಿ ಇಲ್ಲ. ಅನೇಕರು ಮಂಗಳೂರಿನಲ್ಲಿ ಇಲ್ಲ. ಅನೇಕರ ಕುಟುಂಬಗಳು ಈಗ ಎಲ್ಲಿದ್ದಾರೋ ಗೊತ್ತಿಲ್ಲ. ಹಾಗಿರುವಾಗ ಈಗ ಪಾಲಿಕೆಯಲ್ಲಿ ಇರುವ ಹಿರಿಯ ಸದಸ್ಯರನ್ನು ಗುರುತಿಸಿ, ಅವರ ಮನೆಗಳಿಗೆ ಹೋಗಿ, ಅವರ ಹಿಂದಿನ ಶುಭ ಸಮಾರಂಭದ ಆಲ್ಬಂಗಳನ್ನು ಹುಡುಕಿ ತೆಗೆದು ಅದರಲ್ಲಿ ಯಾವ ಸದಸ್ಯ ಇದ್ದಾರೋ ಅವರ ಫೋಟೋ ಗುರುತಿಸಿ ಅದನ್ನು ಸ್ಕ್ಯಾನ್ ಮಾಡಿ ನಂತರ ಪುಸ್ತಕಕ್ಕೆ ಜೋಡಿಸುವಾಗ ಒಂದೊಂದು ಪೇಜ್ ವಿನ್ಯಾಸ ಮುಗಿದಾಗ ಬಹುಶ: ರವೀಂದ್ರ ಶೆಟ್ಟಿಯವರಿಗೆ ಒಂದೊಂದು ಯುದ್ಧ ಮುಗಿದಂತೆ ಆಗುತ್ತಿತ್ತೆನೊ. ಇನ್ನು ಈ ಪುಸ್ತಕದ ಹತ್ತಾರು ಪ್ರತಿ ಖರೀದಿಸಿದರೆ ನಿಮ್ಮ ಯಾವುದಾದರೂ ಕಾರ್ಯಕ್ರಮಗಳಲ್ಲಿ ಗಣ್ಯರಿಗೆ ಸ್ಮರಣಿಕೆಯನ್ನಾಗಿ ಕೂಡ ನೀಡಬಹುದು. ಬಹುಶ: ಇನ್ನೊಬ್ಬ ಹಿರಿಯ ಪತ್ರಕರ್ತ ಪಿ.ಬಿ.ಹರೀಶ್ ರೈ ಅವರ ರಾಜನೋಟದ ಬಳಿಕ ಮತ್ತೊಂದು ಉತ್ತಮ ಪ್ರಯತ್ನ ಪತ್ರಕರ್ತ ಮಿತ್ರರಿಂದ ಬಂದಿದೆ. ಅವರಿಗೆ ಶುಭವಾಗಲಿ!

  • Share On Facebook
  • Tweet It


- Advertisement -


Trending Now
ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
Hanumantha Kamath June 25, 2022
ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
Hanumantha Kamath June 24, 2022
Leave A Reply

  • Recent Posts

    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
    • ನೂಪುರ್ ಹೇಳಿಕೆಗೆ ಮುಸ್ಲಿಮರು ದೇಶದಲ್ಲಿ ಬೆಂಕಿ ಇಟ್ಟರು, ಶೈಲಜಾ ಹೇಳಿಕೆಗೆ??
    • ಪತ್ನಿ ಸದಸ್ಯರಾದರೆ ಗಂಡ ಅಧಿಕಾರ ಚಲಾಯಿಸುವುದು ಬಂದ್!!
    • ಭಾರತದಲ್ಲಿ ಬಾಲ ಬಿಚ್ಚಿದ ಹಾಗೆ ಕುವೈಟ್ ನಲ್ಲಿ ನಡೆಯಲ್ಲ!!
    • ಪ್ರೀತಿ ಗೆಹ್ಲೋತ್ ಮಾಡಿದ ಕೆಲಸ ಅಕ್ಷಯ್ ಶ್ರೀಧರ್ ಅವರಿಗೆ ಆಗುತ್ತಾ?
    • ಸೋನಿಯಾ ಮೇಲೆ ಇರುವಷ್ಟು ಕನಿಕರ ರಾಹುಲ್ ಮೇಲೆ ಇಲ್ಲ!
  • Popular Posts

    • 1
      ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • 2
      ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • 3
      ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • 4
      ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • 5
      ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search